ಜಾಸ್ತಿ ಖುಷಿ ಪಡಬೇಡಿ: 'ಅಗ್ನಿಸಾಕ್ಷಿ' ಧಾರಾವಾಹಿ ಸದ್ಯಕ್ಕೆ ಮುಗಿಯಲ್ಲ.!

Recommended Video

Agnisakshi Kannada Serial : ಅಗ್ನಿಸಾಕ್ಷಿ ಧಾರವಾಹಿ ಬಗ್ಗೆ ಸ್ಪಷ್ಟನೆ ನೀಡಿದ ನಟಿ ವೈಷ್ಣವಿ ಅಲಿಯಾಸ್ ಸನ್ನಿಧಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಅಗ್ನಿಸಾಕ್ಷಿ' ಧಾರಾವಾಹಿ ಇದೀಗ ಕುತೂಹಲಕಾರಿ ಘಟ್ಟ ತಲುಪಿದೆ. ಎಲ್ಲಾ ಕ್ರಿಮಿನಲ್ ಕೆಲಸಗಳ ಹಿಂದೆ ಚಂದ್ರಿಕಾ ಕೈವಾಡ ಇದೆ ಎಂಬ ಅಂಶ ಇಡೀ ಕುಟುಂಬದ ಅರಿವಿಗೆ ಬಂದಿದೆ.

ಮದುವೆ ಮಂಟಪದಲ್ಲಿ ಚಂದ್ರಿಕಾ ಗರ್ವಭಂಗವಾಗಿದೆ. ಕೌಶಿಕ್ ಅಸಲಿಯತ್ತು ಬಯಲಾಗಿದೆ. ಚಂದ್ರಿಕಾ ಮುಖವಾಡ ಕಳಚಿ ಬಿದ್ದಿದೆ. ಅಲ್ಲಿಗೆ ಚಂದ್ರಿಕಾ ಕಥೆ ಮುಗಿಯಿತು... 'ಅಗ್ನಿಸಾಕ್ಷಿ' ಧಾರಾವಾಹಿಗೆ ಶುಭಂ ಹಾಡುವ ಕಾಲ ಹತ್ತಿರ ಬಂತು ಅಂತ ನೀವಂದುಕೊಳ್ಳಬಹುದು. ಆದರೆ ವಾಸ್ತವ ಅದಲ್ಲ.

ಚಂದ್ರಿಕಾ ಚಾಪ್ಟರ್ ಕ್ಲೋಸ್ ಆಗಬಹುದು. ಆದರೆ 'ಅಗ್ನಿಸಾಕ್ಷಿ' ಧಾರಾವಾಹಿ ಮಾತ್ರ ಸದ್ಯಕ್ಕೆ ಮುಗಿಯಲ್ಲ. ಇದಂತೂ ಗ್ಯಾರಂಟಿ.! ಅದಕ್ಕೆ ಸಾಕ್ಷಿ ಇಲ್ಲಿದೆ ಓದಿರಿ...

ಖಚಿತ ಪಡಿಸಿದ ನಟಿ ವೈಷ್ಣವಿ

ಖಚಿತ ಪಡಿಸಿದ ನಟಿ ವೈಷ್ಣವಿ

''ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ದೊಡ್ಡ ತಿರುವು ಸಿಕ್ಕಿದೆ ನಿಜ. ಎಲ್ಲವೂ ರಿವಿಲ್ ಆಗಿದೆ. ಆದರೆ ಧಾರಾವಾಹಿ ಮಾತ್ರ ಈಗ ಸ್ಟಾಪ್ ಆಗಲ್ಲ'' ಎಂದು ಸನ್ನಿಧಿ ಪಾತ್ರದಾರಿ ನಟಿ ವೈಷ್ಣವಿ ಸ್ಪಷ್ಟಪಡಿಸಿದ್ದಾರೆ.

ಅಸಲಿ ಕಥೆ ಈಗ ಶುರು

ಅಸಲಿ ಕಥೆ ಈಗ ಶುರು

''ಧಾರಾವಾಹಿಯಲ್ಲಿ ನಮಗೆ ಟ್ವಿಸ್ಟ್ ಗಳನ್ನು ನೋಡಿ ಆಶ್ಚರ್ಯ ಆಗುತ್ತಿದೆ. ಅಸಲಿ ಕಥೆ ಈಗ ಶುರುವಾಗುತ್ತಿದೆ. ಒಂದು ಕ್ಯಾರೆಕ್ಟರ್ ನಿಂದ ಸೀರಿಯಲ್ ನಡಿಯಲ್ಲ. ಎಲ್ಲಾ ಪಾತ್ರಗಳು ಮುಖ್ಯ'' ಎಂದಿದ್ದಾರೆ ನಟಿ ವೈಷ್ಣವಿ.

ಸತ್ಯ ಗೊತ್ತಾಯ್ತಲ್ಲ.?!

ಸತ್ಯ ಗೊತ್ತಾಯ್ತಲ್ಲ.?!

''ನಾನು ಮತ್ತು ವಿಜಯ್ ಸೂರ್ಯ ಒಳ್ಳೆ ಫ್ರೆಂಡ್ಸ್ ಅಷ್ಟೇ ಎಂದು ಪದೇ ಪದೇ ಹೇಳಿದ್ದೆ. ಆದರೆ ಅದನ್ನು ಯಾರೂ ನಂಬಿರಲಿಲ್ಲ. ಈಗ ಅವರಿಗೆ ಮದುವೆಯಾಗಿದೆ. ಒಳ್ಳೆಯ ಹುಡುಗಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈಗಲಾದರೂ ಗಾಸಿಪ್ ಗೆ ಫುಲ್ ಸ್ಟಾಪ್ ಬಿತ್ತಲ್ಲ'' ಎಂದು ನಿಟ್ಟುಸಿರು ಬಿಡುತ್ತಾರೆ ನಟಿ ವೈಷ್ಣವಿ.

'ಅಗ್ನಿಸಾಕ್ಷಿ' ಬಿಡಲ್ಲ

'ಅಗ್ನಿಸಾಕ್ಷಿ' ಬಿಡಲ್ಲ

''ಅಗ್ನಿಸಾಕ್ಷಿ' ಧಾರಾವಾಹಿಯ ಪ್ರಮುಖ ಪಾತ್ರಧಾರಿಗಳಾದ ವಿಜಯ್ ಸೂರ್ಯ ಮತ್ತು ವೈಷ್ಣವಿ ಸೀರಿಯಲ್ ಜೊತೆಗೆ ಸಿನಿಮಾಗಳಲ್ಲೂ ಅಭಿನಯಿಸುತ್ತಿದ್ದಾರೆ. ಸೀರಿಯಲ್ ಮತ್ತು ಸಿನಿಮಾ ಎರಡನ್ನೂ ಬ್ಯಾಲೆನ್ಸ್ ಮಾಡುತ್ತೇವೆ. 'ಅಗ್ನಿಸಾಕ್ಷಿ' ನಮಗೆ ಫಸ್ಟ್ ಲವ್ ಇದ್ದ ಹಾಗೆ. ಹೀಗಾಗಿ ಇದನ್ನ ಮಾತ್ರ ನಾವು ಬಿಡಲ್ಲ'' ಎನ್ನುತ್ತಾರೆ ನಟಿ ವೈಷ್ಣವಿ.

More from Filmibeat

English summary
Kannada Serial Agnisakshi won't go off air so soon says Actress Vaishnavi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X