For Quick Alerts
  ALLOW NOTIFICATIONS  
  For Daily Alerts

  ಮದುವೆಯಾಗುವುದು ನನ್ನ ದೊಡ್ಡ ಕನಸು, ಅದನ್ನು ನನಸು ಮಾಡಿಕೊಳ್ಳುತ್ತೇನೆ; ಕಾಂಟ್ರವರ್ಸಿಗೆ ಬ್ರೇಕ್ ಹಾಕಿದ ವೈಷ್ಣವಿ!

  By ಪ್ರಿಯಾ ದೊರೆ
  |

  ಇತ್ತೀಚೆಗಷ್ಟೇ ಮದುವೆ ವಿಚಾರವಾಗಿ ವೈಷ್ಣವಿ ಗೌಡ ಅವರು ಸುದ್ದಿಯಲ್ಲಿದ್ದರು. ಕೆಲ ದಿನಗಳ ಹಿಂದೆ ವೈಷ್ಣವಿ ಗೌಡ ಅವರ ಫೋಟೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಅವರ ಮದುವೆಯ ವಿಚಾರ ಭಾರೀ ಚರ್ಚೆಯಲ್ಲಿತ್ತು.

  ಇದಕ್ಕೆ ಕಾರಣ ವೈಷ್ಣವಿ ಗೌಡ ಅವರ ಮದುವೆ. ವೈಷ್ಣವಿ ಗೌಡ ಅವರ ಮದುವೆಯ ಬಗ್ಗೆ ಹಲವರು ಬಹಳಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿದ್ದರು. ಇದೇ ವೇಳೆಗೆ ವೈಷ್ಣವಿ ಅವರ ಹಾರ ಬದಲಾಯಿಸಿಕೊಂಡು ಸಿಹಿ ತಿನ್ನುತ್ತಿದ್ದ ಫೋಟೋ ವೈರಲ್ ಆಗಿತ್ತು.

  ಈ ಫೋಟೋ ನೋಡಿ ವೈಷ್ಣವಿ ಗೌಡ ಅವರ ನಿಶ್ಚಿತಾರ್ಥ ನಡೆದೇ ಹೋಗಿದೆ. ಗುಟ್ಟಾಗಿ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ ಎಂದು ಸುದ್ದಿ ಹರಡಿತ್ತು. ನಂತರ ಆಡಿಯೋ ಒಂದು ವೈರಲ್ ಆಗಿ ವೈಷ್ಣವಿ ಗೌಡ ಅವರ ಈ ಫೋಟೊ ದೊಡ್ಡ ವಿವಾದಕ್ಕೆ ಸಿಲುಕಿಕೊಂಡಿತ್ತು.

  ಆಡಿಯೋ ಮಾಡಿದ ಎಡವಟ್ಟು

  ಆಡಿಯೋ ಮಾಡಿದ ಎಡವಟ್ಟು

  ವಿದ್ಯಾ ಭರಣ್ ಅವರೊಂದಿಗೆ ವೈಷ್ಣವಿ ಅವರು ಸಿಂಪಲ್ ಆಗಿ ತಾಂಬೂಲ ಬದಲಾಯಿಸಿಕೊಂಡ ಫೋಟೋದಲ್ಲಿ ಶಂಕರ್ ಬಿದರಿ ಅವರು ಕೂಡ ಕಾಣಿಸಿಕೊಂಡಿದ್ದರು. ಫೋಟೋ ವೈರಲ್ ಆಗುತ್ತಿದ್ದಂತೆ, ನಿಶ್ಚಿತಾರ್ಥ ನಡೆದಿಲ್ಲ. ಕೇವಲ ಮಾತುಕತೆಯಷ್ಟೇ ಆಗಿರುವುದು ಎಂದು ಹೇಳಲಾಗಿತ್ತು. ಅದಾದ ಕೆಲ ದಿನಗಳ ಬಳಿಕ ವಿದ್ಯಾಭರಣ್ ಅವರು ಮಾತನಾಡಿದ ಆಡಿಯೋ ಒಂದು ವೈರಲ್ ಆಯ್ತು. ಇದರ ಬಗ್ಗೆ ವಿದ್ಯಾಭರಣ್ ಅವರು ಕೂಡ, ಅದು ನಾನು ಮಾತನಾಡಿರುವುದಲ್ಲ. ಯಾರೋ ಬೇಕಂತಲೇ ನನ್ನ ತಂದೆಯ ಹೆಸರು ಹಾಳು ಮಾಡುವುದಕ್ಕೆ ಹೀಗೆ ಮಾಡಿದ್ದಾರೆ ಎಂದು ಸ್ಪಷ್ಟನೆ ಕೊಟ್ಟಿದ್ದರು.

  ಅದ್ಧೂರಿ ಮದುವೆ ಮಾಡುತ್ತಾರಾ?

  ಅದ್ಧೂರಿ ಮದುವೆ ಮಾಡುತ್ತಾರಾ?

