ಅಂತಿಮ ಘಟ್ಟ ತಲುಪಿದ 'ಪಾರು' ಧಾರಾವಾಹಿ; ಮಹಾ ಸಂಚಿಕೆಯಿಂದ ಕ್ಲೈಮ್ಯಾಕ್ಸ್

By ಪೂರ್ವ

ಕಳೆದ ಆರು ವರ್ಷಗಳಿಂದ 'ಪಾರು' ಧಾರಾವಾಹಿ ಎಲ್ಲರ ಮನ ಗೆದ್ದಿದ್ದು, ಇದೀಗ 'ಪಾರು' ಧಾರಾವಾಹಿ ಇದೀಗ ಮುಕ್ತಾಯವಾಗುತ್ತಿದೆ. ಇದರಿಂದ ಧಾರಾವಾಹಿ ಪ್ರೇಮಿಗಳಿಗೆ ಕೊಂಚ ಬೇಸರ ತರಿಸಿದೆ. ಇತ್ತೀಚೆಗೆ ಆಫೀಸ್‌ಗೆ ಹೋಗುವ ಪಾರು ಸಖತ್ ಸ್ಟೈಲಿಶ್ ಆಗಿ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದರು. ಆಕೆಯ ಲುಕ್‌ಗೆ ಕಿರುತೆರೆ ವೀಕ್ಷಕರು ಕೂಡ ಫಿದಾ ಆಗಿದ್ದರು.

ಇದೀಗ ಧಾರಾವಾಹಿ ಅಂತಿಮ ಘಟ್ಟ ತಲುಪಿದೆ. ಪಾರುವಿನ ಬೆಲೆ ಜನನಿ ಇದೀಗ ತಿಳಿಯುವ ಹಂತ ತಲುಪಿದೆ. ಜನನಿ ಮನೆಯಲ್ಲಿ ಅಡುಗೆ ಮಾಡುವುದು ಕೊಂಚ ಕಷ್ಟ ಆಗಿದೆ. ಆಕೆಗೆ ಆಫೀಸ್ ಕೆಲಸ ಮಾಡಿ ಮನೆಯ ಕೆಲಸ ಮಾಡಲು ಕೊಂಚ ಕಷ್ಟ ಆಗುತ್ತಿದೆ. ಇದೇ ಸಂದರ್ಭದಲ್ಲಿ ಧಾರಾವಾಹಿ ಕೊನೆಯ ಹಂತ ತಲುಪಿದೆ. ಹೀಗಾಗಿ ಎರಡು ದಿನಗಳ ಕಾಲ ಮಹಾ ಸಂಚಿಕೆಯ ಪ್ರಸಾರ ಮಾಡುವ ಮೂಲಕ ತೆರೆ ಎಳೆಯಲಿದ್ದಾರೆ.

after 6 years kannada serial Paaru telecasting final segment

ಇನ್ನೂ 'ಪಾರು' ಧಾರಾವಾಹಿ ಕಳೆದ ಆರು ವರುಷಗಳಿಂದ ಜನರಿಗೆ ಮನರಂಜನೆಯನ್ನು ನೀಡುತ್ತಿದೆ. 'ಪಾರು' ಧಾರಾವಾಹಿಯಲ್ಲಿ ನಟನೆ ಮಾಡುತ್ತಿರುವ ಕಲಾವಿದರ ತಂಡ ಕೊನೆಯ ಕ್ಷಣದ ನೆನಪನ್ನು ಫೋಟೋ ಮೂಲಕ ಸೆರೆ ಹಿಡಿದಿದ್ದಾರೆ. ಈ ಫೋಟೋ ಹಾಗೂ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

'ಪಾರು' ನಟನೆಗೆ ಮನಸೋತ ಫ್ಯಾನ್ಸ್

'ಪಾರು' ಧಾರಾವಾಹಿ 2018 ರಿಂದ ಶುರುವಾಗಿ 2024 ರವರೆಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿದೆ. ಮೋಕ್ಷಿತಾ ಪೈ 'ಪಾರು' ಪಾತ್ರದಲ್ಲಿ, ವಿನಯ ಪ್ರಸಾದ್ ಅಖಿಲಾಂಡೇಶ್ವರಿ ಪಾತ್ರದಲ್ಲಿ ನಟನೆ ಮಾಡಿದ್ದಾರೆ. ಶರತ್ ಪದ್ಮನಾಭ್, ಸಿದ್ಧು ಮೂಲಿಮನಿ, ಎಸ್ ನಾರಾಯಣ್, ಸಿತಾರ, ನಾಗೇಂದ್ರ ಶಾ, ನಾಗೇಶ್, ಪವಿತ್ರಾ ನಾಯ್ಕ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಕ್ಲೈಮ್ಯಾಕ್ಸ್ ಫೋಟೊಗೆ ಏನಂದ್ರು ಫ್ಯಾನ್ಸ್

'ಪಾರು' ಧಾರಾವಾಹಿಯ ನಟಿ ಸಿತಾರಾ ಕೊನೆಯ ದಿನದ ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದು, "ಟ್ವಿಸ್ಟ್‌ಗಳ ಮೂಲಕ ಟ್ವಿಸ್ಟ್ ನೀಡುತ್ತಾ ಅಭಿಮಾನಿಗಳ ಮನದಲ್ಲಿ ನೂರೆಂಟು ಕುತೂಹಲ ಮನೆ ಮಾಡುತ್ತಾ ಇದ್ದವು. ಹಾಗೆಯೇ ಪ್ರೇಕ್ಷಕರೇ ನಿಮ್ಮ ಪ್ರೀತಿಯಿಂದ ಇಷ್ಟೆಲ್ಲಾ ಜನಪ್ರಿಯತೆ ಪಡೆಯಲು ಸಾಧ್ಯವಾಯಿತು. ನಿಮಗೆ ಕೋಟಿ ನಮನಗಳು" ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಪಾರು ಮೇಲೆ ಪ್ರೀತಿ ತೋರಿಸುತ್ತಾಳಾ ಜನನಿ

ಇದೀಗ ಜನನಿ ಹಾಗೂ ಪಾರು ಮಧ್ಯೆ ಬಹಳ ದೊಡ್ಡ ಕಂದಕ ಏರ್ಪಟ್ಟಿದೆ. ಆದರೆ, ಅದನ್ನು ಹೇಗಾದರೂ ಸರಿ ಮಾಡಬೇಕು ಎಂದು ಅಖಿಲ ಅಂದುಕೊಂಡಿರುತ್ತಾರೆ. ಅದಕ್ಕೆ ತಕ್ಕ ಹಾಗೆ ಶಿಕ್ಷೆಯನ್ನು ನೀಡುತ್ತಾರೆ. ಈ ಹಂತದಲ್ಲಿಯೇ ಸಂಚಿಕೆ ಕೂಡ ಮುಗಿಯುತ್ತಿದೆ. ಇನ್ಮೇಲೆ 'ಪಾರು' ಧಾರಾವಾಹಿ ವೀಕ್ಷಕರ ನೆನಪಾಗಿ ಉಳಿಯಲಿದೆ.

More from Filmibeat

English summary
after 6 years kannada serial Paaru telecasting final segment:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X