'ಅಗ್ನಿಸಾಕ್ಷಿ' ವೈಷ್ಣವಿ ಗೌಡ ಹೊಸ ಸ್ಟೈಲ್ ನೋಡಿ
Recommended Video
ಕನ್ನಡ ಕಿರುತೆರೆಯ ವೀಕ್ಷಕರಿಗೆ ವೈಷ್ಣವಿ ಗೌಡ ಚಿರಪರಿಚಿತ. ವೈಷ್ಣವಿ ಎನ್ನುವುದಕ್ಕಿಂತ ಸನ್ನಿಧಿ ಎಂದರೆ ಇನ್ನಷ್ಟು ಜನರಿಗೆ ಇವರು ಯಾರೆಂದು ಅರ್ಥ ಆಗುತ್ತದೆ. 'ಅಗ್ನಿಸಾಕ್ಷಿ'ಯ ಈ ಕ್ಯೂಟ್ ಚಲುವೆ ಈಗ ಹೊಸ ಸ್ಟೈಲ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ವೈಷ್ಣವಿ ಗೌಡ ಈಗ ಹೊಸ ಫೋಟೋ ಶೂಟ್ ಮಾಡಿಸಿದ್ದಾರೆ. ಹೊಸ ಸ್ಟೈಲ್ ನಲ್ಲಿ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಧಾರಾವಾಹಿಯಲ್ಲಿ ಒಂದೇ ರೀತಿಯ ಲುಕ್ ನಲ್ಲಿ ನೋಡಿ ನೋಡಿ ಬೇಸರ ಆಗಿದ್ದ ವೀಕ್ಷಕರು ವೈಷ್ಣವಿ ಚಲುವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
ಮಾಡ್ರನ್ ಡ್ರೆಸ್ ನಲ್ಲಿ ಡಿಫರೆಂಟ್ ಲುಕ್ ನಲ್ಲಿ ವೈಷ್ಣವಿ ಮಿಂಚಿದ್ದಾರೆ. ಫೋಟೋ ನೋಡಿದ ತಕ್ಷಣ ಇದು ವೈಷ್ಣವಿ ಅವರೇನಾ ಎನ್ನುವ ಮಟ್ಟಿಗೆ ಬದಲಾಗಿದ್ದಾರೆ.

ವೈಷ್ಣವಿ ಅಂದವನ್ನು ಪುನೀತ್ ಗೌಡ ತಮ್ಮ ಫೋಟೋದಲ್ಲಿ ಸೆರೆ ಹಿಡಿದಿದ್ದಾರೆ. ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಫೋಟೋವನ್ನು ವೈಷ್ಣವಿ ಹಂಚಿಕೊಂಡಿದ್ದಾರೆ. ಸಾವಿರಾರು ಜನರು ಈ ಫೋಟೋಗಳನ್ನು ಮೆಚ್ಚಿಕೊಂಡಿದ್ದಾರೆ.

ಸದ್ಯ, 'ಅಗ್ನಿಸಾಕ್ಷಿ' ಸಿನಿಮಾದ ಮುಖ್ಯ ಪಾತ್ರದಲ್ಲಿ ವೃಷ್ಣವಿ ನಟಿಸುತ್ತಿದ್ದಾರೆ. ನಟ ವಿಜಯ ಸೂರ್ಯ ಪಾತ್ರ ಮುಗಿದಿದ್ದು, ನಾಯಕಿ ವೈಷ್ಣವಿ ಪಾತ್ರ ಕೂಡ ಮುಗಿಯಬಹುದು ಎನ್ನುವ ಅನುಮಾನ ಮೂಡಿದೆ.


Click it and Unblock the Notifications











