'ಬಿಗ್ ಬಾಸ್'ಗೆ ಹೋಗ್ತಾರಾ 'ಅಗ್ನಿಸಾಕ್ಷಿ' ಖ್ಯಾತಿಯ ನಟಿ ಸುಕೃತಾ?

ಕನ್ನಡ ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್-8 ಪ್ರಾರಂಭವಾಗುತ್ತಿದೆ. ಇದೇ ತಿಂಗಳ ಕೊನೆಯಲ್ಲಿ ಅಂದರೆ ಫೆಬ್ರವರಿ 28ಕ್ಕೆ ಗ್ರ್ಯಾಂಡ್ ಓಪನ್ ಆಗಲಿದೆ. ಅಂದಹಾಗೆ ಈ ಬಾರಿಯ ಬಿಗ್ ಬಾಸ್ ಗೆ ಯಾರೆಲ್ಲ ಹೋಗ್ತಾರೆ ಎನ್ನುವ ಚರ್ಚೆ ಜೋರಾಗಿ ನಡೆಯುತ್ತಿದೆ.

ಈಗಾಗಲೇ ಸಾಕಷ್ಟು ಕಲಾವಿದರ ಹೆಸರುಗಳು ವೈರಲ್ ಆಗಿದೆ. ಈ ಬಾರಿಯ ಬಿಗ್ ಬಾಸ್ ಮನೆಯಲ್ಲಿ ಇವರೆಲ್ಲಾ ಇರ್ತಾರೆ ಎನ್ನುವವರ ಸಂಭಾವ್ಯ ಪಟ್ಟಿ ಹರಿದಾಡುತ್ತಿದ್ದು, ಈ ಲಿಸ್ಟ್ ನಲ್ಲಿ ಕಿರುತೆರೆಯ ಖ್ಯಾತ ನಟಿ ಸುಕೃತಾ ನಾಗ್ ಇರ್ತಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ.

ಬಿಗ್ ಬಾಸ್ ಕನ್ನಡ ಸುಕೃತ ಅವರನ್ನು ಸಂಪರ್ಕ ಮಾಡಿದೆ ಎಂದು ಹೇಳಲಾಗುತ್ತಿದೆ. ಆದರೆ ಸುಕೃತಾ ಕಡೆಯಿಂದ ಬಿಗ್ ಬಾಸ್ ಮನೆಗೆ ಹೋಗಲು ಗ್ರೀನ್ ಸಿಗ್ನಲ್ ಸಿಕ್ಕಿದಿಯಾ ಎನ್ನುವುದು ಕುತೂಹಲ ಮೂಡಿಸಿದೆ. ಇದಕ್ಕೆ ಉತ್ತರ ಫೆಬ್ರವರಿ 28 ಗ್ರ್ಯಾಂಡ್ ಓಪನಿಂಗ್ ದಿನ ಸಿಗಲಿದೆ.

 Agnisakshi serial fame Sukrutha Nag to enter Bigg Boss Kannada 8?

ಅಂದಹಾಗೆ ಸುಕೃತಾ ಆಗ್ನಿಸಾಕ್ಷಿ ಧಾರಾವಾಹಿ ಮೂಲಕ ಕನ್ನಡ ಪ್ರೇಕ್ಷಕರ ಮನೆಮಾತಾಗಿದ್ದರು. ಅಂಜಲಿ ಪಾತ್ರದ ಮೂಲಕ ಸಖತ್ ಖ್ಯಾತಿಗಳಿಸಿದ್ದರು. ಬಾಲಕಲಾವಿದೆಯಾಗಿ ಬಣ್ಣದ ಲೋಕದ ಜರ್ನಿ ಪ್ರಾರಂಭ ಮಾಡಿರುವ ಸುಕೃತಾ ಕಲಾವಿದೆಯಾಗಿ ಸಾಕಷ್ಟು ಶೋಗಳಲ್ಲಿ ಭಾಗಿಯಾಗಿದ್ದಾರೆ.

ಅಗ್ನಿಸಾಕ್ಷಿ ಧಾರಾವಾಹಿ ಬಳಿಕ ಸುಕೃತಾ ಬಣ್ಣದ ಲೋಕದಿಂದ ಬಿಗ್ ಬ್ರೇಕ್ ಪಡೆದಿದ್ದಾರೆ. ಸದ್ಯ ಯಾವುದೇ ಧಾರಾವಾಹಿಗಳಲ್ಲಿ ಸುಕೃತಾ ನಟಿಸುತ್ತಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿರುವ ಅಂಜಲಿ ಬಿಗ್ ಬಾಸ್ ಗೆ ಎಂಟ್ರಿ ಕೊಡುವ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಾರಾ ಎಂದು ಕಾದುನೋಡಬೇಕು.

More from Filmibeat

English summary
Agnisakshi serial fame Sukrutha Nag to enter Bigg Boss Kannada 8?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X