'ನಮ್ಮ ಲಚ್ಚಿ'ಗೆ ಗುಡ್‌ಬೈ ಹೇಳಿದ್ದ ಸಾರಾ ಅಣ್ಣಯ್ಯ ದಿಢೀರನೇ 'ಅಮೃತಧಾರೆ'ಯಲ್ಲಿ ಪ್ರತ್ಯಕ್ಷ: ಧಾರಾವಾಹಿ ಬಿಟ್ಟ ಗುಟ್ಟು ರಟ್ಟು!

By ಅನಿತಾ ಬನಾರಿ

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ನಮ್ಮ ಲಚ್ಚಿ' ಧಾರಾವಾಹಿಯು ನಿಧಾನವಾಗಿ ಜನರ ಮನಗೆದ್ದಿದೆ. ತಂದೆ ಹಾಗೂ ಮಗಳ ಬಾಂಧವ್ಯದ ಕಥೆ ಮೋಡಿ ಮಾಡುತ್ತಿದೆ. ಇದೇ ಧಾರಾವಾಹಿಯಲ್ಲಿ ಇತ್ತೀಚೆಗೆ ಒಂದು ಬದಲಾವಣೆಯಾಗಿತ್ತು. ದೀಪಿಕಾ ಪಾತ್ರದಲ್ಲಿ ನಟಿಸುತ್ತಿದ್ದ ಸಾರಾ ಅಣ್ಣಯ್ಯ ದಿಢೀರನೇ 'ನಮ್ಮ ಲಚ್ಚಿ'ಗೆ ಗುಡ್ ಬೈ ಹೇಳಿದ್ದರು.

ವಿಭಿನ್ನ ಕಥಾಹಂದರದ ಜೊತೆಗೆ ಪಾತ್ರವರ್ಗದ ಮೂಲಕ ಕಿರುತೆರೆ ಪ್ರೇಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. "ನಮ್ಮ ಲಚ್ಚಿ" ಧಾರಾವಾಹಿಯಲ್ಲಿ ದೀಪಿಕಾ ಆಗಿ ನಟಿಸಿ ಕಿರುತೆರೆ ವೀಕ್ಷಕರಿಗೆ ಮನರಂಜನೆಯ ರಸದೌತಣ ಉಣಬಡಸಿದ್ದ ಸಾರಾ ಅಣ್ಣಯ್ಯ ಮುಂದೆ ಕಾರಣಾಂತರಗಳಿಂದ ಪಾತ್ರದಿಂದ ಹೊರಬಂದಿದ್ದರು.

After quiting Namma Lacchi Sara Annaiah enterd Ambruthadare serial as fashion designer Mahima

'ನಮ್ಮ ಲಚ್ಚಿ' ತಂಡದೊಂದಿಗಿನ ವೈಮನಸ್ಸಿನಿಂದ ಸಾರಾ ಅಣ್ಣಯ್ಯ ಧಾರಾವಾಹಿ ತೊರದಿದ್ದಾರೆ ಎಂದೇ ಭಾವಿಸಲಾಗಿತ್ತು. 'ನಮ್ಮ ಲಚ್ಚಿ'ಯಿಂದ ಹೊರ ಬಂದ ಕೆಲವೇ ದಿನಗಳಲ್ಲೇ ಜೀ ಕನ್ನಡದ ಹೊಸ ಧಾರಾವಾಹಿ 'ಅಮೃತಧಾರೆ'ಯಲ್ಲಿ ಪ್ರತ್ಯಕ್ಷ ಆಗಿದ್ದಾರೆ.

ಮಹಿಮಾ ಆಗಿ ಕಿರುತೆರೆಗೆ ಎಂಟ್ರಿ

'ನಮ್ಮ ಲಚ್ಚಿ' ಧಾರಾವಾಹಿಯ ದೀಪಿಕಾ ಪಾತ್ರಕ್ಕೆ ವಿದಾಯ ಹೇಳಿದ್ದ ಸಾರಾ ಅಣ್ಣಯ್ಯ ಇದೀಗ ಮತ್ತೆ ಕಿರುತೆರೆಗೆ ಮರಳಿದ್ದಾರೆ. ಹೌದು, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ಹೊಚ್ಚ ಹೊಸ ಧಾರಾವಾಹಿ 'ಅಮೃತಧಾರೆ'ಯಲ್ಲಿ ಮಹಿಮಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ನಟಿ ಸಾರಾ ಅಣ್ಣಯ್ಯ.

ಹಠಮಾರಿ ಹೆಣ್ಣು ಮಹಿಮಾ

'ಅಮೃತಧಾರೆ' ಧಾರಾವಾಹಿಯಲ್ಲಿ ನಾಯಕ ಗೌತಮ ದಿವಾನ್ ಅವರ ಮುದ್ದಿನ ತಂಗಿ ಮಹಿಮಾ ಪಾತ್ರದಲ್ಲಿ ಸಾರಾ ನಟಿಸಲಿದ್ದಾರೆ. ಫ್ಯಾಷನ್ ಡಿಸೈನಿಂಗ್ ಲೋಕದ ಕ್ವೀನ್ ಆಗಿರುವ ಮಹಿಮಾಗೆ ಬಯಸಿದ್ದೆಲ್ಲಾ ತನಗೆ ಸಿಗಬೇಕು ಎಂಬ ಹುಚ್ಚು ಹಠ. ಮಹಿಮಾ ಮನಸ್ಸಿನಲ್ಲಿ ಈಗಾಗಲೇ ಹುಚ್ಚು ಪ್ರೀತಿಯೊಂದು ಮೂಡಿದ್ದು ಅವಳ ಹಠದಿಂದ ಆ ಪ್ರೀತಿಯನ್ನು ಗೆಲ್ಲುವುದಕ್ಕೆ ಆಗುತ್ತಾ ಎಂದು ಮುಂದಿನ ದಿನಗಳಲ್ಲಿ ತಿಳಿಯಬೇಕಿದೆ.

After quiting Namma Lacchi Sara Annaiah enterd Ambruthadare serial as fashion designer Mahima

ವರೂಧಿನಿಯಾಗಿ ಫೇಮಸ್ಸು!

'ಕನ್ನಡತಿ' ಧಾರಾವಾಹಿಯಲ್ಲಿ ವೆಡ್ಡಿಂಗ್ ಪ್ಲಾನರ್ ವರೂಧಿನಿ ಆಗಿ ಆಗಿ ಅಭಿನಯಿಸಿದ್ದ ಸಾರಾ ಅಣ್ಣಯ್ಯ ಮೊದಲ ಧಾರಾವಾಹಿಯಲ್ಲಿಯೇ ವೀಕ್ಷಕರ ಮನ ಸೆಳೆದ ಬೆಡಗಿ. ಮೊದಲ ಧಾರಾವಾಹಿಯಲ್ಲಿ ಪಾಸಿಟಿವ್ ಜೊತೆಗೆ ನೆಗೆಟಿವ್ ಶೇಡ್ ಇರುವ ವರೂಧಿನಿ ಪಾತ್ರಕ್ಕೆ ಜೀವ ತುಂಬಿ ಯಶಸ್ವಿಯಾಗಿದ್ದ ಸಾರಾ ಅಣ್ಣಯ್ಯ ಬಣ್ಣದ ಬದುಕಿಗೆ ಮುನ್ನುಡಿ ಬರೆದಿದ್ದು ಮಾಡೆಲಿಂಗ್ ಕ್ಷೇತ್ರದಲ್ಲಿ. ಬಳಿಕ ನೆಗೆಟಿವ್ ಶೇಡ್‌ಗಳಿರುವ ಧಾರಾವಾಹಿಗಳಲ್ಲೇ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ.

ಸಿನಿಮಾದಲ್ಲೇ ಮೊದಲು ನಟನೆ

ಮಾಡೆಲ್ ಆಗಿ ಬಣ್ಣದ ಜಗತ್ತಿನ ನಂಟು ಬೆಳೆಸಿಕೊಂಡ ಸಾರಾ ಅಣ್ಣಯ್ಯ ಮುಂದೆ 'ನಮ್ಮೂರ ಹೈಕ್ಳು' ಸಿನಿಮಾದ ಮೂಲಕ ನಟನಾ ಕ್ಷೇತ್ರಕ್ಕೆ ಪಾದದ ಮಾಡಿದರು. ನಂತರ ಜೀ 5 ನಲ್ಲಿ ರಿಲೀಸ್ ಆದ ತಮಿಳು ಭಾಷೆಯ ವೆಬ್ ಸಿರೀಸ್ 'ಪಬ್ ಗೋವಾ' ದಲ್ಲಿ ಈಕೆ ಅಭಿನಯಿಸಿದರು. ತಮಿಳು ಧಾರಾವಾಹಿ 'ಮಲರ್'ನಲ್ಲಿ ನಟಿಸಿರುವ ಈಕೆ 'ಕನ್ನಡತಿ'ಯ ವರೂಧಿನಿ ಆಗಿ ಕನ್ನಡ ಕಿರುತೆರೆಗೆ ಪರಿಚಿತರಾದರು. ಇದೀಗ ಮಹಿಮಾ ಆಗಿ ಕಿರುತೆರೆಗೆ ಕಾಲಿಡಲಿರುವ ಸಾರಾ ಅಣ್ಣಯ್ಯ ವೀಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗುತ್ತಾರಾ ಕುತೂಹಲವಿದೆ.

More from Filmibeat

English summary
After quiting Namma Lacchi Sara Annaiah enter Amruthadhare serial as fashion designer Mahima,know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X