ಗಿಲ್ಲಿ ನಿರ್ದೇಶನದ ಚಿತ್ರದಲ್ಲಿ ಕಾವ್ಯಾ ಫಸ್ಟ್ ಹೀರೊಯಿನ್, ಸೆಕೆಂಡ್ ಹೀರೊಯಿನ್ ಯಾರು?

ಬಿಗ್‌ಬಾಸ್ ಸೀಸನ್ 12 ಮುಗಿದರೂ ಸಂಭ್ರಮಾಚರಣೆ ಇನ್ನು ಮುಕ್ತಾಯವಾಗಿಲ್ಲ. ಗಿಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿಬಿಟ್ಟಿದ್ದಾರೆ. ಬಿಗ್‌ಬಾಸ್ ಗೆದ್ದ ಗಿಲ್ಲಿ ಮುಂದೆ ಏನ್ ಮಾಡ್ತಾರೆ ಎನ್ನುವ ಚರ್ಚೆ ಶುರುವಾಗಿದೆ. ಸದ್ಯಕ್ಕೆ ಬ್ಲಾಂಕ್ ಆಗಿಬಿಟ್ಟಿದ್ದೀನಿ. ಮುಂದೇನು ಎನ್ನುವುದು ಗೊತ್ತಿಲ್ಲ ಎನ್ನುತ್ತಿದ್ದಾರೆ. ಬಹುಮಾನದ ಹಣದಲ್ಲಿ ಜಮೀನು ಖರೀದಿಸಿ ವ್ಯವಸಾಯ ಮಾಡ್ತೀನಿ ಎಂದು ಹೇಳಿದ್ದಾರೆ.

ಗಿಲ್ಲಿ ಈಗಾಗಲೇ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ. ಮುಂದೆ ಸಿನಿಮಾ ನಿರ್ದೇಶಕನಾಗುವ ಕನಸು ಕಂಡಿದ್ದಾರೆ. ಗಿಲ್ಲಿ ನಿರ್ದೇಶನದ ಚಿತ್ರದಲ್ಲಿ ಕಾವ್ಯಾ ನಟಿಸುತ್ತಾರಾ? ಎನ್ನುವ ಪ್ರಶ್ನೆಗಳನ್ನು ಅಭಿಮಾನಿಗಳು ಕೇಳುತ್ತಿದ್ದಾರೆ. ಅವಕಾಶ ಸಿಕ್ಕರೆ ಕಂಡಿತ ನಟಿಸುತ್ತೀನಿ ಎಂದು ಕಾವ್ಯಾ ಸಂದರ್ಶನದಲ್ಲಿ ಹೇಳಿದ್ದಾರೆ.

After Bigg Boss 12 Win Gilli s First Heroine Second Heroine Talk Goes Viral and Turns Funny

ಬಿಗ್‌ಬಾಸ್ ಮನೆಯಲ್ಲಿ ಇದ್ದಾಗಲೇ ಗಿಲ್ಲಿ ಸಿನಿಮಾ ನಿರ್ದೇಶನದ ಬಗ್ಗೆ ಸ್ಪರ್ಧಿಗಳ ಜೊತೆ ಚರ್ಚೆ ನಡೆಯುತ್ತಿತ್ತು. ಅದಕ್ಕೆ ಸಂಬಂಧಿಸಿದ ವೀಡಿಯೋವೊಂದು ವೈರಲ್ ಆಗ್ತಿದೆ. ನಾನು ನಿರ್ದೇಶನದ ಚಿತ್ರದಲ್ಲಿ ಕಾವ್ಯಾ ಫಸ್ಟ್ ಹೀರೊಯಿನ್, ನೀನು ಸೆಕೆಂಡ್ ಹೀರೊಯಿನ್ ಎಂದು ಸ್ಪಂದನಾ ಜೊತೆ ಗಿಲ್ಲಿ ಮಾತನಾಡಿದ್ದ ವೀಡಿಯೋ ವೈರಲ್ ಆಗ್ತಿದೆ.

