ರಿಲ್ಯಾಕ್ಸ್ ಮೂಡ್‌ನಲ್ಲಿ ಮೇಘಾ ಶೆಟ್ಟಿ ಅಲಿಯಾಸ್ ಅನು ಸಿರಿಮನೆ: ಜಿಮ್ ವರ್ಕೌಟ್, ಫೋಟೊಶೂಟ್‌ನಲ್ಲಿ ಬ್ಯುಸಿ

By ಶೃತಿ ಹರೀಶ್ ಗೌಡ

ನಟಿ ಮೇಘಾಶೆಟ್ಟಿಗೆ 'ಜೊತೆ ಜೊತೆಯಲಿ' ಧಾರಾವಾಹಿಯ ಅನು ಸಿರಿಮನೆ ಪಾತ್ರ ಬಹಳ ಒಳ್ಳೆ ಹೆಸರು ತಂದು ಕೊಟ್ಟಿತ್ತು. ಸತತ ನಾಲ್ಕು ವರ್ಷಗಳ ಕಾಲ ಈ ಧಾರಾವಾಹಿ ಮೂಲಕ ವೀಕ್ಷಕರನ್ನು ರಂಜಿಸಿ ಮೇಘಾ ಅಪಾರ ಅಭಿಮಾನಿ ಬಳಗ ಸಂಪಾದಿಸಿದ್ದಾರೆ. ಈಗ 'ಜೊತೆ ಜೊತೆಯಲಿ' ಧಾರಾವಾಹಿ ಮುಗಿದಿದ್ದು ಮೇಘಾಶೆಟ್ಟಿ ಸ್ವಲ್ಪ ರಿಲ್ಯಾಕ್ಸ್ ಮೂಡ್‌ನಲ್ಲಿ ಇರುವಂತೆ ಕಾಣುತ್ತಿದೆ.

ಇಷ್ಟು ದಿನ ಧಾರಾವಾಹಿಗಳಲ್ಲಿ ನಟನೆ ಮಾಡುತ್ತಾ ಬ್ಯುಸಿಯಾಗಿ ಇದ್ದಂತಹ ಮೇಘಾ ಶೆಟ್ಟಿ ಅವರು ಈಗ ತಮ್ಮ ರೊಟೀನ್‌ನಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡಿರೋದು ಗೊತ್ತಾಗುತ್ತಿದೆ. ಬೆಳಿಗ್ಗೆ ಎದ್ದು ಜಿಮ್‌ನಲ್ಲಿ ವರ್ಕ್ ಔಟ್ ಮಾಡುತ್ತಾ ತಮ್ಮ ದೇಹವನ್ನು ದಂಡಿಸುತ್ತಿದ್ದಾರೆ. ಅಲ್ಲದೆ ಮುಂದಿನ ಸಿನಿಮಾಗಳಲ್ಲಿ ನಟನೆ ಮಾಡಲು ಸಹ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

After Jothe Jotheyali serial wrapped up, Megha shetty seemed to be in a relaxed mood

'ಆಪರೇಷನ್ ಲಂಡನ್ ಕೆಫೆ' ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ಚೆಲುವೆ ಮತ್ತಷ್ಟು ಕಥೆಗಳನ್ನು ಕೇಳುತ್ತಿದ್ದಾರೆ. ಈಗಾಗಲೇ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿರುವ ಬೆಡಗಿ ಮತ್ತಷ್ಟು ಸಿನಿಮಾಗಳಲ್ಲಿ ನಟಿಸುವ ಲೆಕ್ಕಾಚಾರದಲ್ಲಿದ್ದಾರೆ. ಒಂದಷ್ಟು ಕಥೆಗಳನ್ನ ಮೇಘ ಶೆಟ್ಟಿಯವರು ಒಪ್ಪಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಆ ಸಿನಿಮಾಗಳ ಬಗ್ಗೆ ಮಾಹಿತಿಯನ್ನ ಅವರೇ ಹಂಚಿಕೊಳ್ಳಲಿದ್ದಾರೆ.

ಬಿಂದಾಸ್ ಫೋಟೊಶೂಟ್

ಸದ್ಯಕ್ಕೆ ಜೊತೆ ಜೊತೆಯಲಿ ಧಾರಾವಾಹಿಯನ್ನು ಮುಗಿಸಿರುವ ಮೇಘ ಶೆಟ್ಟಿ ಅವರು ನೀರಿನ ಮಧ್ಯ ಕುಳಿತುಕೊಂಡು ವೈಟ್ ಕಾಸ್ಟ್ಯೂಮ್‌ನಲ್ಲಿ ಬಿಂದಾಸ್ ಫೋಟೋ ಶೂಟ್ ಮಾಡಿಸಿದ್ದಾರೆ. ಹಾಫ್ ಶೋಲ್ಡರ್ ಬಾಡಿಕಾನ್ ಫ್ರಾಕ್‌ ರೀತಿಯ ಡ್ರೆಸ್‌ ತೊಟ್ಟು ಮಿಂಚಿದ್ದಾರೆ. ಕಲ್ಲಿನ ಕ್ವಾರೆಯಲ್ಲಿ ನೀರು ತುಂಬಿರುವ ಕಡೆ ತೆಪ್ಪದಂತ ದೋಣೆ ಮೇಲೆ ಮಲಗಿ ಕ್ಯಾಮರಾಗೆ ಪೋಸ್ ನೀಡಿದ್ದಾರೆ.

After Jothe Jotheyali serial wrapped up, Megha shetty seemed to be in a relaxed mood

ಮೊದಲಿನಿಂದಲೂ ಮೇಘಾ ಶೆಟ್ಟಿ ಫೋಟೊಶೂಟ್‌ಗಳಲ್ಲಿ ಮಿಂಚುತ್ತಾ ಬರ್ತಿದ್ದಾರೆ. ಪವಿತ್ರಾ ಗೌಡ ಅವರ ರೆಡ್ ಕಾರ್ಪೆಟ್ 777 ಸ್ಟುಡಿಯೋದ ಕಾಸ್ಟ್ಯೂಮ್‌ಗಳನ್ನು ತೊಟ್ಟು ಪದೇ ಪದೇ ಮೇಘಾ ಫೋಟೊಶೂಟ್ ಮಾಡಿಸುತ್ತಾರೆ. ಸದ್ಯ ಈ ವೈಟ್ ಕಾಸ್ಟ್ಯಮ್ ಫೋಟೊಶೂಟ್ ಸಖತ್ ವೈರಲ್ ಆಗಿದೆ. ಹಾಟ್ ಲುಕ್‌ನಲ್ಲಿ ಮೇಘಾ ಮೋಡಿ ಮಾಡಿದ್ದಾರೆ.

ಫೋಟೋಶೂಟ್‌ಗೆ ಸಖತ್ ರೆಸ್ಪಾನ್ಸ್

ಮೇಘಾ ಶೆಟ್ಟಿ ಹೊಸ ಫೋಟೊಶೂಟ್‌ಗೆ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ಅಭಿಮಾನಿಗಳು ಲೈಕ್ಸ್, ಕಾಮೆಂಟ್ಸ್ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ. "ನೀವು ತುಂಬಾ ಚೆನ್ನಾಗಿ ಕಾಣಿಸುತ್ತಿದ್ದೀರ", "ಮುಂದಿನ ಸಿನಿಮಾಗೆ ತಯಾರಿನಾ" ಎಂದೆಲ್ಲ ಕೇಳಿದ್ದಾರೆ. ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ಮೇಡಂ ತುಂಬಾ ಚೆನ್ನಾಗಿ ಕಾಣಿಸುತ್ತಿದ್ದೀರ, ಐ ಲವ್ ಯು, ಹಾಟ್ ಆಗಿ ಕಾಣಿಸುತ್ತಿದ್ದೀರ ಎಂದೆಲ್ಲ ಕಾಮೆಂಟ್ ಮಾಡಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

After Jothe Jotheyali serial wrapped up, Megha shetty seemed to be in a relaxed mood

ಜಿಮ್‌ನಲ್ಲಿ ಭರ್ಜರಿ ಕಸರತ್ತು

ಜೊತೆ ಜೊತೆಯಲಿ ಬೆಡಗಿ ಈಗ ಫುಲ್ ರಿಲ್ಯಾಕ್ಸ್ ಮೂಡ್‌ನಲ್ಲಿದ್ದಾರೆ. ಜಿಮ್‌ನಲ್ಲಿ ಹೋಗಿ ಕಸರತ್ತು ಮಾಡುತ್ತಿದ್ದಾರೆ. ಮತ್ತಷ್ಟು ಗ್ಲಾಮಸರ್ ಆಗಿ ಇರಬೇಕೆಂದು ಜಿಮ್‌ನಲ್ಲಿ ಕಸರತ್ತು ಮಾಡುತ್ತಿದ್ದಾರೆ. ಇತ್ತೀಚೆಗೆ ಜಿಮ್‌ನಲ್ಲಿ ವರ್ಕೌಟ್‌ ಬಳಿಕ ಕ್ಲಿಕ್ಕಿಸಿದ್ದ ಫೋಟೊಗಳನ್ನು ಮೇಘಾ ಶೆಟ್ಟಿ ಶೇರ್ ಮಾಡಿದ್ದರು. ಮೇಕಪ್ ಇಲ್ಲದೇಯೂ ತುಂಬಾ ಚೆನ್ನಾಗಿ ಕಾಣ್ತಿದ್ದೀರಾ ಅಂತ ಅಭಿಮಾನಿಗಳು ಕಾಮೆಂಟ್ ಮಾಡಿದ್ದರು.

More from Filmibeat

English summary
After Jothe Jotheyali serial wrapped up, Megha shetty seemed to be in a relaxed mood. actress Latest Photoshoot goes viral. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X