ಮದುವೆ ನಂತರ ವಿದೇಶದಲ್ಲಿ ಸೆಟಲ್ ಆಗ್ತಾರಾ ವೈಷ್ಣವಿ ಗೌಡ ? ಎರಡು ರಿಂಗ್ ರಹಸ್ಯವೇನು ?
ತಮ್ಮ ಒರಿಜಿನಲ್ ಹೆಸರನ್ನೇ ಮರೆಯಾಗಿಸುವಂತೆ ಅಗ್ನಿಸಾಕ್ಷಿ ಧಾರಾವಾಹಿಯ ಸನ್ನಿಧಿ ಎಂದೇ ಖ್ಯಾತಿಯನ್ನ ಗಳಿಸಿದವರು ವೈಷ್ಣವಿ ಗೌಡ. ತಮ್ಮ ಅಭಿನಯದಿಂದ ಕನ್ನಡಿಗರ ಮನೆ ಮತ್ತು ಮನವನ್ನ ತಲುಪಿದ ವೈಷ್ಣವಿ ಗೌಡ ಭರ್ಜರಿ ಕಾಮಿಡಿ ಎಂಬ ಕಾರ್ಯಕ್ರಮದ ನಿರೂಪಕಿಯೂ ಹೌದು. ಬಿಗ್ ಬಾಸ್ ನ ಮಾಜಿ ಸ್ಫರ್ಧಿಯೂ ಹೌದು. ಕಿರುತೆರೆಯಿಂದ ಹಿರಿತೆರೆಗೆ ತೆರಳಿ ಆ ನಂತರ ಮತ್ತೆ ಮರಳಿ
ಕಿರುತೆರೆಗೆ ಬಂದ ವೈಷ್ಣವಿ ಗೌಡ ಸದ್ಯಕ್ಕೆ ಸೀತಾ ಎಂದೇ ಜನಪ್ರಿಯರಾಗಿದ್ದಾರೆ. ಸೀತಾ ರಾಮ ಧಾರಾವಾಹಿಯ ಮೂಲಕ ಕಿರುತೆರೆ ಪ್ರೇಕ್ಷಕರ ಪಾಲಿಗಿವರು ಮನೆಮಗಳೇ ಆಗಿ ಹೋಗಿದ್ದಾರೆ.

ಇಂಥಾ ವೈಷ್ಣವಿ ಗೌಡ ಸದ್ಯ ಹೊಸ ಬದುಕಿಗೆ ಮುನ್ನುಡಿ ಬರೆಯಲು ಅಣಿಯಾಗಿದ್ದಾರೆ. ಅನುಕೂಲ್ ಮಿಶ್ರಾ ಜೊತೆ ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡಿರುವ ವೈಷ್ಣವಿ ಗೌಡ ಶೀಘ್ರದಲ್ಲಿಯೇ ಮದುವೆ ಆಗಲಿದ್ದಾರೆ. ಇದರ ನಡುವೆ ತಮ್ಮ ನಿಶ್ಚಿತಾರ್ಥದ ಕುರಿತು ತಮ್ಮ ಮುಂದಿನ ಜೀವನದ ಕುರಿತು ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಹೌದು, ಅಸಲಿಗೆ ಅನುಕೂಲ್ ಜೊತೆ ವೈಷ್ಣವಿ ಎಂಗೇಜ್ ಆಗುತ್ತಿದ್ದಂತೆಯೇ ಅನೇಕರು ವೈಷ್ಣವಿ ಕಿರುತೆರೆಗೆ ಗುಡ್ ಬೈ ಹೇಳಲಿದ್ದಾರೆ, ಮದುವೆಯ ನಂತರ ವಿದೇಶದಲ್ಲಿಯೇ ಠಿಕಾಣಿ ಹೂಡಲಿದ್ದಾರೆ ಎಂದೆಲ್ಲ ಸುಳ್ಳು ಸುದ್ದಿಯನ್ನು ಹಬ್ಬಿಸಿದ್ದರು. ಸಹಜವಾಗಿ ಈ ಸುದ್ದಿಯನ್ನು ಕೇಳಿ ಓದಿ ವೈಷ್ಣವಿ ಗೌಡ ಅವರ ಅಭಿಮಾನಿಗಳಿಗೆ ನಿರಾಸೆ ಕೂಡ ಆಗಿತ್ತು.
ಇನ್ನು ಕನ್ನಡದವರು ಸಿಗಲಿಲ್ವಾ ಎನ್ನುವ ಮಾತು ಕೂಡ ಆಗ ಕೇಳಿ ಬಂದಿತ್ತು. ಇದಕ್ಕೆ ಈಗ ವೈಷ್ಣವಿ ಗೌಡ ಉತ್ತರ ನೀಡಿದ್ದಾರೆ. ಈ ಕುರಿತು ತಮ್ಮದೇ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ವೈಷ್ಣವಿ ಗೌಡ ಕರ್ನಾಟಕದ ಜನ ನನಗೆ ಇಷ್ಟೊಂದು ಪ್ರೀತಿ ಕೊಟ್ಟಿದ್ದಾರೆ, ಅದೆಲ್ಲ ಮರೆಯಲು ಸಾಧ್ಯ ಇಲ್ಲ ಎಂದು ಹೇಳಿದ್ದಾರೆ. ನನ್ನ ದೇಶ, ನನ್ನ ಜಾಗದಲ್ಲಿ ನನಗೆ ಇಷ್ಟೆಲ್ಲ ಸಿಗುತ್ತಿರುವಾಗ ನಾನ್ಯಾಕೇ ದೇಶ ಬಿಡಬೇಕು ಎಂದು ಪ್ರಶ್ನೆ ಕೇಳಿದ್ದಾರೆ.
