'ಜೊತೆ ಜೊತೆಯಲ್ಲಿ' ಬಳಿಕ ಮತ್ತೆ ಕಿರುತೆರೆಗೆ ಮರಳಿದ ಮೇಘಾ ಶೆಟ್ಟಿ: ಯಾವ ಧಾರಾವಾಹಿ?

By ಅನಿತಾ ಬನಾರಿ

ಮೇಘಾ ಶೆಟ್ಟಿ ಕಿರುತೆರೆ ವೀಕ್ಷಕರಿಗೆ ತುಂಬಾ ಚೆನ್ನಾಗಿ ಪರಿಚಿತರಾಗಿರುವ ಹೆಸರು ಹೌದು. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ 'ಜೊತೆ ಜೊತೆಯಲಿ' ಯಲ್ಲಿ ನಾಯಕಿ ಅನು ಸಿರಿಮನೆಯಾಗಿ ನಟಿಸಿ ವೀಕ್ಷಕರ ಮನ ಸೆಳೆದಿದ್ದ ಈಕೆ ತಮ್ಮ ಮುದ್ದಾದ ನಟನೆಯ ಮೂಲಕ ಕರುನಾಡಿನಾದ್ಯಂತ ಜನಪ್ರಿಯರಾಗಿದ್ದಾರೆ. ಕರ್ನಾಟಕದ ಮನೆಮಗಳಂತಿದ್ದ ಮೇಘಾ ಶೆಟ್ಟಿ 'ಜೊತೆ ಜೊತೆಯಲಿ' ಧಾರಾವಾಹಿಯ ನಂತರ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದೇ ಇಲ್ಲ!

'ಜೊತೆಜೊತೆಯಲಿ' ಧಾರಾವಾಹಿಯಲ್ಲಿ ನಟಿಸುತ್ತಿರುವಾಗಲೇ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟು ಅಲ್ಲಿಯೂ ತನ್ನ ನಟನೆಯ ಮೂಲಕ ಸಿನಿಪ್ರಿಯರ ಮನ ಸೆಳೆದಿರುವ ಮೇಘಾ ಶೆಟ್ಟಿ ಇದೀಗ ಇದ್ದಕ್ಕಿದ್ದಂತೆ ಕಿರುತೆರೆಯಲ್ಲಿ ಪ್ರತ್ಯಕ್ಷರಾಗಿದ್ದಾರೆ.

After Jothe Jotheyali Megha Shetty appear in tv do you know which serial?

ಹೌದು, ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗಲಿರುವ ಹೊಚ್ಚ ಹೊಸ ಧಾರಾವಾಹಿ 'ಗೌರಿ ಶಂಕರ'ದಲ್ಲಿ ನಟಿ ಮೇಘಾ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಹಾಗಂತ ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ ಅಂದುಕೊಳ್ಳಬೇಡಿ. ಅವರೇನು ಈ ಸೀರಿಯಲ್‌ನಲ್ಲಿ ನಟಿಸುತ್ತಿಲ್ಲ. ಆದರೆ, ವಿಶೇಷ ಎಂಟ್ರಿ ಕೊಟ್ಟಿದ್ದಾರೆ.

