For Quick Alerts
  ALLOW NOTIFICATIONS  
  For Daily Alerts

  ಲಾಕ್‌ಡೌನ್‌ನಲ್ಲಿಯೂ ಜತೆ ಸೇರಿಕೊಂಡು ಪಕೋಡಾ ಮಾಡಿದ 'ಅಗ್ನಿಸಾಕ್ಷಿ' ತಂಡ!

  |

  ಸುದೀರ್ಘ ಕಾಲ ವೀಕ್ಷಕರನ್ನು ತನ್ನಡೆಗೆ ಸೆಳೆದುಕೊಂಡಿದ್ದ 'ಅಗ್ನಿಸಾಕ್ಷಿ' ಆರು ವರ್ಷಗಳ ಪ್ರಸಾರವಾಗಿ ಕಳೆದ ವರ್ಷವಷ್ಟೇ ಮುಕ್ತಾಯವಾಗಿತ್ತು. ಈ ಧಾರಾವಾಹಿ ಲಾಕ್ ಡೌನ್ ಅವಧಿಯಲ್ಲಿನ ಮನರಂಜನೆಯ ಕೊರತೆಯನ್ನು ನೀಗಿಸಲು ವೀಕ್ಷಕರಿಗಾಗಿ ಮತ್ತೆ ಪ್ರಸಾರವಾಗುತ್ತಿದೆ. ಮೊದಲ ಕಂತಿನಿಂದ ಈ ಧಾರಾವಾಹಿ ಮರುಪ್ರಸಾರವಾಗಲಿದೆ. ಬೆಳಿಗ್ಗೆ 9 ರಿಂದ 10 ಗಂಟೆವರೆಗೆ 'ಅಗ್ನಿ ಸಾಕ್ಷಿ' ಮರು ಪ್ರಸಾರವಾಗಲಿದೆ.

  ನಂದಿ ಬೆಟ್ಟದಲ್ಲಿ ಚಂದನ್ ಏನ್ ಮಾಡ್ತಿದ್ದಾರೆ ನೋಡಿ | Chandan Feeding Monkeys | Nandhi Hills

  ಲಾಕ್‌ಡೌನ್‌ ಕಾರಣದಿಂದ ಚಾಲ್ತಿಯಲ್ಲಿದ್ದ ಧಾರಾವಾಹಿಗಳು ಚಿತ್ರೀಕರಣ ನಡೆಯದೆ ಹಳೆಯ ಕಂತುಗಳನ್ನೇ ಮರುಪ್ರಸಾರ ಮಾಡಲಾಗುತ್ತಿದೆ. ಹಾಗಿರುವಾಗ 'ಅಗ್ನಿಸಾಕ್ಷಿ'ಯ ಕಲಾವಿದರು ಅನೇಕರು ಒಂದೆಡೆ ಸೇರಿದ್ದಾರೆ. ಅಷ್ಟೇ ಅಲ್ಲ, ಈ ಅವಧಿಯಲ್ಲಿ ಪಕೋಡಾ ತಿನ್ನುವ ಬಾಯಿ ಚಪಲ ನೀಗಿಸಿಕೊಳ್ಳಲು 'ಪಕೋಡಾ ಯಾಚನೆ' ಮಾಡಿದ್ದಾರೆ. ಇದು ಹೇಗೆ ಸಾಧ್ಯ? ಮುಂದೆ ಓದಿ....

  ರಾಜೇಶ್ ಧ್ರುವಗೆ ಪಕೋಡಾ ತಿನ್ನುವ ಬಯಕೆ

  ರಾಜೇಶ್ ಧ್ರುವಗೆ ಪಕೋಡಾ ತಿನ್ನುವ ಬಯಕೆ

  ಲಾಕ್‌ಡೌನ್ ಕಾರಣ ತಮ್ಮಾಸೆಯ ತಿನಿಸುಗಳನ್ನು ತಿನ್ನಲು ಸಾಧ್ಯವಾಗದೆ ಬೇಸರದಿಂದ ಕುಳಿತಿದ್ದ 'ಅಗ್ನಿಸಾಕ್ಷಿ'ಯ ನಟ ರಾಜೇಶ್ ಧ್ರುವ ಅವರಿಗೆ ಪಕೋಡಾ ತಿನ್ನುವ ಆಸೆ ಉಂಟಾಗಿದೆ. ಹೊರಗಂತೂ ಪಕೋಡಾ ಎಲ್ಲಿಯೂ ಸಿಗುವುದಿಲ್ಲ. ಹೀಗಾಗಿ ಮನೆಯಲ್ಲಿಯೇ ಪಕೋಡಾ ಮಾಡಿ ತಿನ್ನಬೇಕು. ತನಗಂತೂ ಪಕೋಡಾ ಮಾಡಲು ಬರುವುದಿಲ್ಲ. ಹೀಗಾಗಿ ನಾಯಕ ನಟ ವಿಜಯ್ ಸೂರ್ಯ ಬಳಿ ಹೋಗುತ್ತಾರೆ.

  ಪವನ್ ಒಡೆಯರ್ 'ರೇಮೋ' ಚಿತ್ರದ ಕ್ಲೈಮ್ಯಾಕ್ಸ್ ಕಳೆದುಹೋಗಿದೆ: ಹೊಸ ಪ್ರಯೋಗ ನೋಡಿದಿರಾ?ಪವನ್ ಒಡೆಯರ್ 'ರೇಮೋ' ಚಿತ್ರದ ಕ್ಲೈಮ್ಯಾಕ್ಸ್ ಕಳೆದುಹೋಗಿದೆ: ಹೊಸ ಪ್ರಯೋಗ ನೋಡಿದಿರಾ?

  ಪಕೋಡಾ ತಿನ್ನಬೇಡಿ ಎಂದ ವೈಷ್ಣವಿ

  ಪಕೋಡಾ ತಿನ್ನಬೇಡಿ ಎಂದ ವೈಷ್ಣವಿ

  ರಾಜೇಶ್ ಧ್ರುವ ಕೋರಿಕೆಯಂತೆ ವಿಜಯ್ ಸೂರ್ಯ, ಸುಕೃತಾ ಬಳಿ ಕೇಳುತ್ತಾರೆ. ಸುಕೃತಾ ಮೇಕಪ್‌ನಲ್ಲಿ ಬಿಜಿ. ನನಗೆ ಪಕೋಡಾ ಮಾಡೋಕೆ ಬರೊಲ್ಲ. ರೆಡಿ ಆದ್ಮೇಲೆ ಹೇಳಿ. ತಿನ್ನೋಕೆ ಬರ್ತೀನಿ ಎಂದು ಹೇಳಿ ಕಳುಹಿಸಿದ್ದಾರೆ. ರಾಜೇಶ್ ಧ್ರುವ, ಕೈ ಮುರಿದುಕೊಂಡು ಮೆಟ್ಟಿಲ ಮೇಲೆ ಕುಳಿತಿದ್ದ ಐಶುಗೆ ಕೇಳಿದ್ದಾರೆ. ಪಕೋಡಾ ಮಾಡಲು ಬಂದರೂ ಮಾಡಲು ಆಗದ ಕಾರಣ ಟೆರೇಸ್‌ಗೆ ತೆರಳಿ ವೈಷ್ಣವಿಗೆ ಹೇಳುತ್ತಾರೆ. ಆದರೆ ಯೋಗ ಮಾಡುವುದರಲ್ಲಿ ಬಿಜಿಯಾಗಿದ್ದ ವೈಷ್ಣವಿ ಪಕೋಡಾ ತಿನ್ನಬಾರದು ಎಂಬ ಬುದ್ಧಿಮಾತು ಹೇಳಿ ಕಳಿಸುತ್ತಾರೆ.

  ಮುಖ್ಯಮಂತ್ರಿ ಚಂದ್ರು ಕೈಯಲ್ಲಿ ಪಕೋಡಾ

  ಮುಖ್ಯಮಂತ್ರಿ ಚಂದ್ರು ಕೈಯಲ್ಲಿ ಪಕೋಡಾ

  ಹೀಗೆ ನಾಗಾರ್ಜುನ್, ಅನುಷಾ, ರಿಷಿತಾ, ಸಂಪತ್, ಧನ್ವೀರ್ ಹೀಗೆ ಎಲ್ಲರೂ ಒಬ್ಬರನ್ನೊಬ್ಬರು ಕೇಳಿ ಸುಸ್ತಾದ ಬಳಿಕ ರಾಜೇಶ್, ಮನೆಯ ಹಿರಿಯ ಮುಖ್ಯಮಂತ್ರಿ ಚಂದ್ರು ಅವರನ್ನೇ ಹುಡುಕಿಕೊಂಡು ಹೋಗಿದ್ದಾರೆ. ಅಲ್ಲಿ ನೋಡಿದರೆ ಅವರ ಕೈಯಲ್ಲಿ ಪಕೋಡಾ ತುಂಬಿದ ಪ್ಲೇಟ್.

  ಅಮಿತಾಬ್ ಬಚ್ಚನ್ ಕನ್ನಡಕ ಕಳೆದು ಹೋಗಿದೆ: ಶಿವಣ್ಣ ನಿಮಗೆ ಸಿಕ್ಕಿತಾ?ಅಮಿತಾಬ್ ಬಚ್ಚನ್ ಕನ್ನಡಕ ಕಳೆದು ಹೋಗಿದೆ: ಶಿವಣ್ಣ ನಿಮಗೆ ಸಿಕ್ಕಿತಾ?

  ಫ್ಯಾಮಿಲಿ ಕಿರುಚಿತ್ರದ ಸ್ಫೂರ್ತಿ

  ಇವರೆಲ್ಲ ಹೇಗೆ ಸೇರಿಕೊಂಡರು ಎಂಬ ಗೊಂದಲವಿದೆಯೇ? ಬಾಲಿವುಡ್ ಮತ್ತು ದಕ್ಷಿಣ ಚಿತ್ರರಂಗದ ಖ್ಯಾತ ನಟರು ಸೇರಿಕೊಂಡು ಮಾಡಿದ 'ಫ್ಯಾಮಿಲಿ' ಎಂಬ ಕಿರುಚಿತ್ರ ನೆನಪಿಸಿಕೊಳ್ಳಿ. ಕೊರೊನಾ ವೈರಸ್ ವಿರುದ್ಧ ಹೋರಾಟದಲ್ಲಿ ಒಗ್ಗಟ್ಟು ಪ್ರದರ್ಶನ ಮಾಡುವ ಸಂದೇಶಮಯ ಈ ಕಿರುಚಿತ್ರವನ್ನು ಸ್ಫೂರ್ತಿಯನ್ನಾಗಿರಿಸಿ ಅಗ್ನಿಸಾಕ್ಷಿಯ ತಂಡ ಈ 'ಪಕೋಡಾ' ಹುಡುಕಾಟದ ಕಿರುಚಿತ್ರ ಮಾಡಿದೆ. ರಾಜೇಶ್ ಧ್ರುವ ಅವರ ಪರಿಕಲ್ಪನೆಯಲ್ಲಿ ಈ ಕಿರುಚಿತ್ರ ಸಿದ್ಧವಾಗಿದೆ. ಎಲ್ಲ ಕಲಾವಿದರೂ ತಮ್ಮ ತಮ್ಮ ಮನೆಗಳಿಂದಲೇ ವಿಡಿಯೋಗಳನ್ನು ತಯಾರಿಸಿದ್ದಾರೆ. ಅವುಗಳನ್ನು ಎಡಿಟ್ ಮಾಡಿ ಕಿರುಚಿತ್ರ ತಯಾರಿಸಲಾಗಿದೆ.

  ಮನೆಯಲ್ಲಿಯೇ ಇರಿ ಸುರಕ್ಷಿತರಾಗಿರಿ

  ಮನೆಯಲ್ಲಿಯೇ ಇರಿ ಸುರಕ್ಷಿತರಾಗಿರಿ

  ಕೊನೆಯಲ್ಲಿ ಮುಖ್ಯಮಂತ್ರಿ ಚಂದ್ರು ಮನೆಯಲ್ಲಿಯೇ ಸುರಕ್ಷಿತವಾಗಿರಿ ಎಂಬ ಸಂದೇಶ ನೀಡಿದ್ದಾರೆ. ಮನೆಯಲ್ಲಿಯೇ ಮಾಡಿಕೊಳ್ಳಿ. ತಿನ್ನೋಕೆ ಬೇಕು ಎಂದು ಹೊರಗೆ ಹೋದರೆ ಹೊಗೆ ಹಾಕಿಸಿಕೊಳ್ತೀರಿ. ಬೇರೆಯವರಿಗೂ ಅಪಾಯ ತಪ್ಪಿದ್ದಲ್ಲ. ಮನೆಯಲ್ಲಿಯೇ ಇರಿ, ಸುರಕ್ಷಿತವಾಗಿರಿ ಎಂದು ಎಲ್ಲ ಕಲಾವಿದರೂ ಈ ಸೃಜನಶೀಲ ಪ್ರಯೋಗದ ಮೂಲಕ ಮನವಿ ಮಾಡಿದ್ದಾರೆ. ಇದಕ್ಕೆ 'ಫ್ಯಾಮಿಲಿ' ಕಿರುಚಿತ್ರ ಸ್ಫೂರ್ತಿ ಎಂದು ತಿಳಿಸಿದ್ದಾರೆ. ಇದೇ ಕಿರುಚಿತ್ರದಿಂದ ಸ್ಫೂರ್ತಿ ಪಡೆದು ನಿರ್ದೇಶಕ ಪವನ್ ಒಡೆಯರ್ ಇತ್ತೀಚೆಗೆ 'ಹೊಸ ಕ್ಲೈಮ್ಯಾಕ್ಸ್' ಎಂಬ ಕಿರುಚಿತ್ರ ನಿರ್ದೇಶಿಸಿದ್ದರು.

  English summary
  Agnisakshi serial team members re united with Pakoda short film to give message for people to stay home during lockdown.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X