»   » ನಟ ವಿಜಯ್ ಸೂರ್ಯಗೆ ಚಾಲೆಂಜ್ ಹಾಕಿದ 'ಅಗ್ನಿಸಾಕ್ಷಿ' ವೈಷ್ಣವಿ

ನಟ ವಿಜಯ್ ಸೂರ್ಯಗೆ ಚಾಲೆಂಜ್ ಹಾಕಿದ 'ಅಗ್ನಿಸಾಕ್ಷಿ' ವೈಷ್ಣವಿ

Posted By:
Subscribe to Filmibeat Kannada
ಅಗ್ನಿಸಾಕ್ಷಿ ಸಿದ್ಧಾರ್ಥ್ ಗೆ ಚಾಲೆಂಜ್ ಹಾಕಿದ ಸನ್ನಿಧಿ | Oneindia Kannada

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಜನಪ್ರಿಯ ಧಾರಾವಾಹಿ 'ಅಗ್ನಿಸಾಕ್ಷಿ'ಯ ಸಿದ್ಧಾರ್ಥ್ ಮತ್ತು ಸನ್ನಿಧಿ ಜೋಡಿ ಯಾರಿಗೆ ಇಷ್ಟವಾಗಲ್ಲ ಹೇಳಿ. ಇವರಿಬ್ಬರ ರೀತಿ ನಾವು ಇರ್ಬೇಕು ಎನ್ನುವುದು ಅದೇಷ್ಟೋ ಜೋಡಿಗಳ ಆಸೆ ಕೂಡ. ಆದ್ರೀಗ, ಇವರಿಬ್ಬರು ಹೊಸ ಸ್ಪರ್ಧೆಗೆ ಸಿದ್ದವಾಗಿದ್ದಾರೆ.

ಅರೇ, ನಾವ್ ಹೇಳ್ತಿರೋದು ಧಾರಾವಾಹಿ ಕಥೆಯಲ್ಲ. ಇದು ರಿಯಾಲಿಟಿ ಶೋ ಕಥೆ. ಹೌದು, ಪ್ರತಿದಿನ 'ಅಗ್ನಿಸಾಕ್ಷಿ'ಯಲ್ಲಿ ಇವರಿಬ್ಬರ ಪ್ರೀತಿ, ವಾತ್ಯಲ್ಯ ನೋಡಿ ಖುಷಿ ಪಡುವ ಪ್ರೇಕ್ಷಕರು, ವಾರಾಂತ್ಯದಲ್ಲಿ ಇವರಿಬ್ಬರಲ್ಲಿ ಯಾರು ಉತ್ತಮ, ಯಾರ ಕಾರ್ಯಕ್ರಮ ಚೆನ್ನಾಗಿದೆ? ಎಂಬ ಚರ್ಚೆ ಮಾಡಬೇಕಿದೆ.

ಇನ್ನು ಅರ್ಥವಾಗಿಲ್ವಾ. ಸಿದ್ಧಾರ್ಥ್ ಅಲಿಯಾಸ್ ವಿಜಯ್ ಸೂರ್ಯ ಕಲರ್ಸ್ ಕನ್ನಡದಲ್ಲಿ 'ಕಾಮಿಡಿ ಟಾಕೀಸ್' ನಿರೂಪಣೆ ಮಾಡ್ತಿದ್ದಾರೆ. ಅದಕ್ಕೆ ಸ್ಪರ್ಧೆ ನೀಡಲು ಸನ್ನಿಧಿ ಖ್ಯಾತಿಯ ವೈಷ್ಣವಿ ಕೂಡ ಹೊಸ ಹೆಜ್ಜೆ ಇಟ್ಟಿದ್ದಾರೆ. ಹೀಗಾಗಿ, ಇನ್ಮುಂದೆ ವೀಕೆಂಡ್ ನಲ್ಲಿ ವಿಜಯ್ ಸೂರ್ಯ ಮತ್ತು ವೈಷ್ಣವಿಯ ರಿಯಲ್ ಫೈಟ್ ನೋಡಬಹುದು.

ಈ ವಾರದಿಂದ ವೈಷ್ಣವಿ ಆಂಕರ್

ಇಷ್ಟು ದಿನ ಧಾರಾವಾಹಿ ನಟಿಯಾಗಿದ್ದ ವೈಷ್ಣವಿ ಇನ್ಮುಂದೆ ಟಿವಿ ನಿರೂಪಕಿ ಆಗಿ ಕಾಣಿಸಿಕೊಳ್ಳಲಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ 'ಭರ್ಜರಿ ಕಾಮಿಡಿ' ಕಾರ್ಯಕ್ರಮವನ್ನ ಹೋಸ್ಟ್ ಮಾಡಲಿದ್ದಾರೆ. ಈ ಮೂಲಕ ತೆರೆ ಮೇಲೆ ಗಂಭೀರವಾಗಿ ನೋಡಿದ್ದ ವೈಷ್ಣವಿಯನ್ನ ಇನ್ಮುಂದೆ ನಗುನಗುತ್ತಾ ನೋಡಬಹುದಾಗಿದೆ.

'ಕಲರ್ಸ್ ಕನ್ನಡ'ದಿಂದ 'ಸ್ಟಾರ್ ಸುವರ್ಣ'ಗೆ ಜಿಗಿದ 'ಅಗ್ನಿಸಾಕ್ಷಿ' ಸನ್ನಿಧಿ!

ಒಂದು ಕಡೆ ಸಿದ್ಧಾರ್ಥ್, ಮತ್ತೊಂದೆಡೆ ಸನ್ನಿಧಿ

ಈಗಾಗಲೇ ಕಲರ್ಸ್ ಕನ್ನಡದ 'ಕಾಮಿಡಿ ಟಾಕೀಸ್' ಮೂಲಕ ವಿಜಯ್ ಸೂರ್ಯ ನಿರೂಪಣೆ ಕ್ಷೇತ್ರಕ್ಕೆ ಧುಮುಕಿದ್ದಾರೆ. ಈಗ ವೈಷ್ಣವಿ ಕೂಡ ಅದೇ ಮಾರ್ಗವನ್ನ ಅನುಸರಿಸುತ್ತಿದ್ದಾರೆ. ಪ್ರತಿ ವಾರಾಂತ್ಯದಲ್ಲಿ ಒಂದು ಕಡೆ ಸಿದ್ಧಾರ್ಥ್, ಮತ್ತೊಂದೆಡೆ ಸನ್ನಿಧಿಯ ಕಾಮಿಡಿ ಜುಗಲ್ ಬಂದಿ ಟಿವಿ ಪ್ರೇಕ್ಷಕರಿಗೆ ಹಬ್ಬವಾಗಲಿದೆ.

ವೀಕೆಂಡ್ ಮಸ್ತ್ ಕಾಂಪಿಟೆಶನ್

'ಅಗ್ನಿಸಾಕ್ಷಿ' ಧಾರಾವಾಹಿ ನೋಡಿ ನನಗೆ ಸಿದ್ಧಾರ್ಥ್ ಇಷ್ಟ, ನನಗೆ ಸನ್ನಿಧಿ ಇಷ್ಟ ಎನ್ನುತ್ತಿದ್ದರು, ಇನ್ಮುಂದೆ ವಾರಾಂತ್ಯದಲ್ಲಿ ನನಗೆ ಸಿದ್ಧಾರ್ಥ ಶೋ, ಇಷ್ಟ ನನಗೆ ಸನ್ನಿಧಿ ಶೋ ಇಷ್ಟ ಎಂದು ಕಿತ್ತಾಡಬೇಕಿದೆ. ವಾಸ್ತವ ಅಂದ್ರೆ, ಟೆಲಿವಿಷನ್ ಟಿ ಆರ್ ಪಿ ಯಲ್ಲೂ ಇವರಿಬ್ಬರ ಕಾರ್ಯಕ್ರಮ ಪೈಪೋಟಿ ನಡೆಸಲಿದೆ.

ವೈಷ್ಣವಿ ಶೋನ ವಿಶೇಷತೆಗಳು

ಅಂದ್ಹಾಗೆ, ವೈಷ್ಣವಿ ನಿರೂಪಣೆ ಮಾಡಲಿರುವ ಕಾರ್ಯಕ್ರಮದ ಹೆಸರು 'ಭರ್ಜರಿ ಕಾಮಿಡಿ'. ರಾಗಿಣಿ ದ್ವಿವೇದಿ, ನಿರ್ದೇಶಕ ಗುರುಪ್ರಸಾದ್, ಹಿರಿಯ ನಟ ದೊಡ್ಡಣ್ಣ ಜಡ್ಜ್ ಗಳಾಗಿದ್ದಾರೆ. ಇನ್ನುಳಿದಂತೆ 'ಮಜಾ ಟಾಕೀಸ್' ಪವನ್, ಶಾಲಿನಿ, ಸೇರಿದಂತೆ ಹಲವರು ಪ್ರತಿಭಾನ್ವಿತರು ಸ್ಪರ್ಧಿಗಳಾಗಿದ್ದಾರೆ. 'ಭರ್ಜರಿ ಕಾಮಿಡಿ' ಕಾರ್ಯಕ್ರಮ ಡಿಸೆಂಬರ್ 23ರಿಂದ ಅಂದರೆ ಇದೇ ಶನಿವಾರ ದಿಂದ ಶುರುವಾಗಲಿದೆ. ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಕಾರ್ಯಕ್ರಮ ಪ್ರಸಾರ ಆಗಲಿದೆ.

English summary
'Agnisakshi' serial Actress Vaishnavi Gowda hosting 'Star Suvarna's new reality show 'Bharjari Comedy'. another side Agnisakshi actor vijay surya also hosting colors kannada's 'comedy talkies' in weekends.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X