»   » 'ಸೂಪರ್ ಟಾಕ್ ಟೈಮ್' ಮೊದಲ ಸಂಚಿಕೆಗೆ ಐಂದ್ರಿತಾ ಬರ್ಲಿಲ್ಲ.! ಯಾಕೆ.?

'ಸೂಪರ್ ಟಾಕ್ ಟೈಮ್' ಮೊದಲ ಸಂಚಿಕೆಗೆ ಐಂದ್ರಿತಾ ಬರ್ಲಿಲ್ಲ.! ಯಾಕೆ.?

Posted By:
Subscribe to Filmibeat Kannada

'ಸೂಪರ್ ಟಾಕ್ ಟೈಮ್'... ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಬಿಗ್ ಬಜೆಟ್ ಸೆಲೆಬ್ರಿಟಿ ಟಾಕ್ ಶೋ. ಮಾತುಕತೆ ಜೊತೆಗೆ ಮಜವಾದ ಆಟಗಳ ಮಿಶ್ರಣವಾಗಿರುವ ಈ ಕಾರ್ಯಕ್ರಮವನ್ನ ನಟಿ ಐಂದ್ರಿತಾ ರೇ ಲಾಂಚ್ ಮಾಡಬೇಕಿತ್ತು.

ಅರ್ಥಾತ್, 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದ ಮೊದಲ ಸಂಚಿಕೆಯಲ್ಲಿ ನಟಿ ಐಂದ್ರಿತಾ ರೇ ಭಾಗವಹಿಸಬೇಕಿತ್ತು. ಆದ್ರೆ, ಅನಿವಾರ್ಯ ಕಾರಣಗಳಿಂದ 'ಸೂಪರ್ ಟಾಕ್ ಟೈಮ್' ಮೊದಲ ಎಪಿಸೋಡ್ ಗೆ ನಟಿ ಐಂದ್ರಿತಾ ರೇ ಬರ್ಲಿಲ್ಲ. ಅದಕ್ಕೆ ಕಾರಣ ಅವರ ಬಿಜಿ ಶೆಡ್ಯೂಲ್.!

Aindrita Ray was supposed to launch 'Super Talk Time'

ಹಿಂದಿ ಚಿತ್ರವೊಂದರ ಶೂಟಿಂಗ್ ನಲ್ಲಿ ಬಿಜಿ ಇದ್ದ ಐಂದ್ರಿತಾ ರೇ, 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದ ಲಾಂಚ್ ಗೆ ಬರಲಿಲ್ಲ. ಬದಲಾಗಿ ನಿನ್ನೆ ಪ್ರಸಾರವಾದ... ಅಂದ್ರೆ ಕಾರ್ಯಕ್ರಮದ 15ನೇ ಸಂಚಿಕೆಯಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದರು.

'ಸೂಪರ್ ಟಾಕ್ ಟೈಮ್' ವೇದಿಕೆಗೆ ಕಾಲಿಡುತ್ತಿದ್ದಂತೆಯೇ, ''ನಾನು 'ಸೂಪರ್ ಟಾಕ್ ಟೈಮ್' ಲಾಂಚ್ ಮಾಡಬೇಕಿತ್ತು. ನಾನು ನಿಮ್ಮ ಕಾರ್ಯಕ್ರಮದ ಮೊದಲ ಸಂಚಿಕೆಯಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ ದುರಾದೃಷ್ಟವಶಾತ್ ಆಗಲಿಲ್ಲ'' ಎಂದರು ನಟಿ ಐಂದ್ರಿತಾ ರೇ.

ಕಾರ್ಯಕ್ರಮದಲ್ಲಿ ಅಕುಲ್ ಬಾಲಾಜಿ ಕೇಳಿದ ಅಷ್ಟೂ ಪ್ರಶ್ನೆಗಳಿಗೆ ಕೊಂಚ ಕೂಡ ಅಳುಕಿಲ್ಲದೇ ಬೋಲ್ಡ್ ಆಗಿ ಉತ್ತರ ನೀಡಿದರು ನಟಿ ಐಂದ್ರಿತಾ ರೇ.

English summary
Kannada Actress Aindrita Ray was supposed to launch Colors Super Channel's popular show 'Super Talk Time'. But because of her busy schedule, it din't happen.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada