ಅನುಶ್ರೀ ಯೌಟ್ಯೂಬ್ ಚಾನೆಲ್‌ಗೆ ಐದು ವರ್ಷ.. ಕಿಚ್ಚ ಸುದೀಪ್ ಸಂದರ್ಶನ ಕೊಟ್ಟಿದ್ದೇ ಇದೇ ಮೊದಲು!
ನಟಿ, ನಿರೂಪಕಿ ಅನುಶ್ರೀ ಕನ್ನಡ ಕಿರುತೆರೆ ಪ್ರೇಕ್ಷಕರಿಗಂತೂ ಚೆನ್ನಾಗಿ ಪರಿಚಯ. 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್', 'ಸರಿಗಮಪ' ಸೇರಿದಂತೆ ಹಲವಾರು ರಿಯಾಲಿಟಿ ಶೋಗಳಲ್ಲಿ ವರ್ಷಗಳಿಂದ ನಿರೂಪಣೆ ಮಾಡುತ್ತಿರುವ ಅನುಶ್ರೀ ಕನ್ನಡ ಕಿರುತೆರೆ ಕಂಡ ಯಶಸ್ವಿ ನಿರೂಪಕರಲ್ಲೊಬ್ಬರು.
'ಬೆಂಕಿ ಪಟ್ಟಣ', 'ಉಪ್ಪು ಹುಳಿ ಖಾರ', 'ರಿಂಗ್ ಮಾಸ್ಟರ್' ಸೇರಿದಂತೆ ಹಲವು ಸಿನಿಮಾಗಳನ್ನು ನಟಿಸಿರುವ ಇವರು ಡಾನ್ಸ್ ಶೋ ಗಳಲ್ಲಿ ಭಾಗವಹಿಸಿದ್ದಾರೆ. ಇತ್ತೀಚೆಗಂತೂ ಕನ್ನಡ ಕಿರುತೆರೆ ಹೆಚ್ಚಿನ ರಿಯಾಲಿಟಿ ಶೋಗಳಲ್ಲಿ ನಿರೂಪಿಸುವ ನಟಿ ಅನುಶ್ರೀ ಕನ್ನಡ ಪ್ರೇಕ್ಷಕರ ಅಚ್ಚುಮೆಚ್ಚಿನ ನಿರೂಪಕಿ ಎಂದರೆ ತಪ್ಪಾಗಲ್ಲ.

'ಸರಿಗಮಪ' ರಿಯಾಲಿಟಿ ಶೋ, 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್', 'ಮಹಾನಟಿ', 'ಕಾಮಿಡಿ ಕಿಲಾಡಿಗಳು' ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಕನ್ನಡದಲ್ಲಿ ನಿರೂಪಿಸುವ ಸಾಮರ್ಥ್ಯವನ್ನು ಹೊಂದಿರುವ ಈ ನಿರೂಪಕಿ ಇದೀಗ ಯೌಟ್ಯೂಬ್‌ನಲ್ಲೂ ಬಹಳ ಆಕ್ಟಿವ್ ಇದ್ದಾರೆ.
ಐದು ವರ್ಷಗಳ ಹಿಂದೆ, ಅಂದರೆ 2019ರಲ್ಲಿ ಅನುಶ್ರೀ ಯೂಟ್ಯೂಬ್ ಚಾನೆಲ್ ಅನ್ನು ಆರಂಭಿಸಿದ ಅನುಶ್ರೀ ಅವರು ತಮ್ಮ ಚಾನೆಲ್‌ನಲ್ಲಿ ಹಲವು ನಟ ನಟಿಯರ ಇಂಟರ್‌ವ್ಯೂಗಳು ಸೇರಿದಂತೆ ನಾನಾ ರೀತಿಯ ಮಾಹಿತಿ ಹಾಗೂ ಮನರಂಜನೆಯನ್ನು ಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಈಗಾಗಲೇ ಇವರಿಗೆ ಒಂದು ಮಿಲಿಯನ್‌ಗೂ ಹೆಚ್ಚು ಚಂದದಾರರು ಇದ್ದು, ನಿರಂತರವಾಗಿ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ.
ನಟ ಕಿಚ್ಚ ಸುದೀಪ್ ಈಗ ಅನುಶ್ರೀ ಯೂಟ್ಯೂಬ್ ಚಾನೆಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಸುದೀಪ್ ಕಾರ್ಯಕ್ರಮಕ್ಕೆ ಬಂದಿರುವ ಪ್ರೋಮೋವನ್ನು ಯೂಟ್ಯೂಬ್‌ನಲ್ಲಿ ಅನುಶ್ರೀ ಹಂಚಿಕೊಂಡಿದ್ದರು. ತನ್ನ ಯೂಟ್ಯೂಬ್ ಆರಂಭವಾಗಿ 5 ವರ್ಷಗಳಾಗಿದೆ. ಅದರಲ್ಲಿ ಇದೇ ಮೊದಲ ಬಾರಿಗೆ ನಟ ಕಿಚ್ಚ ಸುದೀಪ್ ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಕಾಣಿಸಿಕೊಂಡಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದರು.
ಈಗ ಅನುಶ್ರೀ ಯೂಟ್ಯೂಬ್ ಚಾನೆಲ್‌ನಲ್ಲಿ ಕಿಚ್ಚ ಸುದೀಪ್ ಸಂದರ್ಶನ ಲೈವ್‌ನಲ್ಲಿದೆ. ಅನುಶ್ರೀ ಹಾಗೂ ಕಿಚ್ಚ ಸುದೀಪ್ ಸಂದರ್ಶನ ಸಖತ್ ಮಜವಾಗಿದೆ. ಇದೇ ಮೊದಲ ಬಾರಿ ಸುದೀಪ್ ಸಂದರ್ಶನ ನೀಡಿರುವುದರಿಂದ ಅಭಿಮಾನಿಗಳು ಕೂಡ ಸಖತ್ ಥ್ರಿಲ್ ಆಗಿದ್ದಾರೆ.
