Aishwarya Salimata: ಪತಿ ಜತೆ ಜಾಲಿ ಮೂಡ್‌ನಲ್ಲಿರುವ ಐಶ್ವರ್ಯ ಸಾಲಿಮಠ; ಫೋಟೊಸ್ ವೈರಲ್

ರಾಮಾಚಾರಿ ಸೀರಿಯಲ್ ನಟಿ ಐಶ್ವರ್ಯ ಸಾಲಿಮಠ ತನ್ನ ಗಂಡನ ಜೊತೆ ಜಾಲಿ ಮೂಡ್‌ನಲ್ಲಿ ಇದ್ದಾರೆ. ಹೌದು ಸರಯೂ ಧಾರಾವಾಹಿ ಮೂಲಕ ಬಣ್ಣದ ಲೋಕದ ಜರ್ನಿ ಆರಂಭಿಸಿದ ಐಶ್ವರ್ಯ ಅಗ್ನಿ ಸಾಕ್ಷಿ ಧಾರಾವಾಹಿ ಮೂಲಕ ಪ್ರಸಿದ್ಧಿ ಪಡೆದರು. ಆ ಬಳಿಕ ದಂಪತಿಗಳು ಇಬ್ಬರು ರಾಜಾ ರಾಣಿ ಎಂಬ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ಎಲ್ಲರ ಮನೆ ಮಾತಾಗಿದ್ದರು.

ಈ ಇಬ್ಬರ ಕ್ಯೂಟ್ ಜೋಡಿ ನೋಡಿದ ಅನೇಕ ಮಂದಿ ಸೋ ಫಿದಾ ಆಗಿದ್ದರು. ಐಶ್ವರ್ಯ ಸಾಲಿಮಠ ಹಾಗೂ ವಿನಯ್ ಅವರು ಬಹಳಷ್ಟು ವರ್ಷ ಪ್ರೀತಿ ಮಾಡಿ ಮದುವೆ ಮಾಡಿಕೊಂಡಿದ್ದಾರೆ. ಐಶ್ವರ್ಯ ಇದೀಗ ಬಹಳ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಗಂಡನ ಜೊತೆ ಸ್ವಿಮ್ಮಿಂಗ್ ಪೂಲ್‌ನಲ್ಲಿ ಸಖತ್ ಆಗಿ ಕಾಣಿಸಿಕೊಂಡಿದ್ದಾರೆ. ಇದೀಗ ರಾಮಾಚಾರಿ ಧಾರಾವಾಹಿಯಲ್ಲಿ ಐಶ್ವರ್ಯ ವೈಶಾಖ ಪತ್ರದಲ್ಲಿ ಮಿಂಚುತ್ತಿದ್ದಾರೆ. ಧಾರಾವಾಹಿಯಲ್ಲಿ ಬಹಳ ಜೋರಾಗಿ ಮಾತನಾಡುತ್ತಾ ಚಾರು ಹೊಟ್ಟೆ ಉರಿಸುತ್ತ ಇರುವ ಇವರು ನಿಜ ಜೀವನದಲ್ಲಿ ಮಾತ್ರ ಸಖತ್ ಸ್ವೀಟು.

Aishwarya salimath and Ainay photoshoot goes viral

ರೊಮ್ಯಾಂಟಿಕ್ ಫೋಟೋವನ್ನು ಕ್ಯಾಮರಾದಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದಾರೆ. ಈ ಫೋಟೋ ನೋಡಿದ ಅನೇಕ ಜನ ಇಬ್ಬರಿಗೂ ಬೇಗ ಮದುವೆ ಆಗಿ ಮಕ್ಕಳು ಆಗಲಿ ಎಂದು ಹಾರೈಸುತ್ತಾ ಇದ್ದಾರೆ. ನಟಿ ಐಶ್ವರ್ಯ ತನ್ನ ಗಂಡನ ಜೊತೆ ಹಾಡೊಂದಕ್ಕೆ ಸಖತ್ ಆಗಿ ಹೆಜ್ಜೆ ಹಾಕಿದ್ದಾರೆ.

ಗಂಡ ಹೆಂಡತಿ ಸ್ವಿಮ್ಮಿಂಗ್ ಪೂಲ್​ನಲ್ಲಿ ರೋಮ್ಯಾಂಟಿಕ್ ಕಾವಾಲಯ್ಯ ಹಾಡಿಗೆ ಹೆಜ್ಜೆ ಹಾಕುತ್ತಾ ಫೋಟೋ ಮತ್ತು ವಿಡಿಯೋ ಶೇರ್ ಮಾಡಿದ್ದಾರೆ. ಇನ್ನು ಈ ಫೋಟೋ ನೋಡಿದ ಅನೇಕರು ಬಹಳ ಖುಷಿ ಪಟ್ಟಿದ್ದಾರೆ. ಹಾಗೆಯೇ ಐಶ್ವರ್ಯ ಪತಿಗೆ ನೀನು ಬಹಳಷ್ಟು ಅದೃಷ್ಟ ಮಾಡಿದ್ದೀಯಾ ಎಂದೆಲ್ಲ ಕಾಮೆಂಟ್ ಮಾಡುತ್ತಾ ಇರುತ್ತಾರೆ. ಹಾಗೆಯೇ ಇನ್ನಷ್ಟು ಬಗೆ ಬಗೆಯ ಕಾಮೆಂಟ್ ಮಾಡುತ್ತಾ ಇರುತ್ತಾರೆ

ಇಬ್ಬರು ಕಳೆದ ವರ್ಷ ಪ್ರೀತಿಸಿ ಮನೆಯವರ ಒಪ್ಪಿಗೆಯ ಮೇರೆಗೆ ಮದುವೆ ಆಗಿದ್ದಾರೆ. ಇನ್ನು ಐಶ್ವರ್ಯ ಸ್ವಿಮ್ಮಿಂಗ್ ಪೂಲ್‌ನಲ್ಲಿ ತನ್ನ ಗಂಡನನ್ನು ಬಿಗಿದು ಅಪ್ಪಿಕೊಂಡು ಹಣೆಗೆ ಮುತ್ತಿಡುತ್ತಿರುವ ಫೋಟೋ ವೈರಲ್ ಆಗಿದೆ.

ಈ ಫೋಟೋ ನೋಡಿದ ಅಭಿಮಾನಿಗಳು ಸಖತ್ ಖುಷಿ ಪಟ್ಟಿದ್ದಾರೆ. ಹುಬ್ಬಳ್ಳಿಯ ವಿನಯ್ ಅವರು ಪುಣೆ, ಬೆಂಗಳೂರಿನ ಐಟಿ ಕಂಪೆನಿಯಲ್ಲಿ ಕೆಲಸ ಮಾಡಿ ಆ ಬಳಿಕ ನಟನೆ ಮೇಲೆ ಒಲವಿದ್ದರಿಂದ ಚಿತ್ರರಂಗಕ್ಕೆ ಕಾಲಿರಿಸಿದರು. ಇನ್ನು ವಿನಯ್ ಮಹಾದೇವಿ, ಜೀವನದಿ, ಅಗ್ನಿಸಾಕ್ಷಿ, ಮಹಾಸತಿ , ಕನ್ನಡತಿ ಹೀಗೆ ಹಲವು ಸೀರಿಯಲ್​ಗಳಲ್ಲಿ ಅಭಿನಯಿಸಿದ್ದಾರೆ. ಇವರಿಬ್ಬರೂ ಕೂಡ ಉತ್ತರ ಕರ್ನಾಟಕದವರು.

More from Filmibeat

English summary
aishwarya salimata and vinay photo shoot vairal.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X