ಸೆಕೆಂಡ್ ಹೀರೊಯಿನ್ ಅಂದ್ರೆ ಒಂದು ಸೆಕೆಂಡ್ ಬಂದು ಹೋಗುವುದು ಅಷ್ಟೇ ಎಂದು ಸ್ಪಂದನಾ ಅವರ ಕಾಲೆಳೆದಿದ್ದರು ಗಿಲ್ಲಿ. ಬಳಿಕ ಇದೇ ರೀತಿಯ ಚರ್ಚೆ ರಕ್ಷಿತಾ ಜೊತೆಗೂ ನಡೆದಿತ್ತು. ನನ್ನ ಸಿನಿಮಾದಲ್ಲಿ ನೀವೇ ಸೆಕೆಂಡ್ ಹೀರೊಯಿನ್ ಎಂದಾಗ ನಾನು ಒಪ್ಪಲ್ಲ ಎಂದು ರಕ್ಷಿತಾ ಹೇಳಿದ್ದರು.

ಸೆಕೆಂಡ್ ಹೀರೊಯಿನ್ ಅಂದ್ರೆ ಸುಮ್ಮನಿರಬೇಕು. ಅಡುಗೆ ಮಾಡ್ಕೊಂಡು ಎಂದು ರಕ್ಷಿತಾ ಅವರನ್ನು ಗಿಲ್ಲಿ ರೇಗಿಸಿದ್ದರು. ನಾನು ಅಡುಗೆ ಮಾಡಿಕೊಟ್ರೆ ನೀವು ಫಸ್ಟ್ ಹೀರೊಯಿನ್ ಜಾಲಿ ಆಗಿ ಇರ್ತೀರಾ ಅಲ್ವಾ? ಎಂದು ರಕ್ಷಿತಾ ಕೇಳಿದ್ದರು. ಆದರೆ ಕಾವ್ಯಾ ಕೂಡ ಈ ಚರ್ಚೆ ಇಲ್ಲಿಗೆ ಸಾಕು, ನಿಲ್ಲಿಸಿ ಎಂದು ರೇಗಿದ್ದರು. ಒಂದು ಸಿನಿಮಾ ಕಥೆ ಹೇಳ್ತೀನಿ ಎಂದು ಹೇಳಿ ತಮ್ಮ ಹಾಗೂ ಕಾವ್ಯಾ ಕಥೆಯನ್ನೇ ಹೇಳಿ ಗಿಲ್ಲಿ ವೀಕ್ಷಕರನ್ನು ರಂಜಿಸಿದ್ದರು.

ಬಿಗ್‌ಬಾಸ್ ಟ್ರೋಫಿ ಗೆದ್ದ ಗಿಲ್ಲಿ ನಟನ ಜನಪ್ರಿಯತೆಯನ್ನು ಬಳಸಿಕೊಳ್ಳಲು ಫಿಲ್ಮ್ ಮೇಕರ್ಸ್ ಮುಂದಾಗಿದ್ದಾರೆ. ಗಿಲ್ಲಿ ಜೊತೆ ಸಿನಿಮಾ ಮಾಡಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ಯೋಗರಾಜ್ ಭಟ್ ನಿರ್ದೇಶನದ ಚಿತ್ರದಲ್ಲಿ ಗಿಲ್ಲಿ ನಟಿಸುತ್ತಾರೆ ಎನ್ನುವ ಊಹಾಪೋಹ ಶುರುವಾಗಿದೆ. ಇನ್ನು ಗಿಲ್ಲಿ ಜೊತೆ ರಿಯಾಲಿಟಿ ಶೋ ಮಾಡಲು ಟಿವಿ ವಾಹಿನಿಗಳು ಮುಂದಾಗಿವೆ ಎನ್ನಲಾಗ್ತಿದೆ. ಸದ್ಯ ಗಿಲ್ಲಿ ನಡೆ ಕುತೂಹಲ ಮೂಡಿಸಿದೆ.

