ಕಿರುತೆರೆ ನಟಿಯರ ನಿಶ್ಚಿತಾರ್ಥ; ವೈಷ್ಣವಿ ಗೌಡ ಬಳಿಕ ನಟಿ ಸುಪ್ರೀತಾ ಸತ್ಯನಾರಾಯಣ ನಿಶ್ವಿತಾರ್ಥ
'ಸೀತಾ ವಲ್ಲಭ' ಧಾರಾವಾಹಿ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಪರಿಚಯವಾಗಿದ್ದರು ನಟಿ ಸುಪ್ರೀತಾ ಸತ್ಯನಾರಾಯಣ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸೀತಾ ವಲ್ಲಭ' ಧಾರಾವಾಹಿ ಕಿರುತೆರೆ ಪ್ರೇಕ್ಷಕರ ನೆಚ್ಚಿನ ಧಾರಾವಾಹಿಯಾಗಿತ್ತು. ನಟಿ ಸುಪ್ರೀತಾ ಸತ್ಯನಾರಾಯಣ್ ಈ ಧಾರಾವಾಹಿಯಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದರು. ಕಿರುತೆರೆಯ ಖ್ಯಾತ ನಟ ಜಗನ್ ನಾಯಕ ನಟನಾಗಿ ಮಿಂಚಿದ್ದರು.
ಶ್ರೀಮಂತ ಬಿಸಿನೆಸ್ ಮ್ಯಾನ್ ಅವರ ಮಗ ಅಚ್ಚು, ಅನಾಥೆ ಗುಬ್ಬಿಯೊಂದಿಗೆ ಪ್ರೀತಿಗೆ ಬೀಳುವ ಕಥೆ ಇದಾಗಿತ್ತು. 2018 ರಿಂದ 2020 ರವರೆಗೂ ಈ ಧಾರಾವಾಹಿ ಬಹಳ ಉನ್ನತವಾಗಿಯೇ ಜನಮನ ರಂಜಿಸಿತ್ತು. ಇದರಲ್ಲಿ ಗುಬ್ಬಿ ಅಲಿಯಾಸ್ ಮೈಥಿಲಿ ಪಾತ್ರವನ್ನು ನಟಿ ಸುಪ್ರೀತಾ ಸತ್ಯನಾರಾಯಣ ಬಹಳ ಅಚ್ಚುಕಟ್ಟಾಗಿ ನಿಭಾಯಿಸಿ ಶ್ಲಾಘನೆಗೆ ಒಳಗಾಗಿದ್ದರು.

'ಸೀತಾವಲ್ಲಭ' ಧಾರಾವಾಹಿ ನಂತರ ಕಿರುತೆರೆ ನಟನೆಯಿಂದ ದೂರವೇ ಉಳಿದಿರುವ ನಟಿ ಸುಪ್ರೀತಾ ಸತ್ಯನಾರಾಯಣ್, ಇದೀಗ ಮತ್ತೆ ಸುದ್ದಿಯಾಗಿದ್ದಾರೆ. ಹೌದು, ಸೋಶಿಯಲ್ ಮೀಡಿಯಾದಲ್ಲಿ ಬಹಳ ಆ್ಯಕ್ಟೀವ್ ಇರುವ ನಟಿ ಸುಪ್ರೀತಾ ಸತ್ಯನಾರಾಯಣ್ ಇದೀಗ ತಮ್ಮ ಇನ್‌ಸ್ಟಾಗ್ರಾಂ ಅಕೌಂಟ್‌ನಲ್ಲಿ ಒಂದು ಹೊಸ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ.
ಇದೀಗ ಕಿರುತೆರೆ ಪ್ರೇಕ್ಷಕರ ನೆಚ್ಚಿನ ನಟಿಯಾಗಿದ್ದ ಸುಪ್ರೀತಾ ಸತ್ಯನಾರಾಯಣ್ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರಂತೆ. ಹೌದು, ಚಂದನ್ ಶೆಟ್ಟಿ ಎಂಬುವವರನ್ನು ವರಿಸಲಿರುವ ಸುಪ್ರೀತಾ ನಾರಾಯಣ್ ಇತ್ತೀಚೆಗಷ್ಟೇ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಇದೇ ಮಾರ್ಚ್ 12ರಂದು ಸುಪ್ರೀತಾ ಸತ್ಯನಾರಾಯಣ ಹಾಗೂ ಚಂದನ್ ಶೆಟ್ಟಿ ಎಂಗೇಜ್‌ಮೆಂಟ್ ಆಗಿದ್ದು ಸದ್ಯದಲ್ಲೇ ಮದುವೆಯೂ ಆಗಲಿದೆ.

ಮುದ್ದು ಮೊಗದ ಹುಡುಗಿ ಸುಪ್ರೀತಾ ಸತ್ಯನಾರಾಯಣ್ ಅವರನ್ನು ವರಿಸುವ ಈ ಚಂದನ್ ಶೆಟ್ಟಿ ಯಾರು ಎಂಬ ಕುತೂಹಲ ನೆಟ್ಟಿಗರಲ್ಲಿ ಮೂಡಿದೆ. ಚಂದನ್ ಶೆಟ್ಟಿ ಅವರು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಡಿಜಿಟಲ್ ಕ್ರಿಯೇಟರ್ ಹಾಗೂ ಸಾಫ್ಟ್‌ವೇರ್ ಉದ್ಯೋಗಿ ಎಂದು ಬರೆದುಕೊಂಡಿದ್ದಾರೆ.
ಎಂಗೇಜ್ಮೆಂಟ್ ಆಗಿರುವ ಪ್ರಯುಕ್ತ ತಮ್ಮ ಭಾವಿ ಪತಿಯ ಬಗ್ಗೆ ಬಹಳ ನಟಿ ಸುಪ್ರೀತಾ ಸತ್ಯನಾರಾಯಣ್ ತಮ್ಮ ಇನ್‌ಸ್ಟಾಗ್ರಾಂ ಅಕೌಂಟ್‌ನಲ್ಲಿ ಬಹಳ ರೋಮ್ಯಾಂಟಿಕ್ ಆಗಿ ಬರೆದುಕೊಂಡಿದ್ದಾರೆ. "ಹೊಸ ಅಧ್ಯಾಯವೊಂದು ಆರಂಭವಾಗುತ್ತಿದೆ. ನಿನ್ನ ಧ್ವನಿ ಕೇಳಿದಾಗ ಮೊದಲನೆಯ 'ಹೆಲೋ' ಎಂದಾಗ ಪ್ರೀತಿ ಆಯ್ತು ಅಂತ ಹೇಳುವುದರಿಂದ ಪ್ರಾರಂಭಿಸಲೇ..? ನಿನ್ನ ನಗು, ನನ್ನ ಮಧುರ ನಗು, ಅದನ್ನು ನೋಡುವುದಕ್ಕೆ ನಾನು ಏನೇ ಮಾಡಿದರೂ ಸರಿ" ಎಂದು ಸುಪ್ರೀತಾ ಸತ್ಯನಾರಾಯಣ್ ಬರೆದುಕೊಂಡಿದ್ದಾರೆ.
"ನಾನು ದೇವರಲ್ಲಿ ಸಂತೋಷಕ್ಕಾಗಿ ಪ್ರಾರ್ಥಿಸಿದಾಗ, ನೀನು ನನಗೆ ಆಶೀರ್ವಾದವಾಗಿ ಬಂದೆ. ನನ್ನ ಜೀವನಕ್ಕೆ ಬಂದು, ನಿಜವಾದ ಪ್ರೀತಿಯ ಅರ್ಥವನ್ನು ತೋರಿಸಿ, ನನ್ನ ಜೀವನವನ್ನು ಅತೀ ಸುಂದರ ಯಾತ್ರೆಯನ್ನಾಗಿ ಮಾಡಿದಕ್ಕಾಗಿ ಧನ್ಯವಾದಗಳು" ಎಂದು ಸುಪ್ರೀತಾ ಸತ್ಯನಾರಾಯಣ್ ಹೇಳಿದ್ದಾರೆ.
