ಯೂ ಟ್ಯೂಬ್ ಟ್ರೆಂಡಿಂಗ್ ನಲ್ಲಿ 'ಅಗ್ನಿಸಾಕ್ಷಿ'ಯ 3 ನಿಮಿಷ ತುಣುಕು
ಯೂ ಟ್ಯೂಬ್ ನಲ್ಲಿ ಕನ್ನಡ ಸಿನಿಮಾಗಳ ಹಾಡುಗಳು, ಟ್ರೇಲರ್ ಗಳು ಹೆಚ್ಚು ಹೆಚ್ಚು ಜನರನ್ನು ಮುಟ್ಟುತ್ತಿವೆ. ಕನ್ನಡದ ಬಹುತೇಕ ಸಿನಿಮಾಗಳ ವಿಡಿಯೋಗಳು ಎಷ್ಟೋ ಬಾರಿ ಟ್ರೆಂಡಿಂಗ್ ಆಗಿವೆ. ಈಗ ಧಾರಾವಾಹಿ ಕೂಡ ಅದಕ್ಕೆ ಕಡಿಮೆ ಇಲ್ಲ ಎಂದು ತೋರಿಸಿದೆ.
ಕಲರ್ಸ್ ಕನ್ನಡ ವಾಹಿನಿಯ 'ಅಗ್ನಿಸಾಕ್ಷಿ' ಧಾರಾವಾಹಿಯ
ಮೂರು ನಿಮಿಷದ ವಿಡಿಯೋವೊಂದು ಯೂ ಟ್ಯೂಬ್ ನಲ್ಲಿ ಟ್ರೆಂಡಿಂಗ್ ಆಗಿದೆ. ಜನವರಿ 7ರ ಸಂಚಿಕೆಯ ವಿಡಿಯೋ ಸದ್ಯ ಯೂ ಟ್ಯೂಬ್ ನ 8ನೇ ಟ್ರೆಂಡಿಂಗ್ ವಿಡಿಯೋವಾಗಿದೆ.

ಮೂರು ನಿಮಿಷದ ಈ ವಿಡಿಯೋ ಸಿದ್ಧಾರ್ಥ್, ಚಂದ್ರಿಕಾ ಹಾಗೂ ರೌಡಿಗಳ ನಡುವಿನ ದೃಶ್ಯವಾಗಿದೆ. ಟಿವಿಯಲ್ಲಿ ಮಾತ್ರವಲ್ಲದೆ ಯೂ ಟ್ಯೂಬ್ ನಲ್ಲಿ ಕೂಡ ಈ ಧಾರಾವಾಹಿ ತನ್ನ ಜನಪ್ರಿಯತೆ ಸಾಬೀತು ಮಾಡಿದೆ.
ಸೋಮವಾರದಿಂದ ಶನಿವಾರದ ವರೆಗೆ ರಾತ್ರಿ 8 ಗಂಟೆಗೆ ಧಾರಾವಾಹಿ ಪ್ರಸಾರ ಆಗುತ್ತಿದೆ. ವಿಜಯ್ ಸೂರ್ಯ ಹಾಗೂ ವೈಷ್ಣವಿ ಗೌಡ ಧಾರಾವಾಹಿಯ ಪ್ರಮುಖ ಪಾತ್ರ ಮಾಡಿದ್ದಾರೆ.
English summary
Colours Kannada channel popular serial 'Agnisakshi' episode trending in youtube.


Click it and Unblock the Notifications