Sukrutha Nag: ಸುಕೃತಾ ನಾಗ್ ಫುಡ್ ಟೂರ್, ಶೂಟಿಂಗ್ ಬ್ಯಾಗ್, ಸ್ಟ್ರೀಟ್ ಶಾಪಿಂಗ್ ವಿಡಿಯೋಗಳು ವೈರಲ್

By ಪ್ರಿಯಾ ದೊರೆ

ಇವರನ್ನು ಸುಕೃತಾ ನಾಗ್ ಎನ್ನುವುದಕ್ಕಿಂತ ಈಗ ಶ್ವೇತಾ ಎಂದು ಕರೆದರೆ ಎಲ್ಲರಿಗೂ ಈ ನಟಿ ಯಾರು ಎಂಬುದು ಗೊತ್ತಾಗುತ್ತದೆ. ಈ ಗೊಂಬೆಯನ್ನು ಯಾರೂ ಮರೆಯುವುದಕ್ಕೆ ಸಾಧ್ಯವೇ ಇಲ್ಲ.

'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ಅಂಜಲಿ ಪಾತ್ರದಿಂದ ಮಿಂಚಿದ ಸುಕೃತಾ ನಾಗ್ ಈಗ 'ಲಕ್ಷಣ' ಧಾರಾವಾಹಿ ಮೂಲಕ ಶ್ವೇತಾ ಆಗಿ ಎಲ್ಲರಿಗೂ ಚಿರಪರಿಚಿತರಾಗಿದ್ದಾರೆ.

ಈ ಹಿಂದೆ 'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ಮುದ್ದುಮುದ್ದಾಗಿ ನಟಿಸಿದ್ದ ಸುಕೃತಾ ಈಗ ವಿಲನ್ ಆಗಿದ್ದಾರೆ. ಪ್ರೇಕ್ಷಕರಿಂದ ಬೈಯಿಸಿಕೊಳ್ಳುತ್ತಿದ್ದಾರೆ. ಸುಕೃತಾ ನಾಗ್ ಈಗ ತಮ್ಮದೇ ಯೂಟ್ಯೂಬ್ ಚಾನೆಲ್ ಅನ್ನು ಕೂಡ ತೆರೆದಿದ್ದಾರೆ.

ಮೆಗಾ ಧಾರಾವಾಹಿಯಲ್ಲಿ ನಟನೆ

ಮೆಗಾ ಧಾರಾವಾಹಿಯಲ್ಲಿ ನಟನೆ

ಸುಕೃತ ನಾಗ್ 'ಅಗ್ನಿಸಾಕ್ಷಿ' ಧಾರಾವಾಹಿ ಮೂಲಕ ಪ್ರೇಕ್ಷಕರಿಗೆ ಚಿರಪರಿಚಿತವಾದ ನಟಿ. ಆದರೆ, ಸುಕೃತಾ ಇದಕ್ಕೂ ಮುನ್ನ ಬಾಲನಟಿಯಾಗಿ ಕಾಣಿಸಿಕೊಂಡಿದ್ದೇ ಹೆಚ್ಚು. ಆದರೆ, ಇದು ಹೆಚ್ಚು ಜನರಿಗೆ ತಿಳಿಯದ ವಿಚಾರ. ಮೆಗಾ ಧಾರಾವಾಹಿ 'ಕಾದಂಬರಿ'ಯಲ್ಲಿ ಸುಕೃತಾ ನಾಗ್ ಅವರು ಬಾಲ ನಟಿಯಾಗಿ ನಟಿಸಿದ್ದರು. ಇದರೊಂದಿಗೆ ಬರೋಬ್ಬರಿ 25 ಟಿವಿ ಶೋಗಳಲ್ಲಿ ಬಾಲ ನಟಿಯಾಗಿ ನಟಿಸಿದ್ದಾರೆ. ಇನ್ನು ಸುಕೃತಾ ನಾಗ್ ಅವರಿಗೆ ಡ್ಯಾನ್ಸ್ ಎಂದರೆ ತುಂಬಾ ಇಷ್ಟ. ಕಳೆದ ವರ್ಷ ಸುಕೃತಾ ನಾಗ್ ನಟನೆಯ 'ಪಾರ್ಟ್ನರ್' ಎಂಬ ಸಿನಿಮಾ ರಿಲೀಸ್ ಆಗಿತ್ತು.

