ಜೈಲಿನಿಂದ ರಜತ್ ಮತ್ತು ವಿನಯ್ ಬಿಡುಗಡೆಯಾದ ಬೆನ್ನಲ್ಲೇ ಮತ್ತೊಬ್ಬ ಬಿಗ್ ಬಾಸ್ ಸ್ಫರ್ಧಿಯನ್ನು ಬಂಧಿಸಿದ ಪೊಲೀಸರು !

ಬಿಗ್ ಬಾಸ್‌ ಮನೆಗೆ ಹೋಗಿ ಬಂದ ಬಹುತೇಕರು ದೇಶ ಗೆದ್ದು ಬಂದವರಂತೆ ಬೀಗುತ್ತಾರೆ. ತಲೆ ನಿಲ್ಲದವರಂತೆ ವರ್ತಿಸುತ್ತಾರೆ. ಒಂದಷ್ಟು ಜನಪ್ರಿಯತೆ, ಕೈ ತುಂಬಾ ಕಾಸು ಸಿಕ್ಕ ತಕ್ಷಣ ಮೈ ಮರೆಯುತ್ತಾರೆ. ಮಾಡಬಾರದ್ದನ್ನೆಲ್ಲ ಮಾಡುತ್ತಾರೆ. ಕೆಲವೊಮ್ಮೆ ಜೈಲಿನ ದರ್ಶನವನ್ನು ಕೂಡ ಮಾಡುತ್ತಾರೆ. ಇದಕ್ಕೆ ಮೊನ್ನೆ ಮೊನ್ನೆ ಕನ್ನಡದಲ್ಲಿ ನಡೆದ ಲಾಂಗ್ ರೀಲ್ಸ್ ವಿವಾದ ಅತ್ಯುತ್ತಮ ಉದಾಹರಣೆ.

ರೀಲ್ಸ್ ಮಾಡಿದ ತಪ್ಪಿಗೆ ರಜತ್ ಮತ್ತು ವಿನಯ್ ಗೌಡ ಒಂದು ದಿನದ ಮಟ್ಟಿಗೆ ಆದರೂ ಪರಪ್ಪನ ಅಗ್ರಹಾರಕ್ಕೆ ಹೋಗಿ ಬರುವಂತೆ ಆಯ್ತು. ಸದ್ಯ ಈ ರೀಲ್ಸ್ ವಿವಾದ ತಣ್ಣಗಾಗಿದೆ. ರಜತ್ ಮತ್ತು ವಿನಯ್ ಅವರ ಅವರ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಈಗ ಮತ್ತೊಬ್ಬ ಬಿಗ್ ಬಾಸ್ ಸ್ಫರ್ಧಿ ಪೊಲೀಸರ ಅತಿಥಿಯಾಗಿದ್ದಾರೆ.

After Rajat and Vinay s release another Bigg Boss contestant was arrested over a parking dispute

ಹೌದು, ತರ್ಷನ್.. ಪಕ್ಕದ ತಮಿಳುನಾಡಿನ ಉದಯೋನ್ಮುಖ ನಟ. ಮಾಡೆಲಿಂಗ್ ಮೂಲಕ ಚಿತ್ರರಂಗದ ಗಮನ ಸೆಳೆದ ತರ್ಷನ್ ತಮಿಳಿನ ಬಿಗ್ ಬಾಸ್ ಸೀಸನ್ 3ರ ಸ್ಫರ್ಧಿ ಕೂಡ ಹೌದು. ಬಿಗ್ ಬಾಸ್ ಕಾರ್ಯಕ್ರಮದ ಮೂಲಕ ತಮಿಳುನಾಡಿನ ಮನೆ ಮತ್ತು ಮನಗಳನ್ನು ತಲುಪುವ ಪ್ರಯತ್ನ ಮಾಡಿದ್ದ ತರ್ಷನ್ ಆ ನಂತರ ಗೂಗಲ್ ಕುಟ್ಟಪ್ಪ ಎಂಬ ಚಿತ್ರದಲ್ಲಿ ಕೂಡ ಕಾಣಿಸಿಕೊಂಡರು.

ಇಂಥಾ ತರ್ಷನ್ ಅವರನ್ನು ಈಗ ಚೆನ್ನೈನ ಜೆಜೆ ನಗರದ ಪೊಲೀಸರು ಬಂಧಿಸಿದ್ದಾರೆ. ತರ್ಷನ್ ವಿರುದ್ಧ ದಾಖಲಾದ ದೂರಿನ ಪ್ರಕಾರ ಕಾರು ಪಾರ್ಕಿಂಗ್ ವಿಚಾರಕ್ಕೆ ತರ್ಷನ್ ಮದ್ರಾಸ್ ಹೈಕೋರ್ಟ್ ನ ನಿವೃತ್ತ ನ್ಯಾಯಾಧೀಶರ ಮಗನ ಜೊತೆ ಕಿರಿಕ್ ಮಾಡಿಕೊಂಡಿದ್ದಾರೆ. ಮಾತಿಗೆ ಮಾತು ಬೆಳೆದು ಇಬ್ಬರ ನಡುವೆ ಜಗಳ ನಡೆದಿದೆ. ಈ ಸಮಯದಲ್ಲಿ ತರ್ಶನ್ ನಿವೃತ್ತ ನ್ಯಾಯಾಧೀಶರ ಮಗ, ಮಗನ ಪತ್ನಿ ಮತ್ತು ಮಗನ ಅತ್ತೆಯ ಮೇಲೆ ಹಲ್ಲೆಯನ್ನು ಮಾಡಿದ್ದಾರೆ.

ಸದ್ಯ ತರ್ಷನ್ ವಿರುದ್ಧ ಭಾರತೀಯ ದಂಡ ಸಂಹಿತೆಯ ನಾನಾ ಸೆಕ್ಷನ್‌ನಡಿ ದೂರನ್ನು ದಾಖಲಿಸಿಕೊಂಡಿರುವ ಪೊಲೀಸರು ತರ್ಷನ್ ಮತ್ತು ಅವರ ಸ್ನೇಹಿತರನ್ನು ಅರೆಸ್ಟ್ ಮಾಡಿದ್ದಾರೆ. ಇನ್ನು ತರ್ಷನ್ ಕೂಡ ಪ್ರತಿದೂರನ್ನು ದಾಖಲಿಸಿದ್ದು ಇಬ್ಬರ ನಡುವೆ ವಾಗ್ವಾದ ನಡೆಯುತ್ತಿದ್ದ ಸಮಯದಲ್ಲಿ ನ್ಯಾಯಾಧೀಶರ ಮಗ, ಅವರ ಪತ್ನಿ ಮತ್ತು ಅತ್ತೆ ಅವಾಚ್ಯ ಮತ್ತು ಅಶ್ಲೀಲ ಪದಗಳಿಂದ ನಿಂದಿಸಿ ದ್ದಾರೆ ಎಂದು ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಆದರೆ, ಪೊಲೀಸರು ತರ್ಷನ್ ದೂರನ್ನು ದಾಖಲಿಸಿಕೊಂಡಿದ್ದಾರೆ ಅಷ್ಟೇ. ನ್ಯಾಯಾಧೀಶರ ಮಗನ ಮೇಲೆ ಯಾವುದೇ ಕ್ರಮವನ್ನು ಇನ್ನು ಕೈಗೊಂಡಿಲ್ಲ.

More from Filmibeat

Read more about: arrest bigg boss filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X