twitter
    For Quick Alerts
    ALLOW NOTIFICATIONS  
    For Daily Alerts

    Vaishnavi Gowda: ಮತ್ತೆ ಕಿರುತೆರೆಗೆ ಬಂದ 'ಅಗ್ನಿಸಾಕ್ಷಿ' ವೈಷ್ಣವಿ ಗೌಡ!

    By ಪ್ರಿಯಾ ದೊರೆ
    |

    ಕಿರುತೆರೆ ಮೂಲಕ ಜನಪ್ರಿಯತೆ ಗಳಿಸಿದ ವೈಷ್ಣವಿ ಗೌಡ ಸದ್ಯ ಸೈಲೆಂಟ್ ಆಗಿದ್ದಾರೆ. ಅಗ್ನಿಸಾಕ್ಷಿ ಧಾರಾವಾಹಿಯ ನಂತರ ಮತ್ತೆ ಯಾವುದೇ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳದ ವೈಷ್ಣವಿ ಗೌಡ, ಈಗ ಮತ್ತೆ ಸೀರಿಯಲ್ ಒಂದಕ್ಕೆ ಬಣ್ಣ ಹಚ್ಚಿದ್ದಾರೆ ಎಂದು ಎಲ್ಲೆಡೆ ಸುದ್ದಿಯಾಗುತ್ತಿದೆ.

    ಇವರನ್ನು ವೈಷ್ಣವಿ ಗೌಡ ಎನ್ನುವುದಕ್ಕಿಂತಲೂ 'ಅಗ್ನಿಸಾಕ್ಷಿ' ಸನ್ನಿಧಿ ಎಂದೇ ಚಿರಪರಿಚಿತರು. ಇವರಿಗೆ 'ಅಗ್ನಿಸಾಕ್ಷಿ' ಧಾರಾವಾಹಿ ದೊಡ್ಡ ಬ್ರೇಕ್ ಕೊಟ್ಟಿತ್ತು. ವೈಷ್ಣವಿ ಗೌಡ ಅಭಿಮಾನಿಗಳ ಬಳಗ ದೊಡ್ಡದಾಗಿದೆ. ಇನ್‌ಸ್ಟಾಗ್ರಾಂನಲ್ಲಿ ಒಂದು ಮಿಲಿಯನ್ ಫಾಲೋವರ್ಸ್ ಇದ್ದಾರೆ.

    Bramha Gantu: ತೆಳ್ಳಾಗಾಗಲು 'ಬ್ರಹ್ಮಗಂಟು' ಗೀತಾ ಅನುಸರಿಸುತ್ತಿರುವ ಡಯೆಟ್ ಪ್ಲಾನ್ ಹೇಗಿದೆ ನೋಡಿ!Bramha Gantu: ತೆಳ್ಳಾಗಾಗಲು 'ಬ್ರಹ್ಮಗಂಟು' ಗೀತಾ ಅನುಸರಿಸುತ್ತಿರುವ ಡಯೆಟ್ ಪ್ಲಾನ್ ಹೇಗಿದೆ ನೋಡಿ!

    ಸದಾ ಸೋಶಿಯಲ್ ಮೀಡಿಯಾಗಳಲ್ಲಿ ಆಕ್ಟಿವ್ ಆಗಿರುವ ವೈಷ್ಣವಿ ಗೌಡ, ಐಕಾನಿಕ್ ಲುಕ್‌ಗಳನ್ನು ರಿ ಕ್ರಿಯೇಟ್ ಮಾಡುತ್ತಿರುತ್ತಾರೆ. ಇತ್ತೀಚೆಗಷ್ಟೇ ಕಲ್ಪಾನಾ ಅವರಂತೆ ಸೀರೆಯುಟ್ಟು ಅಭಿಮಾನಿಗಳಿಗೆ ಖುಷಿಕೊಟ್ಟಿದ್ದರು. ಇದೀಗ 'ಗಂಗೂಬಾಯಿ ಕಾಠಿಯವಾಡಿ' ಲುಕ್ ಅನ್ನು ರೀ-ಕ್ರಿಯೇಟ್ ಮಾಡಿ, ವಿಡಿಯೋ ಅಪ್ ಲೋಡ್ ಮಾಡಿದ್ದರು.\

    ಮಲ್ಟಿ ಟ್ಯಾಲೆಂಟ್ ಹುಡುಗಿ ವೈಷ್ಣವಿ ಗೌಡ!

    ಮಲ್ಟಿ ಟ್ಯಾಲೆಂಟ್ ಹುಡುಗಿ ವೈಷ್ಣವಿ ಗೌಡ!

    ಸದಾ ಹೊಸತನಕ್ಕೆ ತುಡಿಯುವ ವೈಷ್ಣವಿ ಗೌಡ ಸಖತ್ ಟ್ಯಾಲೆಂಟೆಡ್ ಹುಡುಗಿ ಎಂದರೆ ತಪ್ಪಾಗಲಾರದು. ಭರತನಾಟ್ಯಂ, ಕುಚುಪುಡಿ, ಬೆಲ್ಲಿ ಡ್ಯಾನ್ಸ್ ಅನ್ನು ಕರಗತ ಮಾಡಿಕೊಂಡಿದ್ದಾರೆ. ಇದರ ಜೊತೆಗೆ ವೈಷ್ಣವಿ ಗೌಡ ಹಾಡನ್ನು ಕೂಡ ಹಾಡುತ್ತಾರೆ. ಇನ್ನು ವೈಶೂ ಸದಾ ಅಭಿಮಾನಿಗಳನ್ನು ರಂಜಿಸಲು ಸೋಶಿಯಲ್ ಮೀಡಿಯಾದಲ್ಲಿ ಏನಾದರೂ ಒಂದು ಮಾಡುತ್ತಲೇ ಇರುತ್ತಾರೆ.

    ಹಲವು ಕಾರ್ಯಕ್ರಮಗಳಲ್ಲಿ ಮಿಂಚಿದ ವೈಷ್ಣವಿ!

    ಹಲವು ಕಾರ್ಯಕ್ರಮಗಳಲ್ಲಿ ಮಿಂಚಿದ ವೈಷ್ಣವಿ!

    ವೈಷ್ಣವಿ ಗೌಡ ಕೇವಲ ನಟನೆಯಲ್ಲಷ್ಟೇ ತಮ್ಮನ್ನು ತಾವು ತೊಡಗಿಸಿಕೊಂಡಿಲ್ಲ. ಬದಲಿಗೆ ಆಗಾಗ ನಿರೂಪಣೆಯನ್ನೂ ಮಾಡುತ್ತಿರುತ್ತಾರೆ. ಭರ್ಜರಿ ಕಾಮಿಡಿ ಎಂಬ ರಿಯಾಲಿಟಿ ಶೋನಲ್ಲಿ ವೈಷ್ಣವಿ ಗೌಡ ಆಂಕರಿಂಗ್ ಮಾಡಿದ್ದಾರೆ. 'ದೇವಿ' ಧಾರಾವಾಹಿ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದ ವೈಷ್ಣವಿ ಗೌಡ 'ಪುನರ್ ವಿವಾಹ' ಹಾಗೂ 'ಅಗ್ನಿ ಸಾಕ್ಷಿ' ಧಾರಾವಾಹಿಯಲ್ಲಿ ನಟಿಸಿದ್ದಾರೆ. ಇನ್ನು 'ಕುಣಿಯೋಣು ಬಾರಾ' ರಿಯಾಲಿಟಿ ಶೋದಲ್ಲಿ ಭಾಗವಹಿಸಿದ್ದಾರೆ. ಇತ್ತೀಚೆಗೆ ಹಲವು ಪ್ರಾಡಕ್ಟ್‌ಗಳ ಜಾಹೀರಾತುಗಳಿಗೆ ಬಣ್ಣ ಹಚ್ಚಿದ್ದಾರೆ. ಮೇಕಪ್, ಸೀರೆ, ಜ್ಯೂವೆಲರಿಗಳ ಬಗ್ಗೆ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

    ಸಿನಿಮಾಗಳಲ್ಲೂ ಮಿಂಚಿದ ನಟಿ ವೈಷ್ಣವಿ!

