»   »  'ಪುಟ್ಟಗೌರಿ' ನಂತರ 'ನಂದಿನಿ' ಮೇಲೆ ಹುಲಿದಾಳಿ: ಈ ನಂದಿನಿ ತುಂಬ ಪವರ್ ಫುಲ್.!

'ಪುಟ್ಟಗೌರಿ' ನಂತರ 'ನಂದಿನಿ' ಮೇಲೆ ಹುಲಿದಾಳಿ: ಈ ನಂದಿನಿ ತುಂಬ ಪವರ್ ಫುಲ್.!

Posted By:
Subscribe to Filmibeat Kannada

ಕಾಡಿನಲ್ಲಿ ಸಿಲುಕಿಕೊಂಡಿದ್ದ 'ಪುಟ್ಟಗೌರಿ' ಮೇಲೆ ಹುಲಿ ದಾಳಿ ಮಾಡಿದ್ದು, ನಂತರ ಆ ಹುಲಿ ನೀರಿಲ್ಲದ ಬಾವಿಗೆ ಬಿದ್ದಿದ್ದು, ಆಮೇಲೆ ಆ ಹುಲಿಯನ್ನ ಪುಟ್ಟಗೌರಿ ರಕ್ಷಣೆ ಮಾಡಿದ್ದು, 'ಪುಟ್ಟಗೌರಿ' ಪ್ರಾಣಾಪಾಯದಲ್ಲಿದ್ದಾಗ ಅದೇ ಹುಲಿ ಗೌರಿಯನ್ನ ಕಾಪಾಡಿದ್ದು......ಇಷ್ಟೆಲ್ಲಾ ಸಾಹಸಗಳು ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲಿ ನಡೆದಿತ್ತು.

ಇದೀಗ, 'ಪುಟ್ಟಗೌರಿ'ಯನ್ನ ಬದುಕಿಸಿ ನಾಪತ್ತೆಯಾಗಿದ್ದ ಹುಲಿ ಮತ್ತೊಬ್ಬ ನಟಿ ಮೇಲೆ ದಾಳಿ ಮಾಡಿದೆ. ಹೌದು, 'ನಾ ನಿನ್ನ ಬಿಡಲಾರೆ' ಧಾರಾವಾಹಿ ಖ್ಯಾತಿಯ ನಂದಿನಿ ಮೇಲೆ ಹುಲಿ ದಾಳಿ ಮಾಡಿದೆ. ಆದ್ರೆ, ಈ 'ನಂದಿನಿ' ಪುಟ್ಟಗೌರಿಯಂತೆ ಸಾಮಾನ್ಯದವಳಲ್ಲ.

ಆ ಹುಲಿಯನ್ನ ಪಳಗಿಸಿ ತನ್ನ ಆಸನವನ್ನಾಗಿಸಿದ ಮಹಾನ್ ದೇವತೆ ಈ 'ನಂದಿನಿ'. ಏನಿದು ಹುಲಿ ಕಥೆ ಎಂದು ತಿಳಿದುಕೊಳ್ಳಲು ಮುಂದೆ ಓದಿ......

'ನಾ ನಿನ್ನ ಬಿಡಲಾರೆ'ಯಲ್ಲಿ ಹುಲಿ ಪ್ರತ್ಯಕ್ಷ

ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುವ 'ನಾ ನಿನ್ನ ಬಿಡಲಾರೆ' ಧಾರಾವಾಹಿಯಲ್ಲಿ ಹುಲಿ ಪ್ರತ್ಯಕ್ಷವಾಗಿದೆ. ಈ ಧಾರಾವಾಹಿಯ ನಾಯಕಿ ನಂದಿನಿ ಮೇಲೆ ದಾಳಿ ಮಾಡಿದೆ.

ಟ್ರೋಲ್ ಮಾಡುವವರಿಗೆ ತನ್ನ ಮಾತಿನಲ್ಲೇ ಪೆಟ್ಟು ಕೊಟ್ಟ ಪುಟ್ಟಗೌರಿ!

'ಪುಟ್ಟಗೌರಿ' ಹಾದಿಯಲ್ಲಿ ನಂದಿನಿ

ತನ್ನನ್ನ ತಿನ್ನಲು ಬಂದಿದ್ದ ಹುಲಿಯನ್ನ ಓಡಿಸಿ ಗಮನ ಸೆಳೆದಳು ಆ 'ಪುಟ್ಟಗೌರಿ'. ಇಲ್ಲಿ ತಮ್ಮ ಮೇಲೆ ದಾಳಿ ಮಾಡಲು ಬಂದಿದ್ದ ಹುಲಿಯ ಜೊತೆ ಹೋರಾಟ ಮಾಡಿದ ಗೆದ್ದಳು ಈ 'ನಂದಿನಿ'.