ಸೂಪರ್ ಫನ್ ಕನ್ನಡ ಯುಟ್ಯೂಬ್ ಸೀರೀಸ್ ಎಂಬ ಯೌಟ್ಯೂಬ್ ಸರಣಿಯನ್ನು ಕೆಳ ತಿಂಗಳಿಂದ ನಡೆಸುತ್ತಾ ಬಂದಿರುವ ಅನುಶ್ರೀ ತಮ್ಮ ಚಾನಲ್‌ಗೆ ಹಲವಾರು ಸೆಲೆಬ್ರಿಟಿಗಳನ್ನು ಕರೆದು ಅವರ ಇಂಟರ್ ವ್ಯೂಗಳನ್ನು ಮಾಡಿದ್ದಾರೆ. ನಿರ್ದೇಶಕ ತರುಣ್ ಸುಧೀರ್ ದಂಪತಿ, ಗಾಯಕ ವಿಜಯ್ ಪ್ರಕಾಶ್ ದಂಪತಿ, ನಟ ಪ್ರಜ್ವಲ್ ದೇವರಾಜ್ ಹಾಗು ರಾಗಿಣಿ ಪ್ರಜ್ವಲ್ ಹೀಗೆ ಸೆಲೆಬ್ರಿಟಿ ಕಪಲ್‌ಗಳನ್ನು ತಮ್ಮ ಚಾನೆಲ್‌ಗೆ ಕರೆಸಿ ಅವರೊಂದಿಗಿನ ಒಂದಷ್ಟು ಸಂಭಾಷಣೆಯೊಂದಿಗೆ ಫನ್ನಿ ಎಲಿಮೆಂಟ್‌ಗಳನ್ನು ಕೂಡ ಈ ಇಂಟರ್ ವ್ಯೂಗಳಲ್ಲಿ ಸೇರಿಸಿರುತ್ತಾರೆ.
ಎಲ್ಲರಿಗೂ ತಿಳಿದಿರುವಂತೆ ನಿರೂಪಕಿ ಅನುಶ್ರೀ ದಿವಂಗತ ಪುನೀತ್ ರಾಜಕುಮಾರ್ ಅವರ ಅಪ್ಪಟ ಅಭಿಮಾನಿ. ಅವರ ಯೂಟ್ಯೂಬ್ ಚಾನಲ್‌ನ ಐಕಾನ್ ಕೂಡ ನಟ ಪುನೀತ್ ರಾಜಕುಮಾರ್ ಅವರ ಫೋಟೋ ಆಗಿದ್ದು, ನಟ ಪುನೀತ್ ರಾಜಕುಮಾರ್ ಅವರೊಂದಿಗೆ ಇಂಟರ್ ವ್ಯೂ ಅತಿ ಹೆಚ್ಚು ವ್ಯೂಸ್ ಪಡೆದುಕೊಂಡಿದೆ. ಹೌದು, ನಿರೂಪಕಿ ಅನುಶ್ರೀ ತಮ್ಮ ಚಾನೆಲ್‌ನಲ್ಲಿ ಪಡೆದಿರುವ ನಟ ಪುನೀತ್ ರಾಜಕುಮಾರ್ ಅವರ ಇಂಟರ್ ವ್ಯೂ ಬರೋಬ್ಬರಿ ಏಳು ಮಿಲಿಯನ್‌ಗೂ ಹೆಚ್ಚು ವ್ಯೂಗಳನ್ನು ಪಡೆದಿದೆ.
ಸೆಲೆಬ್ರಿಟಿಗಳಾದ ರಿಷಬ್ ಶೆಟ್ಟಿ, ಚಿಕ್ಕಣ್ಣ, ರಾಜ್ ಬಿ ಶೆಟ್ಟಿ, ಜಗ್ಗೇಶ್ ಮಿಲನ ನಾಗರಾಜ್, ಗುರುಪ್ರಸಾದ್ ಹೀಗೆ ಹಲವಾರು ಕನ್ನಡದ ನಟ ನಟಿಯರು ಹಾಗೂ ನಿರ್ದೇಶಕರುಗಳ ಇಂಟರ್ ವ್ಯೂ ಹಾಗೂ ಮೂವಿ ಪ್ರಮೋಷನ್‌ಗಳು ಇವರ ಚಾನೆಲ್‌ನಲ್ಲಿ ಪೋಸ್ಟ್ ಆಗುತ್ತಿರುತ್ತವೆ.
ಪ್ರಸ್ತುತ ಸರಿಗಮಪ ರಿಯಾಲಿಟಿ ಶೋನಲ್ಲಿ ನಿರೂಪಕಿಯಾಗಿ ಕಾಣಿಸಿಕೊಳ್ಳುತ್ತಿರುವ ಅನುಶ್ರೀ ಹಲವಾರು ತುಳು ಕಾರ್ಯಕ್ರಮಗಳಿಗೂ ನಿರೂಪಣೆ ಮಾಡಿದ್ದಾರೆ. ಸಿನಿಮಾ ಪ್ರೆಸ್ ನೋಟ್ ಗಳಿಗೂ ನಿರೂಪಕಿಯಾಗಿ ಕಾರ್ಯನಿರ್ವಹಿಸುತ್ತಾರೆ ಅನುಶ್ರೀ.


Click it and Unblock the Notifications











