ಐವಿಎಫ್ ಮೂಲಕ ಮಗು ಪಡೆದಿದ್ದ ನಟಿಯ ಬದುಕಿನಲ್ಲಿ ಬಿರುಗಾಳಿ, 15 ವರ್ಷದ ದಾಂಪತ್ಯ ಅಂತ್ಯ ?

ಒಬ್ಬರನ್ನೊಬ್ಬರು ಎಷ್ಟೇ ಪ್ರೀತಿ ಮಾಡಿದರು, ಗೌರವಿಸಿದರೂ ಕೂಡ ಮದುವೆಯ ನಂತರ ಕೆಲವೊಮ್ಮೆ ಪರಿಸ್ಥಿತಿ ಬಿಗಡಾಯಿಸಿ ಬಿಡುತ್ತದೆ. ಇದಕ್ಕೆ ಕಾರಣ ಪ್ರತಿಯೊಬ್ಬರ ಮನಸಿನಲ್ಲಿಯೂ ವೈವಾಹಿಕ ಜೀವನದ ಬಗ್ಗೆ ವಿಭಿನ್ನವಾದ ಸಿದ್ದ ಮಾದರಿಯ ಟೆಂಪ್ಲೇಟ್ ಕೂತಿರುವುದು. ಹೀಗಾಗಿ ವೈವಾಹಿಕ ಸಂಬಂಧಗಳ ತಂತಿಗಳು ಬಹಳ ಸೂಕ್ಷ್ಮ, ನಿರ್ವಹಿಸುವುದು ತುಂಬಾ ಕಷ್ಟ ಎಂದುಕೊಂಡು ಅನೇಕರು ಸಂಬಂಧಗಳನ್ನು ಕಡೆದುಕೊಳ್ಳುತ್ತಾರೆ. ವಿಚ್ಛೇದನ ಪಡೆದು ಅವರ ಅವರ ಬದುಕು ಬದುಕಲು ಶುರು ಮಾಡುತ್ತಾರೆ.

ಗಂಡ-ಹೆಂಡ್ತಿಯ ಈ ಸಂಬಂಧ ಮದ್ವೆಯಾಗಿ ಒಂದೇ ವರ್ಷಕ್ಕೆ ಮುರಿದು ಬೀಳಬಹುದು, ಐದು ವರ್ಷಕ್ಕೂ ಮುರಿದು ಬೀಳಬಹುದು, ಹತ್ತು, ಇಪ್ಪತ್ತು, ಮೂವತ್ತು ವರ್ಷ ಆದ ಮೇಲೆ ಕೂಡ ಮುರಿದು ಬೀಳಬಹುದು. ಇದಕ್ಕೆ ಮಹಿ ವಿಜ್ ಮತ್ತು ಜೈ ಭಾನುಶಾಲಿ ಅವರ ದಾಂಪತ್ಯ ಬದುಕು ಮತ್ತೊಂದು ಉದಾಹರಣೆ.

After the IVF Struggle and Adoption Jay Bhanushali amp amp Mahhi Vij s 15-Year Marriage Hits DIVORCE

ಹೌದು, ಮಹಿ ವಿಜ್ ಮತ್ತು ಜೈ ಭಾನುಶಾಲಿ.. ಹಿಂದಿ ಕಿರುತೆರೆಯ ಪ್ರಖ್ಯಾತ ಹೆಸರುಗಳು. ''ಲಾಗಿ ತುಜಸೇ ಲಗನ್''.. ''ಬಾಲಿಕಾ ವಧು''.. ಧಾರಾವಾಹಿಗಳ ಮೂಲಕ ಜನ ಮನ ಗೆದ್ದ ಮಹಿ ವಿಜ್, ''ನಚ್ ಬಲಿಯೇ ಸೀಸನ್ 5''ರ ವಿನ್ನರ್ ಕೂಡ ಹೌದು. ''ಜಲಕ್ ದಿಖಲಾ ಜಾ''.. ''ಖತ್ರೋನ್ ಕೆ ಖಿಲಾಡಿ'' ಅಂತಹ ರಿಯಾಲಿಟಿ ಶೋನಲ್ಲಿ ಕೂಡ ಇವರು ಕಾಣಿಸಿಕೊಂಡಿದ್ದಾರೆ.

ಇನ್ನು ಜೈ ಭಾನುಶಾಲಿ ಹಿಂದಿ ಕಿರುತೆರೆಯ ಖ್ಯಾತ ನಿರೂಪಕ. ''ಡ್ಯಾನ್ಸ್ ಇಂಡಿಯಾ ಡ್ಯಾನ್ಸ್-ಸೂಪರ್ ಮಾಮ್ಸ್''.. ''ಡ್ಯಾನ್ಸ್ ಇಂಡಿಯಾ ಡ್ಯಾನ್ಸ್- ಲಿಟಲ್ ಮಾಸ್ಟರ್ಸ್‌''.. ''ಸರೆಗಮಪ-2012''.. ''ಇಂಡಿಯಾಸ್ ಬೆಸ್ಟ್ ಡ್ಯಾನ್ಸರ್ ಸೀಸನ್ 3''.. ಇವರ ನಿರೂಪಣೆಯ ಕೆಲ ಜನಪ್ರಿಯ ಕಾರ್ಯಕ್ರಮಗಳು.

''ಹಮ್ ರಹೇ ನಾ ರಹೇ ಹಮ್'' .. ''ಗೀತ್-ಹುಯಿ ಸಬ್‌ಸೇ ಪರಾಯಿ'' .. ಧಾರಾವಾಹಿಯಲ್ಲಿ ಕೂಡ ಅಭಿನಯಿಸಿರುವ ಜೈ ಭಾನುಶಾಲಿ ''ಹೇಟ್ ಸ್ಟೋರಿ 2'' ಚಿತ್ರದಲ್ಲಿ ಕೂಡ ಅಭಿನಯಿಸಿದ್ದಾರೆ.

ಇಂಥಾ ಮಹಿ ವಿಜ್ ಮತ್ತು ಜೈ ಭಾನುಶಾಲಿ ಇಬ್ಬರು ಪರಸ್ಪರ ಪ್ರೀತಿಸಿ 2010-11ರಲ್ಲಿ ಮದುವೆಯಾಗಿದ್ದರು. ತಮ್ಮ ಕೆಲವೇ ಕೆಲ ಅತ್ಯಾಪ್ತ ಸ್ನೇಹಿತರು ಮತ್ತು ಮನೆಯ ಸದಸ್ಯರ ಎದುರು ಸಪ್ತಪದಿ ತುಳಿದಿದ್ದರು. ಅಲ್ಲಿಂದ ಇಲ್ಲಿಯವರೆಗೆ ಅಂದರೆ ಕಳೆದ ವರ್ಷದವರೆಗೆ ಖುಷಿ ಖುಷಿಯಾಗಿಯೇ ಕಾಲ ಕಳೆದ ಇಬ್ಬರು ತಮ್ಮ ಮನೆ ಕೆಲಸದವರ ಇಬ್ಬರು ಮಕ್ಕಳನ್ನು 2017ರಲ್ಲಿ ದತ್ತು ಪಡೆದಿದ್ದರು. ಆ ಮಕ್ಕಳಿಗೆ ರಾಜ್ ವೀರ್ ಮತ್ತು ಖುಷಿ ಎಂದು ನಾಮಕರಣ ಮಾಡಿದರು. ತಮ್ಮ ಮಕ್ಕಳಷ್ಟೇ ಪ್ರೀತಿಯನ್ನು ನೀಡಿದರು.

After the IVF Struggle and Adoption Jay Bhanushali amp amp Mahhi Vij s 15-Year Marriage Hits DIVORCE

ಇನ್ನೂ ತಮ್ಮ ಪ್ರೀತಿಯ ಸಂಕೇತವಾಗಿ ಮಗು ಮಾಡಿಕೊಳ್ಳಲು ಇಬ್ಬರು ಪ್ರಯತ್ನ ಮಾಡಿದರು ಕೂಡ ಅದು ಸಾಧ್ಯವಾಗಲಿಲ್ಲ. ಹೀಗಾಗಿ ಇಬ್ಬರು ಎರಡು ಬಾರಿ ಐವಿಎಫ್ ತಂತ್ರಜ್ಞಾನದ ಮೊರೆ ಹೋಗಿದ್ದರು. ಆದರೆ ಎರಡು ಬಾರಿ ಕೂಡ ಮಹಿ ಅವರಿಗೆ ಗರ್ಭಪಾತವಾಯ್ತು. ಆ ನಂತರ ಮತ್ತೊಮ್ಮೆ ಐವಿಎಫ್ ಮೂಲಕ ಪ್ರಯತ್ನ ಮಾಡಿದ ಇಬ್ಬರು 2019ರಲ್ಲಿ ಮನೆಗೆ ಮಗಳನ್ನು ಬರ ಮಾಡಿಕೊಂಡರು. ಮುದ್ದಾದ ಮಗಳಿಗೆ ತಾರಾ ಎಂದು ಹೆಸರಿಟ್ಟರು.

ಹೀಗೆ ಬದುಕಿನ ಏರಿಳಿತವನ್ನು ಕಳೆದ 14-15ವರ್ಷಗಳಿಂದ ನೋಡಿರುವ, ಕಷ್ಟಕಾಲದಲ್ಲಿ ಒಬ್ಬರಿಗೆ ಒಬ್ಬರು ಹೆಗಲಾಗುತ್ತಾ ಬಂದ ಈ ಇಬ್ಬರು ಇದೀಗ ದೂರವಾಗುವ ನಿರ್ಧಾರ ಮಾಡಿದ್ದಾರೆ. ಇದಕ್ಕೆ ಕೈಗನ್ನಡಿ ಎಂಬಂತೆ ಈ ವರ್ಷದ ಜುಲೈ-ಅಗಸ್ಟ್‌ನಲ್ಲಿ ಇಬ್ಬರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು ಎಂದು ''ಹಿಂದೂಸ್ತಾನ್ ಟೈಮ್ಸ್'' ವರದಿ ಮಾಡಿದೆ. ಇವರ ಡಿವೋರ್ಸ್‌ ಪೇಪರ್‌ ಮೇಲೆ ಅಧಿಕೃತ ಮುದ್ರೆ ಕೂಡ ಬಿದ್ದಿದೆ ಎಂದು ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

After the IVF Struggle and Adoption Jay Bhanushali amp amp Mahhi Vij s 15-Year Marriage Hits DIVORCE

ಇನ್ನೂ ಮೊದಲೆಲ್ಲಾ ಜೊತೆಯಲ್ಲಿ ರೀಲ್ಸ್‌ಗಳನ್ನು ಮಾಡುತ್ತಿದ್ದ, ತಮ್ಮ ಬದುಕಿನ ಸುಂದರ ಕ್ಷಣಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದ ಇಬ್ಬರು, ಕಳೆದೊಂದು ವರ್ಷದಿಂದ ಜೊತೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿಲ್ಲ. ಕಳೆದ ವರ್ಷ ಆಗಸ್ಟ್‌ನಲ್ಲಿ ತಮ್ಮ ಮಗಳ ಹುಟ್ಟುಹಬ್ಬವನ್ನು ಜೊತೆಯಲ್ಲಿ ಇಬ್ಬರು ಆಚರಿಸಿದ್ದೇ ಕೊನೆ. ಆ ನಂತರ ಯಾವ ಸಭೆ-ಸಮಾರಂಭಗಳಲ್ಲಿ ಕೂಡ ಇಬ್ಬರು ಮುಖಾಮುಖಿಯಾಗಿಲ್ಲ. ಇಬ್ಬರ ದಾಂಪತ್ಯ ಬದುಕು ಹಳಿ ತಪ್ಪಿದೆ ಎನ್ನುವ ಅನುಮಾನ ಹಲವರಿಗೆ ಬರಲು ಇದು ಕೂಡ ಕಾರಣ.

ಅಂದ್ಹಾಗೇ ತೀರಾ ಇತ್ತೀಚೆಗಷ್ಟೇ ''ಹೌಟರ್‌ಫ್ಲೈ''ಗೆ ಮಹಿ ವಿಜ್ ಸಂದರ್ಶನ ನೀಡಿದ್ದರು. ಈ ಸಂದರ್ಶನದಲ್ಲಿ ವಿಚ್ಛೇದನದ ಕುರಿತು ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಕೆರಳಿ ಕೆಂಡವಾಗಿದ್ದ ಮಹಿ ನಮ್ಮ ಡಿವೋರ್ಸ್ ಆಗಿದ್ದರೂ ಕೂಡ ನಾನು ಆ ವಿಷಯವನ್ನು ನಿಮಗ್ಯಾಕೆ ಹೇಳಬೇಕು..? ಎಂದು ಪ್ರಶ್ನೆ ಮಾಡಿದ್ದರು. ನೀವೇನು ನನ್ನ ಮಾವನಾ..? ನನ್ನ ವಕೀಲರಿಗೆ ನಾನು ಕೊಡಬೇಕಾದ ದುಡ್ಡು ನೀವೇನಾದರೂ ಕೊಡ್ತೀರಾ ? ಎಂದು ಕೆಂಡ ಕಾರಿದ್ದರು.ನಿಮಗೆ ಸತ್ಯಾಂಶವೇನು ಅಂತಾ ಗೊತ್ತಾ..? ನಿಮಗೆ ಏನು ಗೊತ್ತು? ಎಂದು ಪ್ರಶ್ನೆ ಮಾಡಿದ್ದರು.

ಇನ್ನುಳಿದಂತೆ ಜೈ ಭಾನುಶಾಲಿ ಅವರಿಗಿಂತ ಮಹಿ ವಿಜ್ ಮೂರು ವರ್ಷ ದೊಡ್ಡವರು. ಸದ್ಯ ಇಬ್ಬರ ವಿಚ್ಛೇದನದ ಕುರಿತು ಮಾಯಾನಗರಿ ಮುಂಬೈನಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಮಾಹಿ ವಿಜ್ ಮತ್ತು ಜೈ ಭಾನುಶಾಲಿ ಮೌನ ಮುರಿಯುತ್ತಾರಾ..? ಉತ್ತರ ಕೊಡುತ್ತಾರಾ..? ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

English summary
Jay Bhanushali & Mahhi Vij are getting a divorce, shocking fans. The couple faced a long IVF struggle to have Tara & adopted two kids. Read the latest reports.
Read more about: divorce marriage ಟಿವಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X