'ಪುಟ್ಟಗೌರಿ'ಯ ವನವಾಸ ಅಂತ್ಯ: ಗೌರಿ ಕಾಡಿನಿಂದ ನಾಡಿಗೆ ಬಂದಿದ್ದು ಹೇಗೆ?

ಹುಲಿ ಪಳಗಿಸಿದ ನಂದಿನಿ

ದಾಳಿ ಮಾಡಲು ಬಂದಿದ್ದ ಹುಲಿಯನ್ನ ಪಳಗಿಸಿ, ಅದರ ಮೇಲೆ ಕುಳಿತುಕೊಂಡು, ಪ್ರೇಕ್ಷಕರಿಗೆ ಅಚ್ಚರಿ ಉಂಟು ಮಾಡಿದಳು ಈ ನಂದಿನಿ.

ಪ್ರಾಣಾಪಾಯದಲ್ಲಿದ್ದ 'ಪುಟ್ಟಗೌರಿ' ಜೀವನದಲ್ಲಿ ಪವಾಡ: ಗೌರಿ ಮತ್ತೆ ಸೇಫ್.!

ನಂದಿನಿ ಸಾಮಾನ್ಯದವಳಲ್ಲ.!

ಅಂದ್ಹಾಗೆ, ಘೋರ ವ್ಯಾಘ್ರವನ್ನೇ ಹೊಡೆದುರುಳಿಸಿ, ಅದನ್ನ ತನ್ನ ಆಸನವನ್ನಾಗಿಸಿಕೊಂಡ ನಂದಿನಿ ಸಾಮಾನ್ಯದವಳಲ್ಲ. ಈಕೆ ನಂದಿನಿ ರೂದಪಲ್ಲಿದ್ದ ದೇವರು. ನಂದಿನಿಯನ್ನ ರಕ್ಷಿಸಲು ಬಂದಿದ್ದ ದೇವತೆ.

'ಬೆಟ್ಟದ ಮೇಲಿಂದ ಬಿದ್ದ ಪುಟ್ಟಗೌರಿ': ಆಮೇಲೆ ಆದ ಅದ್ಭುತಗಳು ಇವು.!

ಹುಲಿಯಲ್ಲೊಂದು ದೆವ್ವ.!

ಇನ್ನು ಆರಂಭದಲ್ಲಿ ಹುಲಿ ದಾಳಿ ಮಾಡಲು ಬರುತ್ತೆ. ಆದ್ರೆ, ಆ ವೇಳೆ ನಂದಿನಿಯನ್ನ ಕೊಲ್ಲಬೇಕು ಎಂದು ಹೊಂಚು ಹಾಕುತ್ತಿದ್ದ 'ಕಾಂಚನ'ಳ ಆತ್ಮ, ಆ ಹುಲಿಯೊಳಗೆ ಸೇರಿಕೊಳ್ಳುತ್ತೆ. ಆದ್ರೆ, ದೇವತೆಯ ಮುಂದೆ ಕಾಂಚನಳ ಆತ್ಮದ ಆಟ ಏನೂ ನಡೆಯಲಿಲ್ಲ.

ಹುಲಿ, ಹಾವಿನಿಂದ ತಪ್ಪಿಸಿಕೊಂಡ 'ಗೌರಿ' ಪ್ರಾಣಕ್ಕೆ ಮತ್ತೆ ಅಪಾಯ.!

ಧಾರಾವಾಹಿಯಲ್ಲಿ ಹುಲಿಗೆ ಡಿಮ್ಯಾಂಡ್ ಹೆಚ್ಚಾಗಿದೆ

ಬ್ಯಾಕ್ ಟು ಬ್ಯಾಕ್ ಧಾರಾವಾಹಿಗಳಲ್ಲಿ ಹುಲಿಯ ಪಾತ್ರ ನೋಡುತ್ತಿರುವ ಪ್ರೇಕ್ಷಕರು ಥ್ರಿಲ್ ಆಗುತ್ತಿದ್ದಾರೆ. ಮತ್ತೊಂದೆಡೆ ಸೋಶಿಯಲ್ ಮಿಡಿಯಾದಲ್ಲಿ ಮಾತ್ರ ಧಾರಾವಾಹಿಯಗಳಲ್ಲಿ ಹುಲಿಯನ್ನ ಬಳಸಿಕೊಳ್ಳುತ್ತಿರುವುದನ್ನ ರೀತಿ ನೋಡಿ ಕಾಲೆಳೆಯುತ್ತಿದ್ದಾರೆ.

English summary
After puttagowri, now the tiger has attacked Nandini fame of Naa Ninna Bidalaare serial.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada