ಪ್ರೀತಿಸಿದ ಹುಡುಗನಿಗೆ ಉಂಗುರ ತೊಡಿಸಿದ ನಟಿ ಶೋಭಾ ಶೆಟ್ಟಿ
ಕಿರುತೆರೆಯಲ್ಲಿ ಈಗ ಸಾಲು ಸಾಲು ಮದುವೆಯದ್ದೇ ಸುದ್ದಿ. ಕಿರುತೆರೆ ನಟ-ನಟಿಯರೆಲ್ಲರೂ ದಾಂಪತ್ಯ ಜೀವನ ನಡೆಸಲು ಮುಂದಾಗುತ್ತಿದ್ದಾರೆ.
ಕೆಲ ನಟಿಯರು ನಾನು ಮದುವೆಗೆ ಸಿದ್ಧ, ರಾಜಕುಮಾರನ ಹುಡುಕಾಟದಲ್ಲಿದ್ದೇನೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಅನೌನ್ಸ್ ಕೂಡ ಮಾಡಿದ್ದಾರೆ.

ಇನ್ನು ಕನ್ನಡದ ನಟಿ ತೆಲುಗು ಕಿರುತೆರೆಯಲ್ಲಿ ಬ್ಯುಸಿಯಾಗಿದ್ದುಕೊಂಡು ಈಗ ತಮ್ಮ ಹುಟ್ಟುಹಬ್ಬದ ದಿನವೇ ಸಿಹಿ ಸುದ್ದಿ ಕೊಟ್ಟಿದ್ದಾರೆ. ಅದು ಮತ್ಯಾರು ಅಲ್ಲ ನಟಿ ಶೋಭಾ ಶೆಟ್ಟಿ.
ಕನ್ನಡ ಕಿರುತೆರೆಯಲ್ಲಿ ನಟನೆ
ಅಷ್ಟಕ್ಕೂ ಯಾರಪ್ಪಾ ಇವರು ಶೋಭಾ ಶೆಟ್ಟಿ ಎಂದು ಕೆಲವರು ಯೋಚಿಸುತ್ತಿರಬಹುದು. ಯಾಕೆಂದರೆ, ಕಿರುತೆರೆ ನಟಿ ಶೋಭಾ ಶೆಟ್ಟಿ ಕನ್ನಡದಿಂದ ಪರಭಾಷೆಗೆ ತೆರಳಿ ಬಹಳ ಕಾಲವಾಗಿದೆ. ಹೀಗಾಗಿ ಹಲವರಿಗೆ ನೆನಪಿರುವುದು ಕಷ್ಟ. ಕನ್ನಡದಲ್ಲಿ ಸುಮಾರು ಏಳು ವರ್ಷಗಳ ಕಾಲ ಮೂಡಿ ಬಂದ ಎಲ್ಲರ ಫೆವರಿಟ್ ಧಾರಾವಾಹಿ 'ಅಗ್ನಿಸಾಕ್ಷಿ'. ಈ ಧಾರಾವಾಹಿಯಂತೂ ಈಗಲೂ ಎಲ್ಲರಿಗೂ ನೆನಪಿದೆ. ಇದೇ ಧಾರಾವಾಹಿಯಲ್ಲೇ ನಟಿ ಶೋಭಾ ಶೆಟ್ಟಿ ಬಣ್ಣ ಹಚ್ಚಿದ್ದರು. ಕೆಲ ದಿನಗಳ ಕಾಲ 'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ನಟಿಸಿದ ಇವರು, ಕಾರಣಾಂತರಗಳಿಂದ ಅರ್ಧಕ್ಕೆ ತಂಡದಿಂದ ಹೊರ ನಡೆದಿದ್ದರು. 'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ಸನ್ನಿಧಿ ಸಹೋದರಿ ತನು ಪಾತ್ರದಲ್ಲಿ ನಟಿಸಿದ್ದರು.
ಶೋಭಾ ಶೆಟ್ಟಿ ನಟನೆಯ ಧಾರಾವಾಹಿಗಳು
'ಅಗ್ನಿಸಾಕ್ಷಿ' ಧಾರಾವಾಹಿಯಿಂದ ಹೊರ ನಡೆದ ಮೇಲೆ ನಟಿ ಶೋಭಾ ಶೆಟ್ಟಿ ತೆಲುಗು ಹಾಗೂ ತಮಿಳು ಕಿರುತೆರೆಯಲ್ಲಿ ಸಕ್ರಿಯರಾದರು. ಈಗಲೂ ತೆಲುಗು ಕಿರುತೆರೆಯಲ್ಲಿ ಮಿಂಚುತ್ತಿದ್ದಾರೆ. ಕನ್ನಡದಲ್ಲಿ 'ಪಡುವಾರಹಳ್ಳಿ ಪಡ್ಡೆಗಳು' ಧಾರಾವಾಹಿ ಮೂಲಕ ಶೋಭಾ ಶೆಟ್ಟಿ ಮೊದಲ ಬಾರಿಗೆ ಬಣ್ಣ ಹಚ್ಚಿದರು. ನಂತರ 'ಅಗ್ನಿಸಾಕ್ಷಿ', ರುಕ್ಕು ಧಾರಾವಾಹಿಗಳಲ್ಲಿ ಮಿಂಚಿದರು. ಕನ್ನಡದಲ್ಲಿ ಶೋಭಾ ಶೆಟ್ಟಿ ಹೆಚ್ಚಾಗಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.

ತೆಲುಗು ಬಿಗ್ ಬಾಸ್‌ನಲ್ಲಿ ಭಾಗಿ
ತೆಲುಗು ಕಿರುತೆರೆಯಲ್ಲಿ ಮಿಂಚುತ್ತಿರುವ ನಟಿ ಶೋಭಾ ಶೆಟ್ಟಿ ನೆಲೆಸಿರುವುದು ಬೆಂಗಳೂರಿನಲ್ಲಿ. ಶೂಟಿಂಗ್ ಇರುವಾಗ ಮಾತ್ರವೇ ಹೈದ್ರಾಬಾದ್‌ಗೆ ತೆರಳುತ್ತಾರೆ. ಇನ್ನು ಶೋಭಾ ಶೆಟ್ಟಿ ಯುಟ್ಯೂಬ್ ಚಾನೆಲ್ ಅನ್ನು ತೆರೆದಿದ್ದಾರೆ. ಇದರಲ್ಲಿ ಮೇಕಪ್, ಶಾಪಿಂಗ್ ಸೇರಿದಂತೆ ತಮ್ಮ ದಿನಚರಿ ಬಗ್ಗೆಯೂ ಇದರಲ್ಲಿ ವೀಡಿಯೋ ಮಾಡಿ ಅಪ್ ಲೋಡ್ ಮಾಡುತ್ತಿರುತ್ತಾರೆ. ತೆಲುಗು ಭಾಷೆಯಲ್ಲೇ ಹೆಚ್ಚು ವೀಡಿಯೋ ಮಾಡಿದ್ದಾರೆ. ಇನ್ನು ಇತ್ತೀಚೆಗಷ್ಟೇ ನಡೆದ ತೆಲುಗು ಬಿಗ್ ಬಾಸ್ ಸೀಸನ್- 7 ರಲ್ಲಿ ಭಾಗವಹಿಸಿದ್ದರು.
ನಿಶ್ಚಿತಾರ್ಥ ಮಾಡಿಕೊಂಡ ಶೋಭಾ ಶೆಟ್ಟಿ
ಬಿಗ್ ಬಾಸ್‌ನಲ್ಲಿ ಟಾಪ್ -7 ರವರೆಗೆ ತಲುಪಿ ಹೊರ ನಡೆದಿದ್ದರು. ಇತ್ತೀಚೆಗಷ್ಟೇ ನಟಿ ಶೋಭಾ ಶೆಟ್ಟಿ ತಮ್ಮ ಪ್ರಿಯಕರನ ಜೊತೆಗೆ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದಾರೆ. ಮನೆಯಲ್ಲೇ ಸಿಂಪಲ್ ಆಗಿ ತಾಂಬೂಲ ಬದಲಾಯಿಸಿಕೊಂಡಿದ್ದು, ಈ ವಿಚಾರವನ್ನು ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ. ನನ್ನ ಎಂಗೇಜ್‌ಮೆಂಟ್ ಆಯಿತು, ನನ್ನ ಕನಸು ನೆರವೇರಿತ ಎಂದು ಯೂಟ್ಯೂಬ್ ಚಾನೆಲ್‌ನಲ್ಲಿ ವೀಡಿಯೋ ಅಪ್ ಲೋಡ್ ಮಾಡಿದ್ದಾರೆ. ಎಂಗೇಜ್ ಮೆಂಟ್ ವೀಡಿಯೋ 1.7ಮಿಲಿಯನ್ ಗೂ ಅಧಿಕ ವೀಕ್ಷಣೆಯನ್ನು ಕಂಡಿದೆ. 'ಕಾರ್ತಿಕ ದೀಪಂ' ಧಾರಾವಾಹಿಯಲ್ಲಿ ಜೋಡಿಯಾಗಿ ನಟಿಸಿದ್ದ ಯಶವಂತ್ ರೆಡ್ಡಿ ಎಂಬುವರನ್ನು ಪ್ರೀತಿಸಿ ಮನೆಯಲ್ಲಿ ಒಪ್ಪಿಗೆ ಪಡೆದು ಮದುವೆಯಾಗಲು ಸಜ್ಜಾಗಿದ್ದಾರೆ. ಶೆಟ್ಟಿ ಹಾಗೂ ರೆಡ್ಡಿ ಕುಟುಂಬ ಸಂಭ್ರಮಗೊಂಡಿದೆ.


Click it and Unblock the Notifications