3 ತಿಂಗಳ ಬಿಗ್‌ಬಾಸ್ ಶೋನಿಂದ ಗಿಲ್ಲಿ ಸಿಕ್ಕಾಪಟ್ಟೆ ಕ್ರೇಜ್ ಸೃಷ್ಟಿಸಿಕೊಂಡಿದ್ದಾರೆ. ಅದನ್ನು ಹೇಗೆ ನಿಭಾಯಿಸುತ್ತಾರೆ ಎನ್ನುವ ಕುತೂಹಲ ಮೂಡಿದೆ. ಗಿಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು ಎಂದು ಕೆಲವರು ಸಲಹೆ ನೀಡುತ್ತಿದ್ದಾರೆ. ಇತ್ತೀಚೆಗೆ ಸುದೀಪ್ ಭೇಟಿ ವೇಳೆ ಅವರು ಕೂಡ ಇದೇ ಮಾತು ಹೇಳಿದ್ದಾರೆ ಎಂದು ಗಿಲ್ಲಿ ವಿವರಿಸಿದ್ದಾರೆ. 50 ಲಕ್ಷ ರೂ. ಬಹುಮಾನದ ಹಣ ಹಾಗೂ ಒಂದು ಕಾರ್ ಗಿಲ್ಲಿಗೆ ಸಿಕ್ಕಿದೆ. ಜೊತೆಗೆ ಕಿಚ್ಚ ಸುದೀಪ್ ವೈಯಕ್ತಿಕವಾಗಿ 10 ಲಕ್ಷ ರೂ. ಹಣ ಗಿಲ್ಲಿ ನಟನಿಗೆ ಕೊಟ್ಟಿದ್ದಾರೆ.

ಹಿಂದಿನ 11 ಸೀಸನ್‌ಗಳಲ್ಲಿ 11 ಮಂದಿ ಗೆದ್ದಿದ್ದಾರೆ. ನೂರಾರು ಸ್ಪರ್ಧಿಗಳು ದೊಡ್ಮನೆ ಒಳಗೆ ಬಂದು ಹೋಗಿದ್ದಾರೆ. ಅದರೆ ಅವರೆಲ್ಲರನ್ನು ಮೀರಿ ಗಿಲ್ಲಿ ಜನರ ಬೆಂಬಲ ಪಡೆದಿದ್ದಾರೆ. ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದರು. ಸಿಎಂ ಕೂಡ ಗಿಲ್ಲಿ ನಟನ ಜನಪ್ರಿಯತೆ ಬಗ್ಗೆ ಮಾತನಾಡಿದ್ದಾರೆ.

ದರ್ಶನ್ ನಟನೆಯ 'ಡೆವಿಲ್' ಚಿತ್ರದ ಸಣ್ಣ ಪಾತ್ರದಲ್ಲಿ ಗಿಲ್ಲಿ ನಟಿಸಿದ್ದು ಗೊತ್ತೇಯಿದೆ. 'ಸೂಪರ್ ಹಿಟ್', 'ಸರ್ಕಾರಿ ಶಾಲೆ' ಹೀಗೆ ಕೆಲ ಸಿನಿಮಾಗಳಲ್ಲಿ ಈಗಾಗಲೇ ಬಣ್ಣ ಹಚ್ಚಿದ್ದಾರೆ. ಶೀಘ್ರದಲ್ಲೇ ಆ ಸಿನಿಮಾಗಳು ತೆರೆಗೆ ಬರಲಿವೆ.

More from Filmibeat

English summary
Bigg Boss 12 winner Gilli is in the news again—not for a film announcement, but for her funny “first heroine, second heroine” discussions inside the house. From viral banter with Kavya, Spandana, and Rakshita to future film dreams and farming plans, Gilli’s post-Bigg Boss journey is full of buzz and humor.
Read more about: gilli bigg boss 12 sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X