For Quick Alerts
  ALLOW NOTIFICATIONS  
  For Daily Alerts

  ಹೆಣ್ಣು ಮಗುವಿನ ತಾಯಿ 'ಅಗ್ನಿಸಾಕ್ಷಿ' ಖ್ಯಾತಿಯ ನಟಿ ಚಂದ್ರಿಕಾ

  |

  ಕನ್ನಡ ಕಿರುತೆರೆಯಲ್ಲಿ ಪ್ರಸಿದ್ಧಿ ಪಡೆದಿರುವ ಧಾರಾವಾಹಿಗಳಲ್ಲಿ ಅಗ್ನಿಸಾಕ್ಷಿಯೂ ಒಂದು. ಅಗ್ನಿಸಾಕ್ಷಿ ಅಂದಕ್ಷಣ ವಿಲನ್ ಚಂದ್ರಿಕಾ ಪಾತ್ರ ಥಟ್ ಅಂತ ನೆನಪಾಗುತ್ತೆ. ಕಿರುತೆರೆ ಅಭಿಮಾನಿಗಳ ನಿದ್ದೆಗೆಸಿದ್ದ ಪಾತ್ರ ಚಂದ್ರಿಕಾ. ಈ ಪಾತ್ರದಲ್ಲಿ ಮೊದಲು ಖ್ಯಾತ ನಟಿ ರಾಜೇಶ್ವರಿ ಕಾಣಸಿಕೊಳ್ಳುತ್ತಿದ್ದರು.

  ಹೊಸ ಧಾರಾವಾಹಿಯೊಂದಿಗೆ ಮತ್ತೆ ಬರ್ತಿದ್ದಾರೆ 'ಅಗ್ನಿಸಾಕ್ಷಿ' ಖ್ಯಾತಿಯ ವಿಜಯ್ ಸೂರ್ಯ ಹೊಸ ಧಾರಾವಾಹಿಯೊಂದಿಗೆ ಮತ್ತೆ ಬರ್ತಿದ್ದಾರೆ 'ಅಗ್ನಿಸಾಕ್ಷಿ' ಖ್ಯಾತಿಯ ವಿಜಯ್ ಸೂರ್ಯ

  ರಾಜೇಶ್ವರಿ ಎನ್ನುವುದಕ್ಕಿಂತ ಚಂದ್ರಿಕಾ ಅಂದ್ರೆನೆ ಎಲ್ಲರಿಗೂ ಬಹು ಬೇಗ ಗೊತ್ತಾಗುತ್ತೆ. ಹಳೆ ಚಂದ್ರಿಕಾ, ರಾಜೇಶ್ವರಿ ಧಾರಾವಾಹಿಯಿಂದ ಹೊರಬಂದು ವರ್ಷವೆ ಆಗಿದೆ. ಆದ್ರೂ ಸಹ ಹಳೆ ಚಂದ್ರಿಕಾ ಎಲ್ಲರ ಮನದಲ್ಲೂ ಹಾಗೆ ಉಳಿದುಕೊಂಡಿದ್ದಾರೆ. ಚಂದ್ರಿಕಾ ಈಗ ಏನ್ಮಾಡ್ತಿದ್ದಾರೆ? ಎಲ್ಲಿದ್ದಾರೆ? ಹೇಗಿದ್ದಾರೆ ಗೊತ್ತಾ? ಮುಂದೆ ಓದಿ..

  ಹೆಣ್ಣು ಮಗುವಿಗೆ ಜನ್ಮ ನೀಡಿರುವ ರಾಜೇಶ್ವರಿ

  ಹೆಣ್ಣು ಮಗುವಿಗೆ ಜನ್ಮ ನೀಡಿರುವ ರಾಜೇಶ್ವರಿ

  ರಾಜೇಶ್ವರಿ ಈಗ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಇತ್ತೀಚಿಗಷ್ಟೆ ಮಗಳ ನಾಮಕರಣ ಕೂಡ ಮಾಡಿದ್ದಾರೆ. ಅಂದ್ಹಾಗೆ ರಾಜೇಶ್ವರಿ ದಂಪತಿ ಮುದ್ದು ಮಗಳಿಗೆ "ಹವ್ಯಾ ಕೃಷ್ಣ" ಎಂದು ಹೆಸರಿಟ್ಟಿದ್ದಾರೆ. ಮಗಳ ಮುದ್ದಾದ ಫೊಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಜ್ಯೂನಿಯರ್ ರಾಜೇಶ್ವರಿಯನ್ನು ಪರಿಚಯಿಸಿದ್ದಾರೆ.

  'ಅಗ್ನಿಸಾಕ್ಷಿ'ಯಿಂದ ಸಿದ್ಧಾರ್ಥ್ ಹೋದ ಬೆನ್ನಲ್ಲೆ ಸನ್ನಿಧಿ ಕೊಡ್ತಾರಾ ಶಾಕ್?'ಅಗ್ನಿಸಾಕ್ಷಿ'ಯಿಂದ ಸಿದ್ಧಾರ್ಥ್ ಹೋದ ಬೆನ್ನಲ್ಲೆ ಸನ್ನಿಧಿ ಕೊಡ್ತಾರಾ ಶಾಕ್?

  ಅಸ್ಟ್ರೇಲಿಯಾದಲ್ಲಿ ನೆಲೆಸಿರುವ ಹಳೆ ಚಂದ್ರಿಕಾ

  ಅಸ್ಟ್ರೇಲಿಯಾದಲ್ಲಿ ನೆಲೆಸಿರುವ ಹಳೆ ಚಂದ್ರಿಕಾ

  ಚಂದ್ರಿಕಾ ಪಾತ್ರದಿಂದ ಹೊರಬಂದ ನಟಿ ರಾಜೇಶ್ವರಿ ನಂತರ ಕಲ್ಯಾಣ್ ಕ್ರಿಶ್ ಜೊತೆ ಸಪ್ತಪದಿ ತುಳಿದಿದ್ದರು. ಆ ನಂತರ ಪತಿ ಜೊತೆ ರಾಜೇಶ್ವರಿ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದಾರೆ. ಬಣ್ಣದ ಲೋಕದಿಂದ ಸಂಪೂರ್ಣವಾಗಿ ದೂರ ಉಳಿದಿರುವ ರಾಜೇಶ್ವರಿ ಈಗ ಆಸ್ಟ್ರೇಲಿಯಾದಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.

  ಉದ್ದ ಕೂದಲಿಗೆ ಕತ್ತರಿ

  ಉದ್ದ ಕೂದಲಿಗೆ ಕತ್ತರಿ

  ರಾಜೇಶ್ವರಿ ಉದ್ದ ಕೂದಲಿನ ಚೆಲುವೆ. ಉದ್ದನೆಯ ಗುಂಗುರು ಕೂದಲಿನ ಮೂಲಕ ಎಲ್ಲರನ್ನು ಸೆಳೆಯುತ್ತಿದ್ದ ರಾಜೇಶ್ವರಿ ಈಗ ತನ್ನ ಉದ್ದವಾದ ಕೂದಲಿಗೆ ಕತ್ತರಿಹಾಕಿದ್ದಾರೆ. ವಿಭಿನ್ನವಾಗಿ ಕಾಣಿಸುವ ರಾಜೇಶ್ವರಿಯವರ ಸ್ಟೈಲ್ ಸಂಪೂರ್ಣವಾಗಿ ಬದಲಾಗಿದೆ.

  ಆಸ್ಟ್ರೇಲಿಯಾಗೆ ಹೋದ ಸಿದ್ದಾರ್ಥ್ : ಪತಿ ಇಲ್ಲದೆ ಒಂಟಿಯಾದ ಸನ್ನಿಧಿಆಸ್ಟ್ರೇಲಿಯಾಗೆ ಹೋದ ಸಿದ್ದಾರ್ಥ್ : ಪತಿ ಇಲ್ಲದೆ ಒಂಟಿಯಾದ ಸನ್ನಿಧಿ

  ಗರ್ಭಿಣಿ ಫೊಟೋಶೂಟ್ ಮಾಡಿಸಿದ್ದ ನಟಿ

  ಗರ್ಭಿಣಿ ಫೊಟೋಶೂಟ್ ಮಾಡಿಸಿದ್ದ ನಟಿ

  ಇತ್ತೀಚಿನ ದಿನಗಳಲ್ಲಿ ಗರ್ಭಿಣಿ ಫೊಟೋಶೂಟ್ ಟ್ರೆಂಡ್ ಆಗಿದೆ. ರಾಜೇಶ್ವರಿ ಕೂಡ ಆಕರ್ಷಕವಾದ ಫೊಟೋಶೂಟ್ ಮಾಡಿಸಿದ್ದರು. ರಾಜೇಶ್ವರಿ ಪ್ರೆಗ್ನೆನ್ಸಿ ಫೊಟೋಶೂಟ್ ಕೂಡ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಸದ್ಯ ಧಾರಾವಾಹಿ ಲೋಕದಿಂದ ಬಹು ದೂರ ಸರಿದು ಪತಿ, ಮಗಳು, ಕೆಲಸ ಅಂತ ಸಂತೋಷವಾಗಿರುವ ರಾಜೇಶ್ವರಿ ಹೀಗೆ ನಗುತ ಇರಲಿ ಎನ್ನುವುದೆ ಅಭಿಮಾನಿಗಳ ಆಶಯ.

  English summary
  Kannada famous serial Agnisakshi fame actress Rajeshwari gave birth to a baby girl. Rajeshwari settle in Australia with her husband Kalyan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X