»   » ಸನ್ನಿ ಲಿಯೋನ್ ನಂತರ ಮತ್ತೊಬ್ಬಳು ನೀಲಿ ತಾರೆ?

ಸನ್ನಿ ಲಿಯೋನ್ ನಂತರ ಮತ್ತೊಬ್ಬಳು ನೀಲಿ ತಾರೆ?

Posted By:
Subscribe to Filmibeat Kannada
Priya Rai
ಅಮೆರಿಕಾದಲ್ಲಿ ನೀಲಿ ಚಿತ್ರಗಳಲ್ಲಿ ನಟಿಸಿ ಖ್ಯಾತರಾಗಿದ್ದ ಮಾದಕ ತಾರೆ ಸನ್ನಿ ಲಿಯೋನ್ ಸಲ್ಮಾನ್ ಖಾನ್ ನಡೆಸಿಕೊಡುವ 'ಬಿಗ್ ಬಾಸ್' ಶೋಗೆ ಎಂಟ್ರಿ ನೀಡಿ ಖ್ಯಾತರಾಗಿರುವ ಹಿನ್ನೆಲೆಯಲ್ಲಿ ಮತ್ತೊಬ್ಬಳು ತಾರೆ 'ಬಿಗ್ ಬಾಸ್ 6' ಗೆ ಬರಲು ತುದಿಗಾಲಲ್ಲಿ ನಿಂತಿದ್ದಾರೆ. ಸಲ್ಮಾನ್ ಖಾನ್ ನಡೆಸಿಕೊಡುತ್ತಿರುವ ಪರಿವಾರಿಕ್ ಟಿವಿ ಶೋ ಬಿಗ್ ಬಾಸ್ 6 ನಲ್ಲಿ ಬರಲಿರುವ ಈ ನೀಲಿ ತಾರೆ ಹೆಸರು ಪ್ರಿಯಾ ರೈ. ಅವರು ಇಂಡಿಯಾ ಮೂಲದ ಅಮೆರಿಕದ ಪ್ರಸಿದ್ಧ ನೀಲಿ ತಾರೆ.

ಡೇಲಿ ಭಾಸ್ಕರ್ ದಲ್ಲಿ ವರದಿಯಾಗಿರುವಂತೆ ಈ ಪ್ರಿಯಾ ರೈ, ಇಂಡಿಯನ್ ಮೂಲದ ಅಮೇರಿಕನ್ ವಯಸ್ಕರ ಚಿತ್ರತಾರೆ. 2008 ರಲ್ಲಿ ವಯಸ್ಕರ ಚಿತ್ರರಂಗಕ್ಕೆ ಕಾಲಿಟ್ಟ ಈ ತಾರೆ ಇದೇ ಮೊದಲ ಬಾರಿಗೆ ಭಾರತದ ರಿಯಾಲಿಟಿ ಶೋದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಅವರು 2009 ರಲ್ಲಿ ನಡೆದ 'ಆಲ್ ಗರ್ಲ್ ಗ್ರೂಫ್ ಸೆಕ್ಸ್ ಸೀನ್' ನಲ್ಲಿ ದಿ ಬೆಸ್ಟ್ AVN ಅವಾರ್ಡ್ ಗಳಿಸಿದ್ದಾರೆ. ಇದೀಗ ಭಾರತದ ರಿಯಾಲಿಟಿ ಶೋ ಮೇಲೆ ಕಣ್ಣಿಟ್ಟಿದ್ದಾರೆ ಈ ಪ್ರಿಯಾ ರೈ.

ಕಳೆದ ವರ್ಷ ನಡದ 'ಬಿಗ್ ಬಾಸ್ 5' ರಿಯಾಲಿಟಿ ಶೋದಲ್ಲಿ ಭಾಗವಹಿಸಿದ್ದ ನಟಿ ಸನ್ನಿ ಲಿಯೋನ್ ನಂತರ 'ಜಿಸ್ಮ್ 2' ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿ ಸಾಕಷ್ಟು ಸದ್ದು ಮಾಡಿದ್ದು ಗೊತ್ತೇ ಇದೆ. ಇದೀಗ ಭಾರತ ಮೂಲದ ಅಮೆರಿಕಾದಲ್ಲಿ ಸನ್ನಿಯಂತೆಯೇ ವಯಸ್ಕರ ಚಿತ್ರಗಳಲ್ಲಿ ನಟಿಸಿ ಖ್ಯಾತರಾಗಿರುವ ಪ್ರಿಯಾ ರೈ, ರಿಯಾಲಿಟಿ ಶೋಗೆ ಬಂದಿರುವುದು ಬಾಲಿವುಡ್ ಗೆ ಹೊಸ ಸಂಚಲನ ತಂದಿದೆ. ಮುಂದೇನಾಗುತ್ತೋ ಎಂದು ಎಲ್ಲರೂ ಕಾತರಗೊಂಡಿದ್ದಾರೆ.

ಈ ಬಗ್ಗೆ ಸ್ವತಃ ಪ್ರಿಯಾ ರೈ "ಅಮೆರಿಕಾದಲ್ಲಿ ನೀಲಿ ತಾರೆಗಳಾಗಿ ಇಂಡಿಯಾಗೆ ಬಂದವರೆಲ್ಲಾ ಸನ್ನಿ ಲಿಯೋನ್ ಆಗಲು ಸಾಧ್ಯವಿಲ್ಲ, ಆಗಬೇಕಾಗಿಯೂ ಇಲ್ಲ. ನಾನು ಸನ್ನಿಯಂತೆ ಹೊಸದನ್ನೇನಾದರೂ ಸಾಧಿಸಲು ಬಂದಿದ್ದೇನೆ ಹೊರತೂ ಸನ್ನಿಯಂತಾಗಲು ಅಲ್ಲ. ನನ್ನ ಆಸೆ, ಅಭಿಲಾಷೆ ಹಾಗೂ ಸಾಧನೆಗೆ ಯಾವುದು ನನ್ನದಾಗುತ್ತದೆಯೋ ಅದರಲ್ಲೇ ನಾನು ಖುಷಿಪಡುತ್ತೇನೆ" ಎಂದಿದ್ದಾರೆ ಈ ನೀಲಿ ತಾರೆ ಪ್ರಿಯಾ ರೈ. (ಏಜೆನ್ಸೀಸ್)

English summary
American Adult Actress Priya Rai, Entering the Bigg Boss 6, Next Sunny Leone, ಅಮೆರಿಕಾ ವಯಸ್ಕರ ತಾರೆ ಪ್ರಿಯಾ ರೈ, ಬಿಗ್ ಬಾಸ್ 6 ಗೆ ಪ್ರವೇಶ, ಸನ್ನಿ ಲಿಯೋನ್ ನಂತರ ಮತ್ತೊಬ್ಬಳ ಆಗಮನ 
 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada