twitter
    For Quick Alerts
    ALLOW NOTIFICATIONS  
    For Daily Alerts

    'ಪ್ರೀತಿಯಲ್ಲಿ ಇರೋ ಸುಖ ಗೊತ್ತೆ ಇರಲಿಲ್ಲ' ಎಂದ ದಿಗಂತ್ - ಐಂದ್ರಿತಾ

    By Naveen
    |

    Recommended Video

    ರಿಯಾಲಿಟಿ ಶೋನಲ್ಲಿ ದಿಗಂತ್-ಐಂದ್ರಿತಾ ಲವ್ ಕಹಾನಿ.!! | Filmibeat Kannada

    ಪ್ರೀತಿಯಲ್ಲಿ ಇರುವ ಸುಖ ಪ್ರೀತಿಸಿದವರಿಗೆ ಮಾತ್ರ ಗೊತ್ತು. ಈಗ ಈ ರೀತಿ ಆಗಿರುವುದು ನಟ ದಿಗಂತ್ ಹಾಗೂ ಐಂದ್ರಿತಾ ರೇ ಅವರಿಗೆ. ಸ್ಯಾಂಡಲ್ ವುಡ್ ನ ಕ್ಯೂಟ್ ಕಪಲ್ ಆಗಿರುವ ದಿಗಂತ್ ಮತ್ತು ಐಂದ್ರಿತಾ ಈಗ ಸಂತೋಷದಿಂದ ಹಾಡಿ ಕುಣಿದಿದ್ದಾರೆ.

    ಇತ್ತೀಚಿಗಷ್ಟೆ ಸ್ಟಾರ್ ಸುವರ್ಣ ವಾಹಿನಿಯ 'ಸಿಕ್ಸ್ತ್ ಸೆನ್ಸ್' ಕಾರ್ಯಕ್ರಮಕ್ಕೆ ದಿಗಂತ್ ಮತ್ತು ಐಂದ್ರಿತಾ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಈ ಲವ್ಲಿ ಜೋಡಿ 'ಪ್ರೀತಿಯಲ್ಲಿ ಇರೋ ಸುಖ ಗೊತ್ತೆ ಇರಲಿಲ್ಲ' ಎಂದು ಹಾಡಿ ಕುಣಿದಿದೆ. ಜೊತೆಗೆ ದಿಗಂತ್ ಇದೇ ವೇಳೆ ಮನಸಾರೆ ಐಂದ್ರಿತಾಗೆ ಪ್ರಪೋಸ್ ಮಾಡಿದ್ದಾರೆ.

    Aindrita Ray and Diganth in sixth sense show

    ದಿಗಂತ್ ಜೊತೆ ಮದುವೆ ಸುದ್ದಿ ಬಗ್ಗೆ ಐಂದ್ರಿತಾ ಕೊಟ್ಟ ಪರೋಕ್ಷ ಪ್ರತಿಕ್ರಿಯೆ! ದಿಗಂತ್ ಜೊತೆ ಮದುವೆ ಸುದ್ದಿ ಬಗ್ಗೆ ಐಂದ್ರಿತಾ ಕೊಟ್ಟ ಪರೋಕ್ಷ ಪ್ರತಿಕ್ರಿಯೆ!

    ದಿಗಂತ್ ಹಾಗೂ ಐಂದ್ರಿತಾ ರೇ ಲವ್ ನಲ್ಲಿ ಇರುವ ವಿಷಯ ಇಡೀ ಚಿತ್ರರಂಗಕ್ಕೆ ತಿಳಿದಿದೆ. ಅಲ್ಲದೆ ಈ ಇಬ್ಬರು ಸದ್ಯದಲ್ಲಿಯೇ ಮದುವೆ ಆಗಲಿದ್ದಾರೆ ಎಂಬ ಸುದ್ದಿ ಕೂಡ ಇದೆ. ಈ ಹಿಂದೆ 'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮಕ್ಕೆ ಬಂದಿದ್ದ ದಿಗಂತ್ ತಾವು ಐಂದ್ರಿತಾ ರನ್ನು ಪ್ರೀತಿಸುತ್ತಿರುವ ಸುಳಿವು ನೀಡಿದ್ದರು.

    ಅಂದಹಾಗೆ, ಈ ಶನಿವಾರ ದಿಗಂತ್ ಹಾಗೂ ಐಂದ್ರಿತಾ ರೇ ಅವರ 'ಸಿಕ್ಸ್ತ್ ಸೆನ್ಸ್' ಕಾರ್ಯಕ್ರಮ ಸಂಚಿಕೆ ಪ್ರಸಾರ ಆಗಲಿದೆ. ದಿಗಂತ್ - ಐಂದ್ರಿತಾ ಜೋಡಿ 'ಪ್ರೀತಿಯಲ್ಲಿ ಇರೋ ಸುಖ ಗೊತ್ತೆ ಇರಲಿಲ್ಲ' ಎಂದು ಕುಣಿದಿರುವುದು ಈ ಸಂಚಿಕೆಯ ಹೈಲೆಟ್ ಆಗಿದೆ.

    English summary
    Kannada actress Aindrita Ray and Actor Diganth in Star Suvarna channel new shows 'Sixth Sense'.
    Tuesday, July 10, 2018, 11:57
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X