ವೇದಾಂತ್ - ಅಮೂಲ್ಯ ಟ್ರೆಂಡ್ ಹೋಯ್ತು.. ಶಿವು - ಪಾರು ಟ್ರೆಂಡ್ ಶುರುವಾಯ್ತು..!
ಜೀ ಕನ್ನಡದಲ್ಲಿ 'ಗಟ್ಟಿಮೇಳ ಧಾರಾವಾಹಿ ಹಲವು ವರ್ಷಗಳ ಕಾಲ ಮನರಂಜನೆ ನೀಡಿತ್ತು. ಆ ಧಾರಾವಾಹಿಯಲ್ಲಿ ರೌಡಿ ಬೇಬಿಯಾಗಿ ಮಿಂಚಿದ್ದು ನಿಶಾ ರವಿಕೃಷ್ಣ. ಈಗಲೂ ಸಾಕಷ್ಟು ಜನಕ್ಕೆ ನಿಶಾ ಎಂದರೆ ಬೇಗ ಅರ್ಥವಾಗಲ್ಲ ಅಮೂಲ್ಯ ಎಂದರೆ ಬೇಗ ಅರ್ಥವಾಗುತ್ತದೆ. ಬರೀ ಹೆಣ್ಣು ಮಕ್ಕಳೇ ಇರುವ ಕುಟುಂಬಕ್ಕೆ ರೌಡಿ ಬೇಬಿಯಂತ ಮಗಳಿದ್ದರೆ ಸಾಕು ಎನ್ನುವಷ್ಟು ಫೇಮಸ್ ಆಗಿದ್ದರು ಈ ಅಮೂಲ್ಯ. ಗಟ್ಟಿಮೇಳ ಧಾರಾವಾಹಿಯಲ್ಲಿ ಅಮೂಲ್ಯ - ವೇದಾಂತ್ ಜೋಡಿಗೇನೆ ಫ್ಯಾನ್ಸ್ ಇದ್ರು.
ಹೆಣ್ಣು ಮಕ್ಕಳೆಂದರೆ ಆಗದೇ ಇರುವ ವೇದಾಂತ್ ನನ್ನೇ ಪ್ರೀತಿಯಲ್ಲಿ ಬೀಳಿಸಿದ್ದ ಗಟ್ಟಿಗಿತ್ತಿ. ಮುಂದೆ ಅಮ್ಮು, ವೇದಾಂತ್ ಜೋಡಿ ಸಿಕ್ಕಾಪಟ್ಟೆ ಟ್ರೆಂಡ್ ಕ್ರಿಯೇಟ್ ಮಾಡಿತ್ತು. ಮತ್ತೆ ಈ ಜೋಡಿ ಒಂದಾಗಲಿ ಎಂದು ಭಾವಿಸಿದ್ದರು. 'ಗಟ್ಟಿಮೇಳ' ಮುಗಿದ ಮೇಲೆ ನಿಶಾ 'ಅಣ್ಣಯ್ಯ' ಮೂಲಕ ಭರ್ಜರಿ ಕಮ್ ಬ್ಯಾಕ್ ಆಗಿದ್ದಾರೆ.

ಶಿವು - ಪಾರು ಜೋಡಿ ಮೋಡಿ
ಜೀ ಕನ್ನಡದಲ್ಲಿ 'ಅಣ್ಣಯ್ಯ' ಧಾರಾವಾಹಿ ಶುರುವಾಗಿ ಬಹಳ ದಿನಗಳೇ ಕಳೆದಿವೆ. ಈ ಧಾರಾವಾಹಿಯಲ್ಲಿರುವ ಪಾರು ಹಾಗೂ ಶಿವು ಜೋಡಿ ಒಳ್ಳೆ ಮನರಂಜನೆ ಕೊಡುತ್ತಿದೆ. ತಂಗಿಯರ ಬದುಕು ಬಂಗಾರವಾಗಲಿ ಎಂದು ದುಡಿಯುತ್ತಿದ್ದ ಅಣ್ಣಯ್ಯ ಯಾರ ಮಾತನ್ನು ಕೇಳ್ತಾ ಇರಲಿಲ್ಲ. ಆದರೆ ಪಾರು ಬಂದ ಮೇಲಂತೂ ಅವಳ ಮಾತು ಮೀರಿ ಬದುಕುವಂತೆಯೇ ಇಲ್ಲ. ಆ ರೀತಿ ಬದಲಾಗಿದ್ದಾನೆ ಶಿವು.
ಮಿಲಿಯನ್ ಗಟ್ಟಲೇ ವೀವ್ಸ್
ಶಿವು ಪಾತ್ರದಲ್ಲಿ ವಿಕಾಸ್ ಉತ್ತಯ್ಯ, ಪಾರು ಪಾತ್ರದಲ್ಲಿ ನಿಶಾ ಅಭಿನಯಿಸಿದ್ದಾರೆ. ಇಬ್ಬರು ರಿಯಲ್ ಲೈಫ್‌ನಲ್ಲಿ ಕೂಡ ತುಂಬಾನೇ ಕ್ಲೋಸ್ ಆಗಿದ್ದಾರೆ. ಶೂಟಿಂಗ್ ಫ್ರೀ ಟೈಮ್‌ನಲ್ಲಿ ಇಬ್ಬರು ರೀಲ್ಸ್ ಮಾಡ್ತಾ, ಕಾಲು ಎಳೆಯುತ್ತಾ ಇರುತ್ತಾರೆ. ಇದೀಗ ಚುರುಕು ನೋಟವೇ ಹಾಡಿಗೆ ರೀಲ್ಸ್ ಮಾಡಿದ್ದಾರೆ. ವಿಕಾಸ್ ಅಭಿನಯದ 'ಅಪಾಯವಿದೆ ಎಚ್ಚರಿಕೆ' ಸಿನಿಮಾದ ಹಾಡು. ಈ ಹಾಡಿಗೆ ಇಬ್ಬರು ರೊಮ್ಯಾಂಟಿಕ್ ಹೆಜ್ಜೆ ಹಾಕಿದ್ದಾರೆ.
ಶಿವು - ಪಾರು ಜೋಡಿ ಟ್ರೆಂಡಿಂಗ್
ಈ ಹಿಂದೆಲ್ಲಾ ವೇದಾಂತ್ ಹಾಗೂ ಅಮೂಲ್ಯ ಜೋಡಿ ಟ್ರೆಂಡ್ ಆಗಿತ್ತು. ಇದೀಗ ಪಾರು ಹಾಗೂ ಶಿವು ಜೋಡಿ ಟ್ರೆಂಡ್ ಆಗ್ತಿದೆ. ನಿಶಾ, ವಿಕಾಸ್ ಹಾಡಿರುವ ಹಾಡಿಗೆ ಕಮೆಂಟ್ ಗಳ ಸುರಿಮಳೆಯೇ ಸುರಿದಿದೆ. ಸಾವಿರಾರು ಕಮೆಂಟ್ ಗಳು ಬಂದಿವೆ. 3 ಮಿಲಿಯನ್ ಹೆಚ್ಚು ವೀವ್ಸ್ ಬಂದಿದೆ. ಕಮೆಂಟ್ ಬಾಕ್ಸ್ ನಲ್ಲೆಲ್ಲಾ ಇಬ್ಬರು ಲವ್ ಮಾಡ್ತಾ ವಿದ್ದೀರಾ ಅನ್ಸುತ್ತೆ. ಬೇಗ ರಿವೀಲ್ ಮಾಡಿ ಅಂತಾನು ಕಮೆಂಟ್ಸ್ ಹಾಕಿದ್ದಾರೆ.
ವಿಕಾಸ್ ಹೇಳಿದ ಹುಡುಗಿ ಯಾರು?
ಅಣ್ಣಯ್ಯ ಅಲಿಯಾಸ್ ವಿಕಾಸ್ ಉತ್ತಯ್ಯ 2025ರ ರೆಸ್ಯೂಲೇಷನ್‌ನಲ್ಲಿ ಎಲ್ಲರಿಗೂ ನಮ್ಮ ಹುಡುಗಿಯನ್ನ ತೋರಿಸ್ತೀನಿ, ಪರಿಚಯ ಮಾಡಿಸ್ತೀನಿ ಅಂತ ಹೇಳಿದ್ದರು. ಹೀಗಾಗಿ ಅಭಿಮಾನಿಗಳಿಗೆ ಬಹಳಷ್ಟು ಕುತೂಹಲ ಮೂಡಿದೆ. ಇವರೇನಾ ಆ ಹುಡುಗಿ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ ವಿಕಾಸ್ ಉತ್ತಯ್ಯ ಅವರು ತನ್ನ ಹುಡುಗಿಯ ಮೊದಲ ಅಕ್ಷರವನ್ನು ಹೇಳಿದ್ದರು. P, Q ಅಕ್ಷರವನ್ನ ಹೇಳಿದ್ದರು. ಆದರೆ ಆ ಪಿ ಅಕ್ಷರದಲ್ಲಿ ಪಾರು ಎಂಬ ಹೆಸರು ಅಡಗಿದೆ. ರಿಯಲ್ ಆಗಿ ಹೆಸರು ಹೇಳದೆ ಪಾರು ಅಂತ ಸೀರಿಯಲ್ ಹೆಸರು ಹೇಳಿದರಾ? ಎಂಬ ಅನುಮಾನ ಕೂಡ ಅಭಿಮಾನಿಗಳಿಗೆ ಕಾಡ್ತಾ ಇದೆ.


Click it and Unblock the Notifications











