Actrss Manasa Joshi: "ತಾಯಿಯಾದ ಬಳಿಕ ಪ್ರತಿದಿನವೂ ಸವಾಲುಗಳನ್ನು ಎದುರಿಸಬೇಕಾಗುತ್ತೆ" -ಮಾನಸಾ ಜೋಶಿ

By ಅನಿತಾ ಬನಾರಿ

ಹೆಣ್ಣು ಮಗುವಿಗೆ ತಾಯಿಯಾಗಿರುವ ನಟಿ ಮಾನಸ ಜೋಶಿ ನೃತ್ಯ ಕಲಾವಿದೆಯು ಹೌದು. ಆದರೆ, ಬಸುರಿಯಾದ ನಂತರ ಯಾವುದೇ ಕಾರ್ಯಕ್ರಮಗಳನ್ನು ಕೊಡಲು ಸಾಧ್ಯವಾಗದ ಕಾರಣ ಎಲ್ಲಾ ರೀತಿಯ ಕಾರ್ಯಕ್ರಮಗಳಿಂದ ದೂರವೇ ಉಳಿದರು. ಇದೀಗ ತಮ್ಮ ತಾಯ್ತನದ ಸಂತೋಷವನ್ನು ಅನುಭವಿಸುತ್ತಿರುವ ಈಕೆಗೆ ತಾಯಿ ಆಗುವುದು ಸುಲಭದ ಮಾತು ಅಲ್ಲವೇ ಅಲ್ಲ ಎಂಬುದು ಅರಿವಾಗಿದೆಯಂತೆ.

ತಾಯಿಯಾದವಳು ಪ್ರತಿದಿನವೂ ಹೊಸ ಚಾಲೆಂಜ್‌ಗಳನ್ನು ನಾವು ಎದುರಿಸುತ್ತಲೇ ಇರಬೇಕಾಗುತ್ತದೆ. ಮೊದಲಿನ ಹಾಗೆ ಯಾವುದು ಇರುವುದಿಲ್ಲ. ಪ್ರತಿಯೊಂದು ಅಂದುಕೊಂಡಂತೆ ಆಗುತ್ತದೆ ಎನ್ನುವುದೇ ದೊಡ್ಡ ಭ್ರಮೆ. ನಮ್ಮ ಇಡೀ ದೈನಂದಿನ ಜೀವನ ಮಗುವಿನ ಚಟುವಟಿಕೆಯ ಸುತ್ತಲೇ ಸುತ್ತುತ್ತಿರುವುದರಿಂದ ಮಗುವಿಗೆ ಪೂರ್ತಿ ಅವಲಂಬಿತವಾಗಿರುತ್ತದೆ. ಆದರೆ, ಇದ್ಯಾವುದೂ ಕಷ್ಟ ಎಂದನಿಸುವುದಿಲ್ಲ. ಏಕೆಂದರೆ ನಮ್ಮೊಂದಿಗೆ ಹೊಸ ಜೀವವೊಂದು ಇರುವುದರಿಂದ ಅದರ ನಗು ಬೆಳವಣಿಗೆಯಲ್ಲಿ ಎಲ್ಲಾ ಖುಷಿಯು ಅಡಗಿದೆ ಎಂಬುದು ಕೂಡ ಅರಿವಾಗುತ್ತದೆ ಎಂದಿದ್ದಾರೆ.

actress-manasa-joshi

ಸಿಗುವ ಸಮಯ ಸಾಕಾಗುತ್ತಿಲ್ಲ

ಮೊದಲೆಲ್ಲ ಮಾನಸ ಅವರು ಅವರಿಗೆ ಬೇಕಾದಾಗ ಹೊರಗೆ ಹೋಗಿ ಬರುವುದು ಅಥವಾ ಎಲ್ಲ ಚಟುವಟಿಕೆಗಳು ಆಕೆಗೆ ಬೇಕಾದಾಗ ಮಾಡಿಕೊಳ್ಳುವ ಸಮಯವನ್ನು ಮಾಡಿಕೊಳ್ಳುತ್ತಿದ್ದರಂತೆ. ಆದರೆ, ಈಗ ಹಾಗಲ್ಲ ಮಗುವಿನ ದಿನದ ಟೈಮ್ ಟೇಬಲ್ ಪ್ರಕಾರ ಆಕೆ ತನ್ನ ಚಟುವಟಿಕೆಗಳನ್ನು ಜೋಡಿಸಿಕೊಳ್ಳಬೇಕು. ಆದರೂ, ಅದೆಷ್ಟೋ ಬಾರಿ ಅಂದುಕೊಂಡಂತೆ ಆಗದೆ ಇರುವುದೇ ಹೆಚ್ಚು. ವಿಪರ್ಯಾಸವೆಂದರೆ ಮಾನಸ ಇಡೀ ಕೆರಿಯರ್‌ನಲ್ಲಿ ಆಕೆ ಆಸೆ ಪಟ್ಟ, ಅಂದುಕೊಂಡ ಆದಷ್ಟೋ ಆಫರ್‌ಗಳು ಆಕೆ ಬಸುರಿಯಾದ ಮೇಲೆ ಬರತೊಡಗಿದವು. ಆದರೆ ಆ ಸಮಯಕ್ಕೆ ಆಕೆ ಗರ್ಭಿಣಿಯಾಗಿದ್ದ ಕಾರಣ ಅದ್ಯಾವುದನ್ನು ಕೈಗೆ ತೆಗೆದುಕೊಳ್ಳಲು ಆಗಲಿಲ್ಲವಂತೆ.

ಕಾಲ ಓಡುವುದು ತಿಳಿಯುವುದೇ ಇಲ್ಲ

ಇನ್ನು ಒಂದೂವರೆ ತಿಂಗಳಿಗೆ ಮಾನಸ ಮಗುವಿಗೆ ಒಂದು ವರ್ಷವಾಗುತ್ತದೆ. ಮಗಳಿಗೆ ಮೂರು ತಿಂಗಳಿರುವಾಗ ಮಾನಸ ಜೋಶಿ ಮತ್ತೆ ಡ್ಯಾನ್ಸ್ ಕಡೆಗೆ ಮುಖ ಮಾಡಿದರಂತೆ. ಗರ್ಭಿಣಿ ಆಗುವ ಮೊದಲಿನ ಮಾನಸ ಜೋಶಿಗೂ ಈಗಿನ ಮಾನಸ ಜೋಶಿಗೂ ಬಹಳಷ್ಟು ವ್ಯತ್ಯಾಸಗಳಿವೆಯಂತೆ. ಅದೆಷ್ಟೇ ಕಂಬ್ಯಾಕ್ ಮಾಡಬೇಕೆಂದರೂ ಅದೆಷ್ಟೇ ತೂಕ ಇಳಿಸಿಕೊಂಡರೂ ಕೂಡಾ ಆಕೆಗೆ ಮೊದಲಿನಂತೆ ಸರಾಗವಾಗಿ ಡ್ಯಾನ್ಸ್ ಮಾಡಲು ಸಾಧ್ಯವಾಗುತ್ತಿಲ್ಲವಂತೆ. ಆದರೂ ಛಲ ಬಿಡದೆ ಪ್ರತಿದಿನ ಪ್ರಯತ್ನ ಮಾಡುತ್ತಲೇ ಇದ್ದಾರೆ.

actress-manasa-joshi

ನಮ್ಮನ್ನು ನಾವು ಒಪ್ಪಿಕೊಳ್ಳಬೇಕು

ಪ್ರತಿದಿನದ ಶ್ರಮ ಒಂದಲ್ಲ ಒಂದು ದಿನ ಒಳ್ಳೆಯ ಪ್ರತಿಫಲವನ್ನೇ ಕೊಡುತ್ತದೆ ಎಂದು ನಂಬಿರುವ ಮಾನಸ ಇತ್ತೀಚೆಗಷ್ಟೇ ನನ್ನ ಗುರುಗಳಿಗಾಗಿ ಒಂದು ನೃತ್ಯವನ್ನು ಮಾಡಿದ್ದರಂತೆ. ಜೊತೆಗೆ ಹಲವಾರು ಸ್ಟೂಡೆಂಟ್‌ಗಳಿಗೆ ಡ್ಯಾನ್ಸ್ ಹೇಳಿಕೊಡುತ್ತಿದ್ದಾರೆ. ಮಗುವಾದ ಮೇಲೆ ಮತ್ತೆ ಮೊದಲಿನಂತೆ ಆಗುವುದು ದೈಹಿಕವಾಗಿ ಫಿಟ್ ಆಗುವುದು ಸುಲಭದ ಮಾತಲ್ಲ. ಹಾಗಂದ ಮಾತ್ರಕ್ಕೆ ಯಾರು ಹೆದರಬೇಕಾಗಿಯೂ ಇಲ್ಲ ಇವೆಲ್ಲವೂ ಹೊಸ ಅನುಭವ. ಕ್ರಮೇಣ ನಮ್ಮನ್ನು ನಾವು ಒಪ್ಪಿಕೊಳ್ಳಬೇಕು ಎಂಬುದು ಮಾನಸ ಜೋಶಿ ಅವರ ಅಂಬೋಣ.

ಮಾನಸಗೆ ಈ ಸಮಯದಲ್ಲಿ ಅವರ ಗಂಡ ಹಾಗೂ ತಾಯಿ ಬಹಳಷ್ಟು ಸಪೋರ್ಟ್ ಮಾಡುತ್ತಿದ್ದಾರೆಯಂತೆ. ಅವರ ಸಹಾಯದಿಂದ ಆಕೆ ಮತ್ತೆ ಕೆರಿಯರ್‌ಗೆ, ಡ್ಯಾನ್ಸ್‌ಗೆ ವಾಪಸ್ ಆಗಲು ಸಾಧ್ಯವಾಗಿದೆಯಂತೆ. ಅದೇನೇ ಅಂದರು ನಮ್ಮಲ್ಲಿ ಆದ ಒಂದಷ್ಟು ಬದಲಾವಣೆಗಳನ್ನು ಮತ್ತೆ ಹಿಂಪಡೆಯಲು ಸಾಧ್ಯವಿಲ್ಲ. ನಿಧಾನವಾಗಿ ನಮ್ಮನ್ನು ನಾವು ಒಪ್ಪಿಕೊಂಡು, ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳುವುದು ತುಂಬಾ ಮುಖ್ಯ ಎನ್ನುತ್ತಾರೆ ಮಾನಸ ಜೋಶಿ.

More from Filmibeat

English summary
After becoming a mother you have to face challenges every day says actrss Manasa Joshi
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X