ಮುಂದುವರೆದು ನನ್ನ ಕೊನೆಯ ಉಸಿರು ಇರುವವರೆಗೂ ನಾನು ಕನ್ನಡ ಇಂಡಸ್ಟ್ರೀಯಲ್ಲಿಯೇ ಕೆಲಸ ಮಾಡುತ್ತೇನೆ, ಕಲಾ ಸೇವೆಯನ್ನು ಮಾಡುತ್ತೇನೆ, ನಿಮ್ಮೆಲ್ಲರನ್ನು ಮನರಂಜಿಸುವ ಕೆಲಸವನ್ನು ಮಾಡುತ್ತೇನೆ ಎಂದು ಹೇಳಿದ್ದಾರೆ. ಈ ಮೂಲಕ ಮದುವೆಯ ನಂತರ ಕೂಡಾ ತಾವು ಅಭಿನಯಿಸುವುದಾಗಿ ವೈಷ್ಣವಿ ಗೌಡ ಸ್ಪಷ್ಟಪಡಿಸಿದ್ದಾರೆ.
ಇನ್ನು ತಮ್ಮ ಎಂಗೇಜ್ಮೆಂಟ್ ರಿಂಗ್ ಕುರಿತು ಕೂಡ ಮಾಹಿತಿಯನ್ನು ನೀಡಿರುವ ವೈಷ್ಣವಿ ಗೌಡ, ಎರಡು ರಿಂಗ್‌ಗಳನ್ನು ಖರೀದಿ ಮಾಡಿದ್ದಾಗಿ ಹೇಳಿದ್ದಾರೆ. ಇದಕ್ಕೆ ಕಾರಣವನ್ನು ಕೂಡ ನೀಡಿರುವ ವೈಷ್ಣವಿ ಗೌಡ ವಜ್ರದ ರಿಂಗ್‌ನ್ನು ಸದಾ ಕಾಲ ಧರಿಸುವುದು ಕಷ್ಟ, ಚಿತ್ರೀಕರಣ ಇದ್ದಾಗೆಲ್ಲ ಅದನ್ನು ತೆಗೆದಿಡುವುದು ಕೂಡ ಕಷ್ಟ, ಹೀಗಾಗಿಯೇ ಪ್ರತಿದಿನ ಧರಿಸಲು ಪ್ಲಾಟಿನಂ ರಿಂಗ್ ತೆಗದುಕೊಂಡಿರುವುದಾಗಿ ಹೇಳಿದ್ದಾರೆ.
ಇನ್ನು ಸಾಮಾನ್ಯವಾಗಿ ರಿಂಗ್‌ನ್ನು ಎಡಗೈಯಲ್ಲಿ ಹಾಕುತ್ತಾರೆ. ಆದರೆ ವೈಷ್ಣವಿ ಗೌಡ ತಮ್ಮ ಎಂಗೇಜ್ಮೆಂಟ್ ರಿಂಗನ್ನು ಬಲಗೈನಲ್ಲಿ ಹಾಕಿಕೊಂಡಿದ್ದಾರೆ. ಈ ಕುರಿತು ಕೂಡ ಮಾತನಾಡಿರುವ ವೈಷ್ಣವಿ ಗೌಡ ತುಂಬಾ ವರ್ಷಗಳಿಂದ ನನ್ನ ಎಡಗೈನಲ್ಲಿ ನಾನೊಂದು ಉಂಗುರ ಹಾಕಿಕೊಂಡಿದ್ದೇನೆ, ಅದನ್ನು ತೆಗೆಯಲು ಮನಸು ಬರ್ತಿಲ್ಲ ಹೀಗಾಗಿ ರಿಂಗ್‌ನ ಬಲಗೈಗೆ ಹಾಕಿದ್ದೇನೆ ಎಂದು ಹೇಳಿದ್ದಾರೆ.
ತಮ್ಮ ಈ ವಿಡಿಯೋದಲ್ಲಿ ತಾವು ಬಳಸುವ ಲಿಪ್‌ಸ್ಟಿಕ್ ಸೇರಿ ಇನ್ನು ಹಲವು ವಿಚಾರಗಳ ಕುರಿತು ಮಾತನಾಡಿರುವ ವೈಷ್ಣವಿ ಗೌಡ ಸಾಬೂದಾನಿ ಡಂಪ್ಲಿಂಕ್ಸ್ ಮಾಡುವುದು ಹೇಗೆ ಎನ್ನುವುದನ್ನು ಕೂಡ ತೋರಿಸಿದ್ದಾರೆ. ಅಭಿಮಾನಿಗಳ ಹಲವು ಪ್ರಶ್ನೆಗಳಿಗೆ ಉತ್ತರವನ್ನು ನೀಡಿದ್ದಾರೆ. ಅನೇಕರು ಭಾವಿ ಪತಿ ಅನುಕೂಲ್ ಮೀಶ್ರಾ ಅವರ ಜೊತೆ ವ್ಲಾಗ್ ಮಾಡುವಂತೆ ಬೇಡಿಕೆನ್ನಿಟ್ಟಿದ್ದಾರೆ.


Click it and Unblock the Notifications











