Biggboss: ತೆಲುಗು ಬಿಗ್‌ಬಾಸ್‌ಗೆ ಎಂಟ್ರಿಯಾಗುತ್ತಾರ ಕನ್ನಡದ ನಟಿ? ಬಿಗ್ ಬಾಸ್ ಸೀಸನ್ 7ರ ಪ್ರೋಮೋ ರಿವೀಲ್

By Poorva

ಕರುನಾಡಿನಲ್ಲಿ ಹುಟ್ಟಿ ಬೆಳೆದು ಅದೆಷ್ಟೋ ಕಲಾವಿದರು ತಮ್ಮ ಹೊಟ್ಟೆ ಪಾಡಿಗಾಗಿ ಹಾಗೂ ಖ್ಯಾತಿಗಾಗಿ ಬೇರೆ ಭಾಷೆಗಳಲ್ಲಿ ನಟನೆ ಮಾಡಿ ಸೈ ಎನಿಸಿಕೊಂಡಿರುತ್ತಾರೆ. ಕನ್ನಡದ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ಅದೆಷ್ಟೋ ಮಂದಿ ಬೇರೆ ಭಾಷೆಗಳಲ್ಲಿ ಹೆಚ್ಚಿನ ಹಿಡಿತ ಹಾಗೆಯೇ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತ ಇದ್ದಾರೆ. ಅಂತವರಲ್ಲಿ ಐಶ್ವರ್ಯ ಕೂಡ ಒಬ್ಬರು.

ಕುಲವಧು', 'ಪುನರ್‌ವಿವಾಹ', 'ಗಿರಿಜಾ ಕಲ್ಯಾಣ', 'ಅನುರೂಪ', 'ಸರ್ವಮಂಗಳ ಮಾಂಗಲ್ಯೇ' ಧಾರಾವಾಹಿಗ: ಮೂಲಕ ಗಮನಸೆಳೆದಿದ್ದ ನಟಿ ಐಶ್ವರ್ಯಾ ಅವರು ತೆಲುಗು ಸೀರಿಯಲ್‌ನಲ್ಲೂ ಸದ್ದು ಮಾಡುತ್ತಿದ್ದಾರೆ. ತೆಲುಗು ಪ್ರೇಕ್ಷಕರ ಪ್ರೀತಿಯನ್ನ ಸಂಪಾದಿಸಿದ್ದಾರೆ.

Aishwarya Pisse likely to enter Telugu bigg boss season 7

ಇನ್ನು ಐಶ್ವರ್ಯಗೆ ದೊಡ್ಮನೆಗೆ ಹೋಗುವ ಆಫರ್ ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ಸರ್ವ ಮಂಗಳ ಮಾಂಗಲ್ಯೇ ಎಂಬ ಧಾರವಾಹಿ ಕನ್ನಡದಲ್ಲಿ ಈಕೆಗೆ ಬಹಳಷ್ಟು ಖ್ಯಾತಿಯನ್ನು ತಂದು ಕೊಟ್ಟಿತ್ತು. ಹಾಗೆಯೇ ರಮೇಶ್ ಅರವಿಂದ್ ನಿರ್ಮಾಣದ ಸುಂದರಿ ಎಂಬ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ಐಶ್ವರ್ಯ ಕಾಣಿಸಿಕೊಂಡಿದ್ದರು.

ಆ ಬಳಿಕ ಇತರ ಭಾಷೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದ ಈಕೆ ತೆಲುಗಿನಲ್ಲಿ ನಟನೆ ಮಾಡುತ್ತಾರೆ. ಅಗ್ನಿ ಸಾಕ್ಷಿ, ನಾ ಪೇರು ಮಿನಾಕ್ಷಿ, ಮನಮೆ ಹೀಗೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದ ಐಶ್ವರ್ಯ ಸಿನಿಮಾದಲ್ಲೂ ನಟನೆ ಮಾಡಿದ್ದಾರೆ. ಸಂತು ಸ್ಟ್ರೈಟ್ ಫಾರ್ವರ್ಡ್ ನಲ್ಲಿ ಯಶ್ ತಂಗಿಯಾಗಿ ಅಭಿನಯ ಮಾಡಿ ಜನರ ಅಭಿಮಾನವನ್ನು ಗಿಟ್ಟಿಸಿಕೊಂಡಿದ್ದಾರೆ.

ಐಶ್ವರ್ಯ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಸಕ್ರಿಯರಾಗಿರುವ ನಟಿ ಎಂದು ಹೇಳಿದರೆ ತಪ್ಪಾಗದು. ಇದೀಗ ಮತ್ತೊಂದು ದೊಡ್ಡ ಅವಕಾಶ ಐಶ್ವರ್ಯರನ್ನು ಅರಸಿ ಬಂದಿವೆ ಎನ್ನುವ ವದಂತಿಗಳು ಕೇಳಿ ಬರುತ್ತಿದೆ. ತೆಲುಗಿನ ಬಗ್ ಬಾಸ್ ಸೀಸನ್ 7ಗೆ ಕನ್ನಡತಿ ಐಶ್ವರ್ಯ ಆಯ್ಕೆ ಆಗಿದ್ದಾರೆ ಎನ್ನುವ ವದಂತಿಗಳು ಈಗಾಗಲೇ ಕೇಳಿ ಬರುತ್ತಿದೆ.

ಸೆಪ್ಟೆಂಬರ್ 3ರಂದು ಈ ಶೋ ಶುರುವಾಗಲಿದೆ ಎನ್ನಲಾಗುತ್ತಿದೆ. ನಾಗಾರ್ಜುನ ಅಕ್ಕಿನೇನಿ ಅವರು ಈ ಶೋ ನಿರೂಪಣೆ ಮಾಡುತ್ತಿರುವುದು ಕನ್‌ಫರ್ಮ್‌ ಆಗಿದೆ. ಈಗಾಗಲೇ ತೆಲುಗು ಬಿಗ್‌ ಬಾಸ್‌ ಪ್ರೋಮೊ ರಿಲೀಸ್‌ ಕೂಡ ಆಗಿದೆ. ಈ ಪ್ರೋಮೋಗೆ ಸಾಕಷ್ಟು ಮೆಚ್ಚುಗೆ ಕೂಡ ವ್ಯಕ್ತವಾಗುತ್ತಿದೆ. ಯಾರೆಲ್ಲ ತಾರೆಯರು ಬಿಗ್ ಬಾಸ್ ಮನೆಗೆ ಎಂಟ್ರಿ ನೀಡಲಿದ್ದಾರೆ ಎನ್ನುವ ಕುತೂಹಲ ಹೆಚ್ಚುತ್ತಿದೆ. ಸೆಪ್ಟೆಂಬರ್ ನಲ್ಲಿ ಈ ರಿಯಾಲಿಟಿ ಶೋ ಪ್ರಾರಂಭ ಆಗಲಿದ್ದು ಜನರಿಗೆ ಮನರಂಜನೆ ನೀಡುವಲ್ಲಿ ಸಫಲ ಆಗುತ್ತದಾ ಎಂಬುವುದನ್ನು ಕಾದು ನೋಡಬೇಕಿದೆ. ಇನ್ನು ಯಾರೆಲ್ಲ ಬಿಗ್ ಬಾಸ್ ನಲ್ಲಿ ಭಾಗವಹಿಸಲಿದ್ದಾರೆ ಎಂಬುವುದನ್ನು ತಿಳಿಯಬೇಕಿದೆ. ಈ ಬಗ್ಗೆ ಐಶ್ವರ್ಯ ಮಾಧ್ಯಮಕ್ಕೆ ಇನ್ನೂ ಏನು ಉತ್ತರ ನೀಡಿಲ್ಲ..= ಆಕೆ ಭಾಗವಹಿಸುತ್ತಿದ್ದಾರ ಅಥವಾ ಇಲ್ಲವೇ ಎಂಬುದನ್ನು ಹೇಳಬೇಕಿದೆ.

More from Filmibeat

English summary
aishvarya gets entry into Telugu bigg boss
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X