ಗಲ್ಲಿ ಗಾಸಿಪ್ ಬಗ್ಗೆ ನಟಿ ಐಂದ್ರಿತಾ ರೇ ಬಾಯ್ಬಿಡುತ್ತಾರಾ.?
ವೈಯುಕ್ತಿಕ ಜೀವನ, ವಿವಾದ ಹಾಗೂ ಗಾಸಿಪ್ ಗಳ ಕುರಿತು ಸೆಲೆಬ್ರಿಟಿಗಳಿಗೆ ಮುಜುಗರ ತರದಂತೆ ಪ್ರಶ್ನೆಗಳನ್ನು ಕೇಳಿ, ಅವರಿಂದ ಉತ್ತರ ಪಡೆದುಕೊಳ್ಳುವಲ್ಲಿ ಅಕುಲ್ ಬಾಲಾಜಿ ನಿಸ್ಸೀಮ. ಹೀಗಾಗಿ ಅಕುಲ್ ಬಾಲಾಜಿ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ 'ಸೂಪರ್ ಟಾಕ್ ಟೈಮ್' ದಿನೇ ದಿನೇ ಜನಪ್ರಿಯತೆ ಪಡೆದುಕೊಳ್ಳುತ್ತಿದೆ.
ಇದೀಗ ಕಾರ್ಯಕ್ರಮದಲ್ಲಿ ನಟಿ ಐಂದ್ರಿತಾ ರೇ ಅತಿಥಿಯಾಗಿ ಭಾಗವಹಿಸಿದ್ದಾರೆ. ಐಂದ್ರಿತಾ ರೇ ವೃತ್ತಿ ಬದುಕು ಹಾಗೂ ವೈಯುಕ್ತಿಕ ಜೀವನದ ಬಗ್ಗೆ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಸಹಜವಾಗಿ ಅಕುಲ್ ಪ್ರಶ್ನೆಗಳನ್ನು ಕೇಳುತ್ತಾರೆ. ಅದಕ್ಕೆ ನಟಿ ಐಂದ್ರಿತಾ ರೇ ಉತ್ತರ ಕೊಡಲೇಬೇಕು.

ಒಂದ್ಕಾಲದಲ್ಲಿ ನಟಿ ಐಂದ್ರಿತಾ ರೇ ಹಾಗೂ ದಿಗಂತ್ ನಡುವೆ ಸಂಥಿಂಗ್ ಸಂಥಿಂಗ್ ನಡೆಯುತ್ತಿತ್ತು ಎಂಬ ಗಾಸಿಪ್ ಗಾಂಧಿನಗರದಲ್ಲಿ ದಟ್ಟವಾಗಿ ಹಬ್ಬಿತ್ತು. ಆದ್ರೆ, ಈ ಬಗ್ಗೆ ಇಬ್ಬರೂ ಎಲ್ಲೂ ತುಟಿಕ್ ಪಿಟಿಕ್ ಎಂದಿರಲಿಲ್ಲ. ಈಗ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಅದೇ ಗಾಸಿಪ್ ಬಗ್ಗೆ ಐಂದ್ರಿತಾ ರೇ ತುಟಿ ಎರಡು ಮಾಡಬಹುದಾ.?
ಈ ಪ್ರಶ್ನೆಗೆ ಉತ್ತರ ಸಿಗಬೇಕು ಅಂದ್ರೆ ನಾಳೆ ರಾತ್ರಿ 9 ಗಂಟೆ ವರೆಗೂ ನೀವು ಕಾಯಲೇಬೇಕು. ಯಾಕಂದ್ರೆ, ನಟಿ ಐಂದ್ರಿತಾ ರೇ ಭಾಗವಹಿಸಿರುವ 'ಸೂಪರ್ ಟಾಕ್ ಟೈಮ್' ಸಂಚಿಕೆ ನಾಳೆ (ಗುರುವಾರ, ಜುಲೈ 20) ಪ್ರಸಾರ ಆಗಲಿದೆ.
ಅಂದ್ಹಾಗೆ, ನಟಿ ಐಂದ್ರಿತಾ ರೇ ಜೊತೆ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಡ್ಯಾನಿಶ್ ಸೇಠ್ ಕೂಡ ಅತಿಥಿ. ಇಬ್ಬರೂ ಭಾಗವಹಿಸಿರುವ ಕಾರ್ಯಕ್ರಮದ ಪ್ರೋಮೋ ಇಲ್ಲಿದೆ ನೋಡಿ....


Click it and Unblock the Notifications











