For Quick Alerts
  ALLOW NOTIFICATIONS  
  For Daily Alerts

  ಜಾಮೀನಿನ ಮೇಲೆ ಹೊರಬಂದ ಬಳಿಕ ಪತ್ನಿ ವಿರುದ್ಧ ಶಾಕಿಂಗ್ ಹೇಳಿಕೆ ನೀಡಿದ ಕರಣ್ ಮೆಹ್ರಾ

  |

  ಪತ್ನಿ ಮೇಲೆ ಹಲ್ಲೆ ಆರೋಪದ ಮೇರೆಗೆ ಬಂಧನಕ್ಕೊಳಗಾಗಿ ಜಾಮೀನಿನ ಮೇಲೆ ಹೊರಬಂದ ಬಳಿಕ ಹಿಂದಿ ಕಿರುತೆರೆಯ ಖ್ಯಾತ ನಟ ಕರಣ್ ಮೆಹ್ರಾ ಪತ್ನಿ ವಿರುದ್ಧ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಪತ್ನಿ ನಿಶಾ ದೂರು ದಾಖಲಿಸಿದ ಬಳಿಕ ಮುಂಬೈ ಪೊಲೀಸರು ಕರಣ್ ಮೆಹ್ರಾನನ್ನು ಅರೆಸ್ಟ್ ಮಾಡಿದ್ದರು.

  ಜಾಮೀನಿನ ಮೇಲೆ ಹೊರಬಂದ ಕರಣ್ ಪತ್ನಿಯ ವಿರುದ್ಧವೇ ಆರೋಪ ಮಾಡಿದ್ದಾರೆ. ಮದುವೆಯಾದ ಅನೇಕ ವರ್ಷಗಳ ಬಳಿಕ ಹೀಗೆ ಆಗಿದ್ದು ಬೇಸರ ಆಗುತ್ತೆ ಎಂದು ಕರಣ್ ಪ್ರತಿಕ್ರಿಯೆ ನೀಡಿದ್ದಾರೆ. ಇಂಡಿಯಾ ಟುಡೇ ಜೊತೆ ಮಾತನಾಡಿದ ಕರಣ್, 'ನಿಶಾ ಸಹೋದರ ರಾತ್ರಿ ಮನೆಗೆ ಬಂದಿದ್ದ. ಆತ ಹೇಳಿದ ಹಾಗೆ ನಿಶಾ ಪೊಲೀಸ್ ಸ್ಟೇಷನ್ ಗೆ ಹೋಗಿದ್ದಳು. ನಿಶಾ ತನ್ನ ಮೇಲೆ, ಹೆತ್ತವರ ಮೇಲೆ ದೌರ್ಜನ್ಯ ಎಸಗಿದ್ದಾಳೆ ಎಂದಿದ್ದಾರೆ.

  ಪತ್ನಿ ಮೇಲೆ ಹಲ್ಲೆ ಆರೋಪ; ಖ್ಯಾತ ನಟ ಕರಣ್ ಮೆಹ್ರಾ ಅರೆಸ್ಟ್ಪತ್ನಿ ಮೇಲೆ ಹಲ್ಲೆ ಆರೋಪ; ಖ್ಯಾತ ನಟ ಕರಣ್ ಮೆಹ್ರಾ ಅರೆಸ್ಟ್

  'ರಾತ್ರಿ ಜೋರಾಗಿ ಕೂಗಲು ಪ್ರಾರಂಭಿಸಿದಳು. ನನ್ನ ಮೇಲೆ ಉಗಿದಳು. ಬಳಿಕ ನಾನು ಆಕೆಯನ್ನು ಹೊರಹೋಗುವಂತೆ ಹೇಳಿದೆ. ಈಗ ಏನು ಮಾಡುತ್ತೇನೆ ನೋಡಿ ಎಂದು ನನಗೆ ಬೆದರಿಕೆ ಹಾಕಿ ಹೊರಗೆ ಹೋದಳು. ಬಳಿಕ ಆಕೆಯೇ ತಲೆಯನ್ನು ಗೋಡೆಗೆ ಹೊಡೆದುಕೊಂಡು ಪೆಟ್ಟು ಮಾಡಿಕೊಂಡಿದ್ದಾಳೆ. ಬಳಿಕ ನಾನು ಮಾಡಿದ್ದು ಎಂದು ಹೇಳಿದ್ದಾಳೆ' ಅಂತ ಕರಣ್ ಪತ್ನಿಯ ವಿರುದ್ಧ ಆರೋಪ ಮಾಡಿದ್ದಾರೆ.

  ನಿಶಾ ಸಹೋದರ ಕೂಡ ಹಲ್ಲೆ ಮಾಡಿರುವುದಾಗಿ ಕರಣೆ ಹೇಳಿದ್ದಾರೆ. ಕಪಾಳಕ್ಕೆ ಹೊಡೆದಿರುವುದಾಗಿ ಆರೋಪ ಮಾಡಿದ್ದಾರೆ. 'ಸತ್ಯವೇನೆಂದು ಪೊಲೀಸರಿಗೂ ತಿಳಿದಿದೆ. ಅವರು ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ತನಿಖೆ ಬಳಿಕ ಸತ್ಯ ಹೊರಬರಲಿದೆ' ಎಂದಿದ್ದಾರೆ.

  ರಾತ್ರಿ ಕಿತ್ತಾಡಿಕೊಂಡ ಬಳಿಕ ನಟಿ ನಿಶಾ ಪತಿ ಕರಣ್ ವಿರುದ್ಧ ವಿರುದ್ಧ ಹಲ್ಲೆ ಆರೋಪ ಮಾಡಿ ಗೊರೆಗಾಂವ್ ಪೊಲೀಸ್ ಸ್ಟೇಷನ್ ನಲ್ಲಿ ದೂರು ನೀಡಿದ್ದರು.

  ಕರಣ್ ಗೋಡೆಗೆ ತಳ್ಳಿ ಹಲ್ಲೆ ಮಾಡಿರುವುದಾಗಿ ಹೇಳಿದ್ದರು. ಕರಣ್ ಮೆಹ್ರಾ ವಿರುದ್ಧ ಸೆಕ್ಷನ್ 336 ಮತ್ತು 337ರ ಅಡಿಯಲ್ಲಿ ಎಫ್ ಐ ಆರ್ ದಾಖಲಾಗಿದೆ.

  ಇಬ್ಬರ ನಡುವಿನ ವೈಮನಸ್ಸಿನ ಬಗ್ಗೆ ಆಗಾಗ ಸುದ್ದಿ ಹರಿದಾಡುತ್ತಲೇ ಇತ್ತು. ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಲು ಕರಣ್ ಮೆಹ್ರಾ ನಿರಾಕರಿಸಿದ್ದರು. ನಿಶಾ ಸುಳ್ಳು ಸುದ್ದಿ ಎಂದು ತಳ್ಳಿಹಾಕಿದ್ದರು. ಅಲ್ಲದೆ ಇತ್ತೀಚಿಗೆ ಕೋವಿಡ್ ಸೋಂಕಿಗೆ ತುತ್ತಾಗಿದ್ದ ಕರಣ್ ಪತ್ನಿ ನಿಶಾ ನೋಡಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದರು. ಇದೀಗ ಮೊದಲ ಬಾರಿಗೆ ಇಬ್ಬರ ಜಗಳ ಪೊಲೀಸ್ ಸ್ಟೇಷನ್ ಮೆಟ್ಟಿಲೇರುವ ಮೂಲಕ ವೈಮನಸ್ಸು ಬಹಿರಂಗವಾಗಿದೆ.

  ಕರಣ್ ಮತ್ತು ನಿಶಾ ಅವರದ್ದು ಪ್ರೇಮ ವಿವಾಹ. ಅನೇಕ ವರ್ಷಗಳ ಕಾಲ ಡೇಟಿಂಗ್ ನಲ್ಲಿದ್ದ ಇಬ್ಬರು 2012ರಲ್ಲಿ ಮದುವೆಯಾಗಿದ್ದರು. ಮದುವೆಯಾಗಿ 8 ವರ್ಷಗಳಾಗಿದ್ದು, ಈ ದಂಪತಿಗೆ 4 ವರ್ಷದ ಒಬ್ಬ ಮಗನಿದ್ದಾನೆ.

  ಕರಣ್ ಮೆಹ್ರಾ ಹಿಂದಿ ಧಾರಾವಾಹಿ ಲೋಕದಲ್ಲಿ ಪ್ರಸಿದ್ಧಿಗಳಿಸಿದ್ದಾರೆ. ಜೊತೆ ಹಿಂದಿ ಬಿಗ್ ಬಾಸ್ 10ರಲ್ಲೂ ಸ್ಪರ್ಧಿಯಾಗಿ ಭಾಗಿಯಾಗಿದ್ದರು. ಇನ್ನು ಪತ್ನಿ ನಿಶಾ ಕೂಡ ಕಿರುತೆರೆಯ ಸ್ಟಾರ್.

  Read more about: tv police ಟಿವಿ
  English summary
  After get bail, Actor Karan Mehra reveals shocking details about his wife Nisha.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X