ತೆಲುಗು ಕಿರುತೆರೆಗೆ ಕಾಲಿಟ್ಟ ಶಮಂತ್ ಗೌಡ

By ಅನಿತಾ ಬನಾರಿ

ಬ್ರೋ ಗೌಡ ಅಲಿಯಾಸ್ ಶಮಂತ್ ಗೌಡ ಯಾರಿಗೆ ಗೊತ್ತಿಲ್ಲ ಹೇಳಿ!? ಬಿಗ್ ಬಾಸ್ ಸೀಸನ್ 8ರ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಬಹಳ ಚೆನ್ನಾಗಿ ಪರಿಚಯವಾದವರು ಇವರು. ಗಾಯಕನಾಗಿ, ನಟನಾಗಿ, ನಿರ್ದೇಶಕನಾಗಿ ಯೌಟ್ಯೂಬರ್ ಆಗಿ ಕನ್ನಡ ಕಿರುತೆರೆ ಪ್ರೇಕ್ಷಕರ ಮನೆ ಮಗನಂತಾಗಿರುವ ಶಮಂತ್ ಗೌಡ ಇತ್ತೀಚೆಗಷ್ಟೇ ತಮ್ಮ ಬಾಲ್ಯದ ಗೆಳತಿಯೊಂದಿಗೆ ಎಂಗೇಜ್ ಕೂಡ ಆದರು.

ಕಿರುತೆರೆಯಲ್ಲಿ ಬಹಳ ಪಾಪುಲ್ಯಾರಿಟಿ ಗಳಿಸಿದ್ದ 'ಲಕ್ಷ್ಮಿ ಬಾರಮ್ಮ' ಧಾರಾವಾಹಿಯ ನಾಯಕ ನಟನಾಗಿಯೂ ಶಮಂತ್ ಗೌಡ ಮಿಂಚಿದರು. ಕಳೆದ ವಾರ ಅಷ್ಟೇ 600 ಎಪಿಸೋಡ್ ಗಳನ್ನು ಮುಗಿಸಿದ 'ಲಕ್ಷ್ಮೀ ಬಾರಮ್ಮ' ಧಾರಾವಾಹಿಯು ಮುಕ್ತಾಯ ಕಂಡಿತು. ಇದರಲ್ಲಿ ವೈಷ್ಣವ್ ಪಾತ್ರದಲ್ಲಿ ಬಹಳ ಅದ್ಭುತವಾಗಿ ಅಭಿನಯಿಸಿದ ಬ್ರೋ ಗೌಡ ಎಲ್ಲರ ಮೆಚ್ಚುಗೆಗೂ ಪಾತ್ರವಾದರು.

After Lakshmibaramma serial Shamanth Gowda enters Telugu tv industry

ಬಾಲ್ಯದ ಗೆಳತಿ ಮೇಘನಾ ಜೊತೆ ಹಲವು ಯೂಟ್ಯೂಬ್ ವಿಡಿಯೋಗಳನ್ನು ಮಾಡುತ್ತಿದ್ದ ಬ್ರೋ ಗೌಡ, ಇನ್ನೇನು ತನ್ನ ಗೆಳತಿಗೆ ಪ್ರಪೋಸ್ ಮಾಡಬೇಕು ಎನ್ನುವಷ್ಟರಲ್ಲಿ ಆಕೆಯೇ ಪ್ರಪೋಸ್ ಮಾಡಿದ್ದರಂತೆ. ಇದನ್ನು ಇತ್ತೀಚೆಗಷ್ಟೇ ಸಂದರ್ಶನಗಳಲ್ಲಿ ನಟ ಶಮಂತ್ ಗೌಡ ಹೇಳಿಕೊಂಡಿದ್ದರು.

ಅಸಲಿಗೆ ಬಿಗ್ ಬಾಸ್‌ನಿಂದಲೇ ಬಹಳಷ್ಟು ಖ್ಯಾತಿ ಗಳಿಸಿದ ಬ್ರೋ ಗೌಡ, 2011 ರಿಂದಲೇ ಯೂಟ್ಯೂಬರ್ ಆಗಿದ್ದರು. ಬ್ರೋ ಗೌಡ ಅಫೀಶಿಯಲ್ ಎಂಬ ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ನಾನಾ ರೀತಿಯ ಆಲ್ಬಮ್ ಸಾಂಗ್‌ಗಳನ್ನು, ಶಾರ್ಟ್ ಫಿಲಂಗಳನ್ನು ಬಿಡುಗಡೆ ಮಾಡುತ್ತಿದ್ದರು. ವರ್ಜಿನ್ ಬಾಯ್ಸ್ ಎಂಬ ಇವರ ವಿಡಿಯೋವೊಂದು ಬಹಳ ಪಾಪ್ಯುಲಾರಿಟಿ ಗಳಿಸಿತ್ತು. ಜೊತೆಗೆ 'ದೊರೆಸಾನಿ', 'ರುಕ್ಕು' ಧಾರಾವಾಹಿಗಳಲ್ಲೂ ಪಾತ್ರ ನಿರ್ವಹಿಸಿದ್ದರು.

After Lakshmibaramma serial Shamanth Gowda enters Telugu tv industry

ಬಿಗ್ ಬಾಸ್ ಸೀಸನ್ 8 ರಲ್ಲಿ ಬ್ರೋ ಗೌಡ ಆಗಿ ಬಿಗ್ ಮನೆಗೆ ಕಾಲಿಟ್ಟ ಶಮಂತ್ ಗೌಡ ಹಲವು ದಿನಗಳ ಕಾಲ ಬಿಗ್ ಮನೆಯ ಸ್ಪರ್ಧಿಯಾಗಿದ್ದರು. ಮನೆಯಿಂದ ಹೊರ ಬರುತ್ತಿದ್ದಂತೆಯೇ ತಮಗೆ ದಿವ್ಯಾ ಸುರೇಶ್ ಮೇಲೆ ಕ್ರಶ್ ಇದ್ದಿದ್ದಾಗಿಯೂ ಹೇಳಿಕೊಂಡಿದ್ದರು. ಆದರೆ ಬಿಗ್ ಮನೆಯಲ್ಲಿ ಬ್ರೋ ಗೌಡ ಹಾಗೂ ವೈಲ್ಡ್ ಕಾರ್ಡ್ ಎಂಟ್ರಿ ಆದ ನಟಿ ಪ್ರಿಯಾಂಕಾ ತಿಮ್ಮೇಶ್ ಅವರ ಜೋಡಿ ಬಗ್ಗೆ ಬಹಳ ಚರ್ಚೆಯಾಗಿತ್ತು. ಇವರಿಬ್ಬರೂ ಲವರ್ಸ್ ಎಂದೇ ಹಲವು ಪ್ರೇಕ್ಷಕರು ಪರಿಗಣಿಸಿದ್ದರು. ಹೀಗೆಲ್ಲ ಇರುವಾಗಲೇ, ಬಿಗ್ ಮನೆಯಿಂದ ಹೊರ ಬರುತ್ತಿದ್ದಂತೆಯೇ ಶಮಂತ್ ಗೌಡ ಅವರಿಗೆ ಹೊಸ ಆಫರ್ಗಳ ಸುರಿಮಳೆಗೆ ಸುರಿಯಿತು.

ಜೈ ಮಾತಾ ಕಂಬೈನ್ಸ್ ಅವರ ನಿರ್ಮಾಣದ 'ಲಕ್ಷ್ಮೀ ಬಾರಮ್ಮ' ಧಾರಾವಾಹಿಯಲ್ಲಿ ನಾಯಕ ನಟ ವೈಷ್ಣವ್ ಆಗಿ ನಟಿಸುವ ಮೂಲಕ ಕಿರುತೆರೆಗೆ ಕಾಲಿಟ್ಟರು ಶಮಂತ್ ಗೌಡ. ವೈಷ್ಣವ್ ಆಗಿ ನಟಿಸಿದ ಶಮಂತ್ ಗೌಡ ಆ ಪಾತ್ರದ ಮೂಲಕ ಸಾಕಷ್ಟು ಜನಪ್ರಿಯತೆಯನ್ನು ಗಿಟ್ಟಿಸಿಕೊಂಡರು.

ಆ ಧಾರಾವಾಹಿ ಮುಗಿಯುತ್ತಿದ್ದಂತೆಯೇ ಇದೀಗ ಹೊಸದೊಂದು ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ ಬ್ರೋ ಗೌಡ. ಹೌದು, 'ಲಕ್ಷ್ಮಿ ಬಾರಮ್ಮ' ಧಾರಾವಾಹಿ ಮುಗಿಯುತ್ತಿದ್ದಂತೆ ತೆಲುಗಿನಲ್ಲಿ ಹೊಸದೊಂದು ಧಾರಾವಾಹಿಯಲ್ಲಿ ನಟಿಸಲಿದ್ದಾರಂತೆ ಬ್ರೋ ಗೌಡ. ಹೌದು, ತೆಲುಗಿನಲ್ಲಿ ಶುರುವಾಗಲಿರುವ ಹೊಚ್ಚ ಹೊಸ ಧಾರಾವಾಹಿಯೊಂದರಲ್ಲಿ ಬಣ್ಣ ಹಚ್ಚಲಿದ್ದಾರೆ ಶಮಂತ್ ಗೌಡ. ಆದರೆ ಯಾವ ಧಾರಾವಾಹಿ, ಧಾರಾವಾಹಿಯ ಹೆಸರೇನು ಎಂಬುದೆಲ್ಲಾ ಇನ್ನು ತಿಳಿಯಬೇಕಾಗಿದೆ.

ನಟ ಶಮಂತ್ ಗೌಡ ಮೂಲಕ ತೆಲುಗು ಪ್ರೇಕ್ಷಕರ ಫೇವರೆಟ್ ಆಗುವುದರಲ್ಲಿ ಸಂಶಯವಿಲ್ಲ. ಈಗಾಗಲೇ ಈ ಹೊಸ ಧಾರಾವಾಹಿಯ ಚಿತ್ರೀಕರಣ ಆರಂಭವಾಗಿದ್ದು ಈ ಮೂಲಕ ಶಮಂತ್ ಗೌಡ ಬಹು ಭಾಷಾ ನಟನಾಗಿ ಹೊರ ಹೊಮ್ಮುವುದರಲ್ಲಿ ಎರಡು ಮಾತಿಲ್ಲ.

More from Filmibeat

English summary
After Lakshmibaramma serial Shamanth Gowda enters Telugu tv industry;
Read more about: actor serial tv show
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X