For Quick Alerts
  ALLOW NOTIFICATIONS  
  For Daily Alerts

  'ಅಗ್ನಿಸಾಕ್ಷಿ'ಯಲ್ಲಿ ಹೆಬ್ಬುಲಿ : ಲವರ್ ಬಾಯ್ ಸಿದ್ಧಾರ್ಥ್ ಈಗ ಆಕ್ಷನ್ ಹೀರೋ !

  By Naveen
  |
  ಅಗ್ನಿಸಾಕ್ಷಿಯಲ್ಲಿ ಲವರ್ ಬಾಯ್ ಆಗಿದ್ದ ಸಿದ್ಧಾರ್ಥ್ ಈಗ ಆಕ್ಷನ್ ಹೀರೋ | Oneindia Kannada

  ಧಾರಾವಾಹಿ ಅಂತ ಹೇಳಿದ ತಕ್ಷಣ ಬರೀ ಅಳು... ಬರೀ ಗೋಳು... ಎನ್ನುವ ಭಾವನೆ ಎಲ್ಲರಲ್ಲಿಯೂ ಬಂದು ಬಿಡುತ್ತದೆ. ಆದರೆ ಈಗೀಗ ಧಾರಾವಾಹಿಗಳು ಸಹ ಬದಲಾಗುತ್ತಿದೆ. ಸೀರಿಯಲ್ ಗಳು ಕೂಡ ಕಮರ್ಶಿಯಲ್ ರೂಪವನ್ನು ಪಡೆದುಕೊಳ್ಳುತ್ತಿವೆ.

  ಸದ್ಯ 'ಅಗ್ನಿಸಾಕ್ಷಿ' ಸೀರಿಯಲ್ ನಲ್ಲಿ ಮೊದಲ ಬಾರಿಗೆ ಒಂದು ಬದಲಾವಣೆ ಆಗಿದೆ. ಈ ಧಾರಾವಾಹಿಯಲ್ಲಿ ಫಸ್ಟ್ ಟೈಂ ಆಕ್ಷನ್ ಸನ್ನಿವೇಶ ಬಂದು ಬಿಟ್ಟಿದೆ. ಇಷ್ಟು ದಿನ ಲವರ್ ಬಾಯ್ ಮತ್ತು ಚಾಕಲೇಟ್ ಹೀರೋ ಆಗಿದ್ದ ಸಿದ್ಧಾರ್ಥ್ ಈಗ ಆಕ್ಷನ್ ಸ್ಟಾರ್ ಆಗಿದ್ದಾರೆ. ಮುಂದೆ ಓದಿ...

  ಸಿದ್ಧಾರ್ಥ್ ಸಾಹಸ

  ಸಿದ್ಧಾರ್ಥ್ ಸಾಹಸ

  'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ಮೊಟ್ಟ ಮೊದಲ ಬಾರಿಗೆ ಸಾಹಸ ದೃಶ್ಯ ಬಂದಿದೆ. ನಟ ಸಿದ್ಧಾರ್ಥ್ ಇಲ್ಲಿ 'ಹೆಬ್ಬುಲಿ' ಚಿತ್ರದ ಮ್ಯೂಸಿಕ್ ನೊಂದಿಗೆ ಸಖತ್ ಆಗಿ ಆಕ್ಷನ್ ಮಾಡಿದ್ದಾರೆ.

  ಯಾವ ಸಿನಿಮಾಗೂ ಕಡಿಮೆ ಇಲ್ಲ

  ಯಾವ ಸಿನಿಮಾಗೂ ಕಡಿಮೆ ಇಲ್ಲ

  ಮೊದಲ ಬಾರಿ ಆಕ್ಷನ್ ಮಾಡಿದರೂ ಕೂಡ ಸಿದ್ಧಾರ್ಥ್ ಸೂಪರ್ ಆಗಿ ಅದನ್ನು ನಿಭಾಯಿಸಿದ್ದಾರೆ. ಯಾವ ಆಕ್ಷನ್ ಚಿತ್ರಕ್ಕೂ ಕಡಿಮೆ ಇಲ್ಲದ ರೀತಿ ಈ ದೃಶ್ಯದ ಶೂಟಿಂಗ್ ಮಾಡಲಾಗಿದೆ.

  ಖುಷಿ ಕಾಪಾಡಲು...

  ಖುಷಿ ಕಾಪಾಡಲು...

  ಚಿಕ್ಕ ಮಕ್ಕಳಾದ ಆಯುಷಿ ಮತ್ತು ಖುಷಿ ಕಾಣಿಯಾಗಿದ್ದು, ಈ ಪೈಕಿ ಖುಷಿ ದುಷ್ಟರ ಕೈ ನಲ್ಲಿ ಸೆರೆಯಾಗಿರುತ್ತಾಳೆ. ಖುಷಿಯನ್ನು ಕಾಪಾಡಲು ಸಿದ್ಧಾರ್ಥ್ ಈ ರೀತಿಯ ಸಾಹಸ ಮಾಡಿದ್ದಾರೆ.

  ಪೋಲೀಸ್ ಹುಡುಕುತ್ತಿದ್ದರು

  ಪೋಲೀಸ್ ಹುಡುಕುತ್ತಿದ್ದರು

  ಆಯುಷಿ ಕಾಣೆಯಾಗಿರುವ ವಿಷಯ ತಿಳಿದ ಸಿದ್ಧಾರ್ಥ್ ಪೊಲೀಸ್ ತನಿಖೆ ಮಾಡಿ ಹುಡುಕುವ ಮುನ್ನವೇ ಮಗುವನ್ನು ರಕ್ಷಣೆ ಮಾಡಿದ್ದಾರೆ.

  'ಅಗ್ನಿಸಾಕ್ಷಿ'ಯಲ್ಲಿ ರೋಚಕ ಟ್ವಿಸ್ಟ್: ತಾಯಿಯ ಕೈ ಸೇರಿದ ಆಯುಷಿ.!'ಅಗ್ನಿಸಾಕ್ಷಿ'ಯಲ್ಲಿ ರೋಚಕ ಟ್ವಿಸ್ಟ್: ತಾಯಿಯ ಕೈ ಸೇರಿದ ಆಯುಷಿ.!

  ಬದಲಾದ ಮಕ್ಕಳು

  ಬದಲಾದ ಮಕ್ಕಳು

  ಸದ್ಯ ಧಾರಾವಾಹಿಗೆ ರೋಚಕ ಟ್ವಿಸ್ಟ್ ಸಿಕ್ಕಿದೆ. ಅತ್ತ ಆರುಷಿ ತಾಯಿ ರಾಧಿಕಾ ಕೈ ಸೇರಿದ್ರೆ, ಇತ್ತ ಖುಷಿ ಸನ್ನಿಧಿ ಹತ್ತಿರ ಬಂದಿದ್ದಾಳೆ.

  ರಚಿತಾ ರಾಮ್ 'ಕಾಮಿಡಿ ಟಾಕೀಸ್' ಡಬ್ಬಾ, ಡುಬಾಕ್ ಪ್ರೋಗ್ರಾಂ ಅಂತೆ.!ರಚಿತಾ ರಾಮ್ 'ಕಾಮಿಡಿ ಟಾಕೀಸ್' ಡಬ್ಬಾ, ಡುಬಾಕ್ ಪ್ರೋಗ್ರಾಂ ಅಂತೆ.!

  ಸತ್ಯ ತಿಳಿಯುತ್ತದೆಯಾ..?

  ಸತ್ಯ ತಿಳಿಯುತ್ತದೆಯಾ..?

  ಸದ್ಯ ಆರುಷಿ ಬದಲು ಖುಷಿ, ಸನ್ನಿಧಿ ಪಾಲಾಗಿದ್ದಾಳೆ. ಖುಷಿ ಮೂಲಕ ರಾಧಿಕಾ ವಿಷಯ ಸನ್ನಿಧಿಗೆ ತಿಳಿಯುತ್ತದೆಯಾ ಎನ್ನುವ ಕುತೂಹಲ ವೀಕ್ಷಕರಲ್ಲಿ ಮೂಡಿದೆ.

  ಸೃಜಾ ಕೊಟ್ಟ ಮಜಾ ಸುದ್ದಿ; 'ಮಜಾ ಟಾಕೀಸ್'ಗೆ ಮತ್ತೆ ಚಾಲನೆ.!ಸೃಜಾ ಕೊಟ್ಟ ಮಜಾ ಸುದ್ದಿ; 'ಮಜಾ ಟಾಕೀಸ್'ಗೆ ಮತ್ತೆ ಚಾಲನೆ.!

  ಚಂದ್ರಿಕಾ ಸಂಚು

  ಚಂದ್ರಿಕಾ ಸಂಚು

  ಸನ್ನಿಧಿ ಬಳಿ ಖುಷಿ ಬಂದಿದ್ದರೂ ಕೂಡ ಮತ್ತೆ ಚಂದ್ರಿಕಾ ಸಂಚು ಮಾಡಿ ಆ ಮಗುವನ್ನು ದೂರ ಮಾಡಬಹುದಾ ಎನ್ನುವ ಪ್ರಶ್ನೆ ಕೂಡ ಇದೆ. ಯಾಕಂದ್ರೆ, ಖುಷಿ ತನ್ನ ತಾಯಿ ರಾಧಿಕ ವಿಷಯ ಹೇಳಿದರೆ ಧಾರಾವಾಹಿಯಲ್ಲಿ ಮುಂದೆ ಸ್ವಾರಸ್ಯವೇ ಇರುವುದಿಲ್ಲ.

  English summary
  Colours Kannada channel popular serial 'Agnisakshi' gets another twist. 'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ಈಗ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X