  ಇದೆಲ್ಲಾ ಗೊಂದಲಗಳ ನಡುವೆ ವೈಷ್ಣವಿ ಗೌಡ ಅವರ ಪೋಷಕರು ಸುದ್ದಿಗೋಷ್ಠಿ ನಡೆಸಿದ್ದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೈಷ್ಣವಿ ಅವರ ಮದುವೆಯ ವಿಚಾರವಾಗಿ ಮಾತನಾಡಿದರು. ಈ ಮದುವೆಯ ವಿಚಾರದಲ್ಲಿ ನಮ್ಮ ಮಗಳು ವೈಷ್ಣವಿ ಗೌಡ ಅವರ ನಿರ್ಧಾರವೇ ಫೈನಲ್. ಅವಳು ಏನು ನಿರ್ಧಾರ ತೆಗೆದುಕೊಳ್ಳುತ್ತಾಳೋ ತೆಗೆದುಕೊಳ್ಳಲಿ. ಅದೇನೇ ಇದ್ದರು, ನನ್ನ ಮಗಳ ಮದುವೆಯನ್ನು ಅದ್ಧೂರಿಯಾಗಿ ಮಾಡಿ ಕೊಡುವೆವು ಎಂದು ಹೇಳಿದ್ದರು.

  ಮದುವೆ ಬಗ್ಗೆ ವೈಷ್ಣವಿ ಗೌಡ ಹೇಳಿದ್ದೇನು?

  ಮದುವೆ ಬಗ್ಗೆ ವೈಷ್ಣವಿ ಗೌಡ ಹೇಳಿದ್ದೇನು?

  ಇದಾದ ಮೇಲೆ ವೈಷ್ಣವಿ ಗೌಡ ಅವರು ಇದೀಗ ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಮದುವೆಯ ಬಗ್ಗೆ ಮೌನ ಮುರಿದಿದ್ದಾರೆ. ಮದುವೆ ಮಾಡಿಕೊಳ್ಳುವುದು ನನ್ನ ದೊಡ್ಡ ಕನಸು. ಅದನ್ನು ನಾನು ನನಸು ಮಾಡಿಕೊಳ್ಳುತ್ತೇನೆ. ಜೀವನಕ್ಕೆ ನಮಗೆ ಏನು ಕೊಡಬೇಕು ಎಂಬುದು ಗೊತ್ತಿರುತ್ತದೆ. ನಾನು ಜೀವನವನ್ನು ನಂಬುತ್ತೇನೆ. ಏನೇ ಆದರೂ ಅದನ್ನು ಪಾಸಿಟಿವ್ ಆಗಿ ಸ್ವೀಕರಿಸುತ್ತೇನೆ. ನಾನಾ ಅಥವಾ ನನ್ನ ಜೀವನಾನಾ ಎಂಬುದನ್ನು ನೋಡೇ ಬಿಡುತ್ತೇನೆ ಎಂದು ವೈಷ್ಣವಿ ಗೌಡ ಅವರು ಹೇಳಿದ್ದಾರೆ.

  ಯಾವ ಧಾರಾವಾಹಿ ಗೊತ್ತಾ?

  ಯಾವ ಧಾರಾವಾಹಿ ಗೊತ್ತಾ?

  ಇನ್ನು ಇದೇ ವೇಳೆ ಮಾತನಾಡುತ್ತಾ ವೈಷ್ಣವಿ ಅವರು, ತಮ್ಮ ನಟನೆಯ ಹೊಸ ಧಾರಾವಾಹಿಯೊಂದು ಕೆಲವೇ ಸಮಯದಲ್ಲಿ ಪ್ರಸಾರವಾಗಲಿದೆ, ನಿಮ್ಮನ್ನು ವಾಹಿನಿಯ ಮೂಲಕ ರಂಜಿಸಲು ಬರುತ್ತೇನೆ ಎಂದು ಹೇಳಿದ್ದಾರೆ. ಅಲ್ಲಿಗೆ ವೈಷ್ಣವಿ ಗೌಡ ಅವರು ಧಾರಾವಾಹಿಯೊಂದರಲ್ಲಿ ನಟಿಸುತ್ತಿದ್ದಾರೆ ಎಂದು ಹೇಳಿದ್ದು ಪಕ್ಕಾ ಆಗಿದೆ. ಜೀ ಕನ್ನಡ ವಾಹಿನಿಯಲ್ಲಿ ಆ ಧಾರಾವಾಹಿ ಪ್ರಸಾರ ಕಾಣಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಧಾರಾವಾಹಿಯನ್ನು ಕೆಎಸ್ ರಾಮ್ ಜಿ ಅವರ ನಿರ್ದೇಶಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಆದರೆ ಈ ಧಾರಾವಾಹಿ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ.

  English summary
  vaishnavi gowda speaks about her marriage in a youtube video.
  Thursday, December 8, 2022, 17:33
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X