'ಹಿಟ್ಲರ್ ಕಲ್ಯಾಣ' ಅಂತ್ಯ; ಧಾರಾವಾಹಿ ಬಿಟ್ಟು ಸಿನಿಮಾದಲ್ಲಿ ಬ್ಯುಸಿಯಾಗ್ತಾರಾ 'ಉಪಾಧ್ಯಕ್ಷ'ನ ಬೆಡಗಿ?

By ಅನಿತಾ ಬನಾರಿ

'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ನಾಯಕಿ ಲೀಲಾ ಆಲಿಯಾಸ್ ಎಡವಟ್ಟು ಲೀಲಾ ಆಗಿ ನಟಿಸಿರುವ ಚೆಂದುಳ್ಳಿ ಚೆಲುವೆಯ ಹೆಸರು ಮಲೈಕಾ ಟಿ ವಸುಪಾಲ್. ಮೊದಲ ಧಾರಾವಾಹಿಯಲ್ಲಿಯೇ ನಾಯಕಿಯಾಗಿ ನಟಿಸಿ ಮಲೈಕಾ ವಸುಪಾಲ್ ಸೈ ಎನಿಸಿಕೊಂಡಿದ್ದಾರೆ.

'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ನಟಿಸುತ್ತಿರುವಾಗಲೇ ಮಲೈಕಾಗೆ ಸಿನಿಮಾದಲ್ಲಿ ನಟಿಸುವ ಸುವರ್ಣಾವಕಾಶ ಪಡೆದುಕೊಂಡಿದ್ದಾರೆ. ಹಾಸ್ಯನಟ ಚಿಕ್ಕಣ್ಣ ನಟನೆಯ 'ಉಪಾಧ್ಯಕ್ಷ' ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ನಟಿ ಮಲೈಕಾ ವಸುಪಾಲ್ ಹಿರಿತೆರೆಗೂ ಹಾರಿದ್ದರು.

After Hitler Kalyana actress Malaika Vasupal active in movies

'ಉಪಾಧ್ಯಕ್ಷ' ಸಿನಿಮಾ ಇತ್ತೀಚೆಗಷ್ಟೇ ರಿಲೀಸ್ ಆಗಿದ್ದು, ಮಲೈಕಾ ಅವರ ನಟನೆ ಸಿನಿವೀಕ್ಷಕರನ್ನು ಸೆಳೆದಿತ್ತು. ಸಿನಿಮಾದಲ್ಲಿನ ಅವರ ನಟನೆ ಇನ್ನೂ ಕೂಡಾ ಪ್ರೇಕ್ಷಕರ ಮನದಲ್ಲಿ ಹಸಿರಾಗಿರುವಾಗಲೇ ಮಗದೊಂದು ಸಿನಿಮಾದಲ್ಲಿ ನಟಿಸುತ್ತಿರುವ ಸಂಗತಿಯನ್ನು ಮಲೈಕಾ ಹೊರಹಾಕಿದ್ದಾರೆ. ಮಲೈಕಾ ಟಿ ವಸುಪಾಲ್ 'ವಿದ್ಯಾಪತಿ' ಅನ್ನುವ ಹೊಸ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿರೋದು ಈಗಾಗಲೇ ಸುದ್ದಿಯಾಗಿದೆ.

ಮಲೈಕಾ ವಸುಪಾಲ್ ನಟಿಸುತ್ತಿದ್ದ 'ಹಿಟ್ಲರ್ ಕಲ್ಯಾಣ' ಧಾರಾವಾಹಿ ಇತ್ತೀಚೆಗಷ್ಟೇ ಮುಕ್ತಾಯಗೊಂಡಿದೆ. ಈ ಧಾರಾವಾಹಿಯಲ್ಲಿ ನಟಿಸುತ್ತಿರುವಾಗಲೇ ಮಲೈಕಾಗೆ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಈಗ 'ವಿದ್ಯಾಪತಿ'ಯಲ್ಲೂ ನಟಿಸುತ್ತಿರುವುದರಿಂದ ಮತ್ತೆ ಕಿರುತೆರೆಗೆ ಮರಳುವುದು ಬಹುತೇಕ ಅನುಮಾನ ಅನ್ನುವ ಸ್ಥಿತಿಯಿದೆ.