ರಿಯಾಲಿಟಿ ಶೋನಲ್ಲೂ ಭಾಗಿ

ರಿಯಾಲಿಟಿ ಶೋನಲ್ಲೂ ಭಾಗಿ

'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ಸನ್ನಿಧಿಯ ನಾದಿನಿ ಪಾತ್ರದಲ್ಲಿ ನಟಿಸಿದ್ದರು. ಅತ್ತಿಗೆಗೆ ಹೆಚ್ಚು ಸಪೋರ್ಟ್ ಮಾಡಿದ್ದ ಅಂಜಲಿ ಕೆಲ ತಪ್ಪುಗಳನ್ನೂ ಮಾಡಿದ್ದಳು. ಕೊನೆಗೆ ಮನೆಯ ಮಾರಿಯನ್ನು ಹಿಡಿಯುವಲ್ಲಿ ಅತ್ತಿಗೆಗೆ ಸಹಾಯ ಮಾಡಿದ್ದಳು. 'ಅಗ್ನಿಸಾಕ್ಷಿ' ಧಾರಾವಾಹಿ ಮುಗಿದ ಮೇಲೆ ಸುಕೃತಾ ನಾಗ್ ಅವರು ಹೆಚ್ಚಾಗಿ ಎಲ್ಲೂ ಕಾಣಿಸಿಕೊಳ್ಳಲಿಲ್ಲ. ಡ್ಯಾನ್ಸಿಂಗ್ ಸ್ಟಾರ್ ರಿಯಾಲಿಟಿ ಶೋನಲ್ಲಿ ಸುಕೃತಾ ನಾಗ್ ಅವರು ಭಾಗವಹಿಸಿದ್ದರು.

ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್

ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್

ಇದೀಗ ಒಂದು ವರ್ಷದಿಂದ 'ಲಕ್ಷಣ' ಧಾರಾವಾಹಿಯಲ್ಲಿ ವಿಲನ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಸುಕೃತಾ ನಾಗ್ ವಿಲನ್ ಪಾತ್ರದಲ್ಲಿ ಕೂಡ ಅದ್ಭುತವಾಗಿ ನಟಿಸಿದ್ದಾರೆ. ಶ್ರೀಮಂತರ ಮಗಳ ಪಾತ್ರದಲ್ಲಿ ನಟಿಸಿರುವ ಸುಕೃತಾ ಅವರು ಜಂಭದ ಹುಡುಗಿಯಾಗಿ ನಟಿಸಿದ್ದಾರೆ. ಮೊದಮೊದಲು ಪ್ರೇಕ್ಷಕರು ಶ್ವೇತಾಳನ್ನು ಬೈಯುತ್ತಿದ್ದರು. ಈಗ ಅವರ ಆಕ್ಟಿಂಗ್‌ಗೆ ಫಿದಾ ಆಗಿದ್ದಾರೆ. ಇನ್ನು ಸುಕೃತಾ ನಾಗ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಸದಾ 'ಲಕ್ಷಣ' ಧಾರಾವಾಹಿ ತಂಡದೊಂದಿಗೆ ರೀಲ್ಸ್‌ಗಳನ್ನು ಮಾಡುತ್ತಿರುತ್ತಾರೆ.

ಸ್ಟ್ರೀಟ್ ಶಾಪಿಂಗ್ ಮಾಡಿದ ನಟಿ

ಸ್ಟ್ರೀಟ್ ಶಾಪಿಂಗ್ ಮಾಡಿದ ನಟಿ

ಇನ್ನು ಇದೀಗ ಸುಕೃತಾ ನಾಗ್ ಅವರು ಯೂಟ್ಯೂಬ್ ಚಾನೆಲ್ ಅನ್ನು ತೆರೆದಿದ್ದಾರೆ. ಇತ್ತೀಚೆಗೆ ಹೊಸ ಯೂಟ್ಯೂಬ್ ಚಾನೆಲ್ ಪ್ರಾರಂಭಿಸಿದ್ದು, ಇದರಲ್ಲಿ ತಮ್ಮ ಫುಡ್ ಟೂರ್, ಶೂಟಿಂಗ್ ಬ್ಯಾಗ್, ಸ್ಟ್ರೀಟ್ ಶಾಪಿಂಗ್, ಶೂ ಕಲೆಕ್ಷನ್ಸ್ ಸೇರಿದಂತೆ ಹಲವು ವಿಚಾರದ ಬಗ್ಗೆ ವೀಡಿಯೋ ಮಾಡಿ ಶೇರ್ ಮಾಡಿದ್ದಾರೆ. ಈಗಾಗಲೇ ಸುಕೃತಾ ನಾಗ್ ಅವರ ಯೂಟ್ಯೂಬ್ ಚಾನೆಲ್ ಗೆ 6.55 ಸಾವಿರ ಸಬ್ ಸ್ಕ್ರೈಬರ್ಸ್ ಇದ್ದು, ವೀಡಿಯೋಗಳು ಸಾವಿರಾರು ವ್ಯೂವ್ಸ್ ಪಡೆದುಕೊಂಡಿದೆ. ಅದರಲ್ಲೂ ಜಯನಗರ ಸ್ಟ್ರೀಟ್ ಶಾಪಿಂಗ್ ವೀಡಿಯೋವನ್ನು ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದಾರೆ.

More from Filmibeat

English summary
channel. She Started to share loads of content for Her fans. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X