"ನಾನು ನಿನಗೆ ಶಾಂತಿ, ನಗು, ಸಂತೋಷ ಎಂದು ವಾಗ್ದಾನ ನೀಡುತ್ತೇನೆ. ಜೀವನದ ಎಲ್ಲ ಋತುಗಳಲ್ಲಿಯೂ ನಿನ್ನ ಜೊತೆ ನಿಲ್ಲುತ್ತೇನೆ, ಪ್ರತಿಯೊಂದು ಸಣ್ಣ ಕ್ಷಣವನ್ನೂ ನಿನ್ನ ಜೊತೆ ಆಚರಿಸುತ್ತೇನೆ. ಪ್ರತಿಯೊಂದು ದಿನ, ಪ್ರತಿಯೊಂದು ಜನ್ಮದಲ್ಲೂ, ಪ್ರತಿಯೊಂದು ಸಾಧ್ಯವಾದ ದಾರಿಯಲ್ಲಿ ನಿನ್ನನ್ನು ಆರಿಸುತ್ತೇನೆ ಎಂದು ಮಾತು ನೀಡುತೇನೆ" ಎಂದು ಸುಪ್ರೀತಾ ಸತ್ಯನಾರಾಯಣ್ ತಮ್ಮ ಇನ್‌ಸ್ಟಾಗ್ರಾಂ ಅಕೌಂಟ್‌ನಲ್ಲಿ ಪೋಸ್ಟ್ ಹಾಕಿದ್ದಾರೆ.
"ನಾನು ನಿನ್ನನ್ನು ಪ್ರೀತಿಸುತ್ತೇನೆ ಕಂದ, ನಿನ್ನ ಮಡಿಲಲ್ಲಿ ನಾನು ನನ್ನ ಮನೆ ಕಂಡೆ ಮತ್ತು ನನ್ನ ಹೃದಯ ಸದಾ ನಿನಗೆ ಸೇರಿದೆ.. ತಾಯಿ ತಂದೆ ಎಲ್ಲ ನೀನೆ, ಯಾಕೆ ಬೇರೆ ನಂಟು.." ಎಂದು ಸುಪ್ರೀತಾ ಹೇಳಿದ್ದಾರೆ. ಹೀಗೆ ಬರೆದುಕೊಳ್ಳುವುದರ ಜೊತೆಗೆ ತಮ್ಮ ಎಂಗೇಜ್ಮೆಂಟ್ ಹಾಗೂ ಭಾವಿ ಗಂಡನ ಜೊತೆಗಿನ ಒಂದಷ್ಟು ಫೋಟೋಗಳನ್ನು ಶೇರ್ ಮಾಡಿದ್ದಾರೆ. ಇವರ ಮದುವೆ ದಿನಾಂಕ ಇನ್ನೂ ಹೊರ ಬಿದ್ದಿಲ್ಲವಾದರೂ ನೆಟ್ಟಿಗರು ಹಾಗೂ ಅಭಿಮಾನಿಗಳು ಬಹಳಷ್ಟು ಕುತೂಹಲ ತೋರಿಸಿದ್ದಾರೆ. ಜೊತೆಗೆ ನಟಿ ಸುಪ್ರೀತಾ ಸತ್ಯನಾರಾಯಣ್ ಮತ್ತೆ ಕಿರುತೆರೆಗೆ ಬರುತ್ತಾರೆ ಎಂಬ ಪ್ರಶ್ನೆಗಳು ಹಲವು ಮೂಡಿವೆ.


Click it and Unblock the Notifications











