'ಅಗ್ನಿಸಾಕ್ಷಿ' ಧಾರಾವಾಹಿ ನಟಿಯೀಗ ವೈಲ್ಡ್ ಲೈಫ್ ಫೋಟೊಗ್ರಾಫರ್: ಯಾರಿವರು?
'ಅಗ್ನಿಸಾಕ್ಷಿ' ಧಾರಾವಾಹಿಯ ಮಾಯಾ ಮಾತ್ರಧಾರಿ ಇಶಿತಾ ವರ್ಷಾ ಈಗ ವೈಲ್ಡ್ ಲೈಫ್ ಫೋಟೋಗ್ರಫಿಯಲ್ಲಿ ಆಸಕ್ತಿ ಹೊಂದಿರುವುದು ಆಕೆಯ ಫೋಟೋಸ್ ಮೂಲಕ ತಿಳಿಯುತ್ತದೆ. ಕಳೆದ ಆರು ತಿಂಗಳಲ್ಲೇ ಎರಡು ಬಾರಿ ಕೀನ್ಯಾದ ಮಾಸೈ ಮಾರ ವೈಲ್ಡ್ ಲೈಫ್ ರಿಸರ್ವ್ ಗೆ ಭೇಟಿ ಕೊಟ್ಟಿರುವ ಈಕೆ ತಮ್ಮ ಸದ್ಯದ ಜೀವನವನ್ನು ಫೋಟೋಗ್ರಫಿಗೆ ಫೋಕಸ್ ಮಾಡಿದ್ದಾರೆಯೇನೋ ಎಂದು ಅನ್ನಿಸುತ್ತಿದೆ.
ಅಂದ ಹಾಗೇ ಇಶಿತಾ ವರ್ಷಾಗೆ ವೈಲ್ಡ್ ಲೈಫ್ ಮೇಲೆ ಆಸಕ್ತಿ ಹುಟ್ಟಿದ್ದು ನಾಗರಹೊಳೆ, ಕಬಿನಿಗೆ ಭೇಟಿ ನೀಡಿದಾಗ. ಸದ್ಯ ಆ್ಯಕ್ಟಿಂಗ್ ಕೆರಿಯರ್‌ನಿಂದ ಸ್ವಲ್ಪ ದೂರ ಉಳಿದು ಈ ಹೊಸ ಹವ್ಯಾಸಕ್ಕೆ ಹೆಚ್ಚಿನ ಆದ್ಯತೆ ನೀಡಬೇಕೆಂಡಿದ್ದಾರೆ ಇಶಿತಾ ವರ್ಷಾ. ಇದೇ ಜುಲೈನಲ್ಲಿ ಮತ್ತೆ ಕೀನ್ಯಾಗೆ ಹೋಗಲಿರುವ ಖುಷಿಯಲ್ಲಿ ಇಶಿತಾ ವರ್ಷಾ ಇದ್ದಾರೆ. ಮತ್ತಷ್ಟು ಪ್ರಾಣಿಗಳನ್ನು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿಯಲಿದ್ದಾರೆ.

ಫೋಟೋಗ್ರಫಿಯಲ್ಲಿ ಟೈಮಿಂಗ್ ಬಹಳ ಮುಖ್ಯವಾದ ಅಂಶ. ಸರಿಯಾದ ಟೈಮ್‌ಗೆ ಸರಿಯಾದ್ದನ್ನು ಸೆರೆಹಿಡಿಯುವುದೇ ಕಲೆ. ಇಶಿತಾ ವರ್ಷಾ ಅವರ ಈ ಭೇಟಿಗಳಲ್ಲಿ ಸಿಂಹಗಳ ದೊಡ್ಡ ಗುಂಪೊಂದನ್ನು ಒಮ್ಮೆ ನೋಡಿದ್ದರು. ಮಾತ್ರವಲ್ಲ ಅದನ್ನು ಸೆರೆ ಹಿಡಿಯಲು ಕೂಡಾ ಅವಕಾಶ ದೊರಕಿತ್ತು. ಅದು ಆಕೆಯ ಜೀವನದ ಅತ್ಯದ್ಭುತ ಕ್ಷಣವಂತೆ. ಸಿಂಹಗಳು ನಡೆಯುವುದನ್ನು ನೋಡುವುದೇ ಚಂದ. ಅವುಗಳ ಗಾಂಭೀರ್ಯದ ನಡಿಗೆಯನ್ನು ನೋಡಿ ಅವುಗಳನ್ನು ಕಾಡಿನ ರಾಜ ಎಂದು ಅಗ್ನಿಸಾಕ್ಷಿ ನಟಿ ಇಶಿತಾ ಒಪ್ಪಿಕೊಂಡಿರೋ ಹಾಗಿದೆ.
'ಅಗ್ನಿಸಾಕ್ಷಿ. ಧಾರಾವಾಹಿಯ ಮಾಯಾ ಆಗಿ ಕಿರುತೆರೆ ವೀಕ್ಷಕರನ್ನು ರಂಜಿಸಿದ ಇಶಿತಾ ವರ್ಷಾ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸರಸು' ಧಾರಾವಾಹಿಯಲ್ಲಿ ಅತಿಥಿ ಪಾತ್ರದ ಮೂಲಕ ಗಮನ ಸೆಳೆದಿದ್ದರು. 'ಹೊಸ ಬಾಳಿಗೆ ನೀ ಜೊತೆಯಾದೆ', 'ತಂಗಾಳಿ', 'ಅಸಂಭವ' ಧಾರಾವಾಹಿಗಳಲ್ಲಿ ಇಶಿತಾ ವರ್ಷಾ ಬಣ್ಣ ಹಚ್ಚಿದ್ದರೂ ಹೆಸರು ತಂದುಕೊಟ್ಟಿದ್ದು ಮಾಯಾ ಪಾತ್ರ. ಅಷ್ಟರ ಮಟ್ಟಿಗೆ ಆ ಪಾತ್ರ ಆಕೆಗೆ ಹೆಸರು ತಂದುಕೊಟ್ಟಿತ್ತು.

ನಟಿ ಇಶಿತಾ ವರ್ಷಾ ಹಲವು ಧಾರಾವಾಹಿಗಳಲ್ಲಷ್ಟೇ ಅಲ್ಲದೆ ಇತರೆ ರಿಯಾಲಿಟಿ ಷೋಗಳಲ್ಲಿಯೂ ಬಹಳಷ್ಟು ಕಾಣಿಸಿಕೊಂಡಿದ್ದಾರೆ. ಕೊನೆಯದಾಗಿ ತಮ್ಮ ಪತಿ ಜೊತೆ ದಂಪತಿಗಳಿಗಾಗಿ ನಡೆದ ಒಂದು ರಿಯಾಲಿಟಿ ಶೋ ನಲ್ಲಿ ಭಾಗವಹಿಸಿದ್ದರು.


Click it and Unblock the Notifications











