»   » ಬಿಗ್ ಬಾಸ್ ಅಂಗಳಕ್ಕೆ ನೀಲಿ ಚಿತ್ರಗಳ ತಾರೆ ಪ್ರಿಯಾ ರೈ

ಬಿಗ್ ಬಾಸ್ ಅಂಗಳಕ್ಕೆ ನೀಲಿ ಚಿತ್ರಗಳ ತಾರೆ ಪ್ರಿಯಾ ರೈ

By: ರವಿಕಿಶೋರ್
Subscribe to Filmibeat Kannada

ವಿವಾದಿತ ರಿಯಾಲಿಟಿ ಶೋ 'ಬಿಗ್ ಬಾಸ್' ಅಂಗಳಕ್ಕೆ ಇಂಡೋ-ಕೆನಡಾ ಮೂಲದ ನೀಲಿ ಚಿತ್ರಗಳ ತಾರೆ ಸನ್ನಿ ಲಿಯೋನ್ ಅಡಿಯಿಟ್ಟಿದ್ದೇ ತಡ ಭಾರತೀಯ ಕಿರುತೆರೆ ಇತಿಹಾಸದಲ್ಲಿ ಹೊಸ ಪರ್ವ ಶುರುವಾಯಿತು. ಬಳಿಕ ಆಕೆ ಬಾಲಿವುಡ್ ಚಿತ್ರಗಳಲ್ಲೂ ತಮ್ಮ ಮೈಮಾಟ ತೋರುತ್ತಿರುವುದು ಗೊತ್ತೇ ಇದೆ.

ಈಗ ಮತ್ತೊಬ್ಬ ನೀಲಿ ಚಿತ್ರಗಳ ತಾರೆ ಪ್ರಿಯಾ ಅಂಜಲಿ ರೈ ಕಿರುತೆರೆಗೆ ಅಡಿಯಿಡುತ್ತಿದ್ದಾರೆ. ನಟ ಸಲ್ಮಾನ್ ಖಾನ್ ನಡೆಸಿಕೊಡುವ ಕಲರ್ಸ್ ವಾಹಿನಿಯ ಬಿಗ್ ಬಾಸ್ ಸೀಸನ್ 7ಕ್ಕೆ ಅಂಜಲಿ ಬರುವುದು ಬಹುತೇಕ ಖಾತ್ರಿಯಾಗಿದೆ.

ಯುಎಸ್ ನಲ್ಲಿ ಅಂಜಲಿ ವಯಸ್ಕರ ಚಿತ್ರಗಳ ತಾರೆ ಎಂದೇ ಜನಪ್ರಿಯರಾಗಿದ್ದಾರೆ. ಬಿಗ್ ಬಾಸ್ ಸೀಸನ್ 7 ಸೆಪ್ಟೆಂಬರ್ 15, 2013ರಿಂದ ಆರಂಭವಾಗಲಿದೆ. ಅದಕ್ಕೂ ಮುನ್ನವೇ ಕಿರುತೆರೆ ವೀಕ್ಷಕರ ನಡುವೆ ಸಾಕಷ್ಟು ಕುತೂಹಲ, ನಿರೀಕ್ಷೆ ಹಾಗೂ ಗಾಸಿಪ್ ಗಳು ಹರಿದಾಡುತ್ತಿವೆ.

ಪ್ರಿಯಾ ಅಂಜಲಿ ರೈ ಹುಟ್ಟಿದ್ದು ನವದೆಹಲಿಯಲ್ಲಿ. ಬಳಿಕ ಈಕೆ ಯುಎಸ್ಎಯ ಮಿನ್ನಿಸೋಡದ ಮಿನ್ನಿಪೊಲಿಸ್ ಗೆ ಸ್ಥಳಾಂತರವಾದರು. ಈಕೆಯನ್ನು ಅಮೆರಿಕಾ ಮೂಲದ ಪೋಷಕರು ದತ್ತು ತೆಗೆದುಕೊಂಡರು.

29ರ ಹರೆಯಕ್ಕೆ ನೀಲಿ ಚಿತ್ರಗಳಿಗೆ ಅಡಿಯಿಟ್ಟ ಅಂಜಲಿ

ನೀಲಿ ಚಿತ್ರಗಳಲ್ಲಿ ಅಭಿನಯಿಸುವುದಕ್ಕೂ ಮುನ್ನ ಅಂಜಲಿ ಅವರು 12 ವರ್ಷಗಳ ಕಾಲ ಸ್ಟ್ರಿಪ್ಪರ್ (ಕ್ಯಾಬರೆಯಂಥ ನೃತ್ಯಪ್ರದರ್ಶನದಲ್ಲಿ ಬಟ್ಟೆಗಳನ್ನು ಕಳಚಿ ಹಾಕುವ ನೃತ್ಯಗಾರ್ತಿ) ಆಗಿ ತಮ್ಮ ಜೀವ ತೇಯ್ದಿದ್ದರು. ತಮ್ಮ 29ರ ಹರೆಯಕ್ಕೆ 2007ರಲ್ಲಿ ನೀಲಿ ಚಿತ್ರಗಳ ವೃತ್ತಿ ಜೀವನ ಆರಂಭಿಸಿದರು.

