"ಹೊರಗೂ ನಮ್ಮ ಬಾಂಡಿಂಗ್ ಹೀಗೆ ಇರುತ್ತೆ" ಎಂದ ನಮ್ರತಾ; ಬಿಗ್‌ಬಾಸ್ ಮುಗಿದ್ಮೇಲೂ ಗ್ಯಾಂಗ್ ಹಾಗೆ ಇದೆಯೇ?
ಬಿಗ್‌ಬಾಸ್ ಕನ್ನಡ ಸೀಸನ್ 10 ಮುಗಿದ ಮೇಲೆ ಸಂಚಲನ ಸೃಷ್ಟಿಸುತ್ತಿದೆ. ಮನೆಯಿಂದ ಹೊರ ಬಂದ್ಮೇಲೆ ಸ್ಪರ್ಧಿಗಳ ಬಾಂಡಿಂಗ್ ಮತ್ತಷ್ಟು ಬಲವಾಗುತ್ತಿದೆ. ಈ ಬಾರಿ ಬಿಗ್‌ಬಾಸ್ ಮನೆಯಲ್ಲಿ ಎರಡು ಗುಂಪುಗಳು ಕಾಣಿಸಿಕೊಂಡಿದ್ದವು. ವಿನಯ್ ಜೊತೆ ಗುರುತಿಸಿಕೊಂಡಿದ್ದ ಗುಂಪು ಒಂದಾದರೆ, ಇನ್ನೊಂದು ಕಡೆ ಸಂಗೀತಾ, ಡ್ರೋನ್ ಪ್ರತಾಪ್, ತನಿಷಾ, ಕಾರ್ತಿಕ್ ಪ್ರತ್ಯೇಕವಾಗಿ ಗುರುತಿಸಿಕೊಂಡಿದ್ದು ಇದೆ.
ಎರಡನೆಯದ್ದು ಗುಂಪು ಅನ್ನುವುದಕ್ಕೆ ಆಗದೇ ಹೋದರೂ, ಇವರಲ್ಲಿ ಸಂಗೀತಾ ಹಾಗೂ ಡ್ರೋನ್ ಪ್ರತಾಪ್ ಕೊನೆಯವರೆಗೂ ಒಟ್ಟಾಗಿ ಇದ್ದರು. ಬಿಗ್‌ಬಾಸ್ ಮನೆಯೊಳಗೆ ಹೆಚ್ಚಾಗಿ ಮುಖಾ ಮುಖಿಯಾಗಿದ್ದು ವಿನಯ್ ಮತ್ತು ಸಂಗೀತಾ. ಇದು ಕ್ಯಾಮರಾ ಮುಂದೆ ಕೇವಲ ಟಾಸ್ಕ್‌ಗೋಸ್ಕರ ಎಂದೇ ಭಾವಿಸಲಾಗಿತ್ತು. ಆದರೆ, ಬಿಗ್‌ಬಾಸ್‌ನಿಂದ ಹೊರಬಂದ್ಮೇಲೂ ಅದು ಮುಂದುವರೆದಿದೆಯೇನೋ? ಅಂತ ಭಾಸವಾಗುತ್ತಿದೆ.

ಬಿಗ್‌ಬಾಸ್ ಕನ್ನಡ ಸೀಸನ್ 10 ಮುಗಿದ ಮೇಲೆ ವಿನಯ್ ಜೊತೆ ನಮ್ರತಾ, ರಕ್ಷಕ್ ಹಾಗೂ ಮೈಕಲ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಮೈಸೂರಿಗೆ ತೆರಳಿ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದಿದ್ದಾರೆ. ಹಾಗೇ ಇತ್ತೀಚೆಗೆ ವಿನಯ್ ಗ್ಯಾಂಗ್ ಮಸ್ತ್ ಆಗಿ ಪಾರ್ಟಿ ಮಾಡಿದೆ. ಅದರಲ್ಲೂ ಮೈಸೂರಿನಲ್ಲಿ ನಮ್ರತಾ ಕೊಟ್ಟ ಹೇಳಿಕೆ, ಬಿಗ್‌ಬಾಸ್ ಹೊರಗೂ ಆ ಗ್ಯಾಂಗ್ ಹಾಗೇ ಮುಂದುವರೆದಿದೆಯಾ? ಅನ್ನೋ ಅನುಮಾನ ಮೂಡಿದೆ. ಅಷ್ಟಕ್ಕೂ ನಮ್ರತಾ ಹೇಳಿದ್ದೇನು?
ನಮ್ರತಾ ಜೊತೆ ತಮ್ಮ-ಅಣ್ಣನ ಅನುಬಂಧ
ಬಿಗ್‌ಬಾಸ್ ಕನ್ನಡ ಸೀಸನ್ 10ರಲ್ಲಿ ವಿನಯ್ ಜೊತೆ ನಮ್ರತಾ, ರಕ್ಷಕ್, ಸ್ನೇಹಿತ್, ಮೈಕಲ್ ಹೆಚ್ಚಾಗಿ ಗುರುತಿಸಿಕೊಂಡಿದ್ದರು. ಕಾಕತಾಳೀಯವೇನೋ ಎನ್ನುವಂತೆ ವಿನಯ್ ಜೊತೆ ಆತ್ಮೀಯರಾಗಿದ್ದವರೆಲ್ಲರೂ ಮನೆಯಿಂದ ಒಬ್ಬೊಬ್ಬರಾಗಿಯೇ ಹೊರಗೆ ಬಂದಿದ್ದರು. ಅವರಲ್ಲಿ ನಮ್ರತಾ, ರಕ್ಷಕ್, ಸ್ನೇಹಿತ್, ಮೈಕಲ್ ಕೂಡ ಸೇರಿಕೊಂಡಿದ್ದಾರೆ. ಮನೆಯ ಹೊರಗೂ ನಮ್ಮ ಬಾಂಧವ್ಯ ಮುಂದುವರೆಯುತ್ತೆ ಎಂದು ವಿನಯ್ ಬಿಗ್‌ಬಾಸ್ ಮನೆಯೊಳಗೆ ಇದ್ದಾಗಲೇ ಹೇಳಿದ್ದರು. ಅದನ್ನು ಅಕ್ಷರಶ: ಈಗ ಮುಂದುವರೆಸಿದ್ದಾರೆ.

ನಮ್ಮ ಬಾಂಡಿಂಗ್ ಹೀಗೆ ಇರುತ್ತೆ ಎಂದ ನಮ್ರತಾ?
ಮೈಸೂರಿಗೆ ತೆರಳಿ ಚಾಮುಂಡೇಶ್ವರಿ ದೇವಿ ದರ್ಶನ ಪಡೆದ ಬಳಿಕ ನಮ್ರತಾ ನಾವು ಕ್ಯಾಮರಾ ಮುಂದೆ ಫೇಕ್ ಆಗಿರಲಿಲ್ಲ. ಮನೆಯ ಹೊರಗಡೆನೂ ಆ ಬಾಂಡಿಂಗ್ ಅನ್ನು ಮುಂದುವರೆಸಿದ್ದೇವೆ ಎಂದು ಹೇಳಿದ್ದಾರೆ. "ಇದು ರಕ್ಷಕ್ ಪ್ಲ್ಯಾನ್ ಇದು. ಅವನು ನನ್ನ ತಮ್ಮ. ಅಣ್ಣ ಅಂದರೆ ವಿನಯ್. ಎಲ್ಲರೂ ಫ್ಯಾಮಿಲಿ ಸೇರಿಕೊಂಡು ಬಂದಿದ್ದೇವೆ. ನಾವು ಒಳಗಡೆ ಕ್ಯಾಮರಾ ಮುಂದಷ್ಟೇ ಫೇಕ್ ಮಾಡಿಲ್ಲ. ಹೊರಗಡೆ ಕೂಡ ನಮ್ಮ ಬಾಂಡಿಂಗ್ ಹೀಗೆ ಇರುತ್ತೆ. ಇನ್ನೂ ತುಂಬಾ ಟ್ರ್ಯಾವೆಲ್ ಮಾಡೋದು ಇದೆ. ದೇವಸ್ಥಾನಗಳಿಗೆ ವಿಸಿಟ್ ಹಾಕೋದು ಇದೆ. ಇನ್ನೂ ತುಂಬಾ ಜನರನ್ನು ಮೀಟ್ ಮಾಡೋದಿದೆ. ಎಲ್ಲಾ ಒಟ್ಟಿಗೆ ಮಾಡೋಣ ಅಂತ ಅಂದ್ಕೊಂಡಿದ್ದೀವಿ." ಎಂದು ನಮ್ರತಾ ಹೇಳಿದ್ದಾರೆ.
"ಜನರ ಪ್ರೀತಿ ಹೀಗಿರುತ್ತೆ ಅಂತ ಗೊತ್ತಿರಲಿಲ್ಲ"
ಬಿಗ್‌ಬಾಸ್ ಮುಗಿಸಿ ಹೊರಬರುತ್ತಿದ್ದಂತೆ ಜನರ ಪ್ರೀತಿ ಹೀಗಿರುತ್ತೆ ಅಂತ ಗೊತ್ತಿರಲಿಲ್ಲ ಎಂದು ನಮ್ರತಾ ಹೇಳಿದ್ದಾರೆ. "ದೇವಸ್ಥಾನಕ್ಕೆ ಹೋಗಬೇಕು ಅಂತ ಅಂದುಕೊಳ್ಳುತ್ತಿದ್ದೆ ಆಗಿರಲಿಲ್ಲ. ಫಿನಾಲೆ ಇತ್ತು. ಆ ಮೇಲೆ ಏನೇನೋ ಇವೆಂಟ್‌ಗಳು ಇದ್ದವು. ಫ್ಯಾಮಿಲಿ ಹಾಗೂ ಫ್ರೆಂಡ್ಸ್ ಜೊತೆ ಬಂದಿದ್ದೀನಿ. ತುಂಬಾ ಖುಷಿ ಆಯ್ತು. ಚಾಮುಂಡೇಶ್ವರಿ ದರ್ಶನ ತುಂಬಾನೇ ಚೆನ್ನಾಗಿ ಆಯ್ತು. ಜನರ ಪ್ರೀತಿ ಈ ರೇಂಜ್‌ಗೆ ಇದೆ ಅಂತ ಗೊತ್ತಿರಲಿಲ್ಲ. ಎಲ್ಲರೂ ಹೇಳೋರು ಬಿಗ್‌ಬಾಸ್ ಅನ್ನು ತುಂಬಾ ಫಾಲೋ ಮಾಡುತ್ತಿದ್ದೇವೆ ಅಂತ. ಇಷ್ಟೊಂದು ಇಷ್ಟ ಪಟ್ಟಿದ್ದಾರೆ ಅಂತ ಗೊತ್ತಿರಲಿಲ್ಲ." ಎಂದು ನಮ್ರತಾ ಹೇಳಿದ್ದಾರೆ.
ನಮ್ಮ ವ್ಯಕ್ತಿತ್ವ ನೋಡಿ ಮೆಚ್ಚಿದ್ದಾರೆ
"ಶೋ ಒಪ್ಪಿಕೊಂಡಾಗ ಜನರು ಇಷ್ಟೊಂದು ಇಷ್ಟ ಪಡುತ್ತಾರೆ ಅನ್ನೋದು ಗೊತ್ತಿರಲಿಲ್ಲ. ಹೊರಗಡೆ ಬಂದು ಮಾತಾಡಿದಾಗ, ಪ್ರತಿಯೊಂದು ಡಿಟೈಲ್ ಹೇಳಿದಾಗ ಎಷ್ಟು ಖುಷಿ ಆಗುತ್ತೆ ಅಂದರೆ, ಒಂದು ಪಾತ್ರವಾಗಿ ಮೆಚ್ಚುಕೊಂಡಿದ್ದವರು ಈಗ ನಮ್ಮ ವ್ಯಕ್ತಿತ್ವ ನೋಡಿ ನಮ್ರತಾ ಹೀಗೆ.. ನಮ್ಮು ಹಾಗೆ.. ನಮ್ಮು ಹೀಗೆ ಅಂತ ಮನೆ ಮಗಳು ತರ ಕರೀತಾರಲ್ಲ ತುಂಬಾ ಖುಷಿ ಆಗುತ್ತಿದೆ." ಎಂದು ಇದೇ ಸಂದರ್ಭದಲ್ಲಿ ನಮ್ರತಾ ಹೇಳಿಕೊಂಡಿದ್ದಾರೆ.


Click it and Unblock the Notifications