After Hitler Kalyana actress Malaika Vasupal active in movies

ಅಸಲಿ ಸಂಗತಿಯೆಂದರೆ 'ಉಪಾಧ್ಯಕ್ಷ' ಸಿನಿಮಾದಲ್ಲಿನ ಮಲೈಕಾ ಅವರ ನಟನೆ ನೋಡಿ ಆಕೆಯನ್ನು 'ವಿದ್ಯಾಪತಿ' ಸಿನಿಮಾಗೂ ಆಯ್ಕೆ ಮಾಡಲಾಯಿತಂತೆ. ಅಂದ ಹಾಗೆ 'ವಿದ್ಯಾಪತಿ' ಸಿನಿಮಾದಲ್ಲಿ ನಟ ನಾಗಭೂಷಣ್ ಅವರು ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದು ಅವರಿಗೆ ನಾಯಕಿಯಾಗಿ ಮಲೈಕಾ ವಸುಪಾಲ್ ಅವರು ಸಹಿ ಹಾಕಿದ್ದಾರೆ.

ನಟ ಡಾಲಿ ಧನಂಜಯ್ ಅವರ ನಿರ್ಮಾಣದ ಈ ಚಿತ್ರವನ್ನು ಒಪ್ಪಿಕೊಂಡಿರುವ ನಟಿ "ನಾನು ಹಿಟ್ಲರ್ ಕಲ್ಯಾಣ ಧಾರಾವಾಹಿ ಮಾಡುತ್ತಿರುವಾಗಲೇ ಹಲವಾರು ಕಥೆಗಳನ್ನು ಕೇಳಿದೆ. ಆದರೆ ಯಾವುದು ಹಿಡಿಸಲಿಲ್ಲ. 'ವಿದ್ಯಾಪತಿ' ಸಿನಿಮಾದ ಕಥೆ ಮಾತ್ರ ಬಹಳ ವಿಭಿನ್ನವಾಗಿದೆ ಎಂದು ಅನಿಸಿತು. ಹಾಗಾಗಿ ಒಪ್ಪಿಕೊಂಡಿದ್ದೇನೆ. ಡಾಲಿ ಧನಂಜಯ್ ಅವರ ನಿರ್ಮಾಣದಲ್ಲಿ ಆಗುತ್ತಿರುವ ಈ ಸಿನಿಮಾದ ಬಗ್ಗೆ ನನಗೆ ಹೆಚ್ಚಿನ ವಿಶ್ವಾಸವಿದೆ" ಎಂದು ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಮಲೈಕಾ ಹೇಳಿಕೊಂಡಿದ್ದರು.

ಇದರ ಜೊತೆಗೆ 'ವಿದ್ಯಾಪತಿ' ಸಿನಿಮಾದಲ್ಲಿನ ತಮ್ಮ ಪಾತ್ರದ ಬಗ್ಗೆ ಮಾತನಾಡಿದ್ದಾರೆ ನಟಿ ಮಲೈಕಾ ವಸುಪಾಲ್ . 'ವಿದ್ಯಾಪತಿ ಸಿನಿಮಾದಲ್ಲಿ ನನ್ನದು ಒಂದು ಹೋಮ್ಲಿ ಪಾತ್ರ. ಇದರಲ್ಲಿ ನಾನು ಬಹಳ ಸಿಂಪಲ್ ಆಗಿ ಕಾಣಿಸಿಕೊಳ್ಳಲಿದ್ದೇನೆ. ಇನ್ನು ನಾಗಭೂಷಣ್ ಅವರು ಒಳ್ಳೆಯ ನಟ. ಮಾರ್ಚ್ ಕೊನೆಯ ವಾರದಿಂದ ಚಿತ್ರೀಕರಣ ಆರಂಭವಾಗಲಿದೆ" ಎಂಬ ಮಾಹಿತಿಯನ್ನು ಕೂಡಾ ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು ನಟಿ ಮಲೈಕಾ ವಸುಪಾಲ್.

More from Filmibeat

English summary
Malaika acting in her second movie.Malaika Vasupal will be charming as the heroine in the movie Vidyapati.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X