'ಭರ್ಜರಿ ಬ್ಯಾಚುಲರ್ಸ್' ಮುಗಿಸಿ ಸೀದಾ 'ಗಿಚ್ಚಿ ಗಿಲಿಗಿಲಿ' ಅಂತಿರೊ ಸಂಜನಾ; ನಟಿ ಸಿಕ್ಕಾಪಟ್ಟೆ ಬ್ಯುಸಿ

By ಅನಿತಾ ಬನಾರಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಿಯಾಲಿಟಿ ಶೋಗಳ ಪೈಕಿ 'ಗಿಚ್ಚಿ ಗಿಲಿಗಿಲಿ'ಯೂ ಒಂದು. ಈಗಾಗಲೇ ಯಶಸ್ವಿ ಎರಡು ಸಂಚಿಕೆಗಳನ್ನು ಪೂರೈಸಿರುವ 'ಗಿಚ್ಚಿ ಗಿಲಿಗಿಲಿ'ಯ ಹೊಸ ಸೀಸನ್ ಶುರುವಾಗಿದೆ. ಕಳೆದ ವಾರವಷ್ಟೇ ಹೊಸ ಶೋ ಆರಂಭವಾಗಿದ್ದು ಈ ಬಾರಿಯ ಸ್ಪರ್ಧಿಯಾಗಿ ಸಂಜನಾ ಚಿದಾನಂದ್ ಕಾಣಿಸಿಕೊಳ್ಳಲಿದ್ದಾರೆ. ಅಂದ ಹಾಗೇ ಸಂಜನಾ ಅವರು ಈ ಹಿಂದೆ 'ಭರ್ಜರಿ ಬ್ಯಾಚುಲರ್ಸ್' ಎನ್ನುವ ರಿಯಾಲಿಟಿ ಶೋವಿನಲ್ಲಿ ಭಾಗವಹಿಸಿದ್ದರು.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಭರ್ಜರಿ ಬ್ಯಾಚುಲರ್ಸ್' ಶೋವಿನಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ಸಂಜನಾ ಚಿದಾನಂದ್ 'ಕಾಮಿಡಿ ಕಿಲಾಡಿಗಳು' ಖ್ಯಾತಿಯ ಮನೋಹರ್‌ಗೆ ಜೋಡಿಯಾಗಿ ಕಿರುತೆರೆಯಲ್ಲಿ ಮೋಡಿ ಮಾಡಿದ್ದರು.

After Bharjari Bachelors Sanjana Chidanand will entertain with Gicchi Gili Gili show

ಇದೀಗ ಕಲರ್ಸ್ ಕನ್ನಡದ 'ಗಿಚ್ಚಿ ಗಿಲಿಗಿಲಿ' ಶೋ ಮೂಲಕ ಕಿರುತೆರೆಗೆ ಮರಳಿದ್ದಾರೆ. ತಮ್ಮ ಹಾಸ್ಯದ ಮೂಲಕ, ನಟನೆಯ ಮೂಲಕ ಕಿರುತೆರೆ ವೀಕ್ಷಕರನ್ನು ರಂಜಿಸುವುದಕ್ಕೆ ಮುಂದಾಗಿದ್ದಾರೆ. ಸದ್ಯ ವಾಹಿನಿಗಳಿಗೆ ಸಂಜನಾ ಆನಂದ್ ಬಹುಬೇಡಿಕೆಯ ಪ್ರತಿಭೆಯಾಗಿದ್ದಾರೆ.

ಮೇಲಿಂದ ಮೇಲೆ ರಿಯಾಲಿಟಿ ಶೋ ಸ್ಪರ್ಧಿಯಾಗಿ ಕಿರುಪರದೆ ಮೇಲೆ ಕಾಣಿಸಿಕೊಳ್ಳುತ್ತಿರುವ ಸಂಜನಾ ಕೊನೆಯ ಬಾರಿ ನಟಿಸಿದ್ದು 'ಬ್ರಹ್ಮಗಂಟು' ಧಾರಾವಾಹಿಯಲ್ಲಿ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಬ್ರಹ್ಮಗಂಟು' ಧಾರಾವಾಹಿಯಲ್ಲಿ ಕೊನೆಯದಾಗಿ ಅಭಿನಯಿಸಿದ್ದ ಸಂಜನಾ ರೀಲ್‌ನಲ್ಲೂ ಸಿನಿಮಾ ಕಲಾವಿದೆಯಾಗಿ ಮೋಡಿ ಮಾಡಿದ್ದರು. ಜೊತೆಗೆ ನಾಯಕ ಲಕ್ಕಿಯನ್ನು ಪ್ರೀತಿಸುವ ಹುಡುಗಿಯ ಪಾತ್ರ ಅದಾಗಿತ್ತು.

After Bharjari Bachelors Sanjana Chidanand will entertain with Gicchi Gili Gili show

'ಜೀವನ ಚೈತ್ರ' ಧಾರಾವಾಹಿಯ ಮೂಲಕ ಕಿರುತೆರೆಗೆ ಪರಿಚಿತರಾದ ಸಂಜನಾ ಚಿದಾನಂದ್ ತದ ನಂತರ ಬದಲಾದುದು ವಚನಾಳಾಗಿ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕುಲವಧು' ಧಾರಾವಾಹಿಯಲ್ಲಿ ವಚನಾ ಆಗಿ ನಟಿಸಿದ್ದ ಸಂಜನಾ ಆ ಪಾತ್ರದ ಮೂಲಕ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯೂ ಆದರು. ಆದರೆ, ಮುಂದೆ ಕಾರಣಾಂತರಗಳಿಂದ ಧಾರಾವಾಹಿಯ ಪಾತ್ರದಿಂದ ಹೊರಬಂದ ಈಕೆ ಮತ್ತೆ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದು ಕಡಿಮೆ ಎಂದು ಹೇಳಿದರೆ ತಪ್ಪಾಗಲಾರದು.

ನಂತರ 'ಕನ್ನಡ ಬಿಗ್ ಬಾಸ್ ಸೀಸನ್ 4'ರ ಸ್ಪರ್ಧಿಯಾಗಿ ಕಮಾಲ್ ಮಾಡಿದ ಸಂಜನಾ ಚಿದಾನಂದ್ ಬಿಗ್ ಬಾಸ್ ಮುಗಿದದ್ದೇ ಸಿರೀಸ್ ಒಂದರಲ್ಲಿ ನಟಿಸಿ ಸೈ ಎನಿಸಿಕೊಂಡರು. ಒಳ್ಳೆಯ ಹುಡುಗ ಪ್ರಥಮ್ ಹಾಗೂ ಭುವನ್ ಪೊನ್ನಣ್ಣ ನಟನೆಯ 'ಸಂಜು ಮತ್ತು ನಾನು' ಸಿರೀಸ್‌ನಲ್ಲಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು ಸಂಜನಾ. ಪ್ರತಿ ವಾರಾಂತ್ಯ ಈ ಸಿರೀಸ್ ಪ್ರಸಾರವಾಗುತ್ತಿದ್ದರೂ, ವೀಕ್ಷಕರು ಪ್ರತಿ ಸಂಚಿಕೆಯನ್ನು ಕುತೂಹಲದಿಂದ ನೋಡುತ್ತಿದ್ದರು.

ಇನ್ನು 'ಉಡುಂಬ' ಸಿನಿಮಾದ ಹಾಡೊಂದಕ್ಕೆ ಸೊಂಟ ಬಳುಕಿಸಿ ಸಿನಿ ಪ್ರಿಯರ ಹೃದಯಕ್ಕೆ ಕನ್ನ ಹಾಕಿದ ಸಂಜನಾ ಚಿದಾನಂದ್ 'ಮೊಂಬತ್ತಿ', 'ಕಿರಿಕ್ ಕೀರ್ತಿ' ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಸದ್ಯ ಕಿರುತೆರೆಯ ರಿಯಾಲಿಟಿ ಶೋಗಳಲ್ಲಿ ಬ್ಯುಸಿಯಾಗಿದ್ದು, 'ಗಿಚ್ಚಿ ಗಿಲಿ ಗಿಲಿ'ಯಲ್ಲಿ ಹಾಸ್ಯದ ಹೊನಲನ್ನು ಪಸರಿಸಲು ಸಜ್ಜಾಗಿದ್ದಾರೆ.

More from Filmibeat

English summary
Sanjana Chidanand is busy in reality shows one after the other. After Bharjari Bachelors, Sanjana will now be charming in Gicchi Gili Gili show:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X