»   » 'ಅಗ್ನಿಸಾಕ್ಷಿ' ಖ್ಯಾತಿಯ ವಿಜಯ್ ಮತ್ತು ವೈಷ್ಣವಿ ಮಧ್ಯೆ ಲವ್ ಇದಿಯಾ?

'ಅಗ್ನಿಸಾಕ್ಷಿ' ಖ್ಯಾತಿಯ ವಿಜಯ್ ಮತ್ತು ವೈಷ್ಣವಿ ಮಧ್ಯೆ ಲವ್ ಇದಿಯಾ?

Posted By:
Subscribe to Filmibeat Kannada

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ 'ಅಗ್ನಿಸಾಕ್ಷಿ' ಧಾರಾವಾಹಿ ಕಿರುತೆರೆಯ ಸೂಪರ್ ಹಿಟ್ ಧಾರಾವಾಹಿಗಳಲ್ಲಿ ಒಂದು. ಈ ಧಾರಾವಾಹಿಯಲ್ಲಿ ಮುಖ್ಯ ಪಾತ್ರಗಳನ್ನ ನಿರ್ವಹಿಸುವ ವಿಜಯ್ ಸೂರ್ಯ ಮತ್ತು ವೈಷ್ಣವಿ ಅವರ ಸಿದ್ಧಾರ್ಥ್ ಮತ್ತು ಸನ್ನಿದಿ ಪಾತ್ರಗಳು ಟಿವಿ ಪ್ರೇಕ್ಷಕರ ಫೇವರೆಟ್.

ಇವರಿಬ್ಬರ ಕಾಂಬಿನೇಷನ್ ಇಷ್ಟಪಡುವ ಜನರು ಈ ಜೋಡಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಅಷ್ಟೇ ಅಲ್ಲದೆ ಇವರಿಬ್ಬರ ಮಧ್ಯೆ ಲವ್ ಇದೆ, ಇವರಿಬ್ಬರು ಮದುವೆ ಆಗಿದ್ದಾರೆ ಎಂಬ ಮಾತುಗಳು ಕೂಡ ಇದೆ.

Agnisaakshi Actor Vijaya Surya Talks About his Co Actress Vaishnavi

ಇಂತಹ ಪ್ರಶ್ನೆಗಳು ತಮಗೆ ಎದುರಾಗಿರುವ ಬಗ್ಗೆ ನಟ ವಿಜಯ್ ಸೂರ್ಯ ಅವರು ಹೇಳಿಕೊಂಡಿದ್ದಾರೆ. ಇದಕ್ಕೆ ಉತ್ತರಿಸಿರುವ ವಿಜಯ್ ಸೂರ್ಯ, ತಮ್ಮ ಸಹ ನಟಿ ಬಗ್ಗೆ ಮಾತನಾಡಿದ್ದಾರೆ. ತಮ್ಮಿಬ್ಬರ ನಡುವಿನ ಸಂಬಂಧದ ಬಗ್ಗೆ ಜನರಿಗೆ ಸ್ಪಷ್ಟಪಡಿಸಿದ್ದಾರೆ.

''ನನಗೂ ಮತ್ತು ವೈಷ್ಣವಿ ಅವರ ಮಧ್ಯೆ ಯಾವ ಲವ್ ಇಲ್ಲ. ನಮ್ಮಿಬ್ಬರದ್ದು ಪವಿತ್ರವಾದ ಸ್ನೇಹ. ಪುಣ್ಯ ಮಾಡಿರಬೇಕು ಅಂತಹ ಹುಡುಗಿ ಪಡೆಯುವುದಕ್ಕೆ. ಆದ್ರೆ, ನಾವಿಬ್ಬರು ಸ್ನೇಹಿತರು ಮಾತ್ರ. ನಮಗೆ ಮದ್ವೆನೂ ಆಗಿಲ್ಲ. ಲವ್ ಇಲ್ಲ'' ಎಂದು ತಮ್ಮ ಸಹ ಸ್ನೇಹದ ಬಗ್ಗೆ ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ.

English summary
Agnisaakshi Actor Vijaya Surya Talks About his Relationship with Co-Actress Vaishnavi.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada