Don't Miss!
- News
55 ಪ್ರಯಾಣಿಕರನ್ನು ಬೆಂಗಳೂರಿನಲ್ಲಿ ಬಿಟ್ಟು ಹೋಗಿದ್ದ ಗೋ ಫಸ್ಟ್ ಏರ್ವೇಸ್ಗೆ ವಿಧಿಸಿರುವ ದಂಡವೆಷ್ಟು ಗೊತ್ತೆ?
- Finance
Jio, Airtel 5G: ಕಳೆದ 4 ತಿಂಗಳಲ್ಲಿ ಎಷ್ಟು ಗ್ರಾಹಕರನ್ನು ಆಕರ್ಷಿಸಿವೆ ಟೆಲಿಕಾಂ ಕಂಪನಿಗಳು? ಇಲ್ಲಿದೆ ಮಾಹಿತಿ
- Sports
KCC Cup 2023: ಯಾವ ತಂಡಕ್ಕೆ ಯಾರು ನಾಯಕ?; ಸುದೀಪ್ ತಂಡದಲ್ಲಿ ಯೂನಿವರ್ಸಲ್ ಬಾಸ್!
- Technology
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- Automobiles
ಭಾರತದಲ್ಲಿ ದಾಖಲೆ ಮಟ್ಟದ ಬುಕ್ಕಿಂಗ್ ಪಡೆದುಕೊಳ್ಳುತ್ತಿವೆ ಮಾರುತಿ ಜಿಮ್ನಿ, ಫ್ರಾಂಕ್ಸ್
- Lifestyle
ಸಂಗಾತಿ ಸುಮ್-ಸಮ್ಮನೇ ಸಂಶಯ ಪಡುತ್ತಾರಾ? ಅವರ ಸಂಶಯ ಹೋಗಲಾಡಿಸಲು ಏನು ಮಾಡಬೇಕು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಗುಟ್ಟಾಗಿ ನಡೀತಾ ವೈಷ್ಣವಿ ಗೌಡ ಎಂಗೇಜ್‌ಮೆಂಟ್? ವೈರಲ್ ಫೋಟೊ ಅಸಲಿಯತ್ತೇನು?
'ಅಗ್ನಿಸಾಕ್ಷಿ' ಧಾರಾವಾಹಿ ಮೂಲಕ ವೀಕ್ಷಕರ ಮನಗೆದ್ದ ನಟಿ ವೈಷ್ಣವಿ ಗೌಡ ಮದುವೆಗೆ ಸಿದ್ಧತೆ ನಡೀತಿದೆ. ಗುಟ್ಟಾಗಿ ಎಂಗೇಜ್‌ಮೆಂಟ್ ಕೂಡ ಆಗಿದೆ ಎನ್ನಲಾಗುತ್ತಿದೆ. ಆದರೆ ಇದು ಎಂಗೇಜ್‌ಮೆಂಟ್ ಅಲ್ಲ ಎಂದು ಆಕೆ ಸ್ಪಷ್ಟನೆ ನೀಡಿದ್ದಾರೆ.
ಕಿರುತೆರೆ ನಟಿ ಹಾಗೂ ಬಿಗ್‌ಬಾಸ್ ಸ್ಪರ್ಧಿ ವೈಷ್ಣವಿ ಗೌಡ ಎಂಗೇಜ್‌ಮೆಂಟ್ ಆಗಿದೆ ಎಂದು ಫೋಟೊವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಧಾರಾವಾಹಿ ಮೂಲಕ ಅಭಿನಯ ಆರಂಭಿಸಿದ ನಟಿ ವೈಷ್ಣವಿಗೌಡ ಅವರು ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವಾಗಲೇ ನಟನೆ ಆರಂಭಿಸಿದ ವೈಷ್ಣವಿ ಗೌಡ ಅವರು ಇಂದಿಗೂ ಪಡ್ಡೆ ಹುಡುಗರ ಕನಸಿನ ರಾಣಿ. ವೈಷ್ಣವಿ ಗೌಡ ಅವರಿಗೆ ದೊಡ್ಡ ಅಭಿಮಾನಿಗಳ ಬಳಗವಿದೆ.
ಪಾರು
ಕೈ
ಗೆ
ಸಿಕ್ಕಿ
ಬಿದ್ದ
ಮೋನಿಕಾ:
ಪ್ರೀತೂವನ್ನು
ಕಾಪಾಡುವವರು
ಯಾರು?
ಮತ್ತೆ ವೈಷ್ಣವಿ ನಟನೆ ಮಾಡಬೇಕು, ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲಿ ಎಂದು ಅಭಿಮಾನಿಗಳು ಕೇಳುತ್ತಲೇ ಇರುತ್ತಾರೆ. ಅಗ್ನಿಸಾಕ್ಷಿ ಸನ್ನಿಧಿ ಎಂದೇ ಚಿರಪರಿಚಿತರಾದ ವೈಷ್ಣವಿ ಗೌಡ ಅವರು ಸಿನಿಮಾ ಕ್ಷೇತ್ರಕ್ಕೂ ಕಾಲಿಟ್ಟಿದ್ದು, ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಅನ್ನು ಹೊಂದಿದ್ದಾರೆ.

ಮನೆಯಲ್ಲೂ ಸಿಕ್ಕಿತ್ತು ಗ್ರೀನ್ ಸಿಗ್ನಲ್
ನಟಿ ವೈಷ್ಣವಿ ಗೌಡ ಅವರು ಮದುವೆಯಾಗಲು ತುದಿಗಾಲಿನಲ್ಲಿ ನಿಂತಿದ್ದರು. ಅಷ್ಟೇ ಅಲ್ಲದೇ, ತಾವು ಮದುವೆಯಾಗುವ ಹುಡುಗ ಹೇಗಿರಬೇಕು ಎಂದು ಕೂಡ ಹೇಳಿಕೊಂಡಿದ್ದರು. ಅಲ್ಲದೇ ಜಯಶ್ರೀ ಎಂಬ ಟ್ಯಾರೋ ಕಾರ್ಡ್ ರೀಡರ್ ಅವರ ಬಳಿ ಹೋಗಿದ್ದ ವೈಷ್ಣವಿ ಅವರು ತಮ್ಮ ಮದುವೆಯ ಬಗ್ಗೆ ಕೆಲ ಪ್ರಶ್ನೆಗಳನ್ನು ಕೇಳಿದ್ದರು. ಟ್ರಾರೋ ಕಾರ್ಡ್ ಪ್ರಕಾರ ವೈಷ್ಣವಿ ಅವರ ಮದುವೆ ದಿನಾಂಕವನ್ನು ಹೇಳಲಾಗಿತ್ತು. ಅಂದರೆ 8 ದಿನ ಅಥವಾ 8 ವಾರ, ಇಲ್ಲವೇ 8 ತಿಂಗಳಲ್ಲಿ ವೈಷ್ಣವಿ ಗೌಡ ಅವರ ಮದುವೆ ನಡೆಯಲಿದೆ ಎಂದು ಹೇಳಿದ್ದರು. ವೈಷ್ಣವಿ ಮದುವೆಯಾಗುವ ಹುಡುಗ ತುಂಬಾ ಸಿಂಪಲ್ ಆಗಿರುವುದರ ಜೊತೆಗೆ ಹೊಂದಿಕೊಳ್ಳುವಂತವರಾಗಿರುತ್ತಾರೆ ಎಂದು ಕೂಡ ಹೇಳಿದ್ದರು. ಇದರ ಜೊತೆಗೆ ವೈಷ್ಣವಿ ಅವರು ಕೂಡ ಮದುವೆಯಾಗಲು ಕಾತುರರಾಗಿದ್ದರು. ಇನ್ನು ವೈಷ್ಣವಿ ಅವರ ಮನೆಯಲ್ಲೂ ಮಗಳ ಮದುವೆಗೆ ಗ್ರೀನ್ ಸಿಗ್ನಲ್ ಸಿಕ್ಕಿತ್ತು.

ಉಂಗುರ ಬದಲಾಯಿಸಿಕೊಂಡ ನಟ-ನಟಿ?
