Shobha Shetty in Bigg Boss Telugu: ತೆಲುಗು ಬಿಗ್ ಬಾಸ್‌ಗೆ 'ಅಗ್ನಿಸಾಕ್ಷಿ'ಯ ಶೋಭಾ ಶೆಟ್ಟಿ?

By ಅನಿತಾ ಬನಾರಿ

ನಾಗಾರ್ಜುನ ಅಕ್ಕಿನೇನಿ ಸಾರಥ್ಯದಲ್ಲಿ ಮೂಡಿಬರುತ್ತಿರುವ ತೆಲುಗು ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್ ತೆಲುಗು ಸೀಸನ್ 7' ಇದೇ ಸೆಪ್ಟೆಂಬರ್‌ನಲ್ಲಿ ಶುರುವಾಗಲಿದ್ದು ಅದರಲ್ಲಿ ಕನ್ನಡ ಕಿರುತೆರೆಯ ನಟಿ ಭಾಗವಹಿಸುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ನಾಯಕಿ ಸನ್ನಿಧಿಯ ತಂಗಿ ತನು ಆಗಿ ನಟಿಸುತ್ತಿದ್ದ ಶೋಭಾ ಶೆಟ್ಟಿ ಈ ಬಾರಿಗೆ ತೆಲುಗು ಬಿಗ್ ಬಾಸ್‌ನಲ್ಲಿ ಭಾಗವಹಿಸುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.

Agnisakshi Fame Shobha Shetty Entry as a Contestant in Telugu Bigg Boss Season 7

ಈ ಬಗ್ಗೆ ಶೋಭಾ ಶೆಟ್ಟಿ ಯಾವ ರೀತಿಯ ಪ್ರತಿಕ್ರಿಯೆ ಇಲ್ಲಿಯ ತನಕ ನೀಡಿಲ್ಲ. ಇದರ ಜೊತೆಗೆ ನಟ ನಟಿಯರ ಜೊತೆಗೆ ಟಿಕ್ ಟಾಕ್ ಸ್ಟಾರ್ಸ್, ಗಾಯಕರು ಹಾಗೂ ಹಿಂದಿನ ಸೀಸನ್ ನ ಸ್ಪರ್ಧಿಗಳು ಕೂಡಾ ಭಾಗವಹಿಸುತ್ತಾರೆ ಎಂಬ ಮಾತುಗಳು ಕೂಡಾ ಕೇಳು ಬರುತ್ತಿದ್ದು ಇವೆಲ್ಲದಕ್ಕೂ ಸೆಪ್ಟೆಂಬರ್ ನಲ್ಲಿ ಉತ್ತರ ಸಿಗಬೇಕಿದೆ.

'ಅಗ್ನಿಸಾಕ್ಷಿ' ಮೂಲಕ ಫೇಮಸ್ಸು

ಶೋಭಾ ಶೆಟ್ಟಿ 'ಅಗ್ನಿಸಾಕ್ಷಿ' ಧಾರಾವಾಹಿಯ ತನು ಆಗಿ ಕನ್ನಡ ಕಿರುತೆರೆಯಲ್ಲಿ ಈಗಲೂ ಗುರುತಿಸಿಕೊಂಡಿದ್ದಾರೆ. 'ಪಡುವಾರಳ್ಳಿ ಪಡ್ಡೆಗಳು' ಧಾರಾವಾಹಿಯಿಂದ ಅವರ ನಟನಾ ಪಯಣ ಶುರುವಾಗಿತ್ತು. ಭಕ್ತಿಪ್ರಧಾನ ಧಾರಾವಾಹಿ 'ಶ್ರೀಗುರು ರಾಘವೇಂದ್ರ ವೈಭವ'ದಲ್ಲಿ ಪಂಕಜ ಪಾತ್ರದಲ್ಲಿ ಕಾಣಿಸಿಕೊಂಡ ಶೋಭಾ ಶೆಟ್ಟಿ ನಂತರ 'ಕಾರ್ತಿಕ ದೀಪ' ಧಾರಾವಾಹಿಯಲ್ಲಿ ನಟಿಸಿದ್ದರು. ಕಾರ್ತಿಕ ದೀಪ ಧಾರಾವಾಹಿಯಲ್ಲಿ ದ್ವಿಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡ ಶೋಭಾ ಶೆಟ್ಟಿ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾದರು.

ಸಾಲು ಸಾಲು ಧಾರಾವಾಹಿಗಳಲ್ಲಿ ನಟನೆ

'ದೀಪವೂ ನಿನ್ನದೇ ಗಾಳಿಯೂ ನಿನ್ನದೇ', 'ಗೃಹಲಕ್ಷ್ಮಿ', 'ಪತ್ತೇದಾರಿ ಪ್ರತಿಭಾ'ದಂತಹ ಧಾರಾವಾಹಿಗಳಲ್ಲಿ ಪೋಷಕ ಪಾತ್ರಕ್ಕೆ ಜೀವ ತುಂಬಿದ್ದರು ಶೋಭಾ ಶೆಟ್ಟಿ. ಇದರ ಜೊತೆಗೆ ನೆಗೆಟಿವ್ ಪಾತ್ರಗಳಲ್ಲಿಯೂ ಕಾಣಿಸಿಕೊಂಡಿದ್ದ ಶೋಭಾ ಶೆಟ್ಟಿ ಆ ಪಾತ್ರಗಳ ಮೂಲಕವೂ ಗುರುತಿಸಿಕೊಂಡಿದ್ದರು.

Agnisakshi Fame Shobha Shetty Entry as a Contestant in Telugu Bigg Boss Season 7

ರುಕ್ಕು ಆಗಿ ಕಿರುತೆರೆಯಲ್ಲಿ ಮೋಡಿ

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ರುಕ್ಕು'ವಿನಲ್ಲಿ ನಾಯಕಿಯಾಗಿ ನಟಿಸಿದ್ದರೂ ಆ ಧಾರಾವಾಹಿಯಿಂದ ಅರ್ಧಕ್ಕೆ ಹೊರಬಂದಿದ್ದರು. ಇನ್ನು ತೆಲುಗಿನ 'ಕಾರ್ತಿಕ ದೀಪಂ', 'ಲಹರಿ ಲಹರಿ ಲಹರಿ ಲೋ' ಧಾರಾವಾಹಿಗಳಲ್ಲಿ ನಟಿಸುವ ಮೂಲಕ ಕನ್ನಡದ ಜೊತಗೆ ಪರಭಾಷೆಯ ಕಿರುತೆರೆಯಲ್ಲಿಯೂ ನಟನಾ ಕಂಪನ್ನು ಪಸರಿಸಿ ಸೈ ಎನಿಸಿಕೊಂಡಿದ್ದಾರೆ.

More from Filmibeat

English summary
Agnisakshi Serial Tanu aka Shobha Shetty Entering Telugu Bigg Boss Season 7
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X