    ಸಿನಿಮಾಗಳಲ್ಲೂ ಮಿಂಚಿದ ನಟಿ ವೈಷ್ಣವಿ!

    'ಗಿರಗಿಟ್ಲೆ' ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿರುವ ವೈಷ್ಣವಿ ಭಲೇ ಹುಚ್ಚ ಎಂಬ ಸಿನಿಮಾದಲ್ಲೂ ನಟಿಸಿದ್ದರು. ಇದೀಗ 'ಬಹುಕೃತ ವೇಷಂ' ಎಂಬ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಹೆಸರಿನಂತೆಯೇ ಈ ಚಿತ್ರದಲ್ಲಿ ವೈಷ್ಣವಿ ಡಿಫರೆಂಟ್ ವೇಷದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಸಿನಿಮಾಗಳಲ್ಲಿ ಮತ್ತೆ ಯಾವಾಗ ಕಾಣಿಸಿಕೊಳ್ಳುತ್ತಾರೆ ಅಂತ ಗೊತ್ತಿಲ್ಲ. ಆದರೆ ಮತ್ತೆ ಕಿರುತೆರೆಗೆ ಎಂಟ್ರಿ ಕೊಡುವ ಮೂಲಕ ಸುದ್ದಿ ಆಗಿದ್ದಾರೆ ವೈಷ್ಣವಿ.

    ವೈಷ್ಣವಿ ಹೊಸ ಪ್ರಾಜೆಕ್ಟ್ ಏನು?

    ವೈಷ್ಣವಿ ಹೊಸ ಪ್ರಾಜೆಕ್ಟ್ ಏನು?

    ವೈಷ್ಣವಿ ಗೌಡ ಅವರು ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಒಂದನ್ನು ತೆರೆದಿದ್ದಾರೆ. ಇದರಲ್ಲಿ ವೈಷ್ಣವಿ ತಮ್ಮ ಡೈಲಿ ರೋಟಿನ್, ವರ್ಕೌಟ್, ಯೋಗದ ಬಗ್ಗೆ ವಿಡಿಯೋ ಮಾಡುತ್ತಿರುತ್ತಾರೆ. ಜೊತೆಗೆ ನಿವೇದಿತಾ ಗೌಡ ಸೇರಿದಂತೆ ಕೆಲವರ ಸಂದರ್ಶನವನ್ನೂ ಮಾಡಿದ್ದಾರೆ. ಇದರ ಜೊತೆಗೆ ಆಗಾಗ ಡ್ಯಾನ್ಸ್ ಮಾಡಿದ ವಿಡಿಯೋಗಳನ್ನೂ ಅಪ್ ಲೋಡ್ ಮಾಡುತ್ತಿರುತ್ತಾರೆ. ಇದೀಗ ವೈಷ್ಣವಿ ಗೌಡ ಮತ್ತೆ ಕಿರುತೆರೆಗೆ ಬರುತ್ತಿದ್ದಾರೆ. ಜೀ ವಾಹಿನಿಯಲ್ಲಿ ಹೊಸ ಧಾರಾವಾಹಿಯ ಚಿತ್ರೀಕರಣ ನಡೆಯುತ್ತಿದ್ದು, ಕೆಎಸ್ ರಾಮ್ ಜೀ ನಿರ್ದೇಶನ ಮಾಡುತ್ತಿದ್ದಾರೆ.

    English summary
    Agnisakshi Fatme Vaishnavi Gowda Come Back To Tv With New Serial, Know More
    Friday, April 1, 2022, 10:43
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X