ಬಟ್ ಈಗ ಹುಡುಗನೂ ಸಿಕ್ಕಿದ್ದು. ವೈಷ್ಣವಿ ಅವರು ಯಾರಿಗೂ ಹೇಳದ ಹಾಗೆ ಸೈಲೆಂಟ್ ಆಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ವಿದ್ಯಾ ಭರಣ್ ಎಂಬುವರೊಂದಿಗೆ ವೈಷ್ಣವಿ ಅವರು ಸಿಂಪಲ್ ಆಗಿ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ ಎನ್ನಲಾಗ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಫೋಟೋದಲ್ಲಿ ವೈಷ್ಣವಿ ಅವರು ರೇಷ್ಮೆ ಸೀರೆ ಉಟ್ಟಿದ್ದಾರೆ. ಹಾರವನ್ನು ಧರಿಸಿದ್ದು, ಪಕ್ಕದಲ್ಲಿ ವಿದ್ಯಾ ಭರಣ್ ಅವರು ಹಾರ ಹಾಕಿಕೊಂಡಿದ್ದಾರೆ. ಇನ್ನು ಈ ಫೋಟೋದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಶಂಕರ್ ಬಿದಿರಿ ಅವರು ಕೂಡ ಕಾಣಿಸಿಕೊಂಡಿದ್ದಾರೆ. ಈ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಸ್ಪಷ್ಟನೆ ನೀಡಿದ ವೈಷ್ಣವಿ ಗೌಡ
ಇನ್ನು ಈ ವಿದ್ಯಾ ಭರಣ್ ಅವರು ಕೂಡ ನಟ. 'ವಿರಾಜ್' ಎಂಬ ಸಿನಿಮಾದಲ್ಲಿ ಹೀರೋ ಆಗಿ ಕಾಣಿಸಿಕೊಂಡಿದ್ದರು. ಇಂಜಿನಿಯರ್ ಓದಿರುವ ವಿದ್ಯಾ ಭರಣ್ ಅವರು ವೈಷ್ಣವಿ ಅವರನ್ನು ಮದುವೆಯಾಗುತ್ತಿದ್ದಾರೆ ಎಂದು ಹೇಳಲಾಗಿದೆ. ಫೊಟೋ ವೈರಲ್ ಆದ ಕಾರಣ, ಇಬ್ಬರೂ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಮಾಧ್ಯಮವೊಂದಕ್ಕೆ ನಟಿ ವೈಷ್ಣವಿ ಗೌಡ ಸ್ಪಷ್ಟನೆ ನೀಡಿದ್ದಾರೆ.

ಮದುವೆಯಾಗುವ ಹಾದಿಯಲ್ಲಿ ಸನ್ನಿಧಿ
ವೈಷ್ಣವಿ ಗೌಡ ಅವರು ಬಿಗ್ ಬಾಸ್ ಮನೆಯಲ್ಲಿದ್ದಾಗ ತಮ್ಮ ಕನಸಿನ ಬಗ್ಗೆ ಹಾಗೂ ತಾವು ಮದುವೆಯಾಗುವ ಹುಡುಗನ ಬಗ್ಗೆ ಹೇಳಿಕೊಂಡಿದ್ದರು. ತಾವೊಂದು ಮನೆಯನ್ನು ಖರೀದಿಸಬೇಕು ಎಂಬ ಆಸೆಯನ್ನು ಈಗಾಗಲೇ ನೆರವೇರಿಸಿಕೊಂಡಿದ್ದರು. ಸದ್ಯ ವೈರಲ್ ಫೋಟೊ ಬಗ್ಗೆ ಮಾಧ್ಯಮವೊಂದಕ್ಕೆ ವೈಷ್ಣವಿ ಸ್ಪಷ್ಟನೆ ಕೊಟ್ಟಿದ್ದಾರೆ. ಇದು ಎಂಗೇಜ್‌ಮೆಂಟ್ ಅಲ್ಲ. ಬರೀ ಮಾತುಕತೆ ಅಷ್ಟೆ. ಎಂಗೇಜ್‌ಮೆಂಟ್ ಬಗ್ಗೆ ಮಾತುಕತೆ ಆಗಿದೆ. ನಾನು ಇನ್ನು ಒಪ್ಪಿಕೊಂಡಿಲ್ಲ. ಇದು ಪಕ್ಕಾ ಅರೇಂಜ್ಡ್ ಮ್ಯಾರೇಜ್. ನನಗೂ ಅವರು ಹೊಸ ವ್ಯಕ್ತಿ. ಮುಂದೆ ನೋಡೋಣ ಎಂದಿದ್ದಾರೆ. ಆದರೆ ಶೀಘ್ರದಲ್ಲೇ ಇವರಿಬ್ಬರ ಎಂಗೇಜ್‌ಮೆಂಟ್ ನಡೆಯುವ ಸಾಧ್ಯತೆಯಿದೆ.