ರಾಜಿ ಧಾರಾವಾಹಿ ವಿಜಯ್ ಸೂರ್ಯ ಪ್ರತ್ಯಕ್ಷ: ಮತ್ತೆ ಕಮ್ ಬ್ಯಾಕ್ ಮಾಡಲು ಒಪ್ಪಿದ್ದೇಕೆ?
ವಿಜಯ್ ಸೂರ್ಯ ಎಂದಾಕ್ಷಣಾ ಈಗಲೂ ಒಂದಷ್ಟು ಹಾರ್ಟ್ ಗಳು ಹೊಡೆದುಕೊಳ್ಳುವುದಕ್ಕೆ ಶುರು ಮಾಡುತ್ತವೆ. ಅಷ್ಟು ಮಹಿಳಾ ಮಣಿಗಳ ಹೃದಯ ಕದ್ದಿದ್ದರು ಈ ನಟ. ಸಿಕ್ಕಾಪಟ್ಟೆ ಫಾಲೋವರ್ಸ್ ಕೂಡ ಈ ನಟನಿಗಿದ್ದಾರೆ. ಇವರನ್ನು ತೆರೆ ಮೇಲೆ ನೋಡುವುದಕ್ಕೇನೆ ಸಖತ್ ಖುಷಿ ಕೊಡುತ್ತದೆ.
'ಪ್ರೇಮಲೋಕ'ದ ಬಳಿಕ ಮರೆಯಾದ ವಿಜಯ್ ಸೂರ್ಯ ಆಗಾಗ ಅತಿಥಿ ಪಾತ್ರದಲ್ಲಿ ವಿಸಿಟ್ ಕೊಡುತ್ತಿರುತ್ತಾರೆ. ಸಿನಿಮಾದಲ್ಲಿ ಬ್ಯುಸಿಯಾಗಿದ್ದ ವಿಜಯ್ ಸೂರ್ಯ ಈಗ ಮತ್ತೊಂದು ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿಜಯ್ ಸೂರ್ಯ ಮತ್ತೆ ಕಮ್ ಬ್ಯಾಕ್ ಮಾಡಿದ್ದು ಕಿರುತೆರೆ ವೀಕ್ಷಕರಿಗೆ ಹೊಸ ಉತ್ಸಾಹ ಕೊಡುತ್ತಿದೆ.

ಬಹಳ ದಿನಗಳ ಬಳಿಕ ಕಮ್ ಬ್ಯಾಕ್
ಸ್ಟಾರ್ ಸುವರ್ಣದಲ್ಲಿ 'ಪ್ರೇಮಲೋಕ' ಎಂಬ ಧಾರಾವಾಹಿ ಬರುತ್ತಿತ್ತು. ಆ ಧಾರಾವಾಹಿ ಎಲ್ಲರ ಮೆಚ್ಚುಗೆಗೂ ಪಾತ್ರವಾಗಿತ್ತು. ಹಳ್ಳಿ ಸೊಗಡು, ಸಂಬಂಧಗಳ ಬಾಂಧವ್ಯ ಹೀಗೆ ಎಲ್ಲಾ ಥರದಲ್ಲೂ ಎಲ್ಲರ ಮನಸ್ಸಿಗೂ ಈ ಧಾರಾವಾಹಿ ಇಷ್ಟವಾಗಿತ್ತು. ಇದರಲ್ಲಿ ವಿಜಯ್ ಸೂರ್ಯ ಮೈನ್ ರೋಲ್ ಮಾಡುತ್ತಿದ್ದರು. ಆದರೆ ಆ ಧಾರಾವಾಹಿ ಅರ್ಧಕ್ಕೆ ನಿಂತಿತ್ತು. ಈ ಧಾರಾವಾಹಿಯಲ್ಲಿ ವಿಜಯ್ ಸೂರ್ಯನನ್ನು ನೋಡಿ ಖುಷಿಪಡುತ್ತಿದ್ದವರಿಗೆ ಅರ್ಧಕ್ಕೆ ನಿಂತಿದ್ದು ಬೇಸರ ಕೂಡ ಮೂಡಿಸಿತ್ತು. ಇದೀಗ ಫ್ಯಾನ್ಸ್ ಗೆ ಮತ್ತೆ ಖುಷಿ ಕೊಡುತ್ತಿದೆ ವಿಜಯ್ ಸೂರ್ಯ ಎಂಟ್ರಿ. ಮತ್ತೆ ಸ್ಟಾರ್ ಸುವರ್ಣ ಮೂಲಕವೇ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಅದು 'ರಾಜಿ' ಧಾರಾವಾಹಿ ಮೂಲಕ.

'ರಾಜಿ'ಗೆ ವರವಾಗಿ ಬರುತ್ತಿದ್ದಾರೆ ವಿಜಯ್ ಸೂರ್ಯ!
ಸ್ಟಾರ್ ಸುವರ್ಣದಲ್ಲಿ ಇತ್ತೀಚೆಗೆ ಹೊಸದಾಗಿ ಆರಂಭವಾದ ಧಾರಾವಾಹಿ 'ರಾಜಿ'. ಇದೊಂದು ವಿಭಿನ್ನ ಕಥೆಯನ್ನು ಹೊಂದಿದೆ. 'ರಾಜಿ'ಯ ಬಾಲ್ಯದ ಗೆಳೆಯ ಕರ್ಣ ಲಂಡನ್‌ಗೆ ಹೋಗಿರುತ್ತಾನೆ. ಆದರೆ 'ರಾಜಿ' ಅವನ ಪ್ರೀತಿ, ಅವನ ನೆನಪಿನಲ್ಲಿಯೇ ಇರುತ್ತಾಳೆ. ಈಗ ಕರ್ಣ ಬಂದರೂ ಆಕೆಗೆ ಅವನ ಪ್ರೀತಿ ಸಿಕ್ಕಿಲ್ಲ. ಆದರೆ ಶಾಂಭವಿಯ ಕುಂತತ್ರದಿಂದ ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವ ಹುಡುಗನ ಜೊತೆ ಮದುವೆ ಮಾಡಲು ಯತ್ನಿಸುತ್ತಾರೆ. ಆದರೆ ಈ ಮದುವೆಯನ್ನು ಕರ್ಣ ತಡೆಯುತ್ತಾನೆ. ಇದೀಗ ಕರ್ಣನೇ 'ರಾಜಿ'ಗೆ ಮದುವೆ ಮಾಡಲು ಮುಂದಾಗಿದ್ದು, ಹುಡುಗನನ್ನು ಕರೆಸುತ್ತಾನೆ. ಆ ಹುಡುಗನಾಗಿ ಬರುವವನೇ ವಿಜಯ್ ಸೂರ್ಯ ಎನ್ನಲಾಗಿದೆ.

ವಿಜಯ್ ಸೂರ್ಯ ಪಾತ್ರದ ಹೈಲೈಟ್ ಏನು?
ವಿಜಯ್ ಸೂರ್ಯ 'ರಾಜಿ' ಧಾರಾವಾಹಿ ಮೂಲಕ ಮತ್ತೆ ಎಲ್ಲರನ್ನು ರಂಜಿಸಲು, ಹೆಂಗಳೆಯರ ಮನಸ್ಸಿಗೆ ಖುಷಿ ನೀಡಲು ಬರುತ್ತಿದ್ದಾರೆ. ಆದರೆ ಇದೇ ವಿಜಯ್ ಸೂರ್ಯ ಪಾತ್ರ ಕಥೆಗೆ ಮಹತ್ವದ ತಿರುವು ನೀಡಬಹುದು ಎಂಬ ಊಹೆ ಕೂಡ ಸಿಕ್ಕಿದೆ. ಯಾಕಂದ್ರೆ 'ರಾಜಿ'ಗೆ ಅತಿಯಾದ ಪ್ರೀತಿ ಇರುವುದು ಕರ್ಣನ ಮೇಲೆ. ಕರ್ಣ ಆಕೆಯನ್ನು ಬೆಸ್ಟ್ ಫ್ರೆಂಡ್ ಅಂತೆ ನೋಡಿದರೂ ಕೂಡ, ಆಕೆಯ ಪ್ರೀತಿ ಯಾವತ್ತಿಗೂ ಕಡಿಮೆಯಾಗಲ್ಲ. ಹೀಗಾಗಿ ಏನೋ ಒಂದು ಸಂಭವಿಸಿ ಕಡೆಗೆ ರಾಜಿಯನ್ನೇ ಕರ್ಣ ವರಿಸಲಿದ್ದಾನೆ. ಅದಕ್ಕೆ ವಿಜಯ್ ಸೂರ್ಯನೇ ಕಾರಣವಾಗಲಿದ್ದಾರೆ ಎಂಬುದು ಸ್ಪಷ್ಟ.

ಅತಿಥಿ ಪಾತ್ರ ಆಯ್ಕೆ ಮಾಡಿಕೊಂಡಿದ್ದೇಕೆ?
ಸದ್ಯ ವಿಜಯ್ ಸೂರ್ಯ, ಸಿನಿಮಾ, ಧಾರಾವಾಹಿಗಳಲ್ಲಿ ರೆಗ್ಯುಲರ್ ಆಗಿ ತೊಡಗಿಸಿಕೊಂಡಿಲ್ಲ. ಆದರೆ ಅಭಿಮಾನಿಗಳಿಗೆ ಮಾತ್ರ ನಿರಾಸೆ ಮಾಡಿಲ್ಲ. ಆಗಾಗ ಕೆಲವು ಧಾರಾವಾಹಿಗಳಲ್ಲಿ ಅತಿಥಿ ಪಾತ್ರದಲ್ಲಿ ವಿಸಿಟ್ ಕೊಟ್ಟು ಹೋಗುತ್ತಾರೆ. ಆದರೆ ಅದು ಸಾಧಾರಣ ಪಾತ್ರವಾಗಿರುವುದಿಲ್ಲ. ವಿಜಯ್ ಸೂರ್ಯ ಪಾತ್ರದಿಂದಲೇ ಕಥೆಗೆ ಸ್ಟ್ರಾಂಗ್ ಟ್ವಿಸ್ಟ್ ಕೂಡ ಸಿಕ್ಕಿದೆ. ಅದು 'ಜೊತೆ ಜೊತೆಯಲಿ' ಧಾರಾವಾಹಿಯಲ್ಲೂ ಗಮನಿಸಬಹುದು. ಅನು ಸಿರಿಮನೆಯನ್ನು ಮದುವೆಯಾಗಲು ಬಂದ ವಿಜಯ್ ಸೂರ್ಯ ಇಬ್ಬರ ಪ್ರೀತಿಯನ್ನು ಒಂದು ಮಾಡಿ ಹೋಗಿದ್ದರು. ಇದೀಗ ರಾಜಿ ಜೀವನಕ್ಕೂ ವಿಜಯ್ ಸೂರ್ಯ ಬೆಂಬಲವಾಗಿ ನಿಲ್ಲುವ ಸೂಚನೆ ಕಾಣುತ್ತಿದೆ.


Click it and Unblock the Notifications