ಅಂದ ಹಾಗೇ, ಅಸಲಿ ವಿಚಾರವೇನೆಂದರೆ ಮೇಘಾ ಶೆಟ್ಟಿ 'ಗೌರಿಶಂಕರ' ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದೇನೋ ನಿಜ. ಆದರೆ, ಅವರು ಈ ಧಾರಾವಾಹಿಯಲ್ಲಿ ನಟಿಸುತ್ತಿಲ್ಲ. ಬದಲಿಗೆ ಧಾರಾವಾಹಿಯ ಪಾತ್ರಧಾರಿಗಳ ಪರಿಚಯವನ್ನಷ್ಟೇ ಮಾಡಿಸಲು ಆಕೆ ಬಂದಿದ್ದಾರೆ‌. ನಾಯಕ, ನಾಯಕಿಯ ಜೊತೆಗೆ ಇಬ್ವರ ಕುಟುಂಬದವರ ಪರಿಚಯವನ್ನು ಕೂಡ ತುಂಬಾ ಸೊಗಸಾಗಿ ಮೇಘಾ ಶೆಟ್ಟಿ ಮಾಡಿದ್ದಾರೆ. ಅಂತೆಯೇ ಇದೊಂದು ವಿನೂತನ ಪ್ರಯೋಗವಾಗಿದ್ದು, ಸಣ್ಣ ಗ್ಯಾಪ್‌ನ ನಂತರ ಮೇಘಾ ಶೆಟ್ಟಿಯನ್ನು ಕಂಡು ಪ್ರೇಕ್ಷಕರು ಒಂದು ಕ್ಷಣಕ್ಕೆ ಫಿದಾ ಆಗಿದ್ದಾರೆ.

ಇದರ ಜೊತೆಗೆ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರೊಂದಿಗೆ ಮೇಘಾ ಶೆಟ್ಟಿ ತೆರೆ ಹಂಚಿಕೊಳ್ಳಲಿದ್ದಾರೆ ಎಂಬ ಸುದ್ದಿಯೊಂದು ಹೊರಬಿದ್ದಿದೆ. ಹೌದು, ಪ್ರಜ್ವಲ್ ದೇವರಾಜ್ ಅವರ ಹೊಸ ಸಿನಿಮಾ 'ಚೀತಾ'ದಲ್ಲಿ ಈಕೆ ನಾಯಕಿಯಾಗಿ ನಟಿಸುತ್ತಿದ್ದು, ಈಗಾಗಲೇ ಸಿನಿಮಾದ ಮುಹೂರ್ತ ಕೂಡಾ ನೆರವೇರಿದೆ. ಈಗಾಗಲೇ ಮೇಘಾ ಶೆಟ್ಟಿ ಚಿತ್ರೀಕರಣದಲ್ಲಿಯೂ ಭಾಗಿಯಾಗಿದ್ದಾರೆ.

After Jothe Jotheyali Megha Shetty appear in tv do you know which serial?

ಅಂದ ಹಾಗೇ ಮೊದಲು ಆಶಿಮಾ ನರ್ವಲ್‌ರನ್ನು ನಾಯಕಿಯಾಗಿ ಆಯ್ಕೆ ಮಾಡುವ ಬಗ್ಗೆ ಚಿತ್ರತಂಡ ಆಲೋಚಿಸಿತ್ತು. ಆದರೆ ಇದೀಗ ಮೇಘಾ ಶೆಟ್ಟಿಯನ್ನೇ ನಾಯಕಿಯನ್ನಾಗಿ ಫೈನಲ್ ಮಾಡಿದೆ ಚಿತ್ರತಂಡ.

ಇನ್ನು ಧವ್ವೀರ್ ನಟನೆಯ 'ಕೈವ', ವಿನಯ್ ರಾಜ್ ಕುಮಾರ್ ಅಭಿನಯದ 'ಗ್ರಾಮಾಯಣ' ಸಿನಿಮಾದ ಜೊತೆಗೆ 'ಆಪರೇಷನ್ ಲಂಡನ್ ಕೆಫೆ " ಎನ್ನುವ ಫ್ಯಾನ್ ಇಂಡಿಯಾ ಸಮಯದಲ್ಲಿ ಮೇಘಾ ಶೆಟ್ಟಿ ಬಣ್ಣ ಹಚ್ಚಿದ್ದಾರೆ. ಇನ್ನು 'ತ್ರಿಬಲ್ ರೈಡಿಂಗ್' ಸಿನಿಮಾದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿರುವ ಮೇಘಾ ಶೆಟ್ಟಿ 'ದಿಲ್ ಪಸಂದ್' ಸಿನಿಮಾದಲ್ಲಿ ನಟಿಸಿದ್ದರು.

More from Filmibeat

English summary
Megha Shetty returned to television to introduce the cast of Gauri Shankar:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X