ವೈಷ್ಣವಿ ಬಾಳಲ್ಲಿ ಬಿರುಗಾಳಿ: ಸಿದ್ಧಾರ್ಥ್ ಗೆ ಇನ್ನೊಂದು ಮದುವೆ ಆಗಿದೆ.!

Recommended Video

Agnisakshi Kannada Serial: ಸನ್ನಿಧಿ ಬಾಳಲ್ಲಿ ಬಿರುಗಾಳಿ | ಸಿದ್ದಾರ್ಥ್ ಗೆ ಮತ್ತೊಂದು ಮದುವೆ

ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ ನಡೆಯುತ್ತಿದೆ. ಚಂದ್ರಿಕಾ ಕುತಂತ್ರವನ್ನ ಬಯಲುಗೆಳೆದ ವೈಷ್ಣವಿ ಪೊಲೀಸರಿಗೆ ಹಿಡಿದುಕೊಟ್ಟಿದ್ದಳು. ಸಿದ್ಧಾರ್ಥ್ ಮತ್ತು ವೈಷ್ಣವಿಗೆ ವಿಲನ್ ಆಗಿದ್ದ ಚಂದ್ರಿಕಾ ಜೈಲು ಸೇರಿದ್ದು, ಕಂಬಿ ಹಿಂದೆ ಇದ್ದಾಳೆ. ಕೆಲವು ದಿನ ಕಾಣೆಯಾಗಿದ್ದ ಸಿದ್ಧಾರ್ಥ್ ಮತ್ತೆ ಪ್ರತ್ಯಕ್ಷವಾಗಿದ್ದು ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾನೆ.

ಎಲ್ಲವೂ ಆರಾಮಾಗಿದೆ ಎನ್ನುವಷ್ಟರಲ್ಲೇ ಅಗ್ನಿಸಾಕ್ಷಿಯಲ್ಲಿ ಮತ್ತೊಂದು ಸಂಕಷ್ಟ ಎದುರಾಗಿದೆ. ಚಂದ್ರಿಕಾಳಿಂದ ಮತ್ತೇನಾದರೂ ಕಷ್ಟಗಳು ಬರಬಹುದಾ ಎಂದು ಲೆಕ್ಕಾಚಾರ ಮಾಡ್ತಿದ್ದ ಕುಟುಂಬಕ್ಕೆ ಬರ ಸಿಡಿಲು ಬಡಿದಂತೆ ಸುದ್ದಿಯೊಂದು ಬಂದಿದೆ.

ಹೌದು, ಸಿದ್ಧಾರ್ಥ್ ಗೆ ಇನ್ನೊಂದು ಮದುವೆ ಆಗಿದೆ ಎಂಬ ವಿಷ್ಯ ಬಹಿರಂಗವಾಗಿದೆ. 'ಸಿದ್ಧಾರ್ಥ್ ನನ್ನ ಗಂಡ' ಎಂದು ಹೇಳಿ ಯುವತಿಯೊಬ್ಬಳು ಮನೆ ಪ್ರವೇಶ ಮಾಡಿದ್ದು, ಸಾಕ್ಷಿ ಕೂಡ ಕೊಟ್ಟಿದ್ದಾಳೆ. ಅಷ್ಟಕ್ಕೂ ಯಾರು ಆಕೆ? ಸಿದ್ಧಾರ್ಥ್ ಗೆ ಇನ್ನೊಂದು ಮದುವೆ ಆಗಿದ್ಯಾ? ಏನಿದು ಅಗ್ನಿಸಾಕ್ಷಿಯ ಕಥೆ ಎಂದು ತಿಳಿಯಲು ಮುಂದೆ ಓದಿ....

ಸಿದ್ಧಾರ್ಥ್ ಅಲ್ಲ ಸೂರಜ್

ಸಿದ್ಧಾರ್ಥ್ ಅಲ್ಲ ಸೂರಜ್

ಸಿದ್ಧಾರ್ಥ್ ಅವರ ಮನೆಗೆ ದಿಢೀರ್ ಅಂತ ಎಂದು ಬಂದ ಮೇಘ ಎಂಬ ಹುಡುಗಿ, ನನ್ನ ಗಂಡ ಬೇಕು, ಇವರು ಸಿದ್ಧಾರ್ಥ್ ಅಲ್ಲ ನನ್ನ ಗಂಡ ಸೂರಜ್ ಎಂದು ಎಲ್ಲರಿಗೂ ಶಾಕ್ ನೀಡಿದ್ದಾಳೆ. ಮೇಘ ಮಾತುಗಳು ಕೇಳಿ ಇಡೀ ಮನೆ ದಂಗಾಗಿದೆ.

ಸಕಲೇಶ್ವರದ ಹುಡುಗಿ

ಸಕಲೇಶ್ವರದ ಹುಡುಗಿ

''ನನ್ನ ಊರು ಸಕಲೇಶ್ವರ. ನನಗೆ ಸೂರಜ್ ಜೊತೆ ಮದುವೆ ಆಗಿದೆ. ಕಳೆದ ಕೆಲವು ದಿನಗಳಿಂದ ಸೂರಜ್ ಕಾಣಿಸುತ್ತಿಲ್ಲ. ಎಲ್ಲ ಕಡೆ ಹುಡುಕಾಡಿದೆ. ಎಲ್ಲೂ ಸಿಕ್ಕಿಲ್ಲ. ಕೊನೆಗೆ ಸಕಲೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೆ. ಈಗ ಪೊಲೀಸರೇ ನಿಮ್ಮ ಮನೆ ವಿಳಾಸ ಕೊಟ್ಟರು'' ಎಂದು ಮೇಘ ಹೇಳುತ್ತಿದ್ದಾಳೆ.

ನೀನು ಯಾರು ಎಂದು ಗೋತ್ತೆ ಇಲ್ಲ

ನೀನು ಯಾರು ಎಂದು ಗೋತ್ತೆ ಇಲ್ಲ

ಮೇಘಾ ಎಂಬ ಆ ಯುವತಿ ಮಾಡುತ್ತಿರುವ ಆರೋಪ ಸುಳ್ಳು ಎಂದು ಸಿದ್ಧಾರ್ಥ ನಿರಾಕರಿಸಿದ್ದಾರೆ. ಒಂದು ಹೆಣ್ಣು ಎಂದು ಮಾತನಾಡಲು ಅವಕಾಶ ಕೊಟ್ಟಿದ್ದೇವೆ, ಸುಮ್ಮನೆ ಏನೇನೋ ಹೇಳಬೇಡ. ಯಾರೂ ನೀನು'' ಎಂದು ಸಿದ್ಧಾರ್ಥ್ ವಿರೋಧಿಸಿದ್ದಾರೆ.

ಸಾಕ್ಷಿ ನೀಡಿದ ಮೇಘಾ

ಸಾಕ್ಷಿ ನೀಡಿದ ಮೇಘಾ

ಸಿದ್ಧಾರ್ಥ್ ಮತ್ತು ಮೇಘ ಇಬ್ಬರು ಮದುವೆ ಆಗಿರುವ ಫೋಟೋವನ್ನ ಮನೆಯವರಿಗೆ ಸಾಕ್ಷಿಯಾಗಿ ನೀಡಿದ್ದಾರೆ. ಈ ಫೋಟೋ ನೋಡಿದ ಅಂಜಲಿ, ವೈಷ್ಣವಿ ಮತ್ತು ಮನೆಯ ಸದಸ್ಯರು ಗಾಬರಿಯಾಗಿದ್ದಾರೆ.

ಮದುವೆ ಸರ್ಟಿಫಿಕೇಟ್ ಕೂಡ ಇದೆ

ಮದುವೆ ಸರ್ಟಿಫಿಕೇಟ್ ಕೂಡ ಇದೆ

ಇದೆಲ್ಲದರ ನಡುವೆ ಮಧ್ಯೆ ಪ್ರವೇಶಿಸಿದ ಪೊಲೀಸರು ಇಡೀ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟಿದ್ದಾರೆ. ಮೇಘಾ ಮತ್ತು ಸಿದ್ಧಾರ್ಥ್ ಮದುವೆ ಆಗಿರುವುದು ನಿಜಾ, ನಮ್ಮ ಬಳಿ ಮ್ಯಾರೇಜ್ ಸರ್ಟಿಫಿಕೇಟ್ ಕೂಡ ಇದೆ ಎಂದು ಶಾಕ್ ನೀಡಿದ್ದಾರೆ.

ಅಖಿಲ್ ಗೆ ಈ ವಿಷ್ಯ ಮೊದಲೇ ಗೊತ್ತಿತ್ತು

ಅಖಿಲ್ ಗೆ ಈ ವಿಷ್ಯ ಮೊದಲೇ ಗೊತ್ತಿತ್ತು

ಅಂದ್ಹಾಗೆ, ಸಿದ್ಧಾರ್ಥ್ ಮತ್ತು ಮೇಘಾ ಅವರ ಮದುವೆ ಆಗಿದೆ ಎಂಬ ಸುದ್ದಿ ಸಿದ್ಧಾರ್ಥ್ ಸಹೋದರ ಅಖಿಲ್ ಗೆ ಮೊದಲೇ ಗೊತ್ತಿತ್ತು. ಪೊಲೀಸಿನವರು ಮೊದಲೇ ಸ್ಟೇಷನ್ ಗೆ ಕರೆಸಿ ಈ ವಿಷ್ಯ ಹೇಳಿದ್ರು. ಆದರೂ ಅಖಿಲ್ ಈ ಬಗ್ಗೆ ಯಾರಿಗೂ ಏನೂ ಹೇಳಿರಲಿಲ್ಲ.

ಚಂದ್ರಿಕಾ ಕೈವಾಡ.!

ಚಂದ್ರಿಕಾ ಕೈವಾಡ.!

ಸಿದ್ಧಾರ್ಥ್ ಗೆ ಇನ್ನೊಂದು ಮದುವೆ ಆಗಿದೆ, ಮೇಘ ಅವರನ್ನ ಚಂದ್ರಿಕಾ ಕಳುಹಿಸಿರಬಹುದು ಎಂಬ ಅನುಮಾನ ಅಂಜಲಿಗೆ ಬಂದಿದೆ. ಅದಕ್ಕೆ ಪುಷ್ಠಿ ಕೊಡುವಂತೆ ಚಂದ್ರಿಕಾ ಜೈಲಿನಲ್ಲಿ ಖುಷಿಯಾಗಿರುವುದನ್ನ ತೋರಿಸಲಾಗಿದೆ. ಬಹುಶಃ ಇದರ ಹಿಂದೆ ಚಂದ್ರಿಕಾ ಕೈವಾಡ ಇರಬಹುದು ಎಂಬುದು ವೀಕ್ಷಕರ ಅನುಮಾನ ಕೂಡ ಹೌದು.

More from Filmibeat

English summary
The family members are absolutely shocked by Meghana's claims that Siddharth is her husband. However, Siddharth rejects her claims.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X