'ಜೇನುಗೂಡು' ನಟಿಗೆ ಅವಿಭಕ್ತ ಕುಟುಂಬ ಅಂದ್ರೆ ಇಷ್ಟ: ಸನಾತನಿಗೆ ಅವನಿ ಯಾಕಿಷ್ಟ?
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಜೇನುಗೂಡು' ಧಾರಾವಾಹಿಯಲ್ಲಿ ಅವನಿ ಪಾತ್ರವನ್ನು ನಿಭಾಯಿಸುತ್ತಿರುವ ನಟಿ ಸನಾತನಿ. ಈಗ ನಟಿಸುತ್ತಿರುವ ತಮ್ಮ ಪಾತ್ರದೊಂದಿಗೆ ಫುಲ್ ಖುಷಿಯಾಗಿದ್ದಾರೆ. ನಟಿ ತನ್ನ ಆನ್-ಸ್ಕ್ರೀನ್ ಪಾತ್ರವನ್ನು ಎಂಜಾಯ್ ಮಾಡುತ್ತಿದ್ದಾರೆ.
ಅವನಿ ಪಾತ್ರದಲ್ಲಿ ನಟಿಸುವುದಕ್ಕೆ ಹೆಚ್ಚು ಕಷ್ಟ ಪಡಬೇಕಾಗಿಲ್ಲ ಎಂದು ನೋಡುವಾಗ ತೋರುತ್ತದೆ. ಆದರೆ, ಪಾತ್ರಕ್ಕೆ ಹೊಂದಲು ಸಾಕಷ್ಟು ಮಾನಸಿಕ ಸಿದ್ಧತೆ ಬೇಕು. ಅವನಿ ಒಬ್ಬಳು ಸ್ವತಂತ್ರ ಮಹಿಳೆ ಮತ್ತು ಅವಿಭಕ್ತ ಕುಟುಂಬದಲ್ಲಿ ವಾಸಿಸುವುದರೊಂದಿಗೆ ತನಗೆ ಬೇಕಾದುದನ್ನು ನಿರ್ಧರಿಸುವ ಮನಸ್ಥಿತಿ ಇರುವವಳು.

ಅವನಿ ಸ್ವತಂತ್ರವಾಗಿ ಸಾಗುವ ಮಹಿಳೆ
ಸನಾತನಿ ಅವರು ಉತ್ತರ ಕರ್ನಾಟಕದವಳಾದ್ದರಿಂದ ಡೈಲಾಗ್‌ನಲ್ಲಿ ಆ ನೇಟಿವಿಟಿ ತರುವುದು ಅವರಿಗೆ ತುಂಬಾ ಸುಲಭವಾಯಿತು. ಅವನಿ ತನ್ನ ಜೀವನದಲ್ಲಿ ಸ್ವತಂತ್ರವಾಗಿ ಸಾಗುವ ಮಹಿಳೆ ಎಂದು ಹೇಳುತ್ತಾರೆ ಸನಾತನಿ.
ಅವಿಭಕ್ತ ಕುಟುಂಬ ಎಂದರೆ ಸನಾತನಿಗೆ ಇಷ್ಟ
ಅವಿಭಕ್ತ ಕುಟುಂಬ ಪರಿಕಲ್ಪನೆಯ ಮೇಲಿನ ತನ್ನ ಪ್ರೀತಿಯ ಬಗ್ಗೆ ನಟಿ ಮತ್ತಷ್ಟು ಮಾತನಾಡುತ್ತಾ, 'ಜೇನುಗೂಡು' ಧಾರಾವಾಹಿಯು ಕುಟುಂಬ ಬಾಂಧವ್ಯಕ್ಕೆ ಸಂಬಂಧಿಸಿದೆ. ಇಂದಿನ ಜಗತ್ತಿನಲ್ಲಿ, ಅವಿಭಕ್ತ ಕುಟುಂಬವನ್ನು ಹುಡುಕುವುದು ತುಂಬಾ ಕಷ್ಟಕರ. ಎಲ್ಲವೂ ಕೆಲಸದ ಬದ್ಧತೆಯ ಮೇಲೆ ಅವಲಂಬಿತವಾಗಿದೆ. ನಾನು ವೈಯಕ್ತಿಕವಾಗಿ ಅವಿಭಕ್ತ ಕುಟುಂಬವನ್ನು ಪ್ರೀತಿಸುತ್ತೇನೆ ಎಂಬುದು ಸನಾತನಿ ಮಾತು.

ಅವಿಭಕ್ತ ಕುಟುಂಬ ಬದುಕು ಕಲಿಸುತ್ತದೆ
ಅವಿಭಕ್ತ ಕುಟುಂಬದಲ್ಲಿ ಉಳಿಯುವುದು ಕುಟುಂಬದ ಮೌಲ್ಯಗಳ ಬಗ್ಗೆ ಬಹಳಷ್ಟು ಕಲಿಯಲು ಸಹಾಯ ಮಾಡುತ್ತದೆ. ಅವಿಭಕ್ತ ಕುಟುಂಬದಲ್ಲಿ ವಾಸಿಸುವಾಗ ಕುಟುಂಬದ ಸದಸ್ಯರು ಪರಸ್ಪರ ಭಾವನೆಗಳನ್ನು ಹಂಚಿಕೊಳ್ಳುವುದರಿಂದ ಇದು ಜೀವನದಲ್ಲಿ ಬಹಳಷ್ಟನ್ನು ಕಲಿಸುತ್ತದೆ ಅನ್ನೋದು ಸನಾತನಿ ಅಭಿಪ್ರಾಯ.
ಕೂಡು ಕುಟುಂಬದಲ್ಲಿ ಬೆಳೆದಾಕೆ ಸನಾತನಿ
ಬಾಲ್ಯದಿಂದಲೂ ಆ ಕುಟುಂಬದ ಬಂಧವನ್ನು ಹೊಂದುವ ಅದೃಷ್ಟ ನಟಿ ಸನಾತನಿಗೆ ಸಿಕ್ಕಿದೆ. ಆಕೆ ಅವಿಭಕ್ತ ಕುಟುಂಬದಲ್ಲಿ ಬೆಳೆಯದಿದ್ದರೂ, ತನ್ನ ಬಾಲ್ಯದ ರಜಾ ದಿನಗಳಲ್ಲಿ ತನ್ನ ಸಂಬಂಧಿಕರನ್ನು ಭೇಟಿ ಮಾಡುತ್ತಿದ್ದರು. ತಾಯಿ ಮತ್ತು ತಂದೆ ಇಬ್ಬರ ಕಡೆಯಿಂದಲೂ ಅನೇಕ ಸಂಬಂಧಿಕರೊಂದಿಗೆ ಬೆಳೆದಿರುವ ಆಕೆ ಆ ದಿನಗಳು ತುಂಬಾ ಸುಂದರವಾಗಿತ್ತು ಎಂದು ಹಳೆಯ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ.
ಅವನಿಯ ಪಾತ್ರ ಖುಷಿ ತಂದಿದೆ
ಇದರ ಜೊತೆಗೆ ಇದೀಗ, ಜೇನುಗೂಡಿನಿಂದಾಗಿ, ನಾನು ತೆರೆಯಲ್ಲಿ ಅವಿಭಕ್ತ ಕುಟುಂಬದಲ್ಲಿ ವಾಸಿಸುವ ಸಂತೋಷವನ್ನು ಅನುಭವಿಸಲು ಸಾಧ್ಯವಾಯಿತು. ಈ ಶೋನಲ್ಲಿ ಬಹಳಷ್ಟು ಭಾವನೆಗಳಿವೆ. 'ಜೇನುಗೂಡು'ವಿನಲ್ಲಿ ಅವನಿಯಾಗಿ ನಟಿಸುವುದು ತನಗೆ ತೃಪ್ತಿಯಿದೆ. ಜೀವನವೂ ಸುಂದರವಾಗಿದೆ. ಕೆಲಸ ಮತ್ತು ವೈಯಕ್ತಿಕ ಜೀವನ ಎರಡನ್ನೂ ಸಮತೋಲನಗೊಳಿಸಲು ಸಾಧ್ಯವಾಗುತ್ತಿದೆ. ಇನ್ನೇನು ಕೇಳಲಿ ಎಂದು ಸಂತಸ ಪಡುತ್ತಾರೆ ಸನಾತನಿ.


Click it and Unblock the Notifications











