15 ವರ್ಷಗಳ ಬಳಿಕ ಮತ್ತೆ ನಗಿಸಲು ಬರುತ್ತಿದ್ದಾನೆ ಹೊಸ 'ಪಾಪ ಪಾಂಡು'

By Naveen

ಧಾರಾವಾಹಿಗಳ ಬಗ್ಗೆ ಹೆಚ್ಚು ಆಸಕ್ತಿ ಇಲ್ಲದವರನ್ನು ಕೂಡ ದಿನ ಟಿವಿ ಮುಂದೆ ಕೂರಿಸುವಂತೆ ಮಾಡಿದ್ದ ಸೀರಿಯಲ್ ಗಳಲ್ಲಿ 'ಪಾಪ ಪಾಂಡು' ಪ್ರಮುಖವಾಗಿತ್ತು. ಈ ಧಾರಾವಾಹಿಯನ್ನು ನೋಡದವರೆ ಇಲ್ಲ ಎಂದು ಹೇಳಬಹುದೆನೋ ಅಷ್ಟರ ಮಟ್ಟಿಗೆ ಈ ಸೀರಿಯಲ್ ದೊಡ್ಡ ಜನಪ್ರಿಯತೆಗಳಿಸಿತ್ತು. ವಿಶೇಷ ಅಂದರೆ ಈಗ 15 ವರ್ಷ ನಂತರ ಮತ್ತೆ ಇದೀಗ ನಿಮ್ಮನ್ನು ನಗಿಸಲು ಹೊಸ 'ಪಾಪಾ ಪಾಂಡು' ಬರುತ್ತಿದ್ದಾನೆ.

'ಪಾಪ ಪಾಂಡು' ಧಾರಾವಾಹಿ ಈಗ ಮತ್ತೆ ಬರುತ್ತಿದೆ. ಈ ಬಗ್ಗೆ ಧಾರಾವಾಹಿಯ ನಿರ್ಮಾಪಕರಾಗಿರುವ ಸಿಹಿ ಕಹಿ ಚಂದ್ರು 'ಫಿಲ್ಮಿಬೀಟ್ ಕನ್ನಡ'ದ ಜೊತೆಗೆ ಮಾತನಾಡಿದ್ದಾರೆ. ''ಮತ್ತೆ 'ಪಾಪಾ ಪಾಂಡು' ಧಾರಾವಾಹಿಯನ್ನು ತರುತ್ತಿದ್ದೇವೆ. ಇದು 'ಪಾಪಾ ಪಾಂಡು' ಸೀಸನ್ 2 ಎಂದು ಹೇಳಬಹುದು. 15 ವರ್ಷದ ನಂತರ ಆ ಧಾರಾವಾಹಿ ಏನಾಗುತ್ತದೆ ಎನ್ನುವುದನ್ನು ಇಟ್ಟುಕೊಂಡು ಮತ್ತೆ ಜನರ ಮುಂದೆ ಬರುತ್ತಿದ್ದೇವೆ.'' ಎಂದು ಹೇಳಿದ ಅವರು ಸದ್ಯದಲ್ಲಿಯೇ ಧಾರಾವಾಹಿಯ ಎಲ್ಲ ವಿವರಗಳನ್ನು ತಿಳಿಸಲಿದ್ದಾರಂತೆ.

After 15 years papa pandu serial serial comes back

ಇನ್ನು ಈ ಧಾರಾವಾಹಿಯ ಬಗ್ಗೆ ತುಂಬ ದೊಡ್ಡ ನಿರೀಕ್ಷೆ ಇರುವ ಕಾರಣ ತುಂಬ ಕಷ್ಟ ಪಟ್ಟು ಕೆಲಸ ಮಾಡಲಾಗುತ್ತಿದೆಯಂತೆ. ಈ ಬಾರಿಯ 'ಪಾಪಾ ಪಾಂಡು' ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗಲಿದೆ.

After 15 years papa pandu serial serial comes back

ಅಂದಹಾಗೆ, ಆಗ 'ಪಾಪಾ ಪಾಂಡು' ಧಾರಾವಾಹಿ ಈ ಟಿವಿ ಕನ್ನಡದಲ್ಲಿ ಪ್ರಸಾರ ಆಗುತ್ತಿತ್ತು. 'ಪಾಪ ಪಾಂಡು' ಆಗಿ ಚಿದಾನಂದ್ ಹಾಗೂ ಅವರ ಶ್ರೀಮತಿ ಆಗಿ ಶಾಲಿನಿ ಕಾಣಿಸಿಕೊಂಡಿದ್ದರು.

More from Filmibeat

English summary
After 15 years Sihi Kahi Chandru come back with his popular serial 'Papa Pandu'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X