ಕನ್ನಡ, ತೆಲುಗು ಬಳಿಕ ಇದೀಗ ತಮಿಳಿನಲ್ಲಿ ಮಿಂಚುತ್ತಿರೋ ಪವಿತ್ರಾ ನಾಯ್ಕ್; ಯಾವುದು ಆ ಧಾರಾವಾಹಿ?

By ಅನಿತಾ ಬನಾರಿ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ 'ಪಾರು'ವಿನಲ್ಲಿ ನಾಯಕ ಆದಿತ್ಯನ ತಮ್ಮ ಪ್ರೀತಮ್‌ನ ಹೆಂಡತಿ ಜನನಿಯಾಗಿ ಅಭಿನಯಿಸಿದ್ದ ಪವಿತ್ರಾ ನಾಯ್ಕ್ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಕನ್ನಡ ಕಿರುತೆರೆಯಲ್ಲಿ ಮೋಡಿ ಮಾಡಿದ್ದ ಪವಿತ್ರಾ ನಾಯ್ಕ್ ಅವರು ತಮಿಳು ಧಾರಾವಾಹಿಯೊಂದರಲ್ಲಿ ನಟಿಸಲಿದ್ದಾರೆ.

ಹೌದು, ತಮಿಳಿನ ವಿಜಯ್ ಟಿವಿಯಲ್ಲಿ ಶುರುವಾಗಲಿರುವ ಹೊಚ್ಚ ಹೊಸ ಧಾರಾವಾಹಿ 'ಸಿಂಧು ಭೈರವಿ ಕಚೇರಿ ಆರಂಭಂ' ಎನ್ನುವ ಧಾರಾವಾಹಿಯಲ್ಲಿ ನಾಯಕಿಯಾಗಿ ಪವಿತ್ರಾ ನಾಯ್ಕ್ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಈ ಧಾರಾವಾಹಿಯ ಪ್ರೋಮೋ ಈಗಾಗಲೇ ಬಿಡುಗಡೆಯಾಗಿದ್ದು ಇನ್‌ಸ್ಟಾಗ್ರಾಂನಲ್ಲಿ ಸಖತ್ ಸದ್ದು ಮಾಡುತ್ತಿದೆ.

After Kannada actress Pavitra Naik is busy acting in Telugu and Tamil serials

ಇಂಜಿನಿಯರಿಂಗ್ ಪದವೀಧರೆಯಾಗಿರುವ ಪವಿತ್ರಾ ನಾಯ್ಕ್ ಬದುಕು ರೂಪಿಸಿಕೊಂಡಿದ್ದು ನಟನೆಯಲ್ಲಿ. ಹೌದು, ಮೊದಲಿನಿಂದಲೂ ಅಭಿನಯದತ್ತ ವಿಶೇಷ ಒಲವು ಹೊಂದಿದ್ದ ಪವಿತ್ರಾ ನಾಯ್ಕ್ ಅವರು ಸಿನಿಮಾದ ಮೂಲಕ ನಟನೆಯ ನಂಟು ಬೆಳೆಸಿಕೊಂಡರೂ ಜನಪ್ರಿಯತೆ ಗಿಟ್ಟಿಸಿಕೊಂಡಿದ್ದು ಕಿರುತೆರೆಯ ಮೂಲಕ.

'ಎಲ್ಲಿ ನನ್ನ ವಿಳಾಸ' ಸಿನಿಮಾದಲ್ಲಿ ನಟಿಸುವ ಮೂಲಕ ನಟನಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ ಪವಿತ್ರಾ ನಾಯ್ಕ್ ನಂತರ 'ಸ್ವೇಚ್ಛೆ', 'ಲಡ್ಡು' ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಮನೋಜ್ಞ ನಟನೆಯ ಮೂಲಕ ಸಿನಿ ವೀಕ್ಷಕರ ಮನ ಸೆಳೆದ ಈಕೆ ಕಿರುತೆರೆಗೆ ಕಾಲಿಟ್ಟಿದ್ದು 'ರಕ್ಷಾಬಂಧನ' ಧಾರಾವಾಹಿಯ ಮೂಲಕ.

After Kannada actress Pavitra Naik is busy acting in Telugu and Tamil serials

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ರಕ್ಷಾಬಂಧನ' ಧಾರಾವಾಹಿಯಲ್ಲಿ ನಾಯಕ ಕಾರ್ತಿಕ್ ತಂಗಿ ನಂದಿನಿಯಾಗಿ ನಟಿಸುವ ಮೂಲಕ ಕಿರುತೆರೆಗೆ ಕಾಲಿಟ್ಟರು ನಟಿ ಪವಿತ್ರಾ ನಾಯ್ಕ್ . ಅಣ್ಣ ತಂಗಿ ಭಾಂದವ್ಯದ ಈ ಧಾರಾವಾಹಿಯು ಕಿರುತೆರೆ ವೀಕ್ಷಕರ ಮನ ಸೆಳೆದಿದ್ದರೂ, ಟಿಆರ್‌ಪಿ ಕಡಿಮೆ ಇದ್ದ ಕಾರಣ ಅರ್ಧದಲ್ಲಿಯೇ ತನ್ನ ಪ್ರಸಾರ ನಿಲ್ಲಿಸಿತ್ತು.

ತದ ನಂತರ 'ಪಾರು' ಧಾರಾವಾಹಿಯ ಜನನಿಯಾಗಿ ಕನ್ನಡ ಕಿರುತೆರೆಯಲ್ಲಿ ಕಾಣಿಸಿಕೊಂಡ ಪವಿತ್ರಾ ನಾಯ್ಕ್ ಬರೋಬ್ಬರಿ ಎರಡು ಮೂರು ವರ್ಷಗಳ ಕಾಲ ಆ ಧಾರಾವಾಹಿಯ ಮೂಲಕ ವೀಕ್ಷಕರ ಮನ ಸೆಳೆದಿದ್ದರು. ಇದರ ಜೊತೆಗೆ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕಾದಂಬರಿ' ಧಾರಾವಾಹಿಯಲ್ಲಿ ನಾಯಕಿ ಕಾದಂಬರಿಯಾಗಿ ನಟಿಸಿದ್ದರು ಈಕೆ. 'ಕಾದಂಬರಿ' ನಾಯಕಿ ಪ್ರಧಾನ ಧಾರಾವಾಹಿಯಾಗಿದ್ದರೂ ಮುಂದೆ ಅರ್ಧದಲ್ಲಿಯೇ ತನ್ನ ಪ್ರಸಾರ ನಿಲ್ಲಿಸಿತ್ತು.

ಇದೀಗ ತಮಿಳು ಧಾರಾವಾಹಿಯಲ್ಲಿ ಪ್ರಮುಖ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿರುವ ಪವಿತ್ರಾ ನಾಯ್ಕ್‌ಗೆ ಪರಭಾಷೆಯ ಕಿರುತೆರೆ ಹೊಸದೇನಲ್ಲ. ಹೌದು, ಈ ಹಿಂದೆ ಸ್ಟಾರ್ ಮಾ ವಾಹಿನಿಯಲ್ಲೊ ಪ್ರಸಾರವಾಗುತ್ತಿದ್ದ 'ನುವ್ವೆ ನೇನು ಪ್ರೇಮ' ಧಾರಾವಾಹಿಯಲ್ಲಿ ಈಕೆ ನಾಯಕಿಯಾಗಿ ನಟಿಸಿದ್ದರು. ಆ ಮೂಲಕ ಪರಭಾಷೆಯ ಕಿರುತೆರೆಯಲ್ಲಿ ನಟನಾ ಕಂಪನ್ನು ಪಸರಿಸಿದ್ದರು. ಮಾತ್ರವಲ್ಲ ಆ ಧಾರಾವಾಹಿಯು 'ಅರಗಿಣಿ 2' ಹೆಸರಿನಲ್ಲಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.

More from Filmibeat

English summary
After Kannada actress Pavitra Naik is busy acting in Telugu and Tamil serials;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X