ಒಳ್ಳೆಯವರ ಜೊತೆ ಮಲಗಿದರೆ ಒಳ್ಳೊಳ್ಳೆಯ ಅವಕಾಶ ಸಿಗುತ್ತೆ,ದುಡ್ಡು ಸಿಗುತ್ತೆ- ಅಮೃತವರ್ಷಿಣಿ ರಜನಿ
ಬೆಳ್ಳಿತೆರೆ ಇರಲಿ.. ಕಿರುತೆರೆ ಇರಲಿ.. ಹೆಸರು, ಕೀರ್ತಿಯ ಬೆನ್ನತ್ತಿ ಬರುವ ಹಲವಾರು ಚೆಲುವೆಯರು, ಇಲ್ಲಿನ.. ಕಾಮಾಂಧರ ಕಣ್ಣಿಗೆ ಬಿದ್ದೇ ಬೀಳುತ್ತಾರೆ. ಮುಗ್ದತೆಯನ್ನೇ ಬಳಸಿಕೊಂಡು ಹಲವರು ಇಲ್ಲಿ ಹಲವರನ್ನು ಮಂಚಕ್ಕೇರುವಂತೆ ಆಮಂತ್ರಣ ಪತ್ರಿಕೆಯನ್ನು ನೀಡುತ್ತಾರೆ. ಕೆಲವರು ಈ ಖೆಡ್ಡಾಗೆ ಗೊತ್ತಿದ್ದು ಗೊತ್ತಿಲ್ಲದೆಯೋ ಬೀಳುತ್ತಾರೆ. ಇನ್ನೂ ಕೆಲವರು ''ಹಾಸಿಗೆ ಹಂಚಿಕೊಂಡರಷ್ಟೇ ಇಲ್ಲಿ ಅವಕಾಶ'' ಎಂಬ ಕಹಿ ಸತ್ಯವನ್ನು ಅರಿತು ''ರಾಜಿ'' ಮಾಡಿಕೊಳ್ಳುತ್ತಾರೆ.
ಮತ್ತೂ ಕೆಲವರು ಅವಕಾಶ ಸಿಗದಿದ್ದರೂ ಚಿಂತೆ ಇಲ್ಲ ಎಂದು ಇಂತಹ ಕುಕೃತ್ಯವನ್ನು ಎಡಗಾಲಿನಲ್ಲಿ ಎಡಗಾಲಿನಲ್ಲಿ ಒದ್ದು ಬರುತ್ತಾರೆ. ಒಂದರ್ಥದಲ್ಲಿ ಪ್ರತಿಯೊಬ್ಬ ನಟಿಮಣಿಯರೂ ಒಂದಿಲ್ಲೊಂದು ಸಂದರ್ಭಗಳಲ್ಲಿ ಇಂತಹ ಸನ್ನಿವೇಶಗಳಲ್ಲಿ ನಲುಗಿದವರೇ ಆಗಿರುತ್ತಾರೆ. ಇದಕ್ಕೆ ರಜನಿ ಸದ್ಯದ ಉದಾಹರಣೆ

ಹೌದು, ರಜನಿ.. 2012ರ ಆಚೀಚೆ ಪ್ರಸಾರವಾದ ಅಮೃತವರ್ಷಿಣಿ ಧಾರಾವಾಹಿಯ ಅಮೃತಾ. ಬರೋಬ್ಬರಿ ಆರು ವರ್ಷಗಳ ಕಾಲ ಪ್ರಸಾರವಾದ ಈ ಧಾರಾವಾಹಿ ಮೂಲಕ ಕರುನಾಡಿನ ಮನೆ ಮನ ತಲುಪಿದ ರಜನಿ ಆ ನಂತರ ''ಆತ್ಮ ಬಂಧನ'' ಧಾರಾವಾಹಿಯಲ್ಲಿ ಅಭಿನಯಿಸಿದರು.
''ಸ್ಟಾರ್ ಸಿಂಗರ್''.. ''ಡ್ಯಾನ್ಸಿಂಗ್ ಸ್ಟಾರ್ಸ್''.. ''ಮಜಾ ಟಾಕೀಸ್''.. ''ಕುಕ್ಕರಿ ಶೋ''ಗಳಲ್ಲಿ ಭಾಗವಹಿಸಿದ್ದರು. ''ಹಿಟ್ಲರ್ ಕಲ್ಯಾಣ'' ಧಾರಾವಾಹಿಯಲ್ಲಿ ಅಂತರಾ ಪಾತ್ರವನ್ನು ಕೂಡ ನಿರ್ವಹಿಸಿದರು. ''ನೀ ಇರಲು ಜೊತೆಯಲಿ'' ಧಾರಾವಾಹಿಯ ಮೂಲಕ ಕಿರುತೆರೆಗೆ ಮರಳಿ ಮತ್ತೆ ಬಂದರು.
ಇಂಥಾ ರಜನಿ ಸದ್ಯ ತಮಗಾದ ಕಹಿ ಅನುಭವ ಹಂಚಿಕೊಂಡಿದ್ದಾರೆ. ಬೇರೆ ಭಾಷೆಗಳಲ್ಲಿ ಯಾಕೆ ಪ್ರಯತ್ನ ಮಾಡಲಿಲ್ಲ ಎನ್ನುವುದನ್ನು ಬಹಿರಂಗ ಪಡಿಸಿದ್ದಾರೆ.
ಹೌದು, ಅಸಲಿಗೆ ಒಂದು ತಿಂಗಳ ಹಿಂದೆ ''ರಾಜೇಶ್ ಗೌಡ'' ಅವರ ಯುಟ್ಯೂಬ್ ಚಾನೆಲ್‌ಗೆ ರಜನಿ ಸಂದರ್ಶನ ನೀಡಿದ್ದರು. ಈ ಸಂದರ್ಶನದಲ್ಲಿ ಹಲವಾರು ವಿಚಾರಗಳ ಕುರಿತು ರಜನಿ ಮಾತನಾಡಿದ್ದರು. ತಮಗಾದ ಕಾಸ್ಟಿಂಗ್ ಕೌಚ್ ಅನುಭವ ಹಂಚಿಕೊಂಡಿದ್ದರು.

ರಜನಿ ಹಂಚಿಕೊಂಡಿದ್ದ ಈ ಕಹಿ ಅನುಭವದ ವಿಡಿಯೋವನ್ನು ಸದ್ಯ ರಾಜೇಶ್ ಗೌಡ ಪ್ರತೈಕವಾಗಿ ಮತ್ತೊಮ್ಮೆ ತಮ್ಮ ಯೂಟ್ಯೂಬ್‌ನಲ್ಲಿ ಹಂಚಿಕೊಂಡಿದ್ದು ಈ ವಿಡಿಯೋ ಸದ್ಯ ವೈರಲ್ ಆಗುತ್ತಿದೆ. ರಾಜೇಶ್ ಗೌಡ ಅವರಿಗೆ ನೀಡಿದ ಈ ಸಂದರ್ಶನದಲ್ಲಿ ತಮ್ಮ ಕಹಿ ಅನುಭವದ ಕುರಿತು ಮಾತನಾಡಿರುವ ರಜನಿ, ನನಗೆ ''ಅಮೃತವರ್ಷಿಣಿ'' ಧಾರಾವಾಹಿ ಮಾಡಬೇಕಾದರೆ ತೆಲುಗಿನಿಂದ ಒಂದಷ್ಟು ಧಾರಾವಾಹಿಗಳಲ್ಲಿ ನಟಿಸುವ ಅವಕಾಶಗಳು ಬಂದಿದ್ವು, ಆದರೆ.. ಆ ಸಮಯದಲ್ಲಿ ಒಂದೇ ಧಾರಾವಾಹಿ ಮಾಡಿದರೆ ಆಗುವ ಅಡ್ಡ ಪರಿಣಾಮದ ಅರಿವು ನನಗೆ ಇರಲಿಲ್ಲ ಎಂದು ಹೇಳಿದ್ದಾರೆ. ಈಗಿನವರಿಗೆ ಈ ವಿಚಾರ ಚೆನ್ನಾಗಿ ಗೊತ್ತು. ಹೀಗಾಗಿ ಇಲ್ಲಿ ಕನ್ನಡದಲ್ಲೊಂದು ಮಾಡಿದರೆ ತಮಿಳು ಅಥವಾ ತೆಲುಗಿನಲ್ಲಿ ಮತ್ತೊಂದು ಮಾಡ್ತಿರ್ತಾರೆ ಎಂದು ಹೇಳಿದ್ದಾರೆ.
ಮುಂದುವರೆದು ನಾನು ಆರು ವರ್ಷ ಒಂದೇ ಸೀರಿಯಲ್ ಮಾಡಿಕೊಂಡು ಬಂದೇ, ಬೇರೆ ಚಾನೆಲ್‌ನಲ್ಲಿ ಕರೆದರೂ ಕೂಡ ಹೋಗಲಿಲ್ಲ, ಬೇರೆ ಪೇಮೆಂಟ್‌ಗೆ ಕರೆದ್ರೂ ಕೂಡ ಹೋಗಲಿಲ್ಲ. ಯಾಕೆಂದರೆ, ನಮಗೆ ಅಷ್ಟು ಕಂಫರ್ಟ್ ಜೋನ್, ಡೆಡಿಕೇಷನ್ ಎಂದು ಹೇಳಿರುವ ರಜನಿ ನಂಬಿಕೆ ಇಟ್ಟು ಕೆಲಸ ಕೊಟ್ಟಿದ್ದಾರೆ ಅದು ಉಳಿಸಿಕೊಳ್ಳಬೇಕು ಎನ್ನುವ ಆಲೋಚನೆ ನನ್ನದಾಗಿತ್ತು. ನಿಯತ್ತು ಜಾಸ್ತಿ ನನಗೆ ಎಂದು ಹೇಳಿದ್ದಾರೆ.
''ಅಮೃತವರ್ಷಿಣಿ'' ಮುಗಿದ ನಂತರ ನನಗೆ ಆಫರ್ಸ್ ಬರಲಿಲ್ಲ ಎಂದು ಹೇಳಿರುವ ರಜನಿ, ಆಗ ನಾನು ಸುಮಾರು ಕಡೆ ಟ್ರೈ ಮಾಡಿದೆ, ಅದು ಕೂಡ ವರ್ಕೌಟ್ ಆಗಲಿಲ್ಲ. ಯಾಕೆ ಅಂತ ಯೋಚಿಸಿದಾಗ, ಕೆಲವರು ಮ್ಯಾನೇಜರ್‌ಗಳು, ಅವರು ಆರು ವರ್ಷ ಸೀರಿಯಲ್ ಮಾಡಿಬಿಟ್ಟಿದ್ದಾರೆ. ಅವರ ಮುಖ ತುಂಬಾ ಯೂಸ್ ಆಗಿಬಿಟ್ಟಿದೆ ಅಂತ ಹೇಳುತ್ತಿದ್ದರಂತೆ. ಇದು ನನಗೆ ಗೊತ್ತೇ ಇರಲಿಲ್ಲ. ಗೊತ್ತಾದಾಗ ನನಗೆ ತುಂಬಾ ನೋವಾಯ್ತು ಎಂದು ಹೇಳಿದ್ದಾರೆ.
ಈಗ ತೀರಾ ಇತ್ತೀಚೆಗೆ ಕನ್ನಡದಲ್ಲಿ ಕೂಡ ಅವಕಾಶದ ಕೊರತೆಯಾದಾಗ ನೋಡೋಣ, ಮತ್ತೊಮ್ಮೆ ಟ್ರೈ ಮಾಡೋಣ, ಎಲ್ಲರೂ ಮಾಡ್ತಿದ್ದಾರೆ, ಎಂದು ''ಸುವರ್ಣ ಚಾನೆಲ್''ನಲ್ಲಿ ನನಗೆ ನಾನ್ ಫಿಕ್ಷನ್‌ನಲ್ಲಿ ಕೆಲಸ ಮಾಡುವವರು ಒಬ್ಬರು ಪರಿಚಯ ಇದ್ದರು, ಅವರಿಗೆ ಕರೆ ಮಾಡಿ ತೆಲುಗು ಅಥವಾ ತಮಿಳಿನಲ್ಲಿ ಧಾರಾವಾಹಿ ಮಾಡಬೇಕು ಅಂದುಕೊಂಡಿದ್ದೇನೆ, ಯಾವುದಾದರೂ ಇದ್ದರೆ ನೋಡಿ ಸರ್ ಅಂತ ಹೇಳಿದೆ ಎಂದು ಹೇಳಿದ್ದಾರೆ.
ಆಗ ಅವರು ನೀವು ಅಲ್ಲಿಯೇ ಕುಂತು ಮಾತನಾಡಿದರೆ ಆಗಲ್ಲ. ಬನ್ನಿ ಆಡಿಷನ್ಸ್ ಕೊಡಿ, ಲುಕ್ ಟೆಸ್ಟ್ ಕೊಟ್ಟು ಹೋಗಿ ಎಂದು ಅವರು ಹೇಳಿದರು. ಹೀಗಾಗಿ ಸರಿ ಅಂತ ನಾನೇ ಖರ್ಚು ಮಾಡಿಕೊಂಡು ಕಸಿನ್ ಬ್ರದರ್‌ನ ಕರ್ಕೊಂಡು ಚೆನ್ನೈಗೆ ಹೋಗಿ ಲುಕ್ ಟೆಸ್ಟ್ ಕೊಟ್ಟಿದ್ದೆ ಎಂದು ಹೇಳಿರುವ ರಜನಿ ಅಲ್ಲಿ ಎರಡು ಆಫೀಸ್‌ಗಳನ್ನ ನಾವು ಕಾಂಟ್ಯಾಕ್ಟ್ ಮಾಡಿದ್ದೆವು. ಆದರೆ ಒಂದು ಆಫೀಸ್‌ನಲ್ಲಂತೂ, ಒಂದು ಕ್ಲೀನ್ ಪ್ರಾಜೆಕ್ಟ್ ಮತ್ತೊಂದು ಕ್ಲೀನ್ ಅಲ್ಲದೇ ಇರುವಂತ ಪ್ರಾಜೆಕ್ಟ್ ಅಂತ ಅವರು ಡಿವೈಡ್ ಮಾಡಿಕೊಂಡಿದ್ದರು ಎಂದು ಹೇಳಿದ್ದಾರೆ. ಅದರರ್ಥ ಕಮಿಟ್ಮೆಂಟ್ ಎಂದು ಹೇಳಿದ್ದಾರೆ.
ಇನ್ನೊಂದು ಕಡೆ ನನ್ನ ಪರಿಚಯದವರ ಕಡೆಯಿಂದ ಲುಕ್ ಟೆಸ್ಟ್‌ಗೆ ಹೋಗಿದ್ದೇ,ಅವರು ನನಗೆ ವಿವರಿಸಿದರು. ನೀವು ಕಮಿಟ್‌ಮೆಂಟ್‌ಗೆ ಒಪ್ಪಿಕೊಂಡರೆ, ನಿಮಗೆ ಒಳ್ಳೊಳ್ಳೆ ಪ್ರಾಜೆಕ್ಟ್‌ಗಳು ಸಿಗುತ್ತೆ, ಅಂದರೆ ನೀವು ಕಮಿಟ್ ಆದರೂ ಕೂಡ ಒಳ್ಳೆಯವರ ಜೊತೆ ಕಮಿಟ್ ಆಗಬೇಕು. ಖಾಂಜಿ ಪಿಂಜಿ ಅವರ ಜೊತೆ ಆದರೆ ವರ್ಕೌಟ್ ಆಗಲ್ಲ. ಒಳ್ಳೆಯವರ ಜೊತೆ ಕಮಿಟ್ ಆದರೆ ನಿಮಗೆ ಆದರೆ ಒಂದೊಳ್ಳೆ ಸೀರಿಯಲ್ ಸಿಗುತ್ತೆ ಎಂದು ಅವರು ಹೇಳಿದರು. ಅದೇ ವಾಸ್ತವ ಎಂದು ಕೂಡ ಹೇಳಿದರು ಎಂದು ಹೇಳಿದ್ದಾರೆ.
ಕಮಿಟ್‌ಮೆಂಟ್‌ಗೆ ಒಪ್ಪಿಕೊಂಡರೆ, ಪೇಮೆಂಟ್ ಜಾಸ್ತಿ ಇರುತ್ತೆ ಎಂದು ಕೂಡ ಹೇಳಿರುವ ರಜನಿ ಕಮಿಟ್ ಆದವರಿಗೆ ಎಲ್ಲಾ ಫೆಸಿಲಿಟಿ ಕೂಡ ಇರುತ್ತೆ ಎಂದು ಎಲ್ಲಾ ಹೇಳಿದರು ಆಗ ಇದು ಇದು ನಮಗೆ ಅಲ್ಲ ಅಂತ ಬಂದವಳು ಕನ್ನಡವೇ ಸತ್ಯ , ಜೈ ಕರ್ನಾಟಕ ಮಾತೆ ಎಂದು ಹೇಳಿಕೊಂಡು ಇಲ್ಲಿಯೇ ಕೆಲಸ ಮಾಡುತ್ತಿದ್ದೇನೆ ಎಂದು ರಜನಿ ಹೇಳಿದ್ದಾರೆ. ನಿಮ್ಮ ಕನ್ನಡದಿಂದಲೇ ಸಾಕಷ್ಟು ಜನ ಬರ್ತಾರೆ, ಅವರು ಧಾರಾವಾಹಿಗಳನ್ನು ಮಾಡ್ತಾರೆ ಎಂದು ನನಗೆ ಹೇಳಿದ್ದರು, ಅವರ ಹೆಸರನ್ನು ಕೂಡ ಹೇಳಿದ್ದರು ಎಂದು ಹೇಳಿರುವ ರಜನಿ ನಾವೆಲ್ಲಾ ಬಂದಾಗ ನಮಗೆ ಇದೆಲ್ಲ ಗೊತ್ತೂ ಇರಲಿಲ್ಲ,ಇದೆಲ್ಲದರ ಬಗ್ಗೆ ನಾವು ಕೇಳಿಯೂ ಇರಲಿಲ್ಲ ಎಂದು ಹೇಳಿದ್ದಾರೆ.


Click it and Unblock the Notifications