ಲೈಫ್ ಸ್ಟೈಲ್ ನಿಯತಕಾಲಿಯಲ್ಲೂ ಸ್ಥಾನ

ಲೈಫ್ ಸ್ಟೈಲ್ ನಿಯತಕಾಲಿಕೆಯ "The Top 100 Hottest Porn Stars Right Now" ಹಾಗೂ "The 50 Prettiest Porn Stars of All Time" ಎಂಬ ಎರಡು ಪಟ್ಟಿಯಲ್ಲೂ ಅಂಜಲಿ ಸ್ಥಾನ ಪಡೆದಿದ್ದಾರೆ.

ನೀಲಿ ಚಿತ್ರಗಳಿಗೆ ಗುಡ್ ಬೈ ಹೇಳಲು ನಿರ್ಧಾರ

2013ರಲ್ಲಿ ಈಕೆ ಒಂದು ದೃಢ ನಿರ್ಧಾರಕ್ಕೆ ಬಂದಿದ್ದಾರೆ. ಅದೇನೆಂದರೆ ಇನ್ನು ಮುಂದೆ ನೀಲಿ ಚಿತ್ರಗಳಲ್ಲಿ ಅಭಿನಯಿಸುವುದಿಲ್ಲ ಎಂಬುದು. ಇನ್ನು ಮುಂದೆ ತಮ್ಮ ವೈಯಕ್ತಿಕ ಜೀವನವೇ ತಮಗೆ ಮುಖ್ಯ ಎಂದು ನಿರ್ಧರಿಸಿದ್ದಾರೆ ಅಂಜಲಿ.

ಯಶಸ್ವಿ ಉದ್ಯಮಿ ಕೈಹಿಡಿಯಲು ಅಂಜಲಿ ಮನಸ್ಸು

ಇದೇ ಸಂದರ್ಭದಲ್ಲಿ ಒಬ್ಬ ನೀಲಿ ಚಿತ್ರೋದ್ಯಮದಲ್ಲಿ ತೊಡಗಿಕೊಳ್ಳದೇ ಇರುವ ಯಶಸ್ವಿ ಉದ್ಯಮಿಯೊಂದಿಗೆ ನಿಶ್ಚಿತಾರ್ಥವನ್ನೂ ಮಾಡಿಕೊಳ್ಳುವುದಾಗಿ ಹೇಳಿಕೊಂಡಿದ್ದಾರೆ.

ಬಾಲಿವುಡ್ ಕಣ್ಣಿಗೂ ಬಿದ್ದ ಅಂಜಲಿ ರೈ

ಇಷ್ಟೆಲ್ಲಾ ವಿಶೇಷಗಳುಳ್ಳ ತಾರೆ ಇನ್ನೂ ಬಾಲಿವುಡ್ ಕಣ್ಣಿಗೆ ಬೀಳದಿರಲು ಸಾಧ್ಯವೆ? ಸದ್ಯಕ್ಕೆ ಆಕೆಗೆ ಬಾಲಿವುಡ್ ಚಿತ್ರದಲ್ಲೂ ಅಭಿನಯಿಸುವ ಆಫರ್ ಬಂದಿಯಂತೆ. ಸದ್ಯಕ್ಕೆ Isis Rising: Curse Of The Lady Mummy ಎಂಬ ಚಿತ್ರದಲ್ಲಿ ಮುಖ್ಯ ಪಾತ್ರವನ್ನು ಫೋಷಿಸಿದ್ದಾರೆ.

ಕಾಂಡೋಮ್ ಧರಿಸುವ ಬಗ್ಗೆ ವಿರೋಧ

ಇತ್ತೀಚೆಗೆ ಲಾಸ್ ಏಂಜಲೀಸ್ ನಲ್ಲಿ ಹೊಸ ಕಾನೂನನ್ನು ಜಾರಿಗೆ ತರಲಾಯಿತು. ಅದೇನೆಂದರೆ ಪೋರ್ನ್ ಸ್ಟಾರ್ ಗಳು ಸೆಕ್ಸ್ ಸೀನ್ ಗಳಲ್ಲಿ ಅಭಿನಯಿಸುವುವಾಗ ಕಾಂಡೋಮ್ ಧರಿಸಬೇಕು ಎಂಬುದು. Measure B ಆ ಕಾನೂನಿಗೆ ಅಂಜಲಿ ಸಂಪೂರ್ಣ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

English summary
After Indo-Canadian adult star Sunny Leone’s super successful stunt on Indian television, controversial reality show Big Boss is now all set to rope in Priya Anjali Rai, who is a popular adult movie star in the US.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada