Bowling League: ಕ್ರಿಕೆಟ್, ಕಬಡ್ಡಿ, ಬ್ಯಾಡ್ಮಿಂಟನ್ ಬಳಿಕ ಬೌಲಿಂಗ್ ಲೀಗ್‌ಗೆ ಸಜ್ಜಾದ ಸ್ಯಾಂಡಲ್‌ವುಡ್ ತಾರೆಯರು

By ಫಿಲ್ಮಿಬೀಟ್ ಡೆಸ್ಕ್

ಸ್ಯಾಂಡಲ್‌ವುಡ್ ತಾರೆಯರು ಕೇವಲ ಸಿನಿಮಾ ಅಂತಷ್ಟೇ ತಲೆಕೆಡಿಸಿಕೊಳ್ಳುವುದಿಲ್ಲ. ಫ್ರೀ ಸಿಕ್ಕಾಗ ಕ್ರಿಕೆಟ್, ಬ್ಯಾಡ್ಮಿಂಟನ್ ಅಂತ ಬ್ಯುಸಿಯಾಗಿ ಬಿಡುತ್ತಾರೆ. ಕಳೆದ ಕೆಲವು ವರ್ಷಗಳಿಂದ ಸ್ಯಾಂಡಲ್‌ವುಡ್‌ನಲ್ಲಿ ಏನಾದರೂ ಒಂದು ಇಂತಹ ಚಟುವಟಿಕೆಗಳು ನಡೆಯುತ್ತಲೇ ಇರುತ್ತವೆ.

ಇಷ್ಟು ದಿನ ಕ್ರಿಕೆಟ್, ಕಬ್ಬಡಿ, ಬ್ಯಾಡ್ಮಿಂಟನ್ ಅಂತಹ ಹಲವು ಲೀಗ್‌ಗಳಲ್ಲಿ ತಾರೆಯರ ಭಾಗವಹಿಸಿದ್ದನ್ನು ನೋಡಿದ್ದೀರ. ತಾರೆಯರಿಗೆ ಇದ್ಯಾವುದೂ ಹೊಸತೇನು ಅಲ್ಲ. ಸಿನಿಪ್ರಿಯರು ಕೂಡ ತಮ್ಮ ನೆಚ್ಚಿನ ನಟರು ಆಡುವುದನ್ನು ಕಣ್ತುಂಬಿಕೊಂಡು ಎಂಜಾಯ್ ಕೂಡ ಮಾಡಿದ್ದಾರೆ.

sandalwood-bowling-league

ಆದ್ರೀಗ ಈ ಎಲ್ಲಾ ಗೇಮ್‌ಗಳ ಜೊತೆಗೆ ಹೊಸದಾಗಿ ಬೌಲಿಂಗ್ ಲೀಗ್ ಕೂಡ ಸೇರಿಕೊಂಡಿದೆ. ಅಂದ್ಹಾಗೆ ಸ್ಯಾಂಡಲ್‌ವುಡ್ ತಾರೆಯರಿಗಾಗಿ ಬೌಲಿಂಗ್ ಲೀಗ್ ನಡೆಯೋದು ಇದೇ ಮೊದಲೇನು ಅಲ್ಲ. ಈ ಹಿಂದೆ ಕೂಡ ಒಮ್ಮೆ ಬೌಲಿಂಗ್ ಲೀಗ್ ನಡೆದಿದೆ. ಮೊದಲ ಬೌಲಿಂಗ್ ಲೀಗ್ ಯಶಸ್ವಿಯಾದ ಬೆನ್ನಲ್ಲೇ ಇದೀಗ 2ನೇ ಬೌಲಿಂಗ್ ಲೀಗ್‌ಗೆ ತಾರೆಯರು ಸಜ್ಜಾಗಿದ್ದಾರೆ.

ಸ್ಯಾಂಡಲ್‌ವುಡ್ ಬೌಲಿಂಗ್ ಲೀಗ್‌ ಸೀಸನ್ 2 ಆರಂಭಕ್ಕೂ ಮುನ್ನ ಕೆಲ ತಾರೆಯರು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಅಂದ್ಹಾಗೆ ಈ ಬೌಲಿಂಗ್ ಲೀಗ್‌ ಅನ್ನು ಸ್ಯಾಂಡಲ್‌ವುಡ್‌ಗೆ ಪರಿಚಯಿಸಿದ್ದು ನಿರ್ಮಾಪಕ ಕಮರ್. ಕಳೆದ ವರ್ಷ ಬೌಲಿಂಗ್ ಲೀಗ್‌ ಯಶಸ್ವಿಯಾಗಿತ್ತು. ಈ ಬಾರಿ ಕೂಡ ಅದೇ ಉತ್ಸಾಹದಲ್ಲಿ ಬೌಲಿಂಗ್ ಲೀಗ್ ನಡೆಸಲು ಮುಂದಾಗಿದ್ದಾರೆ.

ಈ ಬಾರಿ ಬೌಲಿಂಗ್ ಲೀಗ್‌ನಲ್ಲಿ ನಟಿಯರಾದ ಕಾರುಣ್ಯಾ ರಾಮ್, ಧನ್ಯಾ ರಾಮ್ ಕುಮಾರ್, ರಕ್ಷಿತಾ ಶೆಟ್ಟಿ, ರಚನಾ ಇಂದರ್, ಬೃಂದಾ ಆಚಾರ್ಯ, ಸಾಕ್ಷಿ ಭಾಗವಹಿಸಿದ್ದರು. ಹಾಗೇ ಸ್ಯಾಂಡಲ್‌ವುಡ್ ನಟರಾದ ತರುಣ್ ಚಂದ್ರ, ಕೆಂಪೇಗೌಡ, ಭರತ್ ಹಾಜರಿದ್ದರು. ಅಂದ್ಹಾಗೆ ಈ ಬಾರಿಯ ಲೀಗ್‌ನಲ್ಲಿ ಒಟ್ಟು ಆರು ತಂಡಗಳನ್ನು ಮಾಡಲಾಗಿದೆ. ಈ ಬಾರಿ ತಾರೆಯರ ಜೊತೆಗೆ ಪತ್ರಕರ್ತರು ಕೂಡ ಲೀಗ್‌ನಲ್ಲಿ ಭಾವಹಿಸುತ್ತಿರುವುದು ವಿಶೇಷ.

ಕಳೆದ ಬಾರಿಯ ಬೌಲಿಂಗ್‌ ಲೀಗ್‌ನಲ್ಲಿ ಶ್ರೀನಗರ ಕಿಟ್ಟಿ ಮತ್ತು ಅವರ ತಂಡ ಗೆದ್ದಿದ್ದರು. ಈ ಬಾರಿಯ ಬೌಲಿಂಗ್ ಲೀಗ್‌ ಕಪ್ ಯಾರ ಮುಡಿಗೇರಲಿದೆ ಅನ್ನೋದೇ ಕುತೂಹಲ. ಡಿಸೆಂಬರ್‌ನಲ್ಲಿ ಲೀಗ್ ಲೀಗ್ ಶುರುವಾಗಲಿದ್ದು, ಎರಡು ದಿನಗಳು ಈ ಲೀಗ್ ನಡೆಯಲಿದ್ದು ಕನ್ನಡದ ತಾರೆಯರು ಭಾಗಿಯಾಗಲಿದ್ದಾರೆ.

More from Filmibeat

English summary
After cricket, Kabaddi and Badminton Sandalwood are ready for the Bowling League.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X