'ಯಾವ ಮೋಹನ ಮುರಳಿ ಕರೆಯಿತು' ಎಂದ 'ಮತ್ತೆ ಮಾಯಾಮೃಗ'ದ ಪೂರ್ವಿ; ಏನಿದು ಮೇಧಾ ಮ್ಯಾಟರ್?

By ಅನಿತಾ ಬನಾರಿ

ಮೊದಲ ಧಾರಾವಾಹಿಯಲ್ಲಿಯೇ ಪ್ರಮುಖ ಪಾತ್ರದಲ್ಲಿ ನಟಿಸಿ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ಈ ಬೆಡಗಿ ಹೆಸರು ಮೇಧಾ ವಿದ್ಯಾಭೂಷಣ. ಟಿ.ಎನ್.ಸೀತಾರಾಮ್ ನಿರ್ದೇಶನದಡಿಯಲ್ಲಿ ಸಿರಿಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮತ್ತೆ ಮಾಯಾಮೃಗ' ಧಾರಾವಾಹಿಯಲ್ಲಿ ಪೂರ್ವಿ ಪಾತ್ರದಲ್ಲಿ ಮೇಧಾ ವಿದ್ಯಾಭೂಷಣ್ ಮಿಂಚಿದ್ದರು. ಇಂಜಿನಿಯರಿಂಗ್ ಪದವಿ ಪಡೆದಿರುವ ಮೇಧಾ ವಿದ್ಯಾಭೂಷಣದ ಆಕಸ್ಮಿಕವಾಗಿ ದೊರೆತ ಅವಕಾಶದಿಂದ ಕಿರುತೆರೆಗೆ ಕಾಲಿಟ್ಟ ಚೆಲುವೆ.

'ಮತ್ತೆ ಮಾಯಾಮೃಗ' ಧಾರಾವಾಹಿಯ ನಂತರ ಇದೀಗ 'ಯಾವ ಮೋಹನ ಮುರಳಿ ಕರೆಯಿತು' ಎನ್ನುವ ಕಿರುಚಿತ್ರದಲ್ಲಿ ಮೇಧಾ ವಿದ್ಯಾಭೂಷಣ್ ಅಭಿನಯಿಸುತ್ತಿದ್ದಾರೆ. ಈ ಕಿರುಚಿತ್ರದ ಪೋಸ್ಟರ್ ಕೂಡಾ ಈಗಾಗಲೇ ಬಿಡುಗಡೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಇದು ಸಖತ್ ವೈರಲ್ ಆಗುತ್ತಿದೆ. ಇನ್ನು ಮೇಧಾ ವಿದ್ಯಾಭೂಷಣ್ ಅವರು ಈ ಕಿರುಚಿತ್ರದಲ್ಲಿ ಸಾವಿತ್ರಿ ಪಾತ್ರಕ್ಕೆ ಜೀವ ತುಂಬಲಿದ್ದಾರೆ.

After Matte Mayamruga serial actress Medha Vidya Bhushan is charming in a short film

"ಧಾರಾವಾಹಿಯ ನಂತರ ಇದೀಗ ನಾನು ಕಿರುಚಿತ್ರದಲ್ಲಿ ನಟಿಸುತ್ತಿದ್ದೇನೆ. ನನಗಂತೂ ತುಂಬಾ ಖುಷಿಯಾಗುತ್ತಿದೆ" ಎಂದು ಫಿಲ್ಮಿಬೀಟ್ ಜೊತೆಗೆ ಸಂತಸ ಹಂಚಿಕೊಂಡಿದ್ದಾರೆ ಮೇಧಾ ವಿದ್ಯಾಭೂಷಣ್. ಇದರ ಜೊತೆಗೆ "ಮತ್ತೆ ಮಾಯಾಮೃಗ ಧಾರಾವಾಹಿಯಲ್ಲಿ ನಟಿಸುತ್ತಿರುವಾಗಲೇ ಬೇರೆ ಬೇರೆ ಪ್ರಾಜೆಕ್ಟ್‌ಗಳಿಂದ ಅವಕಾಶ ಬಂದರೂ ಒಪ್ಪಿಕೊಳ್ಳಲು ಸಾಧ್ಯವಾಗಲಿಲ್ಲ. ಈಗ ಸಮಯ ಸಿಕ್ಕಿತು" ಎಂದು ಹೇಳುತ್ತಾರೆ ಮೇಧಾ ವಿದ್ಯಾ ಭೂಷಣ್.

ಇಷ್ಟೇ ಅಲ್ಲದೆ, "ನಾನು ಈ ತಂಡದ ಜೊತೆಗೆ ಈ ಹಿಂದೆಯೇ ಕೆಲಸ ಮಾಡ್ಬೇಕಿತ್ತು. ಆದರೆ, ಅದು ಸಾಧ್ಯವಾಗಲಿಲ್ಲ. ಈಗ ಎಲ್ಲವೂ ಕೂಡಿ ಬಂತು" ಎಂದು ಮೇಧಾ ವಿದ್ಯಾಭೂಷಣ್ ಹೇಳುತ್ತಾರೆ.

'ಮತ್ತೆ ಮಾಯಾಮೃಗ' ಧಾರಾವಾಹಿಯು ಇತ್ತೀಚೆಗಷ್ಟೇ ತನ್ನ ಪ್ರಸಾರ ನಿಲ್ಲಿಸಿತ್ತು. ಪ್ರಾಜೆಕ್ಟ್ ಮುಗಿದ ಕೆಲವೇ ದಿನಗಳಲ್ಲಿ ಮೇಧಾ ಅವರು ತಮ್ಮ ಹೊಸ ಪ್ರಾಜೆಕ್ಟ್ ಅನೌನ್ಸ್ ಮಾಡಿದ್ದು ವೀಕ್ಷಕರಿಗೆ ಖುಷಿ ತಂದಿದೆ. ಇನ್ನು ಮೇಧಾ ಸಣ್ಣ ವಯಸ್ಸಿನಿಂದಲೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿದ್ದ ಚೆಲುವೆ. ಒಂದಷ್ಟು ನಾಟಕಗಳಲ್ಲಿ ಬಣ್ಣ ಹಚ್ಚಿರುವ ಈಕೆ ಸಂಗೀತಗಾರ್ತಿಯೂ ಹೌದು.

After Matte Mayamruga serial actress Medha Vidya Bhushan is charming in a short film

ಮನೆಯಲ್ಲಿ ಸಂಗೀತದ ವಾತಾವರಣವಿದ್ದ ಕಾರಣವೂ ಏನೋ ಮೇಧಾ ಅವರು ಅತ್ಯದ್ಭುತ ಸಂಗೀತಗಾರ್ತಿಯಾಗಿ ಹೊರಹೊಮ್ಮಿದ್ದಾರೆ. ಸಂಗೀತದಲ್ಲಿ ವಿದ್ವತ್ ಪದವಿ ಪಡೆದಿರುವ ಈಕೆ ಹಲವು ವೇದಿಕೆಗಳಲ್ಲಿ ಸಂಗೀತ ಕಾರ್ಯಕ್ರಮ ನೀಡಿ ಸೈ ಎನಿಸಿಕೊಂಡಿದ್ದಾರೆ. ಇನ್ನು ನಟನೆ, ಸಂಗೀತದ ಹೊರತಾಗಿ ಈಕೆಗೆ ಫೋಟೋಗ್ರಫಿಯೆಂದರೆ ಪ್ಯಾಶನ್.

ಹೌದು, ವೈಲ್ಡ್ ಲೈಫ್ ಫೋಟೋಗ್ರಫಿಯತ್ತ ಮೇಧಾ ವಿದ್ಯಾಭೂಷಣ್ ವಿಶೇಷ ಒಲವು ಮೂಡಿಸಿಕೊಂಡಿದ್ದಾರೆ. ಅಂದ ಹಾಗೇ ಮೇಧಾ ಅವರ ಅಣ್ಣ ಅನಿರುದ್ಧ್ ಕೂಡ ವೈಲ್ಡ್ ಲೈಫ್ ಫೋಟೋಗ್ರಾಫರ್. ಅವರು ಫೋಟೋಗ್ರಫಿ ನಿಮಿತ್ತ ಟೂರ್ ಹೋದಾಗಲೆಲ್ಲಾ ಜೊತೆಯಲ್ಲಿ ಮೇಧಾ ಅವರು ಕೂಡಾ ಹೋಗುತ್ತಿದ್ದರು. ಇದರಿಂದಾಗಿ ಆಕೆಗೂ ಫೋಟೋಗ್ರಫಿಯತ್ತ ನಂಟು ಬೆಳೆಯಿತು. ನಟನೆಯ ಹೊರತಾಗಿ ಬಿಡುವಿನ ವೇಳೆ ತಮ್ಮ ಪ್ಯಾಶನ್‌ನತ್ತಲೂ ಮೇಧಾ ಮುಖ ಮಾಡುತ್ತಾರೆ.

More from Filmibeat

English summary
Actress Medha Vidya Bhushan who made TV debut with the serial Matte Mayamruga is now acting in a short film called Yaava Mohan Murali Kareyithu:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X