ಸಹ ನಟನ ಜೊತೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಖ್ಯಾತ ಕಿರುತೆರೆ ನಟಿ, ಕೇವಲ 4 ತಿಂಗಳಿಗೆ ಮುರಿದು ಬಿತ್ತು ದಾಂಪತ್ಯ.!
ಪ್ರೀತಿ ಅನ್ನೋ ಪದಕ್ಕೆ ಅರ್ಥ ಬದಲಾಗದೇ ಇದ್ರೂ, ಈ ಪ್ರೀತಿಯನ್ನ ಅರ್ಥೈಸಿಕೊಳ್ಳುವ ರೀತಿ ಬದ್ಲಾಗ್ಬಿಟ್ಟಿದೆ. ಯೌವ್ವನದ ಹುಚ್ಚಕೊಡಿ ಮನಸಿನ ಇವತ್ತಿನ ಅನೇಕ ಯುವಕ ಮತ್ತು ಯುವತಿಯರಿಗಂತೂ ಲವ್ ಅನ್ನೋದು ಶೋಕಿ.
ಹಂಗಾಗೇ ಈ ಪ್ರೀತೀಲೂ ನಾನಾ ವೆರೈಟಿಗಳು ಬಂದ್ಬಿಟ್ಟಿವೆ.ಪಾರ್ಟ್ ಟೈಮ್ ಪ್ರೀತಿ.. ಫುಲ್ ಟೈಮ್ ಪ್ರೀತಿ.. ಟೈಮ್ ಟು ಟೈಮ್ ಪ್ರೀತಿ.. ಟೈಮ್ ಬೈ ಟೈಮ್ ಪ್ರೀತಿ ಅಂತೆಲ್ಲ ಬಟ್ಟೆ ಬದಲಿಸಿದಂತೆ ಪ್ರೇಮ ಸಂಬಂಧಗಳನ್ನು ಇಲ್ಲಿ ಅನೇಕರು ಬದಲಿಸುತ್ತಾ ಹೋಗ್ತಾರೆ. ಕೇವಲ ಜನಸಾಮಾನ್ಯರು ಮಾತ್ರ ಅಲ್ಲ, ಬಣ್ಣದ ಪ್ರಪಂಚದಲ್ಲಿ ಬದುಕು ಕಟ್ಟಿಕೊಂಡವರಲ್ಲಿ ಬಹುತೇಕರ ಹಣೆಬರಹ ಇಷ್ಟೇ. ಇದಕ್ಕೆ ಅದಿತಿ ಶರ್ಮಾ ಮತ್ತು ಅಭಿನೀತ್ ಕೌಶಿಕ್ ಸದ್ಯದ ಅತ್ಯುತ್ತಮ ಉದಾಹರಣೆ.

ಹೌದು, ಗಂಗಾ, ಸಿಲ್ ಸಿಲಾ ಬದಲ್ತೇ ರಿಶ್ತೋ ಕಾ, ರಬ್ ಸೇ ಹೈ ದುವಾ ಮುಂತಾದ ಧಾರಾವಾಹಿಯಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿರುವ ಅದಿತಿ ಶರ್ಮಾ ನಾಲ್ಕು ತಿಂಗಳ ಹಿಂದೆ ಅಂದರೆ ನವೆಂಬರ್ 12-2024ರಂದು ಕೆಲ ವರ್ಷಗಳಿಂದ ತಾವು ಪ್ರೀತಿಸುತ್ತಿದ್ದ ನಟ ಅಭಿನೀತ್ ಕೌಶಿಕ್ ಜೊತೆ ಕದ್ದು ಮುಚ್ಚಿ ಮದುವೆಯಾಗಿದ್ದರು. ತುಂಬಾನೇ ಗುಟ್ಟಾಗಿ ನಡೆದಿದ್ದ ಈ ಮದುವೆಯಲ್ಲಿ ಕುಟುಂಬದವರು ಮತ್ತು ಅವರ ಕೆಲವೇ ಆಪ್ತರು ವಿವಾಹದಲ್ಲಿ ಭಾಗಿಯಾಗಿದ್ದರು.
ಇನ್ನು ಬಣ್ಣದ ಪ್ರಪಂಚದಲ್ಲಿ ಮದುವೆಯಾದರೆ ನಾಯಕಿಯರಿಗೆ ಅವಕಾಶ ಸಿಗಲ್ಲ ಎನ್ನುವ ಮಾತು ಇದೆ. ಅಭಿನೀತ್ ಕೌಶಿಕ್ ಅವರಿಗೆ ಕೂಡ ಅದಿತಿ ಶರ್ಮಾ ಇದೇ ಮಾತನ್ನು ಹೇಳಿದ್ದರು. ಹೀಗಾಗಿ ಸರಳ ಮದುವೆ ಮಾಡಿಕೊಳ್ಳೋಣ ಎಂದು ಹೇಳಿ ಮದುವೆಯ ಫೋಟೊಗಳು ಎಲ್ಲಿಯೂ ಹೊರಬರದಂತೆ ನೋಡಿಕೊಂಡಿದ್ದರು. ಅದಿತಿ ಅವರ ಈ ನಿರ್ಧಾರಕ್ಕೆ ಅಭಿನೀತ್ ಕೂಡ ಬೆಂಬಲ ಕೊಟ್ಟಿದ್ದರು.
ಹೀಗೆ ಮದುವೆಯಾದ ಇಬ್ಬರು 5BHK ಮನೆಯನ್ನು ಅಪಾರ್ಟ್‌ಮೆಂಟ್‌ನಲ್ಲಿ ಬಾಡಿಗೆಯನ್ನು ಪಡೆದು ವಾಸ ಮಾಡಲು ಶುರು ಮಾಡಿದರು. ಸಾಂಸಾರಿಕ ಜೀವನ ಚೆನ್ನಾಗಿಯೇ ನಡೆದಿತ್ತು. ಆದರೆ ಇದೇ ಸಮಯದಲ್ಲಿ ಅದಿತಿ ಶರ್ಮಾ ನಡೆ ಹಾವ ಭಾವಗಳಿಂದ ಅಭಿನೀತ್ ಅನುಮಾನಗೊಂಡರು. ಹೀಗಾಗಿಯೇ ಹೋಗಿ ನೋಡಿದಾಗ ಅದಿತಿ ತಮ್ಮ 'ಅಪೊಲ್ಲೆನಾ' ಧಾರಾವಾಹಿಯ ಸಹ ನಟ ಸಮರ್ಥ್ಯ ಜೊತೆ ಆಪ್ತವಾಗಿ ಕಾಲಹರಣ ಮಾಡುವ ಸಮಯದಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ.
ಪತ್ನಿಯ ಈ ನಡೆಯಿಂದ ಆಘಾತಕ್ಕೊಳಗಾದ ಅಭಿನೀತ್ ಕೌಶಿಕ್, ಸದ್ಯ ವಿಚ್ಛೇದನಕ್ಕೆ ಅರ್ಜಿಯನ್ನು ಸಲ್ಲಿಸಿದ್ದಾರೆ. ಅಭಿನೀತ್ ಕೌಶಿಕ್ ತಮ್ಮ ನಾಲ್ಕು ತಿಂಗಳ ಪತ್ನಿ ಅದಿತಿ ಮೇಲೆ ಸಾಲು ಸಾಲು ಆರೋಪಗಳನ್ನು ಮಾಡಿದ್ದಾರೆ. ಒಂದೂವರೆ ವರ್ಷಗಳ ಕಾಲ ಅವಳು ನನ್ನ ಕಾಡಿ ಬೇಡಿದ್ದಕ್ಕೆ ನಾನು ಮದುವೆಯಾಗಲು ಸಿದ್ಧನಾದೆ ಎಂದಿರುವ ಅಭಿನೀತ್ , ಕೆರಿಯರ್ ದೃಷ್ಟಿಯಿಂದ ನಮ್ಮ ಮದುವೆ ವಿಚಾರ ಯಾರಿಗೂ ಗೊತ್ತಾಗಬಾರದು ಎಂದು ಷರತ್ತು ಹಾಕಿದ್ದಳು ಎಂದು ಹೇಳಿದ್ದಾರೆ.
ಇನ್ನು ಡಿವೋರ್ಸ್‌ಗೆ ಅದಿತಿ ಕುಟುಂಬಸ್ಥರು ₹25 ಲಕ್ಷ ರೂಪಾಯಿ ಹಣವನ್ನು ಡಿಮ್ಯಾಂಡ್ ಮಾಡುತ್ತಿದ್ದಾರೆ ಎಂದು ಕೂಡ ಆರೋಪ ಮಾಡಿರುವ ಅಭಿನೀತ್, ವಕೀಲರು ರಾಜಿ ಪಂಚಾಯ್ತಿ ಮಾಡುವ ಸಮಯದಲ್ಲಿ ಅದಿತಿ ನಮ್ಮದು ಮದುವೆಯೇ ಅಲ್ಲ ಬದಲಿಗೆ ಮದುವೆಯ ಅನುಭವ ಹೇಗಿರುತ್ತೆ ಎಂದು ತಿಳಿಯಲು ಅಷ್ಟೇ ಮದುವೆಯ ನಾಟಕವನ್ನು ಮಾಡಿದ್ದು ಎಂದು ಅದಿತಿ ಹೇಳಿದ್ದಾಳೆ ಎಂದು ಕೂಡ ಹೇಳಿದ್ದಾರೆ.
ಇನ್ನು ವಾದ ವಿವಾದ ನಡೆಯುವ ಸಮಯದಲ್ಲಿ ಅದಿತಿ ಶರ್ಮಾ ಅವರ ತಂದೆ ಅಭಿನೀತ್ ಕೌಶಿಕ್ ಅವರ ಕಪಾಳಕ್ಕೆ ಬಾರಿಸಿದ್ದು ತಡೆಯಲು ಹೋದ ಅದಿತಿಗೆ ಕೂಡ ಏಟು ಬಿದ್ದಿದೆ ಎಂದು ವರದಿಯಾಗಿದೆ. ಬೀದಿ ರಂಪವಾಗಿ ಈ ಪ್ರಕರಣ ಈಗ ಪೊಲೀಸ್ ಠಾಣೆಯ ಅಂಗಳವನ್ನು ತಲುಪಿದೆ.


Click it and Unblock the Notifications











